ಬಿಗ್‌ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಈಗ 'ಬಾಯ್ಸ್ ವರ್ಸಸ್ ಗರ್ಲ್ಸ್' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ರಜತ್, ಹನುಮಂತು ಸೇರಿದಂತೆ ಹಲವು ಬಿಗ್‌ಬಾಸ್ ಸ್ಪರ್ಧಿಗಳು ಇದ್ದಾರೆ. ರಜತ್ ಜೊತೆಗಿನ ಜಗಳ ನಿಜವಾದರೂ ಅವರು ಒಳ್ಳೆಯವರು ಎನ್ನುತ್ತಾರೆ ಚೈತ್ರಾ. ಹೊಸ ಪ್ರತಿಭೆ ಪ್ರದರ್ಶಿಸುತ್ತಿರುವ ಚೈತ್ರಾ, ಈ ಶೋ ವಿಭಿನ್ನ ಮತ್ತು ಹೊಸ ಅನುಭವ ನೀಡುತ್ತಿದೆ ಎಂದಿದ್ದಾರೆ.

ಭಾಷಣಗಾರ್ತಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿದ ನಂತರ ಜನಪ್ರಿಯತೆ ಹೆಚ್ಚಾಗಿದೆ. ಆರಂಭದಲ್ಲಿ ನೆಗೆಟಿವ್ ಪ್ರತಿಕ್ರಿಯೆ ಪಡೆಯುತ್ತಿದ್ದ ಚೈತ್ರಾ ಕೊನೆ ಕೊನೆಯಲ್ಲಿ ಸಿಕ್ಕಾಪಟ್ಟೆ ಪಾಸಿಟಿವ್ ಅನ್ನೋದು ಜನರಿಗೆ ತಿಳಿಯುತ್ತದೆ. ಬಿಗ್ ಬಾಸ್ ಮುಗಿದ ನಂತರ ಮುಂದೆ ಏನು ಎಂದು ಯೋಚನೆ ಮಾಡುವಷ್ಟರಲ್ಲಿ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಚೈತ್ರಾ ಮಾತ್ರವಲ್ಲ ರಜತ್ ಕಿಶನ್, ಹನುಮಂತು, ಧನರಾಜ್ ಆಚಾರ್, ಐಶ್ವರ್ಯ ಶಿಂಧೋಗಿ, ಶೋಭಾ ಶೆಟ್ಟಿ ಸೇರಿದಂತೆ ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಇದ್ದಾರೆ. 

'ರಜತಣ್ಣ ಜೊತೆಗೆ ಬಿಗ್ ಬಾಸ್‌ನಲ್ಲಿ ಆಡಿರುವಂತಹ ಜಗಳ ನಿಜವಾದದ್ದೇ. ಆದರೆ ಅವರು ನಿಜವಾಗಿಯೂ ಒಬ್ಬ ಒಳ್ಳೆಯ ಹೃದಯದ ಮನುಷ್ಯ. ಅದರ ಬಗ್ಗೆ ಯಾವುದೇ ಅನುಮಾನಗಳಿಲ್ಲ. ನಾನು ಮತ್ತು ರಜತಣ್ಣ ಏನ್ ಜಗಳ ಅಡುತ್ತೇವೆ ಅದು ಸಹಜವಾಗಿ ಅಡುವಂತಹದ್ದು. ಮನೆಯಲ್ಲಿ ಅಣ್ಣ ತಂಗಿ ಜಗಳವಾಡಿದಂತೆ. ಅದು ಬಿಟ್ಟರೆ ಬೇರೇನೂ ಇಲ್ಲ. ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ಶೋಗೆ ಬಂದಿರುವುದಕ್ಕೆ ನನಗೆ ಖುಷಿ ಇದೆ. ಈಗ ಕಾರ್ಯಕ್ರಮ ಹೇಗೆ ಹೋಗ್ತಿದೆ ಎಂಬ ಅಂದಾಜು ನನಗೆ ಸಿಕ್ಕಿದೆ. ಜನರ ಪ್ರತಿಕ್ರಿಯೆ ಕೂಡ ಚೆನ್ನಾಗಿದೆ. ಬಿಗ್ ಬಾಸ್ ಶೋನಲ್ಲಿ ಇದ್ದ ಬಹುತೇಕರು ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ಶೋನಲ್ಲೂ ಇರುವುದರಿಂದ ನನಗೆ ಒಂದು ಕಡೆ ಕಂಫರ್ಟ್‌ ಝೋನ್‌ ಸಿಕ್ಕಿದೆ' ಎಂದು ಚೈತ್ರಾ ಕುಂದಾಪುರ ಮಾತನಾಡಿದ್ದಾರೆ. 

ಥಿಯೇಟರ್‌ಗಳಲ್ಲಿ ಸೀಟ್‌ ಖಾಲಿ ಇದ್ರೆ ಕಾಲು ಹಾಕೋದು, ಉಗಿಯೋದು ಎಷ್ಟು ಸರಿ?; ಮಾಸ್ಟರ್ ಆನಂದ್ ಗರಂ

'ನಾನು ಯಾವತ್ತೂ ಭೇಟಿ ಮಾಡದ ಹೊಸ ಹೊಸ ಜನರನ್ನು ಈ ಶೋ ಮೂಲಕ ನಾನು ಭೇಟಿ ಮಾಡುತ್ತಿದ್ದೇನೆ. ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ಶೋ ಬಹಳ ವಿಭಿನ್ನವಾಗಿದೆ. ಬಿಗ್ ಬಾಸ್‌ನಲ್ಲೂ ನೋಡದೇ ಇರುವಂತಹ ಚೈತ್ರಾಳನ್ನು ನೀವು ಈ ಶೋನಲ್ಲಿ ನೋಡಲು ಸಾಧ್ಯವಿದೆ. ನಾನು ಬಿಗ್ ಬಾಸ್ ಮನೆಯಲ್ಲೂ ಡ್ಯಾನ್ಸ್ ಮಾಡಿರಲಿಲ್ಲ ಆದರೆ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ಶೋನಲ್ಲಿ ಡ್ಯಾನ್ಸ್ ಮಾಡುತ್ತಿದ್ದೇನೆ. ನಾನು ಹಾಡನ್ನು ಕೂಡ ಹಾಡಿದ್ದೇನೆ. ನಿರೂಪಕಿ ಅನುಪಮಾ ಗೌಡ ಕೂಡ ಸೂಪರ್ ಹೆಣ್ಣು ಮಕ್ಕಳಿಗೆ ತುಂಬಾ ಸಪೊರ್ಟ್ ಮಾಡುತ್ತಾರೆ. ಇದು ಯಾವುದೇ ಕಾರಣಕ್ಕೂ ಸ್ತ್ರೀವಾದ, ಪುರಷಪ್ರಧಾನ ತರಹ ಕಾರ್ಯಕ್ರಮ ಅಲ್ಲ' ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. 

U ಟರ್ನ್‌ ನೋಡುದ್ರೆ ನೀವೇ ನೆನಪಾಗೋದು; ಶ್ರದ್ಧಾ ಶ್ರೀನಾಥ್‌ ಹೊಸ ಲುಕ್ ವೈರಲ್