ಬಿಗ್ ಬಾಸ್ ಕನ್ನಡ 11ರಲ್ಲಿ ಸದ್ದು ಮಾಡಿದ ಚೈತ್ರಾ ಕುಂದಾಪುರ, ಕಾರ್ಯಕ್ರಮದ ನಂತರ ಬದಲಾಗಿದ್ದಾರೆ. ಬಿಗ್ ಬಾಸ್ ಫಿನಾಲೆಯಲ್ಲಿ ಡಿಸೈನರ್ ಸೀರೆಯುಟ್ಟು ಮಿಂಚಿದ್ದ ಚೈತ್ರಾ, ಈಗ ಹೊಸ ಸೀರೆ ಬ್ರ್ಯಾಂಡ್‌ಗಳಿಗೆ ಮಾಡೆಲ್ ಆಗುತ್ತಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದ ಉಡುಗೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಈ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 11 (bigg boss kannada 11) ಮನೋರಂಜನೆಗಿಂತ ಹೆಚ್ಚಾಗಿ ಕಚ್ಚಾಟ, ಕಿತ್ತಾಟಗಳಿಂದಲೇ ಭಾರಿ ಸದ್ದು ಮಾಡಿತ್ತು. ಈ ಸೀಸನ್ ನಲ್ಲಿ ಹೆಚ್ಚು ಸದ್ದು ಮಾಡಿದವರಲ್ಲಿ ಒಬ್ಬರು ಅಂದ್ರೆ ಅದು ಚೈತ್ರಾ ಕುಂದಾಪುರ. ತಮ್ಮ ಮಾತು, ಜಗಳ, ವಿಚಿತ್ರ ಅವತಾರಗಳಿಂದಲೇ ಮನರಂಜನೆ ಜೊತೆಗೆ, ಕಿರಿಕ್ ಮಾಡಿದ ಕುಂದಾಪುರದ ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದ ಚೈತ್ರಾ ಕುಂದಾಪುರ (Chaithra Kundapura) ಇದೀಗ ಬಿಗ್ ಬಾಸ್ ಬಳಿಕ ತುಂಬಾನೆ ಬದಲಾಗಿದ್ದಾರೆ. ಅದನ್ನು ನಾವು ಹೇಳ್ತಿಲ್ಲ. ನೀವೇ ನೋಡಬಹುದು.
ರಜತ್ ಒಳ್ಳೆಯ ಮನುಷ್ಯ, ನಾವು ಅಣ್ಣ ತಂಗಿ ರೀತಿ ಜಗಳವಾಡುತ್ತೀವಿ: ಚೈತ್ರಾ ಕುಂದಾಪುರ
ಬಿಗ್ ಬಾಸ್ ಸೀಸನ್ ಪೂರ್ತಿಯಾಗಿ ಚೈತ್ರಾ ಕುಂದಾಪುರ ಕಂಡು ಬಂದಿದ್ದು, ಸಿಂಪಲ್ ಸೀರೆ ಹಾಗೂ ಸಲ್ವಾರ್ ನಲ್ಲಿ, ಅದು ಕೂಡ ಮೇಕಪ್ ಮಾಡದೆ, ಹಣೆ ಮೇಲೆ ಬೊಟ್ಟು ಇಟ್ಟು, ಕೈಗಳಿಗೆ ಬಳೆ ತೊಟ್ಟು, ಸಂಪ್ರದಾಯಸ್ಥ ಹುಡುಗಿ ಥರಾನೇ ಕಾಣಿಸಿಕೊಳ್ಳುತ್ತಿದ್ದರು. ಅವರು ಮೊದಲಿನಿಂದಲೂ ಅಂದರೆ, ರಿಯಲ್ ಲೈಫಲ್ಲೂ ಇದ್ದಿದ್ದೂ ಹಾಗೇನೆ. ಆದರೆ ಬಿಗ್ ಬಾಸ್ ಫಿನಾಲೆಯಲ್ಲಿ ಮೇಕಪ್ ಮಾಡಿಕೊಂಡು, ಡಿಸೈನರ್ ಸೀರೆ, ಹೇರ್ ಸ್ಟೈಲ್ ಮಾಡಿಸಿಕೊಂಡು ಚೈತ್ರಾ ಮಿಂಚಿದ್ದರು. ಕಿಚ್ಚ ಸುದೀಪ್ ಕೂಡ ಚೈತ್ರಾ ಹೊಸ ಲುಕ್ ಬಗ್ಗೆ ಮಾತನಾಡಿದ್ದರು. ಆದರೆ ಆದಾದ ಬಳಿಕ ಚೈತ್ರಾ ಲುಕ್ (Chaithra New Look) ನಿಜವಾಗಿಯೂ ಬದಲಾಗಿದೆ. ಹೊಸ ಹೊಸ ಸೀರೆ ಬ್ರಾಂಡ್ ಗಳಿಗೆ ಚೈತ್ರಾ ಮಾಡೆಲ್ ಆಗ್ತಿದ್ದಾರೆ. ಹಾಗಾಗಿ ಅವರು ಹೊಸ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸುಂದರ ಸೀರೆಗಳಿಗೆ ಚೈತ್ರಾ ಕುಂದಾಪುರ ಮಾಡೆಲ್, ಸಿಂಪಲ್ ಆಗಿ ಸಂಸ್ಕೃತಿ ಉಳಿಸ್ತಿರುವ ಬಿಗ್ ಬಾಸ್ ಸ್ಪರ್ಧಿ
ಬಿಗ್ ಬಾಸ್ ಬಳಿಕ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಗಿ ಆಕ್ಟೀವ್ ಆಗಿರುವ ಚೈತ್ರಾ, ದಿನಕ್ಕೊಂದು ಸ್ಟೈಲ್ ನಲ್ಲಿ ಫೋಟೊ ಶೇರ್ ಮಾಡುತ್ತಿರುತ್ತಾರೆ, ಇದೀಗ ಚೈತ್ರಾ ಕುಂದಾಪುರ ಮಹಾರಾಷ್ಟ್ರದ ಬೆಡಗಿಯಾಗಿ (Maharastrian Look) ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಶೇರ್ ಮಾಡಿರುವ ಚೈತ್ರಾ ಕೆಂಪು ಬಣ್ಣದ ಬಾರ್ಡರ್ ಹಾಗೂ ಪಲ್ಲು ಇರುವ, ಹಸಿರು ಬಣ್ಣದ ಸೀರೆ, ಹಾಗೂ ಕೆಂಪು ಬಣ್ಣದ ಬ್ಲೌಸ್ ಧರಿಸಿ ಮಹಾರಾಷ್ಟ್ರ ಸ್ಟೈಲಿನಲ್ಲಿ ಸೀರೆಯುಟ್ಟಿದ್ದಾರೆ. ಅದಕ್ಕೆ ಸರಿಯಾಗಿ ಮಹಾರಾಷ್ಟ್ರದ ಒಡವೆಗಳನ್ನು ಧರಿಸಿ, ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಚೈತ್ರಾ ಕುಂದಾಪುರ ಈ ಲುಕ್ ಸದ್ಯ ಸಖತ್ ವೈರಲ್ ಆಗ್ತಿದೆ. ಜನ ಕೂಡ ಇವರ ಲುಕ್ ಇಷ್ಟಪಟ್ಟಿದ್ದಾರೆ. ಕಾಮೆಂಟ್ ಸೆಕ್ಷನ್ ಪೂರ್ತಿ ಹೊಗಳಿಕೆಯ ಮೆಸೇಜ್ ಗಳಿಂದ ತುಂಬಿ ಹೋಗಿದೆ ಅಂತಾನೆ ಹೇಳಬಹುದು.
ನೇರಪ್ರಸಾರದಲ್ಲಿ ಬಂದ ಬಿಗ್ಬಾಸ್ ಚೈತ್ರಾ ಕುಂದಾಪುರ ಕೊಟ್ರು ಬಿಗ್ ಅಪ್ಡೇಟ್: ಏನದು?
ಒಬ್ಬರು ಕಾಮೆಂಟ್ ಮಾಡಿ ವಾರೆವ್ಹಾ ಚೈತ್ರಕ್ಕ ಎಲ್ಲೋ ಹೋದೆ ಬಿಡು ನೀನು ಎಂದಿದ್ದಾರೆ. ಮತ್ತೊಬ್ಬರು ನಮ್ಮ ಹಿಂದೂ ಧರ್ಮದ ಅಪ್ಪಟ ಕನ್ನಡತಿ ಚೈತ್ರಕ್ಕ , ಇದು ನಮ್ಮ ಹಿಂದೂ ಸಂಪ್ರದಾಯ ಹೌದು ಹುಲಿ , ಜೈ ಶಿವಾಜಿ ಮಹಾರಾಜ್ ಕಿ ಜೈ, ಮರಾಠಿ ಮುಳ್ಗಿ, ಯಾವ್ ಒಡವೆನೂ ಬೇಡ ಚೈತ್ರ, ಸೀರೆನೇ ಸಾಕು ನಿಮ್ ಸೌಂದರ್ಯಕ್ಕೆ ಅಂತಾನೂ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಒಬ್ಬರು ಏನು ಚೈತ್ರಕ್ಕಾ ನೀವು ದಿನ ಹೋಗ್ತಿದ್ದಾಗೆ ಇಷ್ಟೊಂದು ಚೆನ್ನಾಗಿ ಆಗ್ತಿದ್ದೀರಿ. ನಿಮ್ಮ ಮದ್ವೆ ದಿನ ಹುಡುಗ ನಿಮ್ಮನ್ನು ನೋಡಿ, ಇದು ನನ್ನ ಹುಡುಗಿ ಅಲ್ಲ ಅನ್ನಬಹುದು ಎಂದು ಸಹ ಹೇಳಿದ್ದಾರೆ. ನಮ್ಮ ಹಿಂದೂ ಧರ್ಮದ ಸಂಪ್ರದಾಯ ಸಂಸ್ಕಾರ ಇರುವಂತ ಹೆಣ್ಣು ಮಗಳು ನೀವು , ಸೂಪರ್ ಚೈತ್ರಕ್ಕ, ಹಿಂದೂ ಹುಲಿ, ನಮ್ಮ ಸಂಪ್ರದಾಯವನ್ನು ಪಾಲಿಸುತ್ತಾರೆ, ಹೆಮ್ಮೆಯ ಹಿಂದೂ ಎಂದು ಹಾಡಿ ಹೊಗಳಿದ್ದಾರೆ ಕೆಲವರು. ಹೇಗಿದೆ ಚೈತ್ರಾ ಕುಂದಾಪುರ ಈ ಲುಕ್, ಸಖತ್ ಆಗಿದೆ ಅಲ್ವಾ?
