ರಾಜಾ ರಾಣಿ ವೇದಿಕೆಗೆ ಹೋಗುವ ಅದೃಷ್ಟಶಾಲಿ ನೀವಾಗಬೇಕಾ? ನಾಲ್ಕೇ ನಾಲ್ಕು ಸ್ಟೆಪ್​, ಕಲರ್ಸ್​ ವಾಹಿನಿಯಿಂದ ಹೀಗೊಂದು ಬಂಪರ್​ ಆಫರ್. ಇಲ್ಲಿದೆ ಡಿಟೇಲ್ಸ್​...  

ಕಲರ್ಸ್​ ಕನ್ನಡ ಚಾನೆಲ್​ನಲ್ಲಿ ಇದಾಗಲೇ ರಾಜಾ ರಾಣಿ ಮೂರನೇ ಸೀಸನ್ ಆರಂಭವಾಗಿದೆ. ರಿಯಲ್ ಜೋಡಿಗಳು, ಒಬ್ಬರನ್ನೊಬ್ಬರು ಎಷ್ಟೊಂದು ಅರ್ಥ ಮಾಡ್ಕೊಂಡಿದ್ದಾರೆ ಅನ್ನೋದನ್ನು ತಿಳಿಸುವ ಈಗಾಗಲೇ 2 ಸೀಸನ್ ಗಳನ್ನು ಮುಗಿಸಿರುವ ರಾಜಾ ರಾಣಿ (Raja Rani) ಕಾರ್ಯಕ್ರಮದ ಮೂರನೇ ಸೀಸನ್ ಆಗಿ ರಾಜಾ ರಾಣಿ ರೀಲೋಡೆಡ್ ಜೂನ್ 8ರಿಂದ ಆರಂಭವಾಗಿದೆ. ಈ ಷೋಗೆ ಸೃಜನ್​ ಲೋಕೇಶ್, ತಾರಾ ಅನುರಾಧ ಹಾಗೂ ಅದಿತಿ ಪ್ರಭುದೇವ ತೀರ್ಪುಗಾರರಾದರೆ, ಅನುಪಮಾ ಗೌಡ ನಿರೂಪಕಿಯಾಗಿದ್ದಾರೆ. ಇದಾಗಲೇ ಹಲವಾರು ಕಂತುಗಳನ್ನು ಪೂರೈಸಿರುವ ಈ ಷೋ ಇನ್ನೇನು ಅಂತಿಮ ಹಂತಕ್ಕೆ ಬಂದು ತಲುಪಿದೆ.

ಪತ್ನಿಯನ್ನು ಯಾಮಾರಿಸೋದು ಹೇಗೆಂದು ನಟ ಲೋಕೇಶ್ ಟಿಪ್ಸ್​​! ಹೇಗಿದೆ ಪ್ಲ್ಯಾನ್​ ಕೇಳ್ತಿದೆ ತಾರಾ ಜೋಡಿ

ಈ ಸಂದರ್ಭದಲ್ಲಿ ಕಲರ್ಸ್​ ಕನ್ನಡ ವಾಹಿನಿ ವೀಕ್ಷಕರಿಗೆ ಬಂಪರ್​ ಆಫರ್​ ನೀಡಿದೆ. ರಾಜಾ ರಾಣಿ ವೇದಿಕೆಯ ಮೇಲೆ ಬಂದು ಗಿಫ್ಟ್​ ಪಡೆದುಕೊಳ್ಳಬಹುದು. ಇದಕ್ಕಾಗಿ ನಾಲ್ಕೇ ನಾಲ್ಕು ಸ್ಪೆಪ್​ ನೀವು ಮಾಡಿದರೆ ಮುಗಿಯಿತು. ಅದೃಷ್ಟಶಾಲಿಗಳು ನೀವೂ ಆಗಬಹುದು. ಈ ಬಗ್ಗೆ ಕಲರ್ಸ್​ ಕನ್ನಡ ವಾಹಿನಿ ಪ್ರೊಮೋ ಬಿಡುಗಡೆ ಮಾಡಿದೆ. ಅದರಲ್ಲಿ ತೀರ್ಪುಗಾರರು ನಾಲ್ಕು ಸ್ಟೆಪ್​ಗಳನ್ನು ಅನುಸರಿಸುವಂತೆ ಹೇಳಿದ್ದಾರೆ. ಷರತ್ತುಗಳು ಅನ್ವಯ ಎನ್ನುತ್ತಲೇ ಈ ನಾಲ್ಕು ಸ್ಟೆಪ್​ಗಳ ಕುರಿತು ಹೇಳಲಾಗಿದೆ. ಅವೆಂದರೆ, 

1) ನಿಮ್ಮ ಡಾನ್ಸ್​ ಜೋಡಿಯನ್ನು ಹುಡುಕಿಕೊಳ್ಳಿ. 
2) ಆ ವಾರ ತೀರ್ಪುಗಾರರು ಕೊಡುವ ಹಾಡಿಗೆ ಡಾನ್ಸ್​ ಮಾಡಬೇಕು. 
3) ನೀವು ಮಾಡಿರುವ ಡಾನ್ಸ್​ ಅನ್ನು ಜಿಯೋ ಸಿನಿಮಾದ ರಾಜಾ ರಾಣಿಯಲ್ಲಿ ಅಪಲೋಡ್​ ಮಾಡಬೇಕು.
4) ನಿಮ್ಮ ಡಾನ್ಸ್​ ತಂಡಕ್ಕೆ ಇಷ್ಟ ಆಗಿದ್ದರೆ, ತಂಡ ನಿಮ್ಮನ್ನು ಕರೆಯುತ್ತದೆ.

ರಾಜಾ ರಾಣಿ ಷೋ ಶೂಟಿಂಗ್​ ವೇಳೆ ಆ್ಯಂಕರ್​ ಅನುಪಮಾ ಬೆಳಿಗ್ಗೆಯಿಂದ ಏನೆಲ್ಲಾ ಮಾಡ್ತಾರೆ?

ಇಷ್ಟೇ ನಾಲ್ಕು ಸ್ಟೆಪ್​. ಅಷ್ಟಕ್ಕೂ ಡಾನ್ಸ್​ ಮಾಡುವವರಿಗೇನೂ ಕೊರತೆಯಿಲ್ಲ. ರೀಲ್ಸ್​ನಲ್ಲಿಯೇ ಇದಾಗಲೇ ಸಾಕಷ್ಟು ಮಂದಿ ಡಾನ್ಸ್​ ಮಾಡಿ ಅಪ್​ಲೋಡ್​ ಮಾಡುತ್ತಾರೆ. ಹಲವಾರು ಪ್ರತಿಭೆಗಳೂ ಇವೆ. ಆದರೆ ಅವರಿಗೆಲ್ಲ ತಕ್ಕ ವೇದಿಕೆ ಸಿಗುವುದು ಕಷ್ಟ. ಕೆಲವೇ ಕೆಲವು ಅದೃಷ್ಟಶಾಲಿಗಳಿಗೆ ಮಾತ್ರ ವೇದಿಕೆ ಸಿಗುತ್ತದೆ. ಇದೀಗ ನಿಮಗೆ ಅದೃಷ್ಟವಿದ್ದರೆ ರಾಜಾ ರಾಣಿ ರೀಲೋಡೆಡ್​ ವೇದಿಕೆಗೆ ಹೋಗುವ ಅದೃಷ್ಟ ಸಿಗಲಿದೆ.

ಅದರ ಸಂಪೂರ್ಣ ವಿವರ ಈ ಪ್ರೊಮೋದಲ್ಲಿ ಇದೆ ನೋಡಿ... 

View post on Instagram