Asianet Suvarna News Asianet Suvarna News

ಬೃಂದಾವನ ಪುಷ್ಪ ಸಕತ್​ ಸ್ಟೆಪ್ಸ್​: ಬಾಲಿವುಡ್​​ ರೇಂಜ್​ಗೆ ಡ್ಯಾನ್ಸ್​ ಮಾಡ್ತೀರಾ ಎಂದ ಫ್ಯಾನ್ಸ್​

ಕಲರ್ಸ್​ ಕನ್ನಡ ಚಾನೆಲ್​ನಲ್ಲಿ ಪ್ರಸಾರ ಆಗ್ತಿರೋ ಬೃಂದಾವನ ಸೀರಿಯಲ್​ ನಾಯಕಿ ಪುಷ್ಪ ಸಕತ್​ ಸ್ಟೆಪ್ಸ್ ಹಾಕಿದ್ದಾರೆ. ಅಭಿಮಾನಿಗಳು ಏನಂದ್ರು ನೋಡಿ...
 

Brindavan serial heroine Pushpa Amulya Bharadwaj reels gone viral Fans reacts suc
Author
First Published May 20, 2024, 6:11 PM IST

ಪ್ರತಿನಿತ್ಯ ಬೃಂದಾವನ ಸೀರಿಯಲ್​ ಮೂಲಕ ನಿಮ್ಮೆಲ್ಲರ ಮನೆಗೆ ಬರುತ್ತಿರುವ ನಾಯಕಿ ಪುಷ್ಪಾ. ಇವರ ನಿಜವಾದ ಹೆಸರು ಅಮೂಲ್ಯ ಭಾರಧ್ವಾಜ್. ಬೃಂದಾವನ ಸೀರಿಯಲ್​ನಲ್ಲಿ ಹಳ್ಳಿ ಹುಡುಗಿ ಪುಷ್ಪ ಆಗಿ ನಟಿಸುತ್ತಿದ್ದಾರೆ. ಆಕಾಶ್​ ಪತ್ನಿಯಾಗಿ ಪುಷ್ಪ ಪಾತ್ರ ಇಂಟರೆಸ್ಟಿಂಗ್​ ಆಗಿ ಮೂಡಿಬರುತ್ತಿದೆ. ಫುಲ್​ ಟೈಮ್ ಗೃಹಿಣಿಯಾಗಿ ಕಾಣಿಸಿಕೊಳ್ಳೋ ಪುಷ್ಪ ಅವರ ರೀಲ್ಸ್​ ಒಂದು ಸಕತ್​ ವೈರಲ್​ ಆಗುತ್ತಿದೆ. ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿರೋ ನಟಿಯ ರೀಲ್ಸ್​ ನೋಡಿ ಬಾಲಿವುಡ್​​ ರೇಂಜ್​ಗೆ ಡ್ಯಾನ್ಸ್​ ಮಾಡ್ತೀರಾ ಎನ್ನುತ್ತಿದ್ದಾರೆ ಅಭಿಮಾನಿಗಳು. 

ನಟಿಯ ಕುರಿತು ಹೇಳುವುದಾದರೆ, ಇವು ‘ದಾಸ ಪುರಂದರ’ ಧಾರಾವಾಹಿಯಲ್ಲಿ ನಟಸಿದ್ದರು ಅಮೂಲ್ಯಾ. ಅಂದು ಪೌರಾಣಿಕ ಧಾರಾವಾಹಿಯಲ್ಲಿ ನಟಿಸಿದ್ದ ನಟಿ, ಬೃಂದಾವನ ಮೂಲಕ ಗೃಹಿಣಿಯಾಗಿ  ಸಾಮಾಜಿಕ ಧಾರಾವಾಹಿಯಲ್ಲಿ ನಟಿಸುವ ಮೂಲಕ ಸಕತ್​ ಸದ್ದು ಮಾಡುತ್ತಿದ್ದಾರೆ. ದಾಸ ಪುರಂದರಲ್ಲಿ  ಸರಸ್ವತಿಯಾಗಿ, ಈಗ ಪುಷ್ಪ ಆಗಿರುವ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು, ಎರಡನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಅಷ್ಟಕ್ಕೂ ಇವರು ರಿಯಲ್​ ಲೈಫ್​ನಲ್ಲಿ ಇನ್ನೂ ಬೇರೆನೇ ಆಗಿದ್ದಾರೆ. ಸಕತ್​  ಮಾಡರ್ನ್ ಆಗಿದ್ದಾರೆ. ಸೀರಿಯಲ್‌ನಲ್ಲಿ ಅವರು ಟ್ರೆಡಿಷನಲ್ ಪಾತ್ರಗಳನ್ನು ಮಾಡುತ್ತಿರುವ ಅವರು ಚಾಲೆಂಜಿಂಗ್ ಪಾತ್ರಗಳನ್ನು ಮಾಡಲು ಬಯಸುತ್ತಾರೆ. ಅಂದಹಾಗೆ, 23 ವರ್ಷದ ಅಮೂಲ್ಯ ಅವರು ಮೈಸೂರಿನ ಬೆಡಗಿ. 

ಬೃಂದಾವನ ಪುಷ್ಪಾ ರಿಯಲ್​ ಲೈಫ್​ನಲ್ಲಿ ಬ್ರೇಕಪ್​ ಆಗೋಯ್ತಾ? ಇನ್​ಸ್ಟಾ ಪೋಸ್ಟ್​ ನೋಡಿ ಫ್ಯಾನ್ಸ್​ ಶಾಕ್​!

ಕೆಲ ದಿನಗಳ ಹಿಂದೆ ನಟಿ, ಸೋಷಿಯಲ್​  ಮೀಡಿಯಾದಲ್ಲಿ ಪೋಸ್ಟ್​ ಒಂದನ್ನು ಶೇರ್​ ಮಾಡಿ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದ್ದರು. 'ಅವಳು  ಅವರ ಒಡೆದ ಮನಸಿನ ಎಲ್ಲಾ ತುಣುಕುಗಳನ್ನು ಜೋಡಿಸಿಕೊಡುತ್ತಾಳೆ. ಅವರು ತಕ್ಷಣ ಅವಳ ಬದುಕಿನಿಂದ ಹೊರಗೆ ನಡೆಯುತ್ತಾರೆ. ಆ ಒಡೆದ ಮನಸಿನ ತುಣುಕುಗಳನ್ನು ಅವಳಲ್ಲಿ ಬಿಟ್ಟು ಹೋಗುತ್ತಾರೆ. ಆಕೆ ಅನಿವಾರ್ಯವಾಗಿ ಅವುಗಳೆಲ್ಲವನ್ನೂ ತನ್ನಲ್ಲಿಯೇ ಇಟ್ಟುಕೊಳ್ಳಬೇಕಾಗುತ್ತದೆ...ಆಕೆ ಇನ್ನೆಂದೂ ಆಕೆ ಯಾರದ್ದೂ ಆಯ್ಕೆ ಅಲ್ಲ ಎಂದು ಒಪ್ಪಿಕೊಂಡಿದ್ದಾಳೆ. ನೀವು ಇರಿ ಅಥವಾ ಹೋಗಿ. ಅದು ಈ ಸಮಯದಲ್ಲಿ ಯಾವುದೇ ಪ್ರಾಮುಖ್ಯತೆ ಹೊಂದಿಲ್ಲ. ಅವಳಿಗೆ ಶಾಂತಿ ಬೇಕು, ಜಸ್ಟ್ ಖುಷಿಯಾಗಿರಬೇಕು. ನೀವಿದ್ದರೂ ಸರಿ, ಇಲ್ಲದಿದ್ದರೂ ಸರಿ... ಅವಳು ಅದನ್ನು ಈಗಾಗಲೇ ಒಪ್ಪಿಕೊಂಡಿದ್ದಾಳೆ. ಜನರು ಆಕೆಯ ಜೀವನದೊಳಗೆ ಬರುವುದು ಆಕೆಯ ಜೊತೆಗೆ ಇರುವುದಕ್ಕಲ್ಲ ಎನ್ನುವುದನ್ನು ಆಕೆ ಈಗಾಗಲೇ ಒಪ್ಪಿಕೊಂಡಿದ್ದಾಳೆ. ಬದಲಾಗಿ ಆಕೆಯಲ್ಲಿರುವಂತಹ ಸಕಾರಾತ್ಮಕ ಶಕ್ತಿ ಅಥವಾ ಹೀಲಿಂಗ್ ಸ್ಪಿರಿಟ್​ಗಾಗಿ ಜನರು ಆಕೆಯ ಬಳಿ ಬರುತ್ತಾರೆ ಎಂಬ ಅರಿವಾಗಿದೆ ಎಂದು ಬರೆದಿದ್ದರು. 

ಈ  ಬರವಣಿಗೆಗಳನ್ನು ನೋಡಿದವರು  ಅಮೂಲ್ಯ ಅವರಿಗೆ ಬ್ರೇಕಪ್​ ಆಗಿದೆ ಎಂದೇ ಹೇಳುತ್ತಿದ್ದಾರೆ.  ಇವರು ಬರೆದಿರುವ ಪ್ರತಿಯೊಂದು ಶಬ್ದ, ವಾಕ್ಯವೂ ಬ್ರೇಕಪ್​ ಆಗಿರುವ ಸಂಕೇತವಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ನಟಿ ಬೆನ್ನು ಹಾಕಿ ಪೋಸ್​ ನೀಡುವ ಮೂಲಕ ಈ ಎಲ್ಲಾ ಮಾತುಗಳನ್ನು ಬರೆದುಕೊಂಡಿರುವುದು ನೋವಿನಿಂದಲೇ ಬರೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.  ಈ ಇನ್​ಸ್ಟಾಗ್ರಾಮ್​ನಲ್ಲಿ ಬ್ಲೂಟಿಕ್​ ಇಲ್ಲದ ಕಾರಣ, ಇದು ಅಮೂಲ್ಯ ಅವರ ಅಧಿಕೃತ ಸೋಷಿಯಲ್​ ಮೀಡಿಯಾ ಹೌದೋ, ಅಲ್ಲವೋ ಎಂಬ ಸಂದೇಹ ಕೆಲವರನ್ನು ಕಾಡುತ್ತಿದೆ. ಇದರ ನಡುವೆಯೇ ಕೆಲ ತಿಂಗಳ ಹಿಂದೆ ಅಮೂಲ್ಯ ಅವರು ಮಾಡಿರೋ ಈ ರೀಲ್ಸ್​ ಸಕತ್​ ವೈರಲ್​ ಆಗುತ್ತಿದೆ. 

ಐಶ್ವರ್ಯಾಳ ಬ್ಯೂಟಿಯನ್ನು ಈ ರೀತಿ ಹಾಳು ಮಾಡಿದ್ದೇ ಪ್ಲಾಸ್ಟಿಕ್​! ನಟಿ ಕಸ್ತೂರಿ ಶಂಕರ್​ ಶಾಕಿಂಗ್​ ಹೇಳಿಕೆ

Latest Videos
Follow Us:
Download App:
  • android
  • ios