Asianet Suvarna News Asianet Suvarna News

ಟಿವಿಯಲ್ಲಿ ಬಂದ ಬ್ರೇಕಿಂಗ್​ ನ್ಯೂಸ್​ಗೆ ಗಂಡ ತಾಂಡವ್​ನ ಹಾರ್ಟ್​ ಬ್ರೇಕ್​- ಅತ್ತೆ ಕುಸುಮಾ ಶಾಕ್!

ಭಾಗ್ಯಳಿಗೆ ನೌಕರಿ ಸಿಕ್ಕ ವಿಷಯ ಟಿ.ವಿಯಲ್ಲಿ ಬರುತ್ತಿದ್ದಂತೆಯೇ ಮನೆಯಲ್ಲಿ ಆಗಿದ್ದೇನು? ಇದರ ಅರಿವೇ ಇಲ್ಲದ ಅತ್ತೆ  ಮತ್ತು ಗಂಡನ ರಿಯಾಕ್ಷನ್​ ಹೇಗಿದೆ?
 

breaking news came in TV about Bhagyas  job in Bhagylakshmi Kusuma and Tandav shocks suc
Author
First Published Jun 30, 2024, 1:07 PM IST

ಟಿವಿಯಲ್ಲಿ ಬ್ರೇಕಿಂಗ್​ ನ್ಯೂಸ್​ ಬಂದಿದೆ. ಈ ಬ್ರೇಕಿಂಗ್​ ನ್ಯೂಸ್​​ ನೋಡಿ ಭಾಗ್ಯಳ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಅಮ್ಮ, ಮಕ್ಕಳು ಮತ್ತು ಮಾವಂದಿರಿಂದ ಸಂಭ್ರಮದ ಆಚರಣೆ. ಎಲ್ಲರೂ ಕುಣಿದು ಕುಣಿದು ಕುಪ್ಪಳಿಸುತ್ತಿರುವ ಸಮಯದಲ್ಲಿಯೇ ಅತ್ತೆ ಕುಸುಮಾ ಎಂಟ್ರಿಯಾಗಿದೆ. ಟಿ.ವಿ. ನೋಡಿ ಅವಳಿಗೆ ಶಾಕ್​ ಆಗಿಬಿಟ್ಟಿದೆ. ಖುಷಿಯನ್ನೂ ಪಡಲಾಗದೇ, ಸಿಟ್ಟನ್ನೂ ಹತ್ತಿಕ್ಕಲಾಗದೇ ಬಿಸಿತುಪ್ಪ ಆಗಿಬಿಟ್ಟಿದೆ ಈ ಸುದ್ದಿ. ಇನ್ನು ತಾಂಡವ್​ನೋ ಇಂಗುತಿಂದ ಮಂಗನಂತಾಗಿ ಬ್ರೇಕಿಂಗ್​ ಸುದ್ದಿ ಕೇಳಿ ಹಾರ್ಟೇ ಬ್ರೇಕ್​  ಆಗಿ ಹೋಗಿದೆ! ಹೌದು. ಅಷ್ಟಕ್ಕೂ ಟಿ.ವಿಯಲ್ಲಿ ಬಂದಿರೋ ಬ್ರೇಕಿಂಗ್​ ನ್ಯೂಸ್​ ಏನೆಂದ್ರೆ ಭಾಗ್ಯಳಿಗೆ ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಸಿಕ್ಕಿರೋ ಸುದ್ದಿ! ಈ ಮೊದಲು ಮಗಳ ಜೊತೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು ಟಿ.ವಿಯಲ್ಲಿ ಸುದ್ದಿಯಾಗಿದ್ದ ಭಾಗ್ಯಳ ಸುದ್ದಿ ಈಗ ನೌಕರಿ ಸಿಕ್ಕ ಮೇಲೆ ಬಂದಿದೆ. 

ಅಷ್ಟಕ್ಕೂ ಈ ವಿಷಯವನ್ನು ಭಾಗ್ಯ ಮಕ್ಕಳಿಗೆ ಹೇಳಿದ್ದಳು. ಆದರೆ ಅತ್ತೆಗೆ ತಾನು ಕೆಲಸಕ್ಕೆ ಹೋಗುವುದು ಇಷ್ಟವಿಲ್ಲ ಎನ್ನುವ ಕಾರಣಕ್ಕೆ ಹೇಳಿರಲಿಲ್ಲ. ಆದರೆ ಇದೀಗ ಕುಸುಮಾಳಿಗೂ ವಿಷಯ ಗೊತ್ತಾಗಿ ಶಾಕ್​ ಆಗಿದೆ. ಸೊಸೆಯ ಮೇಲೆ ಕೋಪ ಪಡುವ ಹಾಗೂ ಇಲ್ಲ, ಅವಳನ್ನು ಹೊಗಳುವಂತೆಯೂ ಇಲ್ಲ ಎನ್ನುವ ಸ್ಥಿತಿ ಅವಳದ್ದು. ಮುಂದೆ ಹೇಗೆ ರಿಯಾಕ್ಟ್​ ಮಾಡುತ್ತಾಳೋ ಕಾದು ನೋಡಬೇಕಿದೆ. ಪತ್ನಿಯನ್ನು ಟಿ.ವಿಯಲ್ಲಿ ನೋಡಿ ಹೊಟ್ಟೆಉರಿಯಿಂದಿರುವ ಗಂಡ ತಾಂಡವ್​ ಅಲ್ಲಿಯೂ ತನ್ನ ನರಿಬುದ್ಧಿ ಬಿಟ್ಟಿಲ್ಲ. ಇವಳು ನಮ್ಮ ಮನೆಯ ಮರ್ಯಾದೆ ತೆಗೆಯುವುದಕ್ಕಾಗಿಯೇ ಹುಟ್ಟಿದ್ದಾಳೆ ಎಂದು ಮನೆಯವರ ಎದುರು ಹೇಳಿದ್ದಾನೆ. ಅಮ್ಮನಿಗೆ ಈ ವಿಷಯ ಗೊತ್ತಿಲ್ಲ ಎನ್ನುವ ಕಾರಣಕ್ಕೆ ಭಾಗ್ಯಳ ವಿರುದ್ಧ ಅವಳನ್ನು ಎತ್ತಿಕಟ್ಟುವ ತಂತ್ರ ಇದಾಗಿದೆ. ಮುಂದೆ ಕುಸುಮಾ ಏನು ಅನ್ನುತ್ತಾಳೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅವಳು ಕೂಡ ಸೊಸೆಗೆ ಸಪೋರ್ಟ್​ ಮಾಡುತ್ತಾಳೆ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯ. 

ನಿವೇದಿತಾ ಡಿವೋರ್ಸ್​ ಬೆನ್ನಲ್ಲೇ ಗಂಡನ ಹೊಗಳಿ ಅಮ್ಮನ ರೀಲ್ಸ್: ಚಂದನ್​ ಶೆಟ್ಟಿಗೆ ಟಾಂಗ್​ ಕೊಟ್ರಾ ಮಾಜಿ ಅತ್ತೆ?

ಅದೇ ಇನ್ನೊಂದೆಡೆ ಟಿವಿಯಲ್ಲಿ ತನ್ನ ಸುದ್ದಿ ಬರುತ್ತಿರುವ ವಿಷಯ ಕೇಳಿ ಖುದ್ದು ಭಾಗ್ಯಳೂ ಶಾಕ್​ ಆಗಿದ್ದಾಳೆ. ಮನೆಯಲ್ಲಿ ಎಲ್ಲರೂ ಏನಂದುಕೊಳ್ಳುತ್ತಾರೋ ಎನ್ನುವ ಗಾಬರಿಯಲ್ಲಿ ಅವಳು ಇದ್ದಾರೆ. ಆದರೆ, ಅಳುಮುಂಜಿ ಆಗಿದ್ದ ಭಾಗ್ಯ ಫೀನಿಕ್ಸ್​ ಪಕ್ಷಿಯಂತೆ ಎದ್ದು ನಿಂತಿರೋದೇ ಅಭಿಮಾನಿಗಳಿಗೆ ಖುಷಿ.  ಇದಾಗಲೇ ಭಾಗ್ಯ ಹೋಟೆಲ್​ ಚಾರ್ಜ್​ ವಹಿಸಿಕೊಂಡು ಗ್ರಾಹಕರು ಮೆಚ್ಚುವಂಥ ಅಡುಗೆ ಮಾಡಲು ಶುರು ಮಾಡಿದ್ದಾಳೆ.  ಒಂದು ಲಕ್ಷ ರೂಪಾಯಿ ಮುಂಗಡ ಹಣ ಇದಾಗಲೇ ಅವಳ ಕೈ ಕೂಡ ಸೇರಿಯಾಗಿದೆ.  ಒಂದು ಪೈಸೆ ದುಡಿಯುವ ತಾಕತ್ತು ಇಲ್ಲ ಎಂದು ಪದೇ ಪದೇ ಹೀಯಾಳಿಸುತ್ತಿದ್ದ ಪತಿ ತಾಂಡವ್​ನ ಮಾತು ಪದೇ ಪದೇ ಅವಳ ಕಣ್ಣೆದುರು ಬಂದಿದೆ​. ಆದರೆ ಒಂದೇ ಸಲಕ್ಕೆ ಒಂದು ಲಕ್ಷ ರೂಪಾಯಿ ದುಡಿದಿದ್ದಾಳೆ. 

 ನನಗೆ ನೀವೇ ಸ್ಫೂರ್ತಿ. ನನ್ನ ಕೈಯಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ರಲ್ಲ. ಅದನ್ನು ನಾನು ಮಾಡಿ ತೋರಿಸಿದೆ ಎಂದು ಭಾಗ್ಯ ತನ್ನಷ್ಟಕ್ಕೆ ತಾನು ಅಂದುಕೊಳ್ಳುತ್ತಿದ್ದಾಳೆ. ಈ ಮೂಲಕ ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ ಎನ್ನುವುದನ್ನು ಭಾಗ್ಯ ತೋರಿಸಿದ್ದಾಳೆ.  ಪತ್ನಿಯ ಬಳಿ ಇಎಂಐ ಕಟ್ಟಲು ಹಣವಿಲ್ಲ ಎಂದು ಹಂಗಿಸುತ್ತಲೇ ಆಕೆಗೆ ಅವಮಾನ ಮಾಡಲು ನೋಡುತ್ತಿದ್ದ ತಾಂಡವ್​ ಮನೆಯ ಇಐಎಂ ದುಡ್ಡು ಕೇಳಿದ್ದಾನೆ. ಒಂದು ಲಕ್ಷ ಸಂಬಳ ಕೈಯಲ್ಲಿ ಇಟ್ಟುಕೊಂಡಿರೋ ಭಾಗ್ಯ ದುಡ್ಡನ್ನು ತಾಂಡವ್​ ಕೈಯಲ್ಲಿ ಇತ್ತು ಎರಡು ತಿಂಗಳ ಇಐಎಂ ಎಂದು ಹೇಳಿದ್ದಾನೆ. ಇದನ್ನು ಕೇಳಿ ತಾಂಡವ್​ ಪೇಚಿಗೆ ಸಿಲುಕಿದ್ದಾನೆ. ಇಂಗು ತಿಂದ ಮಂಗನಂತಾಗಿದೆ ಅವನ ಸ್ಥಿತಿ. ಇದೀಗ ಟಿ.ವಿಯಲ್ಲಿ ಪತ್ನಿಯನ್ನು ನೋಡಿ ಸಹಿಸಿಕೊಳ್ಳಲು ಅವನಿಂದ  ಆಗುತ್ತಿಲ್ಲ. 

ನುಡಿದಂತೇ ನಡೆದ ಭೂಮಿಕಾ- ಇರೋ ಬರೋ ಕಾರ್ಡ್​ಗಳೆಲ್ಲವೂ ಬ್ಲಾಕ್​: ವಿಲನ್​ಗಳು ವಿಲವಿಲ!

Latest Videos
Follow Us:
Download App:
  • android
  • ios