ಪುಟ್ಟಕ್ಕನ ಮಕ್ಕಳು ನಂಜವ್ವನಿಗೆ ಹುಟ್ಟುಹಬ್ಬ: 400 ಸೀರಿಯಲ್​ಗಳ ನಟಿಯ ರೋಚಕ ಪಯಣ ಇಲ್ಲಿದೆ...

ಪುಟ್ಟಕ್ಕನ ಮಕ್ಕಳು ಸೀರಿಯಲ್​ ನಂಜವ್ವ ಪಾತ್ರಧಾರಿ ಸಾರಿಕಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟಿಯ ರಿಯಲ್​ ಲೈಫ್​ ರೋಚಕ ಸ್ಟೋರಿ ಇಲ್ಲಿದೆ...
 

Birthday of Sarika Urs the villian Nanjavva of Puttakkana Makkalu serial Nanjavva suc

ನಂಜಮ್ಮ ಎಂದಾಕ್ಷಣ ಎಲ್ಲರ ಕಣ್ಣೆದುರಿಗೆ ಬರುವುದು ಪುಟ್ಟಕ್ಕನ ಮಕ್ಕಳು ಸೀರಿಯಲ್​ ವಿಲನ್​ ನಂಜಮ್ಮ. ಈ ಸೀರಿಯಲ್​ನಲ್ಲಿ ಹೆಸರಿಗೆ ತಕ್ಕಂತೆಯೇ ನಂಜಮ್ಮನೇ ಈಕೆ. ಸದಾ ಒಂದಿಲ್ಲೊಂದು ಗಲಾಟೆ ಸೃಷ್ಟಿಸುವುದು ಎಂದರೆ ಈಕೆಗೆ ಎಲ್ಲಿಲ್ಲದ ಖುಷಿ. ಅಸಲಿಗೆ ನಂಜಮ್ಮ ಪಾತ್ರಧಾರಿಯ ನಿಜವಾದ ಹೆಸರು ಸಾರಿಕಾ ರಾಜ್ ಅರಸ್. ಇಂದು ಸಾರಿಕಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಇವರ ಬದುಕಿನ ಕೆಲವು ರೋಚಕ ಘಟನೆಗಳನ್ನು ಹಾಗೂ ಅವರು ನಡೆದು ಬಂದಿರುವ ಹಾದಿಯ ಕುರಿತು ಇಲ್ಲಿ ವಿವರಣೆ ನೀಡಲಾಗಿದೆ. 400ಕ್ಕೂ ಅಧಿಕ ಸೀರಿಯಲ್​ಗಳಲ್ಲಿ ನಟಿಸಿರುವ ಸಾರಿಕಾ ಅವರ ಕಿರುತೆರೆ ಪಯಣವೇ ರೋಚಕವಾಗಿದೆ. ಕಿರುತೆರೆಗೆ ಬಾಲನಟಿಯಾಗಿ ಪದಾರ್ಪಣೆ  ಮಾಡಿರೋ ಸಾರಿಕಾ ಅವರು 34 ವರ್ಷಗಳ ಬಣ್ಣದ ಲೋಕ ಕಂಡಿದ್ದಾರೆ. ಸದ್ಯ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಂಜಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಅಂದಹಾಗೆ ಸಾರಿಕಾ ಅವರು, ಡಿಡಿ ಚಂದನದಲ್ಲಿ ಮೂಡಿ ಬರುತ್ತಿದ್ದ 'ಗಂಗ' ಎಂಬ ಹಿಂದಿ ಧಾರಾವಾಹಿ ಮೂಲಕ ಕಿರುತೆರೆಗೆ ಬಾಲ ನಟಿಯಾಗಿ ಪದಾರ್ಪಣೆ ಮಾಡಿದರು.  ಕಾಮಿಡಿ, ಸಹನೆ, ಬಜ್ಜಾರಿ, ಒಳ್ಳೆಯ ಪಾತ್ರ, ಹುಚ್ಚಿ, ಸೈಕೋ, ಗಯ್ಯಾಳಿ, ಇನ್ ಸ್ಪೆಕ್ಟರ್, ತಾಯಿ, ಅತ್ತೆ ಹಾಗೂ ವಿಲನ್ ಪಾತ್ರ ಎಲ್ಲದ್ದಕ್ಕೂ ಸೈ ಇವರು. ನಟಿಗೆ ಓರ್ವ ಮಗಳಿದ್ದಾರೆ. ಅವರ ಹೆಸರು ಗ್ರೀಷ್ಮಾ. ತಮ್ಮ ಪುತ್ರಿಗೆ ನನ್ನ ವಿಲನ್​ ಪಾತ್ರವೇ ಬಲು ಇಷ್ಟ ಎನ್ನುತ್ತಾರೆ ಸಾರಿಕಾ. 

ಕನಸಲೂ ನೀನೆ... ಹೆಂಡ್ತಿ ವಿರೋಧ ಕಟ್ಕೊಂಡು ಬಾಳೋಕೆ ಆಗತ್ತಾ? ಪತ್ನಿ ಅಂದ್ರೆ ಸುಮ್ನೇನಾ..?

ಅಷ್ಟಕ್ಕೂ ಸಾರಿಕಾ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದೇ ಕುತೂಹಲ. ಆ ಕಾಲದಲ್ಲಿ ಈ ಕ್ಷೇತ್ರ ಬೇಡವೇ ಬೇಡ ಎಂದು ಕುಟುಂಬಸ್ಥರು ಹೇಳಿದ್ದರಂತೆ. ಅದೇ ರೀತಿ, ಸಾರಿಕಅ ಅವರಿಗೂ  ಪೊಲೀಸ್ ಅಥವಾ ಏರ್ ಹೋಸ್ಟೆಸ್ ಆಗುವ ಆಸೆ. ಆದರೂ ಬಣ್ಣದ ಲೋಕ ಸೆಳೆಯಿತು,  ಈ ನಡುವೆಯೇ ಫೋಟೋಗ್ರಫರ್ ಆಗುವ ಆಸೆಯಿಂದ ಪುಣೆಯಲ್ಲಿ ಸಿನಿಮಾಟೋಗ್ರಫಿ ಕೋರ್ಸ್ ಕೂಡ ಮಾಡಿದ್ದರು. ಆದರೆ ಅಲ್ಲಿ ಅವಕಾಶ ಸಿಗದೇ ನಟಿಯಾಗಿಯೇ ಇದ್ದಾರೆ.   ಛಾಯಾಗ್ರಾಹಕ ಮ್ಯಾಥ್ಯು ರಾಜನ್ ಅವರನ್ನು ವಿವಾಹವಾಗಿದ್ದು, ಓರ್ವ ಮಗಳನ್ನು ಪಡೆದಿದ್ದಾರೆ. 

ಸಾಮಾನ್ಯವಾಗಿ ನಟ-ನಟಿಯರು ಒಂದೇ ಸಲಕ್ಕೆ ವಿಭಿನ್ನ ರೋಲ್​ಗಳಲ್ಲಿ ಕಾಣಿಸಿಕೊಳ್ಳುವುದು ಕಷ್ಟ. ಆದರೆ ಅದನ್ನು ಸಾರಿಕಾ ಅವರು ಸಲೀಸಾಗಿ ಮಾಡಬಲ್ಲರು. ಒಟ್ಟಿಗೆ ವಿಭಿನ್ನ ಪಾತ್ರಗಳಲ್ಲಿ ಹಲವಾರು ಸೀರಿಯಲ್​ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಒಂದರಲ್ಲಿ ಒಳ್ಳೆಯವಳಾಗಿ, ಇನ್ನೊಂದರಲ್ಲಿ ವಿಲನ್​ ಆಗಿ ಮತ್ತೊಂದರಲ್ಲಿ ಬಜಾರಿಯಾಗಿ... ಹೀಗೆ ಎಲ್ಲ ಪಾತ್ರಗಳಿಗೂ ಜೀವ ತುಂಬುತ್ತಾರೆ.  ತಮ್ಮ ಕೊನೆಯ ಉಸಿರು ಇರುವವರೆಗೂ ಮೇಕಪ್‌ನಲ್ಲಿ ನಟಿಸುತ್ತಲೇ ಸಾಯಬೇಕು ಎಂಬ ಆಸೆ ಇದೆ ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ನಟಿ ಹೇಳಿದ್ದರು.   

ಮಹಾನಟಿಯಲ್ಲಿ ಹಿರಿಯಜ್ಜಿ: ಮಗನಿಗೆ ಇಳಿವಯಸ್ಸಲ್ಲೂ ಕಿಡ್ನಿ ನೀಡಿ ಕಾಪಾಡಿದಳು... ಆದರೆ.. ಕ್ರೂರ ವಿಧಿಯಾಟ...
 
 

Latest Videos
Follow Us:
Download App:
  • android
  • ios