ಬಿಗ್‌ಬಾಸ್ ಮನೆಯೊಳಗೆ ಒಳ್ಳೆಯವರು, ಒಳ್ಳೆಯವರಂತೆ ನಟಿಸುವವರು, ಕೆಟ್ಟವರು, ಕೆಟ್ಟವರಾಗಿದ್ದರೂ ತುಸು ಒಳ್ಳೆಯವರು. ಹೀಗೆ ಹಲವಾರು ಮಂದಿಯಿದ್ದಾರೆ. ಡಬಲ್ ಗೇಮ್, ಮೈಂಡ್ ಗೇಮ್ ಮಾಡುತ್ತಾ ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಇದೆಲ್ಲದರ ಮಧ್ಯೆ ಬಿಗ್‌ಬಾಸ್ ಮನೆಯನ್ನು ಸಂಪೂರ್ಣವಾಗಿ ಅಲ್ಲಾಡಿಸಿದ್ದು ಈ ಎರಡು ಪದಗಳು.
ಭಾರತದ ಟೆಲಿವಿಷನ್ ನಲ್ಲಿ ಅತ್ಯಂತ ಜನಪ್ರಿಯ ಶೋ ಅಂದರೆ ಅದು ಬಿಗ್‌ಬಾಸ್. ಬಿಗ್‌ಬಾಸ್ ಕನ್ನಡದಲ್ಲಿ ಈಗ 10ನೇ ಸೀಸನ್ ನಡೆಯುತ್ತಿದೆ. ನಟ ಕಿಚ್ಚ ಸುದೀಪ್ ರಿಯಾಲಿಟಿ ಶೋವನ್ನು ನಡೆಸಿಕೊಡುತ್ತಿದ್ದಾರೆ. ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಹಲವಾರು ಸ್ಟ್ರಾಂಗ್ ಹಾಗೂ ವೀಕ್ ಸ್ಪರ್ಧಿಗಳಿದ್ದಾರೆ. ನಾನಾ ರೀತಿಯ ಟಾಸ್ಕ್ ಸಹ ನಡೆಯುತ್ತಿದ್ದು, ಕಂಟೆಸ್ಟೆಸ್‌ಗಳ ಮಧ್ಯೆ ಪರಸ್ಪರ ಜಗಳ ಸಹ ಹೆಚ್ಚಾಗಿದೆ. ಸಣ್ಣಪುಟ್ಟ ವಿಚಾರಕ್ಕೆ ವಾಗ್ವಾದ, ಜಗಳ, ಕಿತ್ತಾಟ, ಹೊಡೆದಾಟ ನಡೆಯುತ್ತಿದೆ. ಅದರಲ್ಲೂ ಸ್ಪರ್ಧಿಗಳ ಕೆಲವೊಂದು ಮಾತುಗಳು ಮತ್ತೆ ಮತ್ತೆ ವೈರಲ್ ಆಗ್ತಿದೆ.
ಬಿಗ್‌ಬಾಸ್ ಮನೆಯೊಳಗೆ ಒಳ್ಳೆಯವರು, ಒಳ್ಳೆಯವರಂತೆ ನಟಿಸುವವರು, ಕೆಟ್ಟವರು, ಕೆಟ್ಟವರಾಗಿದ್ದರೂ ತುಸು ಒಳ್ಳೆಯವರು. ಹೀಗೆ ಹಲವಾರು ಮಂದಿಯಿದ್ದಾರೆ. ಡಬಲ್ ಗೇಮ್, ಮೈಂಡ್ ಗೇಮ್ ಮಾಡುತ್ತಾ ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಇದೆಲ್ಲದರ ಮಧ್ಯೆ ಬಿಗ್‌ಬಾಸ್ ಮನೆಯನ್ನು ಸಂಪೂರ್ಣವಾಗಿ ಅಲ್ಲಾಡಿಸಿದ್ದು ಈ ಎರಡು ಪದಗಳು.
ಆಟದ ಹೆಸರಲ್ಲಿ ಭಾರಿ ಹೊಡೆದಾಟ! ವೈಲ್ಡ್ ಕಾರ್ಡ್ ಎಂಟ್ರಿ ಆಗ್ತಿದ್ದಂತೆಯೇ ಬಿಗ್‌ಬಾಸ್ ಮನೆಯಲ್ಲಿ ಇದೇನಿದು?
ಫ್ಲಿಪ್
ಕಿಚ್ಚ ಈ ಬಗ್ಗೆ ಮಾತನಾಡುತ್ತಾ ದೊಡ್ಮನೆಯಲ್ಲಿ ಪದೇ ಪದೇ ಬಳಸಿದ ಎರಡು ಪದಗಳ ಬಗ್ಗೆ ಹೇಳುತ್ತಾರೆ. ತನಿಶಾ ಬಳಿ, ನಿಮ್ಮ ಬಾಯಲ್ಲಿ ಪದೇ ಪದೇ ಬರುತ್ತಿದ್ದ ಪದ ಫ್ಲಿಪ್ ಅದೇನು ಎಂದು ಕೇಳುತ್ತಾರೆ. ಇದಕ್ಕೆ ತನಿಶಾ, 'ಕ್ಲಿಯರ್ ಆಗಿ ಹೇಳಬೇಕೆಂದರೆ ಕಾಯಿನ್ಸ್‌ಗೆ ಎರಡು ಮುಖವಿರುತ್ತದೆ. ಒಂದು ಸೈಡ್‌ನಿಂದ ಇನ್ನೊಂದು ಸೈಡ್ ಕಂಪ್ಲೀಟ್ ಡಿಫರೆಂಟ್. ದೊಡ್ಮನೆಯಲ್ಲಿ ಕೆಲವರು ಇದನ್ನೇ ಮಾಡುತ್ತಿದ್ದಾರೆ. ಸಡನ್ನಾಗಿ ಜಂಪ್ ಹೊಡೆಯುವುದು' ಎಂದು ಹೇಳುತ್ತಾರೆ.
ಪೆಟಿ
ಡ್ರೋನ್ ಪ್ರತಾಪ್ ಬಳಸಿದ ಮತ್ತೊಂದು ಪದದ ಬಗ್ಗೆ ಕಿಚ್ಚ ಸುದೀಪ್ ಮಾತನಾಡುತ್ತಾರೆ. ಪೆಟಿ ಎಂದರೇನು ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಡ್ರೋನ್ ಪ್ರತಾಪ್, ಸಣ್ಣತನ ಎಂದು ಹೇಳುತ್ತಾರೆ. ಮೈಕೆಲ್ ಚಿಲ್ಲರೆತನ ಎನ್ನುತ್ತಾರೆ. ಯಾವ್ ಯಾವ್ದು ಅವರಿಗೆ ಮಾಡೋಕಾಗಲ್ವಾ ಅದೆಲ್ಲಾ ಪೆಟಿ ಟಾಪಿಕ್ ಆಗಿರುತ್ತದೆ ಎಂದು ತುಕಾಲಿ ಸಂತೋಷ್ ಹೇಳುತ್ತಾರೆ. ಪೆಟಿ ಪಾರ್ಟ್ 1. ಪೆಟಿ ಪಾರ್ಟ್ 2, ಪೆಟಿ ಪಾರ್ಟ್ 3, ದಿಸ್ ಈಸ್ ಹೌ ಯು ಯೂಸ್ ಎಂದು ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ವಾರ್ನ್ ಮಾಡುತ್ತಾರೆ. ಒಟ್ನಲ್ಲಿ ಹಲವು ವಾದ-ವಿವಾದಗಳ ಮಧ್ಯೆ ಬಿಗ್‌ಬಾಸ್ ಮನೆಯಲ್ಲಿ ಜಗಳ ತಾರಕಕ್ಕೇರಿದೆ.
ಬಿಗ್‌ಬಾಸ್ ಮನೆಯೊಳಗೆ ಖುಲ್ಲಂಖುಲ್ಲ ರೊಮ್ಯಾನ್ಸ್, ನಟಿಯ ಸೀರೆಯೆತ್ತಿ ಸೊಂಟಕ್ಕೆ ಮುತ್ತಿಟ್ಟ ಸ್ಪರ್ಧಿ!
ಬಿಗ್‌ಬಾಸ್ ಮನೆ ಎಂದರೆ ಅದರಲ್ಲಿ ಕಾದಾಟ, ಹೊಡೆದಾಟ, ಬಡಿದಾಟದ ತಾಣವೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಏನು ಬೇಕಾದರೂ ನಡೆಯುತ್ತದೆ. ಇದೇ ಕಾರಣಕ್ಕೆ ಟಿಆರ್ಪಿ ಕೂಡ ಹೆಚ್ಚಾಗುತ್ತದೆ. ಅದೇ ರೀತಿ ಕನ್ನಡದ ಬಿಗ್ಬಾಸ್ನಲ್ಲಿ ಕೂಡ ಹೊಡಿಬಡಿ ಮಿತಿ ಮೀರುತ್ತಲೇ ಸಾಗಿದೆ. ಇದಾಗಲೇ ಇಬ್ಬರ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಒಬ್ಬರು ಫ್ಯಾಷನ್ ಮಾಡೆಲ್ ಪವಿ ಪೂವಪ್ಪ ಮತ್ತೊಬ್ಬರು ಕ್ರಿಕೆಟರ್, ಫ್ಯಾಷನ್ ಮಾಡೆಲ್ ಅವಿನಾಶ್ ಶೆಟ್ಟಿ. ಇದರ ಬೆನ್ನಲ್ಲೇ ಬಿಗ್‌ಬಾಸ್ ಸ್ಪರ್ಧಿಗಳಿಗೆ ಆಟದ ಟಾಸ್ಕ್ ನೀಡಿದ್ದು, ಇದು ಹೊಡೆದಾಟಕ್ಕೂ ಕಾರಣವಾಗಿದೆ! ಇದರ ಪ್ರೊಮೋ ಅನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರಿ ಕಾದಾಟವನ್ನು ನೋಡಬಹುದು.
