ಬಿಗ್ ಬಾಸ್‌ ಸೀಸನ್‌ 14ರ ಜಾನ್‌ ಕುಮಾರ್ ಸಾನು ಸಹೋದರಿಗೆ ಶಾನನ್‌ ಇದುವರೆಗೂ ಅಣ್ಣನನ್ನು ಭೇಟಿ ಮಾಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇಬ್ಬರೂ ತಂದೆಯಂತೆ ಗಾಯಕರಾದರೂ ವೃತ್ತಿ ಜೀವದಲ್ಲಾಗಲಿ ಅಥವಾ ವೈಯಕ್ತಿದ ಜೀವದ ವಿಚಾರಗಳಿಗಾಗಲ್ಲಿ ಭೇಟಿ ಮಾಡಿಲ್ಲ ಎಂದಿದ್ದಾರೆ. 

BiggBoss:ಸ್ಪರ್ಧಿ ಮದುವೆ ಫೋಟೋ ವೈರಲ್, 'ಮಾಡರ್ನ್ ಹುಡುಗಿ ಒಪ್ಪಿಕೊಳ್ಳುವುದಿಲ್ಲ'

80ರ ದಶಕದ ಖ್ಯಾತ ಗಾಯಕ ಕುಮಾರ್ ಸಾನು ಹಾಗೂ ರೀಟಾ ಭಟ್ಟಾಚಾರ್ಯ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಜೆಸ್ಸಿ, ಶಾನನ್ ಮತ್ತು ಜಾನ್ ಮೂವರ ಮಕ್ಕಳು. ಈ ನಡುವೆ ಕುಮಾರ್ ಸಾನು ಹೆಸರು ಪದೇ ಪದೇ ನಟಿ ಮೀನಾಕ್ಷಿ ಶೇಷಾದ್ರಿ ಜೊತೆ ಕೇಳಿ ಬರುತ್ತಿದ್ದ ಕಾರಣ ರೀಟಾ ವಿಚ್ಛೇಧನ ನೀಡಲು ಮುಂದಾಗುತ್ತಾರೆ. ವಿಚ್ಛೇಧನ ಪಡೆಯುವಾಗ ರೀಟಾ 6 ತಿಂಗಳ ಗರ್ಭಿಣಿ. ಕೆಲ ಮೂಲಗಳ ಪ್ರಕಾರ ನಟಿ ಮೀನಾಕ್ಷಿ ಬ್ಯಾಂಕರ್ ಹರೀಶ್‌ ಮೈಸೂರು ಅವರನ್ನು ಮದುವೆಯಾದರು ಎನ್ನಲಾಗಿದೆ ಆದರೂ ರೀಟಾ ವಿಚ್ಛೇಧನ ಪಡೆದು ಒಂಟಿಯಾಗಿ ಜೀವನ ಮಾಡುತ್ತಿದ್ದಾರೆ. ಬಿಗ್‌ ಬಾಸ್‌ ಸೀಸನ್‌14ರಲ್ಲಿ ಜಾನ್‌ ಕುಮಾರ್ ಸಾನು ಸ್ಪರ್ಧಿಯಾಗಿ ಆಗಮಿಸಿದ ನಂತರವೇ ಎಲ್ಲರಿಗೂ ಆತ ಕುಮಾರ್ ಸಾನು ಪುತ್ರ ಎಂದು ತಿಳಿದಿತ್ತು.

ಬ್ರದರ್- ಸಿಸ್ಟರ್ ಭೇಟಿಯಾಗಿಲ್ಲ:

ಬಿಗ್ ಬಾಸ್‌ ಮನೆಯಲ್ಲಿ ಜಾನು ಕುಮಾರ್‌ ತನ್ನ ತಾಯಿ ಜೊತೆಗಿರುವ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಇದುವರೆಗೂ ಸಹೋದರಿ ಶಾನನ್‌ನನ್ನು ಭೇಟಿ ಮಾಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಶಾನನ್ ಸ್ಪಷ್ಟನೆ ನೀಡಿದ್ದಾರೆ. 'ನಾನು ಇದುವರೆಗೂ ಆತನನ್ನು ಭೇಟಿ ಮಾಡಿಲ್ಲ ಜೊತೆಗೆ ಮಾತನಾಡಿಲ್ಲ. ಆದರೆ ಜನರಿಂದ ಆತನ ಬಗ್ಗೆ ನಾನು ಕೇಳಿದ್ದೀನಿ. ಈಗ ಎಲ್ಲರೂ ಆತನ ಬಗ್ಗೆ ಬಿಗ್ ಬಾಸ್‌ ಮನೆಯಲ್ಲಿ ನೋಡಿ ತಿಳಿದುಕೊಳ್ಳುತ್ತಾರೆ.  ದೇವರ ದಯೆ ಮುಂದೆ ನಾವು ಭೇಟಿಯಾದರೆ ಖಂಡಿತವಾಗಿಯೂ ನಾವು ಮಾತನಾಡಲು ಇಚ್ಚಿಸುತ್ತೇನೆ' ಎಂದು ಶಾನನ್ ಹೇಳಿದ್ದಾರೆ.

ಕಾಯಿಲೆಯಿಂದ ಪ್ರಾಣ ಬಿಟ್ಟ ಮಗಳು, ಮನೆ ಬಿಟ್ಟೋದ ಮಗ; ಬಿಗ್ ಬಾಸ್ ಗಂಗವ್ವ ಕಣ್ಣೀರ ಕಥೆ

'ನನಗೆ ನನ್ನ ತಾಯಿಯೇ ಎಲ್ಲಾ. ಅವರೆ ನನಗೆ ತಂದೆನೂ ಹೌದು. ಅವರು 6 ತಿಂಗಳ ಗರ್ಭಿಣಿಯಾಗಿದ್ದಾಗ ದೂರವಾಗಿದ್ದರು. ನನ್ನ ಬಾಲ್ಯವೆಲ್ಲಾ ಅವರ ಜೊತೆಗೆನೇ' ಎಂದು ಜಾನ್ ಕುಮಾರ್ ಹೇಳಿದ್ದಾರೆ.