Asianet Suvarna News Asianet Suvarna News

BiggBoss:ಸ್ಪರ್ಧಿ ಮದುವೆ ಫೋಟೋ ವೈರಲ್, 'ಮಾಡರ್ನ್ ಹುಡುಗಿ ಒಪ್ಪಿಕೊಳ್ಳುವುದಿಲ್ಲ'

ಮಾಜಿ ಬಿಗ್ ಬಾಸ್ ಸ್ಪರ್ಧಿ ಜಸ್ಲೀನ್ ಮಾಥಾರು ಹಾಗೂ  ಅನುಪ್ ಜಲೋಟಾ ಮದುವೆ ಫೋಟೋ ವೈರಲ್ ಆಗುತ್ತಿದೆ. ಈ ಫೋಟೋ ಬಗ್ಗೆ ಅನುಪ್ ಮಾಡಿದ ಕಮೆಂಟ್ ವೈರಲ್ ಆಗುತ್ತಿದೆ.

bigg boss 12 anup jalota jasleen wedding picture viral vcs
Author
Bangalore, First Published Oct 11, 2020, 11:05 AM IST
  • Facebook
  • Twitter
  • Whatsapp

ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ ಜಸ್ಲೀನ್ ಹಾಗೂ ಅನುಪ್ ಹೆಸರು ಒಟ್ಟಾಗಿ ಕೇಳಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಇತ್ತೀಚಿಗೆ ಇಬ್ಬರು ಸಾಂಪ್ರದಾಯಿಕ ಉಡುಪು ಧರಿಸಿ ಅಕ್ಕಪಕ್ಕ ಕುಳಿತುಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಯ್ಯೋ ಇಷ್ಟು ಚಿಕ್ಕ ವಯಸ್ಸಿನ ಹುಡುಗಿ ಜೊತೆ ಮದುವೆ ಆಗಿದ್ದೀರಾ? ಏನಾಯ್ತು ನಿಮಗೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಅನುಪ್ ಜಲೋಟಾ ಖಾಸಗಿ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಕಾಯಿಲೆಯಿಂದ ಪ್ರಾಣ ಬಿಟ್ಟ ಮಗಳು, ಮನೆ ಬಿಟ್ಟೋದ ಮಗ; ಬಿಗ್ ಬಾಸ್ ಗಂಗವ್ವ ಕಣ್ಣೀರ ಕಥೆ

bigg boss 12 anup jalota jasleen wedding picture viral vcs

ಜಸ್ಲೀನ್ ಹಾಗೂ ಅನುಪ್ ಇಬ್ಬರು ಒಟ್ಟಾಗಿ ಬಿಗ್ ಬಾಸ್‌ ಮನೆ ಪ್ರವೇಶಿಸಿದ ಕಾರಣ ಎಲ್ಲರೂ ಇವರನ್ನು ಕಪಲ್ ಎಂದು ಪರಿಗಣಿಸಿದ್ದರು ಆದರೆ ಇವರಿಬ್ಬರದ್ದು ಗುರು-ಶಿಷ್ಯೆ ಸಂಬಂಧವಂತೆ. ಶೂಟ್‌ಗೆಂದು ಮಾಡಲಾಗಿದ್ದ ಫೋಟೋ ಬಗ್ಗೆ ಅನುಪ್ ಮಾತನಾಡಿದ್ದಾರೆ.' ಆಕೆ ಮಾಡರ್ನ್ ಹಾಗೂ ಗ್ಲಾಮರ್ ಹುಡುಗಿ ನನ್ನ ಕುಟುಂಬಕ್ಕೆ ಆಕೆಯನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ನಾನು ಏನು ಹೇಳಲು ಪ್ರಯತ್ನಿಸುತ್ತಿದ್ದೀನಿ ಅಂದರೆ ನಾನು ಹಾಗೂ ನನ್ನ ಸುತ್ತ ಇರುವ ಜನರು ಹಾಗೂ ವಾತಾವರಣ ತುಂಬಾ ಬೇರೆನೇ. ನಾನು ಸದಾ ಧೋತಿ ಧರಿಸಿ ದೇವರ ನಾಮ ಸ್ಮರಿಸುತ್ತಿದ್ದೀನಿ. ಜಸ್ಲೀನ್ ಯಾವ ರೀತಿಯಲ್ಲಿ ನನಗೆ ಹೊಂದುತ್ತಾಳೆ'? ಎಂದು ಪ್ರಶ್ನಿಸಿದ್ದಾರೆ.

ಸಮಾಜ ಸೇವೆ ಮಾಡ್ಬೇಕು: ಸಿನಿಮಾಗೆ ಬಾಯ್‌ ಬಾಯ್ ಹೇಳಿದ ಬಿಗ್‌ಬಾಸ್ ಖ್ಯಾತಿಯ ಯುವ ನಟಿ 

35 ಆಗಿದ್ದರೂ ಮದುವೆ ಆಗುತ್ತಿರಲಿಲ್ಲ:

ಅನುಪ್ ಫೋಟೋ ಬಗ್ಗೆ ಚರ್ಚಿಸುತ್ತಾ ತಾನು 35 ವರ್ಷ ಹುಡುಗನಾಗಿದ್ದರೂ ಆಕೆಯನ್ನು ಮದುವೆಯಾಗುತ್ತಿರಲಿಲ್ಲ ಇನ್ನು ಈಗ ಮದುವೆಯಾಗುತ್ತೀನಾ? ಎಂದು ಹಾಸ್ಯ ಮಾಡಿದ್ದಾರೆ. ' ನನಗೆ ಅನೇಕರು ಈ ಫೋಟೋಗಳನ್ನು ಕಳುಹಿಸಿ ಶುಭಾಶಯಗಳನ್ನು ತಿಳಿಸುತ್ತಾರೆ. ಅವರಿಗೆ ಸ್ಪಷ್ಟನೆ ನೀಡಲು ಅಗುವುದಿಲ್ಲ ಹಾಗಾಗಿ ಅವರಿಗೆ ತಿರುಗಿಸಿ ಶುಭಾಶಯಗಳನ್ನು ಹೇಳುತ್ತೇನೆ.  ಯಾರಾದರೂ ಮದುವೆ ಆಗಿದ್ದೀರಾ ಅಥವಾ ಆಕೆಯನ್ನು ಆಗುತ್ತೀರಾ ಎಂದು ಕೇಳಿದರು ನಾನು ನೇರವಾಗಿ ಇಲ್ಲ ಎಂದು ಹೇಳುವೆ' ಎಂದಿದ್ದಾರೆ.

 

 
 
 
 
 
 
 
 
 
 
 
 
 

🔥🔥 @anupjalotaonline

A post shared by Jasleen Matharu ਜਸਲੀਨ ਮਠਾੜੂ (@jasleenmatharu) on Oct 8, 2020 at 7:17am PDT

ಇನ್‌ಸ್ಟಾದಲ್ಲಿ ಜಸ್ಲೀನ್ ಸ್ಪಷ್ಟನೆ:

ವೈರಲ್ ಅಗುತ್ತಿರುವ ಮದುವೆ ಫೋಟೋವನ್ನು ಶೇರ್ ಮಾಡಿ ಜಸ್ಲೀನ್ ಸ್ಪಷ್ಟನೆ ನೀಡಿದ್ದಾರೆ. 'ಎಲ್ಲರೂ ನಾವು ಮದುವೆ ಆಗುತ್ತಿದ್ದೀವಿ ಎಂದು ಕೊಂಡಿದ್ದೀರಾ ಆದರೆ ಅದು ಸುಳ್ಳು. ವೋ ಮೇರಿ ವಿದ್ಯಾರ್ಥಿ ಹೈ ಎಂದ ನನ್ನ ಮುಂದಿನ ಚಿತ್ರದಲ್ಲಿ ಅನೂಪ್‌ ನನ್ನ ತಂದೆಯ ಪಾತ್ರ ಮಾಡುತ್ತಿದ್ದಾರೆ.  ನಿಮ್ಮ ಕಲ್ಪನೆ ಸುಳ್ಳು' ಎಂದು ಬರೆದುಕೊಂಡಿದ್ದಾರೆ.

Follow Us:
Download App:
  • android
  • ios