ಯುಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ಗಂಗವ್ವ ಬಿಗ್ ಬಾಸ್‌ 4ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಲು ಅವಕಾಶ ಪಡೆದುಕೊಂಡರು. ಎಲ್ಲರೂ ಒಂದಲ್ಲಾ ಒಂದು ಕ್ಷೇತ್ರದಲ್ಲಿ ಹೆಸರು ಮಾಡಿದವರೇ ಆದರೂ ಗಂಗವ್ವ ಬಗ್ಗೆ ಎಲ್ಲರಿಗೂ ಒಂದು ರೀತಿಯ ಕುತೂಹಲ.

ಹಿಟ್‌ ಧಾರಾವಾಹಿಯಿಂದ ಸಿನಿಮಾ ಆಫರ್‌ ಕಳೆದುಕೊಂಡ ನಟಿ ಕಣ್ಣೀರು 

ಬಿಗ್ ಬಾಸ್ ಮನೆ ಅಂದ್ರೆ ಬರೀ ಜಗಳ, ಬೆನ್ನು ಹಿಂದೆ ಮಾತನಾಡುವುದು ಅಥವಾ ಗುಂಪುಗಾರಿಕೆ ಮಾಡುವುದು ಎಂದುಕೊಳ್ಳುತ್ತಿದ್ದ ವೀಕ್ಷಕರು ಇಂದಿನ ಸಂಚಿಕೆ ವೀಕ್ಷಿಸಿ ಕಣ್ಣೀರಿಟ್ಟಿದ್ದಾರೆ. ಹೌದು ಸ್ಪರ್ಧಿ ಅವಿನಾಶ್ ಈ ಲಾಕ್‌ಡೌನ್‌ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ಮಾಡಿದ ವಿಚಾರವನ್ನು ಪ್ರಸ್ತಾಪಿಸುತ್ತಿರುವಾಗ ಗಂಗವ್ವ ಜೀವನದ ಕಷ್ಟ ಅಂದರೆ ಏನೆಂದು ತಮ್ಮ ಕಥೆ ಹೇಳುತ್ತಾರೆ. ಅವರ ಮಾತುಗಳು ಕಣ್ಣೀರು ಬರಿಸಿದರೂ ಜೀವನ ಹೀಗೂ ಇರುತ್ತದೆ ಎಂದು ಸ್ಪರ್ಧಿಗಳಿಗೆ ಧೈರ್ಯ ತುಂಬಿದ್ದಾರೆ.

ಸಮಾಜ ಸೇವೆ ಮಾಡ್ಬೇಕು: ಸಿನಿಮಾಗೆ ಬಾಯ್‌ ಬಾಯ್ ಹೇಳಿದ ಬಿಗ್‌ಬಾಸ್ ಖ್ಯಾತಿಯ ಯುವ ನಟಿ

ಗಂಗವ್ವ ಯಾರು?

ಬಾಯಿಯಲ್ಲಿ ನೀರು ಬರಿಸುವ ರುಚಿ ರುಚಿಯಾದ ಗ್ರಾಮೀಣ ಶೈಲಿಯ ಅಡುಗೆ ರೆಸಿಪಿಗಳನ್ನು  ಯುಟ್ಯೂಬ್‌ನಲ್ಲಿ ಹೇಳಿಕೊಡುವ ಗಂಗವ್ವ 5 ವರ್ಷವಿದ್ದಾಗಲೇ ಮದುವೆಯಾದರು. 17 ವರ್ಷಕ್ಕೆ ಮಕ್ಕಳಾಗಿತ್ತು. ಕಡು ಬಡತನದ ಜೀವನ, ಮಗ ಹುಟ್ಟು ಕುಡುಕ, ಮಗಳು ಮೆದುಳು ಸಮಸ್ಯೆಯಿಂದ ಬಳಲುತ್ತಿದ್ದಳು. ಒಂದು ದಿನ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ದುರಾದೃಷ್ಟವಶಾತ್ ಆಕೆ ಗಂಗವ್ವನ ಕೈ ಮೇಲೆ ಪ್ರಾಣ ಬಿಟ್ಟರು ಬಸ್ ಕಂಡಕ್ಟರ್ ಹೇಳುವವರೆಗೂ ಮಗಳು ಸತ್ತಿದ್ದಾಳೆ ಎಂದು ಗೊತ್ತಿರಲಿಲ್ಲವಂತೆ. ಊರಿಗೆ ಮರಳಿ ಬಂದವರು ಮಗಳನ್ನು ಹೆಣವಾಗಿ ತಂದರಂತೆ. ಇನ್ನು ಮಗ ಕುಡಿಯುವ ಚಟಕ್ಕೆ ಬಿದ್ದು ದೊಡ್ಡ ಮೊತ್ತದ ಸಾಲವನ್ನು ತಾಯಿಯ ಮೇಲೆ ಹೊರಿಸಿ ಊರು ಬಿಟ್ಟು ಹೋದನಂತೆ.  ಈ ನೋವಿನ ಕಥೆಯನ್ನು ಗಂಗವ್ವ ಹಂಚಿಕೊಳ್ಳುತ್ತಿದ್ದಂತೆ ಇನ್ನಿತರ ಸ್ಪರ್ಧಿಗಳು ಭಾವುಕರಾದರು. ಗಂಗವ್ವನ ಮೇಲೆ ವೀಕ್ಷಕರಿಗೂ ಗೌರವ ಹೆಚ್ಚಾಯ್ತು.