ಬಿಗ್ ಬಾಸ್ ಮನೆಯಲ್ಲಿ ಜೈ ಜಗದೀಶ್ ಸ್ಯಾಂಡಲ್ ವುಡ್ ಅನುಭವವನ್ನು ಹೇಳಿಕೊಂಡಿದ್ದಾರೆ | ವಿಲನ್ ರೋಲ್ ಗಳಲ್ಲೇ ಹೆಚ್ಚಾಗಿ ಗಮನ ಸೆಳೆದಿದ್ದಾರೆ ಜೈ ಜಗದೀಶ್ | ಅವರಿಗೆ ಹೆಸರು ತಂದುಕೊಟ್ಟಿದ್ದು ಕೂಡಾ ವಿಲನ್ ಪಾತ್ರಗಳು |
ಸೆಲಬ್ರಿಟಿಗಳ ರೋಚಕ ಕಥೆಗೆ ಸಾಕ್ಷಿಯಾಗುತ್ತಿದೆ ಬಿಗ್ ಬಾಸ್ ಮನೆ. ಅವರ ಜೀವನ ಕಥೆಗಳು, ವೃತ್ತಿ ಜೀವನದಲ್ಲಿ ಮರೆಯಲಾಗದ ಘಟನೆಗಳು, ಅನುಭವಿಸಿದ ಕಷ್ಟಗಳು ಹೀಗೆ ಎಲ್ಲವನ್ನು ಮನೆಯ ಇತರ ಸದಸ್ಯರ ಜೊತೆ ಹಂಚಿಕೊಳ್ಳುತ್ತಿದ್ದಾರೆ.
ಮನೆಯ ಹಿರಿಯ ಸದಸ್ಯ, ಹಿರಿಯ ಕಲಾವಿದ ಜೈ ಜಗದೀಶ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಚ್ಚಾಗಿ ವಿಲನ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ವಿಲನ್ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ.
ಒಂದು ವಾರ ಬಿಗ್ ಬಾಸ್ ಮನೆಯಲ್ಲಿದ್ದ ಬೆಳಗೆರೆ ಪಡೆದುಕೊಂಡ ಗೌರವಧನ?
ಮನೆಯ ಸದಸ್ಯರ ಜೊತೆ ಮಾತನಾಡುತ್ತಾ ಕುಳಿತಿದ್ದಾಗ, ನೀವ್ಯಾಕೆ ಹೆಚ್ಚಾಗಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೀರಿ? ಎಂದು ಕೇಳಿದಾಗ, ಹೌದು ನಾನು ಹೆಚ್ಚಾಗಿ ಮಾಡಿದ್ದೆಲ್ಲಾ ವಿಲನ್ ರೋಲ್. ಅದು ನನಗೆ ಹೆಸರು ತಂದು ಕೊಟ್ಟಿದೆ. ಹಾಗಂತ ಯಾವ್ಯಾವುದೋ ಸಿನಿಮಾದಲ್ಲಿ ನಟಿಸಿಲ್ಲ. ಮಾಡಿದ ಸಿನಿಮಾಗಳೆಲ್ಲಾ ಪ್ರೇಕ್ಷಕರಿಗೆ ಇಷ್ಟವಾಗಿದೆ ಎಂದರು.
ಆಗಿನ ಕಾಲದ ಚಿತ್ರರಂಗದ ಬಗ್ಗೆ ಮಾತನಾಡುತ್ತಾ, ಆಗೆಲ್ಲಾ ಹೀರೋನೇ ಮುಖ್ಯ. ಅವರನ್ನೇ ಹೆಚ್ಚಾಗಿ ಫೋಕಸ್ ಮಾಡುತ್ತಿದ್ದರು. ಚೆನ್ನಾಗಿ ತೋರಿಸುತ್ತಿದ್ದರು. ಅವರ ಎದುರು ವಿಲನ್ ಚೆನ್ನಾಗಿ ಕಾಣಿಸಬಾರದು ಎನ್ನುವ ಅಭಿಪ್ರಾಯವಿತ್ತು. ಒಳ್ಳೆಯ ಬಟ್ಟೆಗಳನ್ನು ಹಾಕಿಕೊಳ್ಳಲು ಬಿಡುತ್ತಿರಲಿಲ್ಲ. ಜೊತೆಗೆ ಜಾತಿ ರಾಜಕೀಯವೆಲ್ಲಾ ಹೆಚ್ಚಾಗಿತ್ತು ಎಂದಿದ್ದಾರೆ.
ಇದೇನು ಚೈತ್ರಾ ಗರಳೆ? ನನ್ನ ಹೆಸರು ಹಾಳು ಮಾಡಬೇಡಿ ಎಂದ ವಾಸುದೇವನ್!
ಒಟ್ಟಿನಲ್ಲಿ ತೆರೆ ಕಾಣುವ ಹಾಗೆ ಕಲಾವಿದನ ವೈಯಕ್ತಿಕ ಬದುಕು ಇರುವುದಿಲ್ಲ. ಅವರ ಬದುಕು ಬಣ್ಣ ಬಣ್ಣದ್ದಾಗಿರುವುದಿಲ್ಲ. ಅವರೂ ಕಷ್ಟಪಟ್ಟು ಬಂದಿರುತ್ತಾರೆ ಎನ್ನುವುದಕ್ಕೆ ಜೈ ಜಗದೀಶ್ ಅನುಭವವೇ ಸಾಕ್ಷಿ.
Last Updated 23, Oct 2019, 4:34 PM IST