12 ವರ್ಷಗಳಿಂದ ಕರ್ನಾಟಕದಲ್ಲಿ ಇದ್ಕೊಂಡು ಗೌತಮಿಗೆ ಕನ್ನಡ ಓದಲು ಬರೆಯಲು ಬರಲ್ಲ; ಯಮುನಾ ಶ್ರೀನಿಧಿ ಗರಂ
ಸೀರಿಯಲ್ಲಿ ಕನ್ನಡ ಮಾತನಾಡಿದರೂ ಗೌತಮಿ ಕನ್ನಡ ಸರಿಯಾಗಿ ಬರಲ್ಲ. ನಾಡ ಗೀತಗೆ ಅವಮಾನ ಮಾಡಿದ್ದಕ್ಕೆ ಯಮುನಾ ಗರಂ...
ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಆಗಿದ್ದ ಯಮುನಾ ಶ್ರೀನಿಧಿ ಈಗ ಮನೆಯೊಳಗೆ ಇರುವ ಗೌತಮಿ ಜಾದವ್ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೆ. ತುಂಬಾ ಸ್ಪಷ್ಟವಾಗಿ ಕನ್ನಡ ಬರುತ್ತೆ, ಹಾಗೆ ಉಚ್ಛಾರಣೆ ಮಾಡಬಾರದು ಹೀಗೆ ಮಾಡಬೇಕು ಎಂದು ಪ್ರತಿಯೊಬ್ಬರನ್ನು ತಿದ್ದುವ ಗೌತಮಿ ಮಾತ್ರ ಯಾಕೆ ಕನ್ನಡ ರಾಜ್ಯೋತ್ಸವದ ದಿನ ಮೌನವಾಗಿ ನಿಂತಿದ್ದರು? ತಡವಾಗಿ ಯಮುನಾ ಶ್ರೀನಿಧಿ ಪಾಯಿಂಟ್ ಎತ್ತಿದ್ದರು ವೀಕ್ಷಕರು ಇದನ್ನು ಒಪ್ಪಿಕೊಳ್ಳುತ್ತಿದ್ದಾರೆ.
'ಸೋಷಿಯಲ್ ಮೀಡಿಯಾದಲ್ಲಿ ನಾನು ಒಂದು ವಿಚಾರ ಗಮನಿಸಿದ್ದೀನಿ ಆದರೆ ಯಾಕೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡದಾಗಿಲ್ಲ ನನಗೆ ಗೊತ್ತಿಲ್ಲ. ನವೆಂಬರ್ 1ರಂದು ಕನ್ನಡಿಗರು ಹೆಮ್ಮೆ ಪಡುವ ದಿನ, ಕನ್ನಡ ರಾಜ್ಯೋತ್ಸವ ದಿನವನ್ನು ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಬ್ಬರು ಹೆಮ್ಮೆಯಿಂದ ಆಚರಿಸುತ್ತಾರೆ. ಎಲ್ಲರೂ ನಾಡ ಗೀತೆ ಹಾಡುವಾಗ ಗೊತ್ತಿರುವವರು ಜೋರಾಗಿ ಶಿಶಿರ್ ತರ ಹಾಡುತ್ತಾರೆ. ನಾಡಗೀತೆ ಗೊತ್ತಿಲ್ಲದೆ ಇರುವವರು ಆದಷ್ಟು ಹಾಡುತ್ತಾರೆ ಇಲ್ಲವಾದರೆ ಲಿಪ್ ಸಿಂಕ್ ಮಾಡುತ್ತಾರೆ. ಎಲ್ಲರಿಗೂ ಎಲ್ಲ ಸಾಲುಗಳು ಬರುತ್ತೆ ಅಂತ ಹೇಳಲು ಆಗಲ್ಲ. ಆದರೆ ಅಲ್ಲಿರುವ ಗೌತಮಿ ಬಾಯಿ ಮುಚ್ಚಿಕೊಂಡು ನಿಂತಿರುತ್ತಾರೆ. ನಾವು ಹೊರ ದೇಶಕ್ಕೆ ಹೋದಾಗ ಅಲ್ಲಿನ ಭಕ್ತಿ ಗೀತ ಬರಲ್ಲ ಅಂತ ಸುಮ್ಮನೆ ನಿಂತಿರುತ್ತೀವಿ ತಾನೇ ಹಾಗೆ ಬಿಗ್ ಬಾಸ್ ಮನೆಯಲ್ಲಿ ನಿಂತಿದ್ದರು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಯಮುನಾ ಶ್ರೀನಿಧಿ ಮಾತನಾಡಿದ್ದಾರೆ.
ಬಿಗ್ ಬಾಸ್ ಗೌತಮಿ ಬಾಯಲ್ಲಿ ಪದೇ ಪದೇ ಕೇಳಿ ಬರುವ ವನದುರ್ಗ ದೇವಿ ಎಲ್ಲಿದೆ? ಅದ್ಭುತ ಪವಾಡಗಳ ಸ್ಥಳವಿದು
'ಗೌತಮಿ ಜಾದವ್ ಅವರು ಮರಾಠಿ ಕುಟುಂಬದವರು ಎನ್ನಲಾಗಿದೆ ಆದರೆ 12 ವರ್ಷಗಳಿಂದ ಕರ್ನಾಟಕದಲ್ಲಿ ಇದ್ದು ಕನ್ನಡ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ಇಲ್ಲಿನ ನೆಲ ಬೇಕು ಇಲ್ಲಿನ ಜಲ ಬೇಕು ಇಲ್ಲಿನ ಅವಕಾಶಗಳು ಬೇಕು ಇಲ್ಲನ ಎಲ್ಲವೂ ಬೇಕು ಆದರೆ ನಮ್ಮ ನಾಡ ಗೀತ ಬರಲ್ವಾ ನಿಮಗೆ? ಎಷ್ಟು ದಿನ ಬೇಕು ನಿಮಗೆ ಕಲಿಯುವುದಕ್ಕೆ? ಬೇರೆ ದೇಶದಲ್ಲಿ ಹುಟ್ಟಿ ಬೆಳೆದ ಮಕ್ಕಳ ಕನ್ನಡವನ್ನು ಬರೆಲು ಮಾತನಾಡಲು ಕಲಿಯುತ್ತಿದ್ದಾರೆ. ಅಮೆರಿಕಾದ ಕನ್ನಡ ಸಂಘದಲ್ಲಿ ನಾನು ಇದ್ದೆ, ಅಲ್ಲಿ ಮಕ್ಕಳು ಎಷ್ಟು ಚೆನ್ನಾಗಿ ಕನ್ನಡ ಗೀತೆ ಹಾಡುತ್ತಾರೆ ನೋಡಬೇಕು. ಆದರೆ ಆ ಮಹಾತಾಯಿಗೆ ಕನ್ನಡ ಓದಲು ಬರೆಯಲು ಬರಲ್ಲ ಹೀಗಾಗಿ ನೋಡಿ ಒಂದು ಟಾಸ್ಕ್ ರೂಲ್ ಬುಕ್‌ನ ಬಿಗ್ ಬಾಸ್ ಮನೆಯಲ್ಲಿ ಓದಿಲ್ಲ' ಎಂದು ಯಮುನಾ ಶ್ರೀನಿಧಿ ಹೇಳಿದ್ದಾರೆ.
ಗೆಳೆಯ ಗೆಳೆಯ ಎನ್ನುತ್ತಿದ್ದ ಮಂಜುಗೆ 'ಇದೆಲ್ಲ ನನ್ನ ಹತ್ರ ಇಟ್ಕೋಬೇಡ' ಎಂದು ಖಡಕ್ ವಾರ್ನಿಂಗ್ ಕೊಟ್ಟ ಗೌತಮಿ!