ತೆರೆದ ಕಾರಲ್ಲಿ, ಬಿಗ್​ಬಾಸ್​ ಟ್ರೋಫಿ ಜೊತೆಯಲಿ ಚಾಮುಂಡಿ ಬೆಟ್ಟಕ್ಕೆ ಬಿಗ್​ಬಾಸ್​ ವಿನ್ನರ್​ ಕಾರ್ತಿಕ್​ ಭೇಟಿ ಕೊಟ್ಟಿದ್ದು, ಅಭಿಮಾನಿಗಳು ಸ್ವಾಗತಿಸಿದ್ದು ಹೀಗೆ ನೋಡಿ... 

ಬಿಗ್​ಬಾಸ್​ ಸೀಸನ್​ 10 ಮುಗಿದು ಹಲವು ದಿನಗಳೇ ಕಳೆದಿದ್ದರೂ ಇದರ ಗುಂಗಿನಿಂದ ಫ್ಯಾನ್ಸ್​ ಹೊರಕ್ಕೆ ಬರಲಿಲ್ಲ. ಬಿಗ್​ಬಾಸ್​ ಮನೆಯಲ್ಲಿ ನಡೆಯುವುದು ಒಂದಿಷ್ಟು ಪೂರ್ವ ನಿಯೋಜಿತವೇ ಎಂಬ ಆರೋಪ ಇದ್ದರೂ ಅಲ್ಲಿ ನಡೆಯುವುದೆಲ್ಲವೂ, ಎಲ್ಲ ಸನ್ನಿವೇಶಗಳು ನಿಜವೆಂದು ನಂಬಿ ನೋಡುವ ಬಹುದೊಡ್ಡ ವರ್ಗವೇ ಇದೆ. ಆದ್ದರಿಂದಲೇ ಬಿಗ್​ಬಾಸ್​ ಮನೆಯಿಂದ ಬಂದ ಸ್ಪರ್ಧಿಗಳೆಲ್ಲರೂ ಬಹುದೊಡ್ಡ ಸೆಲೆಬ್ರಿಟಿಗಳಾಗಿ ಬದಲಾಗುತ್ತಾರೆ. ಅವರನ್ನು ಒಂದಿಷ್ಟು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ. ಕಾಂಟ್ರವರ್ಸಿ ಮಾಡಿಕೊಂಡು ಫೇಮಸ್​ ಆದವರೇ ಬಿಗ್​ಬಾಸ್​ ಮನೆಯೊಳಕ್ಕೆ ಹೋದರೂ ಹೊರಗೆ ಬಂದ ಮೇಲೆ ಅಭಿಮಾನಿಗಳ ಸಂಖ್ಯೆ ದಿಢೀರ್​ ಏರಿಕೆ ಆಗುವುದೂ ಇದೆ. ಅದರಲ್ಲಿಯೂ ಬಿಗ್​ಬಾಸ್ ವಿನ್ನರ್​ ಎಂದರೆ ಅವರ ರೇಂಜೇ ಬೇರೆ. ಅವರ ಅಭಿಮಾನಿಗಳು ಖುಷಿ ಪಡುವ ರೀತಿಯೇ ಬೇರೆ. ಬಿಗ್​ಬಾಸ್​ ವಿನ್​ ಆಗಿ ಹೊರಗೆ ಹೋದರೆ, ಯಾವುದೋ ಯುದ್ಧ ಗೆದ್ದು, ದೇಶವನ್ನು ಉಳಿಸಿದ ಯೋಧರಂತೆ ಅವರನ್ನು ಸ್ವಾಗತಿಸುವುದು ಇದೆ. ​ಕೆಲವೊಮ್ಮೆ ಯೋಧರಿಗೂ ಸಿಗದ ಮನ್ನಣೆಯೂ ಬಿಗ್​ಬಾಸ್​ ವಿಜೇತರಿಗೆ ಸಿಗುವುದು ಇದೆ. 

ಅವರು ನಿನ್ನೆ ಅಂದ್ರೆ ಫೆಬ್ರುವರಿ 7ರಂದು ಕಾರ್ತಿಕ್​ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಬಿಗ್​ಬಾಸ್​ ಟ್ರೋಫಿ ಜೊತೆಗೆ ತೆರೆದ ಕಾರಿನಲ್ಲಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಯಾವುದೇ ಫೇಮಸ್​ ನಟರು ಬಂದರೆ ಅವರ ಅಭಿಮಾನಿಗಳು ಹೇಗೆಲ್ಲಾ ನಡೆದುಕೊಳ್ಳುತ್ತಾರೆಯೋ ಅದೇ ರೀತಿ ಅಭಿಮಾನಿಗಳು ಕಾರ್ತಿಕ್​ ಅವರಿಗೆ ಮುತ್ತಿಗೆ ಹಾಕಿದ್ದಾರೆ. ಎಲ್ಲರತ್ತ ಕೈಬೀಸಿ ಬಂದಿರುವ ಕಾರ್ತಿಕ್​ ಕಂಡು ಜೈಜೈಕಾರ ಮೊಳಗಿದೆ. ಅಭಿಮಾನಿಗಳು ಕಾರ್ತಿಕ್​ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.

ಬಿಗ್​ಬಾಸ್​ನಲ್ಲಿ ಸಂಗೀತಾ-ಕಾರ್ತಿಕ್​ ದೂರವಾಗಿದ್ದೇಕೆ? ಹೊರಬಂದ್ಮೇಲೆ ಹೇಗಿದೆ ಸಂಬಂಧ? ವಿನ್ನರ್​ ಹೇಳಿದ್ದೇನು ಕೇಳಿ...

ಅಂದಹಾಗೆ, ಬಿಗ್​ಬಾಸ್​ ಸೀಸನ್​ 10 ವಿನ್ನರ್​ ಕಾರ್ತಿಕ್​ ಮಹೇಶ್​ ಅವರು ಬಹುದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. ಆರಂಭದಲ್ಲಿ ಬಿಗ್​ಬಾಸ್​ ಅನ್ನು ಒಪ್ಪಿಕೊಳ್ಳದೇ ಕೊನೆಕ್ಷಣದಲ್ಲಿ ಒಪ್ಪಿಕೊಂಡು ಹೋಗಿದ್ದ ಕಾರ್ತಿಕ್​ ಅವರಿಗೆ ಈ ಗೆಲುವು ವಿಶೇಷ ಅನುಭವವನ್ನೂ ನೀಡಿದೆ. ಬಿಗ್​ಬಾಸ್​ ಮನೆಯೊಳಕ್ಕೆ ಹಾಗೂ ವಿನ್​ ಆಗಿ ಮನೆಯ ಹೊರಗೆ ಬಂದ ಮೇಲೆ ಅವರ ಜೀವನದಲ್ಲಿ ಆಗಿರುವ ಹಲವು ಬದಲಾವಣೆಗಳ ಕುರಿತು ಕಾರ್ತಿಕ್​ ಕಲರ್ಸ್​ ಕನ್ನಡ ವಾಹಿನಿಯ ಜೊತೆ ಈಚೆಗೆ ಮಾತನಾಡಿದ್ದರು.


ಬಿಗ್ ಬಾಸ್ ಪ್ರಿಯರಿಗೆ ತಿಳಿದಿರುವಂತೆ, ಅಸಮರ್ಥರ ತಂಡದಲ್ಲಿ ಒಂದಾಗಿ ಮನೆಯೊಳಗೆ ಪ್ರವೇಶಿಸಿದ್ದರು ಕಾರ್ತಿಕ್ (Karthik). ಆದರೆ ಇವರ ಕೊನೆ ಕ್ಷಣದಲ್ಲಿ ಬಿಗ್​ಬಾಸ್​ ಒಪ್ಪಿಕೊಂಡಿದ್ದರು. ಈ ಕುರಿತು ಮಾಹಿತಿ ನೀಡಿದ್ದ ಕಾರ್ತಿಕ್​ ಅವರು, ಬಿಗ್​ಬಾಸ್​ನಲ್ಲಿ ನನಗೆ ಇಷ್ಟೊಂದು ಪ್ರೀತಿ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನನ್ನ ಜೀವನವೇ ಬೇರೆಯಾಗಿದೆ. ಈ ಮೊದಲು ನಾನು ಅವಕಾಶ ಹುಡುಕಿಕೊಂಡು ಹೋಗಬೇಕಿತ್ತು. ಆದರೆ ಇದೀಗ ಅವಕಾಶವೇ ನನ್ನನ್ನು ಹುಡುಕಿಕೊಂಡು ಬರುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಬೇಕಾದಷ್ಟು ಕಷ್ಟಪಟ್ಟಿದ್ದೇನೆ. ಅದಕ್ಕೆಲ್ಲವೂ ಬಿಗ್​ಬಾಸ್​ ನನಗೆ ನೆರವಾಗಿದೆ ಎಂದು ಸಂದರ್ಶನದಲ್ಲಿ ಹೇಳಿದ್ದರು. ಒಂದು ವೇಳೆ ನಾನು ಬಿಗ್​ಬಾಸ್​ ಒಪ್ಪಿಕೊಂಡಿರದೇ ಇದ್ದರೆ ಅದು ನನ್ನ ಜೀವನದ ಅತಿ ದೊಡ್ಡ ಪ್ರಮಾದ ಆಗುತ್ತಿತ್ತು. ಕೊನೆಯ ಘಳಿಗೆಯಲ್ಲಿ ಒಪ್ಪಿಕೊಂಡು ಒಳ್ಳೆಯದ್ದನ್ನು ಮಾಡಿದೆ ಎಂದರು.

ಎದ್ದು ಕುಣಿರೋ, ಬಿದ್ದು ಕುಣಿರೋ ಹಾಡಿನ ಜೊತೆ ಪ್ರತಾಪ್​ಗೆ ಮಹಾದೇಶ್ವರ ಬೆಟ್ಟದಲ್ಲಿ ಭರ್ಜರಿ ಸ್ವಾಗತ!

View post on Instagram