ಕಾಂಟ್ರೋವರ್ಸಿ, ಕಿರಿಕ್ ಚಾಟ್‌, ಮದುವೆ ...ಈ ಮೂರು ವಿಚಾರದಿಂದ ಟಾಲಿವುಡ್‌ನ ಲೈಮ್‌ ಲೈಟ್‌ನಲ್ಲಿರುವ ನಟಿ ವನಿತಾ ವಿಜಯ್‌ಕುಮಾರ್‌, ಮತ್ತೊಮ್ಮೆ ಲವ್‌ ಆಗಿದೆ ಎಂದು ಹೇಳಿ ಕೊಂಡಿದ್ದಾರೆ.  ಲಾಕ್‌ಡೌನ್‌ನಲ್ಲಿ ಮೂರನೇ ಮದುವೆಯಾದ ನಟಿ ಅದ್ಯಾಕೆ ಈಗ ನಾಲ್ಕನೇಯವರೊಂದಿಗೆ ಸಂಸಾರ ಮಾಡಲು ಮುಂದಾಗಿದ್ದಾರೋ ಗೊತ್ತಿಲ್ಲ. 

ಹೌದು! ಲಾಕ್‌ಡೌನ್‌ನಲ್ಲಿ ಸಿನಿಮಾ ತಂತ್ರಜ್ಞ ಪೀಟರ್‌ ಪೌಲ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ ಮದುವೆಯ ಸುಮಧುರ ಕ್ಷಣಗಳ ಬಗ್ಗೆ ವಿಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದರು. ಎಲ್ಲವೂ ಸರಿ ಇದೆ ಅಂದುಕೊಳ್ಳುವಾಗಲೇ ಗೋವಾದಲ್ಲಿ ದಂಪತಿ ನಡುವೆ ಕಲಹ ಶುರುವಾಗಿದೆ. ಸುಂದರ ದಾಂಪತ್ಯದ ಕನಸು ಉಲ್ಟಾಪಲ್ಟವಾಗಿದೆ. 

ಅದ್ಧೂರಿಯಾಗಿ ಮದ್ವೆಯಾಗಿ ಮೂರನೇ ಸಾರಿ ದಾಂಪತ್ಯಕ್ಕೆ ಕಾಲಿಟ್ಟಿದ್ದ ನಟಿ ಮದುವೆ ಬ್ರೇಕ್?

ವನಿತಾ ಇತ್ತೀಚಿಗೆ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ 'ನಾನು ಮತ್ತೆ ಲವ್ವಲ್ಲಿ ಬಿದ್ದಿದ್ದೀನಿ, ನೀನು ಈಗ ಸಂತೋಷವಾಗಿದ್ದೀಯಾ?' ಎಂದು ಬರೆದುಕೊಂಡಿದ್ದರು. ಈ ಸಾಲುಗಳಿಗೆ ರಿಯಾಜ್ ಖಾನ್‌ ಅವರನ್ನು ಟ್ಯಾಗ್ ಮಾಡಿದ್ದರು. ಈ ಮೂಲಕ ವನಿತಾ ನಾಲ್ಕನೇ ಮದುವೆಗೆ ಮುಂದಾಗಿದ್ದಾರೆ ಎಂಬ ಅನುಮಾನ ನೆಟ್ಟಿಗರದ್ದು.

ಪೀಟರ್‌ ಜೊತೆ ಸಂಬಂಧ ಏನಾಯ್ತು:
ಮದುವೆಯಾದ ಕೆಲವೇ ದಿನಗಳಲ್ಲಿ ವನಿತಾ ಪೀಟರ್‌ ಜೊತೆ ಗೋವಾ ಟ್ರಿಪ್ ತೆರಳಿದ್ದರು. ಮೋಜು ಮಸ್ತಿ ಮಾಡುತ್ತಿದ್ದ ನವ ದಂಪತಿ ನಡುವೆ ಜಗಳವಾಗಿದೆ. ತಕ್ಷಣವೇ ಟ್ರಿಪ್ ಕ್ಯಾನ್ಸಲ್‌ ಮಾಡಿ ವನಿತಾ ತವರಿಗೆ ತೆರಳಿದ್ದಾರೆ. ಏಕೆ ಜಗಳವಾಯ್ತು ಎಂದು ನೆಟ್ಟಿಗರು ಪ್ರಶ್ನೆ ಮಾಡಿದಾಗ 'ಪೀಟರ್ ಮದುವೆ ಸಮಯದಲ್ಲಿ ನನಗೆ ಕುಡಿಯುವುದಿಲ್ಲ ಹಾಗೂ ಸೀಗರೆಟ್ ಮುಟ್ಟುವುದಿಲ್ಲವೆಂದು ಮಾತು ನೀಡಿದ್ದರು. ಆದರೆ ಅದು ಸುಳ್ಳು. ಈಗ ವಿಪರೀತ ಕುಡಿಯುತ್ತಾರೆ. ಕುಡಿದು ನನ್ನ ಮೇಲೆ ಹಲ್ಲೆ ಮಾಡುತ್ತಾರೆ. ಈ ಕಾರಣಕ್ಕೆ ಅವರಿಂದ ದೂರವಾಗಿರುವೆ. ವಿಚ್ಛೇದನ ಪಡೆಯುತ್ತಿರುವೆ,' ಎಂದು ಹೇಳಿದ್ದರು.

ಕೊನೆಗೂ ನಯನತಾರಾ Live in relationship ಬಯಲು; ಮೂರು ಹುಡುಗರ ಕಥೆ! 

ಗುಟ್ಟಾಗಿ ಇಡಬೇಕಾದ ಸಂಸಾರದ ವಿಷಯವನ್ನು ವನಿತಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. 'ಮೇಡಂ ಮೊದಲು ಸರಿಯಾಗಿ ಸಂಸಾರ ಮಾಡಿ. ಆಮೇಲೆ ಇಷ್ಟು ಗಂಡಸರನ್ನು ಮದುವೆಯಾಗಿದ್ದೀರಾ ಎಂಬ ಸಂಘ ಕಟ್ಟಿ,' ಎಂದು ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ.