2020ರ ಪ್ರಾರಂಭದಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಕಮ್ ಬಿಗ್ ಬಾಸ್ ಸ್ಪರ್ಧಿ ವನಿತಾ ವಿಜಯ್‌ಕುಮಾರ್ ಹಾಗೂ ಕಾಲಿವುಡ್ ನಿರ್ದೇಶಕ ಕಮ್ ತಂತ್ರಜ್ಞ ಪೀಟರ್ ಪೌಲ್ ಕೆಲವು ದಿನಗಳಿಂದ ಗೋವಾದಲ್ಲಿ ವಾಸಿಸುತ್ತಿದ್ದಾರೆ. ಇವರ ನೋಡ್ಲಿಕ್ಕೆ ಚೆನ್ನಾಗಿಯೇ ಕಾಣಿಸುತ್ತಿತ್ತು. ಆದರೀಗ ಇಬ್ಬರ ನಡುವೆ ಸಣ್ಣ ವಿಚಾರಕ್ಕಾಗಿ ಆದ ವಾದ-ವಿವಾದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. 

ನಟಿಗೆ ಅವಾಚ್ಯ ಪದಗಳಿಂದ ಬೈದ ಯೂಟ್ಯೂಬರ್; ಕೆಲವೇ ನಿಮಿಷಗಳಲ್ಲಿ ಪೊಲೀಸರಿಂದ ಬಂಧನ! 

ಹೌದು! ವನಿತಾ ಹಾಗೂ ಪೀಟರ್‌ ಜೀವನದಲ್ಲಿ ಗೊಂದಲಗಳು ಹಾಗೂ ಮನಸ್ಥಾಪಗಳು ಇರುವುದರ ಬಗ್ಗೆ ನಿರ್ದೇಶಕ ರವೀಂದ್ರ ಚಂದ್ರಶೇಖರನ್‌ ಸ್ಪಷ್ಟನೆ ನೀಡಿದ್ದಾರೆ.  'ಹೌದು! ನಾನು ಮಾಧ್ಯಮಕ್ಕೆ ನೀಡಿರುವ ಮಾಹಿತಿ ಕರೆಕ್ಟ್. ಪತ್ನಿ ವನಿತಾ ಮನೆಯಿಂದ ಹೊರ ಹಾಕಿರುವುದು ನಿಜ,' ಎಂದಿದ್ದಾರೆ.

ಸಂಸಾರ ಸರಿ ಮಾಡಿಕೊಳ್ಳಲ್ಲ, ಆದರೆ ಟ್ಟಿಟರ್ ಬೇಕು:
ವೈಯಕ್ತಿಕ ಹಾಗೂ ವೈವಾಹಿಕ ಜೀವನ ಎರಡನ್ನೂ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುವ ವನಿತಾ ವಿಜಯ್‌ಕುಮಾರ್‌ ಅವರೀಗ ನೆಟ್ಟಿಗರ ಟೀಕೆ ಮಾತುಗಳಿಗೆ ಗುರಿಯಾಗಿದ್ದಾರೆ.  ಮೂರನೇ ಮದುವೆಯಾದರೂ ಬಾಳುವುದು ಕಲಿತಿಲ್ಲ, ಒಬ್ಬರ ಸಂಸಾರ ಹಾಳು ಮಾಡಿ, ಈತನನ್ನು ಮದುವೆಯಾದರೆ ಈಗ ಇವನನ್ನೂ ಬಿಟ್ಟೆಯಾ? ಎಂದು ಫಾಲೋಯರ್ಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏನೇ ಮಾಡಿದರೂ ಮೊದಲು ಟೀಕೆಗೆ ಗುರಿಯಾಗುವುದು ಹೆಣ್ಣು. ಅಂಥದ್ರಲ್ಲಿ ಈ ನಟಿಯ ವಿಷಯದಲ್ಲಿ ಕೇಳಬೇಕಾ? 

 

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಹರಿದಾಡುತ್ತಿರುವ ವಿಚಾರಕ್ಕೆ ನಟಿಯೇ ಎಂಟ್ರಿ ಕೊಟ್ಟು, ಸ್ಪಷ್ಟನೆ ನೀಡಿದ್ದಾರೆ. 'ಯಾರೆಲ್ಲಾ ನಾನು ಆತನನ್ನು ಮನೆಯಿಂದ ಹೊರ ಹಾಕಿದ್ದೀನಿ ಎಂದು ಕೊಂಡಿದ್ದೀರೋ ಅವರೆಲ್ಲಾ ದಯವಿಟ್ಟು ವಿಚಾರ ತಿಳಿದುಕೊಳ್ಳಿ.  ಒಬ್ಬ ವ್ಯಕ್ತಿ ಮಾನಸಿಕ ತೊಂದರೆಯಿಂದ ಆರೋಗ್ಯ ಕಳೆದುಕೊಳ್ಳುತ್ತಿದ್ದರೆ ಇಂಥ ಮನಸ್ಥಾಪಗಳು ಸಹಜ. ನಮ್ಮ ಬಗ್ಗೆ ಬರೆದು, ಗಾಳಿ ಮಾತುಗಳನ್ನು ಹರಡಿ ಕೆಲವರು ಹಣ ಮಾಡುತ್ತಿದ್ದಾರೆ. ನಮ್ಮಿಬ್ಬರನ್ನು ಯಾರೂ ದೂರ ಮಾಡಲು ಸಾಧ್ಯವಿಲ್ಲ.  ಆತನನ್ನು ಕಳೆದುಕೊಳ್ಳುವೆ ಎಂಬ ಭಯ ಕಾಡ ತೊಡಗಿತ್ತು,' ಎಂದು ಪತ್ರವೊಂದನ್ನು ಬರೆದು ಫೋಸ್ಟ್ ಮಾಡಿದ್ದಾರೆ.

ಲಾಕ್‌ಡೌನ್‌ನಲ್ಲಿ ಅದ್ಧೂರಿಯಾಗಿ ಮೂರನೇ ಮದುವೆಯಾದ ನಟಿ; ಫೋಟೋ ವೈರಲ್! 

'ಎಲ್ಲ ಕಡೆಯೂ ನಿಮ್ಮ ಎಮೋಷನಲ್ ಗೇಮ್ ವರ್ಕ್ ಅಗುವುದಿಲ್ಲ', 'ಅನುಕಂಪ ಗಿಟ್ಟಿಸಲು ಇಲ್ಲೂ ಡ್ರಾಮಾ ಮಾಡಬೇಡಿ' ಎಂದು ಮತ್ತೊಮ್ಮೆ ನೆಟ್ಟಿಗರು ಕಾಲು ಎಳೆದಿದ್ದಾರೆ. ಒಟ್ಟಿನಲ್ಲಿ ವನಿತಾ ಪತ್ರದಲ್ಲಿ ಏನು ಹೇಳಲು ಪ್ರಯತ್ನಿಸಿದ್ದಾರೋ ಅರ್ಥವಾಗುತ್ತಿಲ್ಲ. ಬದಲಾಗಿ ನೆಟ್ಟಿಗರು ಅದರಿಂದ ಮತ್ತೂ ಗೊಂದಲಕ್ಕೆ ಬಿದ್ದಂತೆ ಇದ್ದಾರೆ. 

ಒಟ್ಟಿನಲ್ಲಿ ಇದು ದಾಂಪತ್ಯದ ವಿಷಯ. ಇದರಲ್ಲಿ ಯಾರುದ್ದು ತಪ್ಪೋ, ಯಾರದ್ದು ಸರಿಯೋ ಯಾರಿಗೆ ಗೊತ್ತು?