ಬಿಗ್‌ಬಾಸ್‌ 11ರಲ್ಲಿ ಹನುಮಂತ ವಿಜಯಿಯಾದರು. ಉಗ್ರಂ ಮಂಜು ಐದನೇ ಸ್ಥಾನ ಪಡೆದರು. ಗೌತಮಿ ಜೊತೆ ಸ್ನೇಹದ ಬಗ್ಗೆ ಚರ್ಚೆಗಳು ಮಂಜು ಗೆಲುವಿಗೆ ತಡೆಯಾಯಿತೆಂಬ ಅಭಿಪ್ರಾಯಗಳಿವೆ. ಆಟದ ವೇಳೆ ಗೌತಮಿಯನ್ನು ನೋಯಿಸಿದ್ದಕ್ಕೆ ಮಂಜು ವಿಷಾದ ವ್ಯಕ್ತಪಡಿಸಿದ್ದಾರೆ. ಮಂಜು, ಗೌತಮಿ ಮತ್ತು ಮೋಕ್ಷಿತಾ ನಡುವಿನ ಸ್ನೇಹ ಗಮನ ಸೆಳೆಯಿತು. ಮಂಜುವಿನ ತಂದೆ, ಗೌತಮಿ ಜೊತೆಗಿನ ಸ್ನೇಹ ಮಂಜುವಿನ ಆಟಕ್ಕೆ ತೊಂದರೆಯಾಗಲಿಲ್ಲ ಎಂದಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದಿದೆ. ಬಹುತೇಕರ ನಿರೀಕ್ಷೆಯಂತೆ ಹನುಮಂತ ಗೆಲುವು ಸಾಧಿಸಿದ್ದಾರೆ. ಸ್ಟ್ರಾಂಗ್​ ಸ್ಪರ್ಧಿ ಎನ್ನಿಸಿಕೊಂಡಿದ್ದ ಮಂಜುನಾಥ ಗೌಡ ಅರ್ಥಾತ್​ ಉಗ್ರಂ ಮಂಜು ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಮಂಜು ಮತ್ತು ಗೌತಮಿ ಜಾಧವ್ ಸ್ನೇಹದ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿತ್ತು. ಇದು ಕೂಡ ಮಂಜು ಪ್ರಶಸ್ತಿ ಗೆಲ್ಲದೇ ಇರುವುದಕ್ಕೆ ಕಾರಣವಾಯಿತು ಎಂದೂ ಕೆಲವರು ಅಭಿಪ್ರಾಯ ಪಡುತ್ತಿದ್ದಾರೆ. ಇದಾಗಲೇ ಕೆಲವೊಂದು ಸಿನಿಮಾಗಳಲ್ಲಿ ನಟಿಸಿರುವ ಮಂಜು ಅವರು, ತಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಲು ಬಿಗ್​ಬಾಸ್​ ವೇದಿಕೆ ಕಲ್ಪಿಸಿದೆ ಎಂದು ಹೊರಗಡೆ ಬಂದ ಮೇಲೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದೇ ವೇಳೆ, ಗೌತಮಿ ಜಾಧವ್​ ಅವರಿಗೆ ತಾವು ಹೇಳಿರುವ ಒಂದು ಮಾತು ಇಂದಿಗೂ ತಮ್ಮ ಮನಸ್ಸಿಗೆ ನೋವು ಉಂಟು ಮಾಡುತ್ತಿದೆ ಎಂದು ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಉಗ್ರಂ ಮಂಜು ಹೇಳಿದ್ದಾರೆ. 'ಅಂದು ರಾತ್ರಿ ನಾವು ಒಟ್ಟಿಗೇ ಕುಳಿತಿದ್ದ ಸಂದರ್ಭದಲ್ಲಿ, ಫಿನಾಲೆ ಟಿಕೆಟ್​ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಹೀಗೆ ಮಾತನಾಡುವಾಗ ನಾನು ಗೌತಮಿ ಅವರಿಗೆ, ನೀವೇನಾದರೂ ಅಕಸ್ಮಾತ್​ ಆಟಕ್ಕೋಸ್ಕರ ಫ್ರೆಂಡ್​ಷಿಪ್​ ಬಳಸಿಕೊಳ್ತಾ ಇದ್ದೀರಾ ಎಂದು ಕೇಳಿಬಿಟ್ಟೆ. ಆ ಸನ್ನಿವೇಶದಲ್ಲಿ ಆ ಮಾತು ಬಂದುಬಿಟ್ಟಿತು. ಆದರೆ ಅದರಿಂದ ಅವರು ತುಂಬಾ ನೊಂದುಕೊಂಡರು. ನಾನು ಯಾಕೆ ಹೇಳಿದ್ನೋ ಹಾಗೆ ನನಗೂ ಗೊತ್ತಾಗ್ತಾ ಇಲ್ಲ. ಅವರು ನನ್ನ ಜೊತೆ ತುಂಬಾ ಒಳ್ಳೆಯ ಸ್ನೇಹಿತೆಯಾಗಿ ಇದ್ದರು. ಆ ಮಾತನ್ನು ಅಂದು ರಾತ್ರಿ ನಾನು ಹೇಳಬಾರದಿತ್ತು. ಅವರು ನೊಂದುಕೊಂಡಿರುವುದನ್ನು ನೆನಪಿಸಿಕೊಂಡರೆ ಈಗಲೂ ನೋವಾಗುತ್ತದೆ. ಆದರೆ ಆ ಪರಿಸ್ಥಿತಿಯಲ್ಲಿ ಆ ಮಾತು ಬಂದುಬಿಟ್ಟಿತು' ಎಂದಿದ್ದಾರೆ.

ಸುದೀಪ್​ ಕೊನೆಯ ಬಿಗ್​ಬಾಸ್​ನಲ್ಲಿ ಕಣ್ಣೀರ ಕೋಡಿ! ಆ ದನಿ ಕೇಳಿ ಕಣ್ಣೀರಾದ ಕಿಚ್ಚನ ಅಪ್ಪ-ಮಗಳು

ಅಷ್ಟಕ್ಕೂ ಈ ಸೀಸನ್​ನಲ್ಲಿ ಉತ್ತಮ ಸ್ನೇಹಿತರಾಗಿ ಇದ್ದುದು ಗೌತಮಿ ಜಾದವ್‌, ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ. ನಡುವೆ, ಯಾವುದೋ ಒಂದು ಸಂದರ್ಭದಲ್ಲಿ ಮೋಕ್ಷಿತಾ ಸ್ವಲ್ಪ ದೂರ ಹೋದರೂ ಕೊನೆಗೆ ಒಟ್ಟಿಗೆ ಬಂದರು. ಆದರೆ ಮಂಜು ಮತ್ತು ಗೌತಮಿ ಕೊನೆಯವರೆಗೂ ಒಳ್ಳೆಯ ಫ್ರೆಂಡ್​ ಆಗಿ ಉಳಿದಿದ್ದರು. ಅಷ್ಟೇ ಅಲ್ಲದೇ, ಒಮ್ಮೆ, ಗೌತಮಿ ಅವರು ಉಗ್ರಂ ಮಂಜು ಅವರಿಗೆ ತಾನೇ ಹುಡುಗಿ ನೋಡಿ ಮದುವೆ ಮಾಡಿಸುತ್ತೇನೆ ಎಂದು ಕೂಡ ಹೇಳಿದ್ದರು. ಜೊತೆಗೆ, ಮಂಜು ಅವರ ಕನಸಿನ ಕನ್ಯೆಯ ಚಿತ್ರ ಕೂಡ ಬಿಡಿಸಿದ್ದರು. 

ಇನ್ನು ಗೌತಮಿ ಮತ್ತು ಉಗ್ರಂ ಮಂಜು ಅವರ ಸ್ನೇಹದ ಬಗ್ಗೆ ಮಂಜು ಅವರ ತಂದೆ ಕೂಡ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಈ ಗೆಳೆತನದಿಂದ ಮಂಜು ಫಿನಾಲೆಗೆ ಹೋಗಲು ಆಗಲಿಲ್ಲ ಎನ್ನುವ ಆರೋಪದ ಬಗ್ಗೆ ಮಾತನಾಡಿದ್ದ ಅವರು, ಹಾಗೆ ನಾನು ಹೇಳುವುದಿಲ್ಲ. ಆಕೆಯ ಫ್ರೆಂಡ್​ಷಿಪ್​ನಿಂದ ಆಟದ ಕಡೆ ಗಮನ ಕೊಡಲಿಲ್ಲ ಅನ್ನೋದನ್ನು ನಾನು ಒಪ್ಪಲಿಲ್ಲ. ಯಾಕೆಂದ್ರೆ ಅವನು ಚಿಕ್ಕಂದಿನಿಂದಲೂ ಹಾಗೇ, ಯಾರನ್ನಾದರೂ ಹಚ್ಚಿಕೊಂಡರೆ ದೂರ ಆಗುವುದಿಲ್ಲ, ಹೆಣ್ಣುಮಕ್ಕಳೆ ಮೇಲೆ ಆತನಿಗೆ ಅಪಾರ ಗೌರವ ಇದೆ ಎಂದಿದ್ದರು. 

ಅಮ್ಮನ ಆಸೆ ಈಡೇರಿಸಿದ ಬಿಗ್​ಬಾಸ್​​ ವರ್ತೂರು ಸಂತೋಷ್:​ 8 ಕೋಟಿ ರೂ. ಬಂಗಲೆ ಹೀಗಿದೆ ನೋಡಿ...