ಸುಬ್ರಹ್ಮಣಿ ರಾಧಾ ಸುರೇಶ್ ಅಲಿಯಾಸ್ ಸೂರ್ಯ ಕಿರಣ್‌ ತೆಲುಗು ಚಿತ್ರರಂಗದ ನಿರ್ದೇಶಕ ಹಾಗೂ ಬರಹಗಾರ. ಕೆಲವು ದಿನಗಳ ಹಿಂದೆ ಬಿಗ್‌ಬಾಸ್‌ ಸೀಸನ್‌ 4ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಆದರೆ ವಿಪರ್ಯಾಸವೆಂದರೆ ಎಲಿಮಿನೇಟ್‌ ಅಗಿ, ಮನೆಯಿಂದ ಹೊರ ಬಂದ ಮೊದಲ ಸ್ಪರ್ಧಿಯಾದರು. 

ಬಿಗ್ ಬಾಸ್‌ ಎಲಿಮಿನೇಷನ್: ಆಯೋಜಕರ ಮೇಲೆಯೇ ರೇಗಾಡಿದ ಕರಾಟೆ ರಾಣಿ? 

ಬಿಬಿ ಮನೆಯಲ್ಲಿದ್ದಾಗಲೂ ಮಾಜಿ ಪತ್ನಿ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದ, ಸೂರ್ಯ ಕಿರಣ್ ಹೊರ ಬಂದ ನಂತರವೂ ಖಾಸಗಿ ವಾಹಿನಿಗಳಿಗೆ ನೀಡಿದ ಸಂದರ್ಶನಗಳಲ್ಲಿ ಕಲ್ಯಾಣಿ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಕಲ್ಯಾಣಿ ವಿಚ್ಛೇದನ ಪಡೆದ ಕಾರಣ ಇದುವರೆಗೆ ಯಾರಿಗೂ ತಿಳಿದಿರಲಿಲ್ಲ ಇದರ ಬಗ್ಗೆ ಸ್ವತಃ ಕಿರಣ್ ಮಾತನಾಡಿದ್ದಾರೆ.

ಕಲ್ಯಾಣಿ ಸ್ಥಾನ ಯಾರಿಗೂ ಇಲ್ಲ:
2000ರಲ್ಲಿ ಆಸುಪಾಸಿನಲ್ಲಿ ಚಿತ್ರರಂಗದ ಪೀಕ್‌ ನಟಿಯರಲ್ಲಿ ಒಬ್ಬರಾಗಿದ್ದ ಕಲ್ಯಾಣಿ ತೆಲುಗು ನಿರ್ದೇಶಕ ಸೂರ್ಯ ಕಿರಣ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಕೆಲವೇ ವರ್ಷಗಳಲ್ಲಿ ವಿಚ್ಛೇದನ  ಪಡೆದುಕೊಂಡರು.  ಈ ದಾಂಪತ್ಯ ಜೀವನ ಒಡೆಯಲು ಕಾರಣವೇನೆಂಬುವುದು ಮಾತ್ರ ಅಭಿಮಾನಿಗಳಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು.

'ನಮ್ಮನ್ನು ವಿಚಾರಣೆಗೆ ಕರೆದಿದ್ದಷ್ಟೇ, ಆರೋಪಿಗಳು ಎಂದು ಹೇಳಿಲ್ಲ, ಹಾಗೆ ತೋರಿಸಬೇಡಿ'

'ಕಲ್ಯಾಣಿ ಸ್ಥಾನವನ್ನು ನನ್ನ ಜೀವನದಲ್ಲಿ ಬೇರೆ ಯಾವ ಮಹಿಳೆಯೂ ತುಂಬಲು ಸಾಧ್ಯವಿಲ್ಲ. ಬೇರೆ ಯಾರನ್ನೂ ನನ್ನ ಪತ್ನಿಯಾಗಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ತನ್ನ ತಾಯಿಯಂತೆ ನನ್ನ ಜೀವನ ಬೆಳಗಿದ್ದು ಕಲ್ಯಾಣಿ. ಆಕೆ ಈಗಲೂ ಮನಸ್ಸು ಮಾಡಿ ಮರಳಿದರೆ, ನಮಸ್ಕರಿಸಿ ಬರ ಮಾಡಿಕೊಳ್ಳುತ್ತೇನೆ,' ಎಂದು ಕಿರಣ್ ಹೇಳಿದ್ದಾರೆ.