ಅಡುಗೆ ಮನೆಯಲ್ಲಿ ಬಿಗ್​ಬಾಸ್​ ನಿವೇದಿತಾ- ತನಿಷಾ: ಹಾಲನ್ನು ಎಲ್ಲಿ ಸೇರಿಸ್ಲಿ ಎಂದು ಕೇಳಿದ ಬೆಡಗಿ!

ನನ್ನಮ್ಮ ಸೂಪರ್​ಸ್ಟಾರ್​ಗೆ ಬಂದಿರೋ ಬಿಗ್​ಬಾಸ್​ ತನಿಷಾ ಮತ್ತು ನಿವೇದಿತಾ ಗೌಡ ಅಡುಗೆ ಮಾಡಿದ್ದು ನೋಡಿದ್ರೆ ನಕ್ಕೂ ನಕ್ಕೂ ಸುಸ್ತಾಗೋದು ಗ್ಯಾರೆಂಟಿ!
 

Bigg Boss Tanisha and Nivedita Gowda have come to Nannamma Superstar suc

 ನನ್ನಮ್ಮ ಸೂಪರ್​ಸ್ಟಾರ್​ ವೇದಿಕೆಗೆ ಬಿಗ್​ಬಾಸ್​ ನಿವೇದಿತಾ ಗೌಡ ಮತ್ತು ತನಿಷಾ ಕುಪ್ಪಂಡ ಬಂದಿದ್ದು, ಅದರ ವಿಡಿಯೋ ಅನ್ನು ಕಲರ್ಸ್​ ಕನ್ನಡ ವಾಹಿನಿ ರಿಲೀಸ್​ ಮಾಡಿದೆ.   ಅಡುಗೆ ರೆಸಿಪಿಯನ್ನು ನೋಡುತ್ತಾ ಇವರಿಬ್ಬರೂ ಅಡುಗೆ ಮಾಡಬೇಕು. ಸದಾ ರೀಲ್ಸ್​ ಮಾಡುತ್ತಲೇ ಕಾಲು ಕಳೆಯುತ್ತಿರುವ ನಿವೇದಿತಾ ಬಹುಶಃ ಇದೇ ಮೊದಲ ಬಾರಿಗೆ ಅಡುಗೆ  ಮನೆಗೆ ಕಾಲಿಟ್ಟಿದ್ದೋ ಗೊತ್ತಿಲ್ಲ. ಅಡುಗೆ ಮಾಡಲು ಬರದೇ ಪೇಚಿಗೆ ಸಿಲುಕಿದ್ದಾರೆ! ಇದನ್ನು ನೋಡಿ ಅಲ್ಲಿದ್ದ ತೀರ್ಪುಗಾರರು ಬಿದ್ದೂ ಬಿದ್ದೂ ನಕ್ಕಿದ್ದಾರೆ. ಮಾಡುತ್ತಿರುವ ಅಡುಗೆಗೆ ಹಾಲನ್ನು ಸೇರಿಸಬೇಕು ಎಂದಾಗ ಎಲ್ಲಿ ಸೇರಿಸಲಿ ಎಂದು ಕೇಳಿದ್ದಾರೆ. ಇದನ್ನು ಕೇಳಿ ತನಿಷಾ ಗೊಳ್​ ಎಂದು ನಕ್ಕಿದ್ದಾರೆ.

ಇದರ ಪ್ರೊಮೋ ನೋಡಿ ನೆಟ್ಟಿಗರು ಥಹರೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಅಡುಗೆ ಮಾಡುವುದು ಎಂದರೆ ರೀಲ್ಸ್​  ಮಾಡಿದಷ್ಟು ಸುಲಭ ಅಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಹೆಣ್ಣಾದವರು ಸ್ವಲ್ಪನಾದರೂ ಅಡುಗೆ ಕಲಿಯಬೇಕು, ಇಲ್ಲದಿದ್ದರೆ ಇದೇ ಗತಿಯಾಗುವುದು ಎಂದು ಕೆಲವರು ಹೇಳಿದ್ದರೆ, ಅದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಇನ್ನು ಕೆಲವರು ಹೆಣ್ಣು ಮಾತ್ರಯಾಕೆ ಕಲಿಯಬೇಕು ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಶ್ರೀಮಂತರ ಮನೆಯಲ್ಲಿ ಕೈಗೊಬ್ಬ, ಕಾಲಿಗೊಬ್ಬ ಆಳು ಇರುವಾಗ ಮನೆಯ ಹೆಣ್ಣುಮಕ್ಕಳು ಅಡುಗೆ ಕಲಿಯಬೇಕೆಂದೇನೂ ಇಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಪ್ರೊಮೋ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. 

ಏನ್ ಸಮಾಚಾರ? ಬೆಂಕಿ ಕೈಕೈ ಹಿಡ್ಕೊಂಡು ಓಡಾಡ್ತಿದ್ದೆ ಎಂದ ತಾರಾ ಪ್ರಶ್ನೆಗೆ ವರ್ತೂರು ಏನಂದ್ರು​ ನೋಡಿ...

ಅಂದಹಾಗೆ ಬಿಗ್​ಬಾಸ್​ ಬಳಿಕ ರೀಲ್ಸ್​ನಿಂದಲೇ ಸಕತ್​ ಫೇಮಸ್​ ಆಗಿರುವವರು ನಟಿ ನಿವೇದಿತಾ ಗೌಡ. ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಸದ್ಯ ಪತಿ ಚಂದನ್​ ಶೆಟ್ಟಿ ಜೊತೆಗೂಡಿ ಕ್ಯಾಂಡಿ ಕ್ರಶ್ ಆಡುತ್ತಿದ್ದಾರೆ.

ಇನ್ನು ತನಿಷಾ ಅವರ ವಿಷಯವಂತೂ ಹೇಳುವುದೇ ಬೇಡ. ಇವರು ಬಿಗ್​ಬಾಸ್​ 10ರಲ್ಲಿ ಬೆಂಕಿ ಎಂದೇ ಫೇಮಸ್​  ಆದವರು.  ಬಿಗ್​ಬಾಸ್​ನಲ್ಲಿ ಹೆಚ್ಚು ಇವರು ಸದ್ದು ಮಾಡಿದ್ದು,  ವರ್ತೂರು ಸಂತೋಷ್​ ಜೊತೆ. ಈ ಬಗ್ಗೆ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದ ಮೇಲೆ ತನಿಷಾ ನಾನು ಸ್ವಲ್ಪ ಅವರ ಜೊತೆ ಕ್ಲೋಸ್ ಆಗಿದ್ದೆ ಅಷ್ಟೇ, ಬೇರೇನೂ ಇಲ್ಲ ಎಂದಿದ್ದರು.  ಎಲ್ಲರೂ ಮನೆಯೊಳಗೆ ರೇಗಿಸುತ್ತಿದ್ದರು. ನಮ್ರತಾ, ಕಿಚ್ಚ ಸುದೀಪ್ ಅವರೂ ರೇಗಿಸುತ್ತಿದ್ದರು. ವರ್ತೂರು ಸಂತೋಷ್ ಅವರು ಹುಡುಗಿಯರ ಜೊತೆ ಅಷ್ಟಾಗಿ ಮಾತನಾಡಲ್ಲ. ನನ್ನ ಜೊತೆ ಸ್ವಲ್ಪ ಮಾತನಾಡುತ್ತಿದ್ದರು ಅಷ್ಟೆ ಎಂದಿದ್ದರು. ಆಚೆ ಬಂದರೆ ಮದುವೆಯಾಗುತ್ತಾರೆ, ಕ್ರಶ್ ಆಗಿದೆ, ಲವ್​ನಲ್ಲಿ ಬಿದ್ದಿದ್ದಾರಂತೆ ಎಂದು ಬಹಳಷ್ಟು ಕೇಳಿ ಬಂತು. ಫಸ್ಟ್​ ಆಫ್ ಆಲ್ ಅವರು ನನ್ನ ಟೈಪ್ ಅಲ್ಲ. ಅವರು ಬೇರೆಯವರನ್ನು ಮದುವೆಯಾದರೂ, ನಾನು ಬೇರೆಯವರನ್ನು ಮದುವೆಯಾದರೂ ನಮ್ಮ ಫ್ರೆಂಡ್​ಶಿಪ್ ಕಂಟಿನ್ಯೂ ಆಗಬಹುದು. ಆದರೆ ಬೇರೆ ಯೋಚನೆ ಇಬ್ಬರಲ್ಲೂ ಇಲ್ಲ ಎಂದಿದ್ದರು.

ನಿವೇದಿತಾ- ಚಂದನ್​ಶೆಟ್ಟಿ ದಾಂಪತ್ಯಕ್ಕೆ ನಾಲ್ಕು ವರ್ಷ: ಹೊಸ ಚಿತ್ರದ ರೊಮ್ಯಾಂಟಿಕ್​ ಮೂಡ್​ನಲ್ಲಿ ದಂಪತಿ

Latest Videos
Follow Us:
Download App:
  • android
  • ios