Bigg Boss Contestant Lakshmi Gowda: ಸಾಮಾನ್ಯವಾಗಿ ಬಿಗ್ ಬಾಸ್ ಮನೆಗೆ ಹೋಗಬೇಕೆಂದರೆ ಲಕ್ಷಾಂತರ ರೂಪಾಯಿ ಕೊಟ್ಟು ಬ್ರಾಂಡೆಡ್ ಬಟ್ಟೆ, ಶೂ, ಮೇಕಪ್ ಮಾಡಿಸಬೇಕು ಅನ್ನೋದು ಎಲ್ಲರ ಲೆಕ್ಕಾಚಾರ. ಆದರೆ ಲಕ್ಷ್ಮೀ ಗೌಡ ಬಿಗ್ ಬಾಸ್ ವೇದಿಕೆ ಹತ್ತಲು ಖರ್ಚು ಮಾಡಿದ್ದು ಎಷ್ಟು ಗೊತ್ತಾ? ಇವರ ಬ್ಯಾಕ್‌ಗ್ರೌಂಡ್ ಹಾಗೂ ಅಪ್ಪ ಏನು ಮಾಡ್ತಾರೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಬಿಗ್ ಬಾಸ್ ಮನೆಯಿಂದ ಆಚೆ ಬಂದ ಲಕ್ಷ್ಮೀ ಗೌಡ ತಮ್ಮ ರಿಯಲ್ ಲೈಫ್, ಐಟಿ ಕೆಲಸ ಹಾಗೂ ಬಿಗ್ ಬಾಸ್ ವೇದಿಕೆಗಾಗಿ ತಾವು ಮಾಡಿದ ತಯಾರಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸಾಮಾನ್ಯವಾಗಿ ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಸ್ಪರ್ಧಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬ್ರಾಂಡೆಡ್ ಬಟ್ಟೆ, ಶೂಗಳನ್ನು ಖರೀದಿಸುತ್ತಾರೆ. ಆದರೆ ಈ ಸ್ಪರ್ಧಿ ಮಾತ್ರ ಅಪ್ಪಟ ಮಧ್ಯಮ ವರ್ಗದ ರೀತಿಯಲ್ಲೇ ಯೋಚಿಸಿರುವುದು ಅವರ ಮಾತುಗಳಲ್ಲಿ ಎದ್ದು ಕಾಣುತ್ತದೆ.

ಬಟ್ಟೆಗಳಿಗೆ ಖರ್ಚು ಮಾಡಿದ್ದೆಷ್ಟು?

ಬಿಗ್ ಬಾಸ್ ಮನೆಗೆ ಹೋಗಲು ಎಷ್ಟು ಖರ್ಚು ಮಾಡಿದ್ರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಜಾಸ್ತಿ ಏನೂ ಖರ್ಚು ಮಾಡಿಲ್ಲ. 'ಅಗ್ನಿ ಪರೀಕ್ಷೆ' ಹಾಗೂ ಗ್ರ್ಯಾಂಡ್ ಲಾಂಚ್ ಎರಡೂ ಸೇರಿ ಬಟ್ಟೆ, ಶೂಸ್, ಆಕ್ಸೆಸರೀಸ್‌ಗೆ ಒಟ್ಟು 50 ಸಾವಿರ ರೂಪಾಯಿ ಖರ್ಚಾಗಿದೆ ಅಷ್ಟೇ. ನಾನೇನೂ ಬ್ರಾಂಡೆಡ್ ಬಟ್ಟೆಗಳನ್ನು ತಂದಿಲ್ಲ, ಎಲ್ಲವೂ ಸ್ಟ್ರೀಟ್ ಶಾಪಿಂಗ್ ಹಾಗೂ ಫ್ಯಾಕ್ಟರಿ ಔಟ್‌ಲೆಟ್‌ಗಳಲ್ಲಿ ಖರೀದಿಸಿದ್ದು" ಎಂದು ನಗುತ್ತಲೇ ತಮ್ಮ ಸರಳತೆಯನ್ನು ಹಂಚಿಕೊಂಡಿದ್ದಾರೆ.

ಐಟಿ ಕೆಲಸ ಬಿಟ್ಟಿಲ್ಲ, ಸಂಬಳ ಎಷ್ಟು?

ಬಿಗ್ ಬಾಸ್ ಮನೆಗೆ ಬಂದ ಮೇಲೆ ಕೆಲಸ ಬಿಟ್ರಾ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅವರು, "ನಾನಿನ್ನೂ ಐಟಿ ಕೆಲಸ ಬಿಟ್ಟಿಲ್ಲ. ಏಕೆಂದರೆ ಎಂಟರ್‌ಟೈನ್‌ಮೆಂಟ್ ಫೀಲ್ಡ್‌ನಲ್ಲಿ ನನಗೆ ಇನ್ನೂ ಸರಿಯಾದ ನೆಲೆ ಸಿಕ್ಕಿಲ್ಲ. ನಾನು ಫ್ರೆಶರ್ ಆಗಿ ಕೆಲಸಕ್ಕೆ ಸೇರಿ 1.5 ವರ್ಷ ಆಗಿದೆ ಅಷ್ಟೇ. ವರ್ಷಕ್ಕೆ 4.5 ರಿಂದ 5 ಲಕ್ಷ ರೂಪಾಯಿ ಪ್ಯಾಕೇಜ್ ಇದೆ. ಈ ವಾರ ಪೂರ್ತಿ ಬ್ರೇಕ್ ತಗೊಂಡು, ಮುಂದಿನ ವಾರದಿಂದ ಮತ್ತೆ ಆಫೀಸ್‌ಗೆ ಹೋಗಿ ಕೆಲಸಕ್ಕೆ ಹಾಜರಾಗುತ್ತೇನೆ. ಚಿತ್ರರಂಗದಲ್ಲಿ ಒಳ್ಳೆಯ, ಸ್ಥಿರವಾದ ಅವಕಾಶಗಳು ಸಿಕ್ಕರೆ ಮಾತ್ರ ಸರಿಯಾಗಿ ನೋಟಿಸ್ ಪೀರಿಯಡ್ ಮುಗಿಸಿ ಪೂರ್ಣ ಪ್ರಮಾಣದಲ್ಲಿ ನಟನೆಗೆ ಬರುತ್ತೇನೆ" ಎಂದಿದ್ದಾರೆ.

ತಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾ, "ನಮ್ಮದು ಸಾಮಾನ್ಯ ಮಿಡಲ್ ಕ್ಲಾಸ್ ಕುಟುಂಬ. ಅಪ್ಪ ರಿಯಲ್ ಎಸ್ಟೇಟ್ ಮಾಡ್ತಾರೆ, ಅಮ್ಮ ಗೃಹಿಣಿ. ನಾನು ಯಾರ ಮೇಲೂ ಆರ್ಥಿಕವಾಗಿ ಅವಲಂಬಿತವಾಗಿಲ್ಲ, ನನ್ನ ಖರ್ಚನ್ನು ನಾನೇ ನಿಭಾಯಿಸುತ್ತಿದ್ದೇನೆ" ಎಂದಿದ್ದಾರೆ.

ಬಿಗ್ ಬಾಸ್ ವಿನ್ನರ್ ಯಾರು?

ಈ ಬಾರಿಯ ಬಿಗ್ ಬಾಸ್ ಟ್ರೋಫಿ ಯಾರು ಗೆಲ್ಲಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನನ್ನ ಪ್ರಕಾರ ತಾಂಡವ್ ಕೈಯಲ್ಲಿ ಟ್ರೋಫಿ ಇರಬೇಕು. ತಾಂಡವ್ ಗೆದ್ದರೆ ನನಗಿಂತ ಖುಷಿ ಪಡುವವರು ಯಾರೂ ಇಲ್ಲ. ಆದರೆ ಅವರು ಭಾವನೆಗಳಿಗೆ (ಎಮೋಷನ್ಸ್) ತುಂಬಾ ಕಟ್ಟುಬೀಳುತ್ತಿದ್ದಾರೆ.

ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಒಂದು ಚಟುವಟಿಕೆ ನೀಡುತ್ತಾರೆ. ಅದರಲ್ಲಿ ಮನೆಯಲ್ಲಿರುವವರ ಪೈಕಿ ಯಾರು ನಿಮ್ಮ ನಿಜವಾದ ‘ಮಿತ್ರ’ (ಆಪ್ತ ಸ್ನೇಹಿತ / ಬೆಂಬಲಿಗ) ಮತ್ತು ಯಾರು ನಿಮ್ಮ ‘ಶತ್ರು’ (ವಿರೋಧಿ) ಎಂದು ಹೆಸರಿಸಿ, ಅವರಿಗೆ ಅದಕ್ಕೆ ಸಂಬಂಧಿಸಿದ ಬ್ಯಾಡ್ಜ್, ಪಟ್ಟಿ (ಬೆಲ್ಟ್/ಸ್ಯಾಶ್) ಹಾಕಬೇಕಿರುತ್ತದೆ. ಆಗ ಗಗನ್ ಅತ್ತ ತಕ್ಷಣ ತಾಂಡವ್ ಹೋಗಿ ಮಿತ್ರ ಬೆಲ್ಟ್ ಕೊಟ್ಟುಬಿಟ್ಟರು. ಫ್ರೆಂಡ್‌ಶಿಪ್ ಮತ್ತು ಎಮೋಷನ್ಸ್ ಪಕ್ಕಕ್ಕಿಟ್ಟು ಆಡಿದರೆ ತಾಂಡವ್ ಅವರೇ ಬಿಗ್ ಬಾಸ್ ಕಪ್ ಗೆಲ್ಲುತ್ತಾರೆ. ಒಂದು ವೇಳೆ ಅವರು ಮಿಸ್ ಮಾಡಿಕೊಂಡರೆ ಹುಡುಗರಲ್ಲಿ ಗಗನ್, ಹುಡುಗಿಯರಲ್ಲಿ ಸೌಂದರ್ಯ ಪಕ್ಕಾ ವಿನ್ನರ್ ಆಗ್ತಾರೆ" ಎಂದು ಭವಿಷ್ಯ ನುಡಿದಿದ್ದಾರೆ.