ಬಿಗ್‌ಬಾಸ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಹನುಮಂತ ಲಮಾಣಿಗೆ ಚಿತ್ರರಂಗದಿಂದ ಆಫರ್‌ಗಳ ಸುರಿಮಳೆ. ಜನಪ್ರಿಯತೆ ಬಳಸಿಕೊಳ್ಳಲು ನಿರ್ಮಾಪಕರು ಉತ್ಸುಕರಾಗಿದ್ದಾರೆ. ಆದರೆ, ಸಿನಿಮಾಕ್ಕೆ ಆಸಕ್ತಿ ತೋರದ ಹನುಮಂತ, ರಿಯಾಲಿಟಿ ಶೋಗಳಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ಅಭಿಮಾನಿಗಳು ಮಾತ್ರ ಬೆಳ್ಳಿತೆರೆಯಲ್ಲಿ ನೋಡಲು ಕಾತುರರಾಗಿದ್ದಾರೆ.
ಹನುಮಂತ ಲಮಾಣಿ ಬಿಗ್‌ಬಾಸ್ ಮನೆಯಲ್ಲಿ ಇದ್ದಾಗಿನಿಂದಲೂ ಒಂದು ರೀತಿಯಲ್ಲಿ ಹೀರೋ ಆಗಿಯೇ ಮೆರೆದವರು. ಮನೆ ಮಂದಿಗೂ ಅಚ್ಚುಮೆಚ್ಚಾಗಿದ್ದರು ಜೊತೆಗೆ, ಜನರಿಗೂ ಕೂಡ. ಇದೇ ಕಾರಣಕ್ಕೆ ಅವರಿಗೆ ಐದು ಕೋಟಿಗೂ ಅಧಿಕ ವೋಟ್ ಬಂದಿದ್ದು, ಬಿಗ್‌ಬಾಸ್ ಇತಿಹಾಸದಲ್ಲಿಯೇ ಇದು ಭಾರಿ ವೋಟ್ ಎನ್ನಲಾಗುತ್ತಿದೆ. ಬಿಗ್‌ಬಾಸ್‌ನಲ್ಲಿ ಗೆಲ್ಲಲಿ, ಬಿಡಲಿ ಒಮ್ಮೆ ಅಲ್ಲಿ ಕಾಲಿಟ್ಟು ಹೊರಕ್ಕೆ ಬಂದರೆ ಅವರು ಕೆಲ ತಿಂಗಳವರೆಗೆ ದೊಡ್ಡ ಸೆಲೆಬ್ರಿಟಿ ಆಗಿರುತ್ತಾರೆ. ಕೆಲವರಿಗೆ ಒಳ್ಳೊಳ್ಳೆ ಅವಕಾಶಗಳು ಹುಡುಕಿ ಬಂದು ಜೀವನ ಪೂರ್ತಿ ಸೆಲೆಬ್ರಿಟಿಯಾಗುತ್ತಾರೆ. ಎಲ್ಲರಿಗೂ ಈ ಅದೃಷ್ಟ ಒಲಿಯುವುದಿಲ್ಲ. ಮುಂದಿನ ಸ್ಪರ್ಧೆ ಬರುವವರೆಗೆ ಹಿಂದಿನ ಸೀಸನ್ ಸ್ಪರ್ಧಿಗಳು ಚಲಾವಣೆಯಲ್ಲಿ ಇರುತ್ತಾರೆ. ಆಮೇಲೆ ಅವರು ಮಾಮೂಲಿ ಜನರಾಗುತ್ತಾರೆ. ಆದರೆ ಕೆಲವರಿಗೆ ಅದೃಷ್ಟ ಒಲಿದುಬರುತ್ತದೆ. ಅಂಥವರಲ್ಲಿ ಒಬ್ಬರು ಹನುಮಂತ ಲಮಾಣಿ.
ತಮ್ಮ ಮುಗ್ಧತೆಯಿಂದ ಹನುಮಂತ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಸಹಜವಾಗಿ ಬಿಗ್‌ಬಾಸ್ ಅಥವಾ ಇಂಥ ರಿಯಾಲಿಟಿ ಷೋಗಳಲ್ಲಿ ವಿಜೇತರಾದವರಿಗೆ ಸಿನಿಮಾ ಆಫರ್ಗಳು ಸಿಗುವುದು ಉಂಟು. ಅದೇ ರೀತಿ ಹನುಮಂತ ಲಮಾಣಿ ಅವರಿಗೂ ಈಗ ಸ್ಯಾಂಡಲ್ವುಡ್ನಿಂದ ಆಫರ್ಗಳು ಬರುತ್ತಿವೆ ಎಂದು ಸುದ್ದಿಯಿದೆ. ಹನುಮಂತು ನಟನೆಯನ್ನೂ ಮಾಡುವಲ್ಲಿ ಪಳಗಿರುವ ಕಾರಣದಿಂದ ಅವರಿಗೆ ಸಿನಿಮಾದಲ್ಲಿ ನಟನೆ ದೊಡ್ಡ ಕಷ್ಟ ಎನ್ನಿಸಲಿಕ್ಕೆ ಇಲ್ಲ. ಒಂದಿಷ್ಟು ತರಬೇತಿ ಕೊಟ್ಟರೆ ಸ್ಟಾರ್ ಆಗಬಹುದು ಎನ್ನುವ ಲೆಕ್ಕಾಚಾರದಲ್ಲಿ, ಜೊತೆಗೆ ಅವರಿಗೆ ಇರುವ ಜನಪ್ರಿಯತೆಯಿಂದ ತಮ್ಮ ಸಿನಿಮಾ ಓಡಬಹುದು ಎನ್ನುವ ಕಾರಣದಿಂದ ಕೆಲವರು ಇದಾಗಲೇ ಹನುಮಂತು ಅವರನ್ನು ಅಪ್ರೋಚ್ ಮಾಡಿದ್ದಾರೆ ಎಂದು ಸುದ್ದಿಯಾಗಿದೆ.
ಬಿಗ್‌ಬಾಸ್ ವಿನ್ನರ್ ಹನುಮಂತು 'ಫಸ್ಟ್ ನೈಟ್' ಹೀಗಿತ್ತು: ಸುಸ್ತಾಗೋದ್ರು ಕಿಚ್ಚ ಸುದೀಪ್! ವಿಡಿಯೋ ವೈರಲ್
ಆದರೆ ಹನುಮಂತು ಸದ್ಯ ಬೇರೆ ಬೇರೆ ರಿಯಾಲಿಟಿ ಷೋಗಳಲ್ಲಿ ಬಿಜಿಯಾಗಿದ್ದು, ಯಾವುದೇ ಕಾರಣಕ್ಕೂ ಸಿನಿಮಾಗೆ ಎಂಟ್ರಿ ಕೊಡುವುದಿಲ್ಲ ಎಂದು ಇದಾಗಲೇ ಹೇಳಿದ್ದಾರೆ. ಬಿಗ್ಬಾಸ್ನಿಂದ ಹೊರಕ್ಕೆ ಬಂದಾಗ, ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನದಲ್ಲಿಯೂ ಸಿನಿಮಾ ಬಗ್ಗೆ ಕೇಳಿದ್ದಾಗ ಹನುಮಂತು ನಾನು ಮದುವೆಯಾಗುತ್ತೇನೆ. ಆದರೆ ಸಿನಿಮಾ ಉಸಾಬರಿ ಬೇಡ ಎಂದೇ ಹೇಳಿದ್ದರು. ಈಗಲೂ ಕೂಡ ಸಿನಿಮಾಕ್ಕೆ ಎಂಟ್ರಿ ಕೊಡುವುದು, ಗಂಟೆಗಟ್ಟಲೆ ಮೇಕಪ್ ಮಾಡಿಕೊಂಡು ಇರುವುದು ಎಲ್ಲಾ ನನಗೆ ಇಷ್ಟವಿಲ್ಲ. ನಾನು ಹೇಗಿದ್ದೇನೋ ಹಾಗೆಯೇ ಇರುತ್ತೇನೆ ಎಂದು ಹೇಳಿರುವುದಾಗಿ ಹೇಳಲಾಗುತ್ತಿದೆ.
ಅದೇನೇ ಇದ್ದರೂ ಐದು ಕೋಟಿಯಷ್ಟು ಹನುಮಂತು ಫ್ಯಾನ್ಸ್ ಮಾತ್ರ, ಬೆಳ್ಳಿ ಪರದೆಯ ಮೇಲೆ ಹನುಮಂತ ಲಮಾಣಿ ಅವರನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಮುಂದೊಮ್ಮೆ ಹನುಮಂತ ಮನಸ್ಸು ಮಾಡಿ ಸಿನಿಮಾಕ್ಕೆ ಒಪ್ಪಿಕೊಳ್ಳಲಿ ಎನ್ನುವುದು ಅವರ ಆಸೆ. ಅವರು ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುವುದು ಯಾವಾಗ? ಯಾವ ಸಿನಿಮಾ ಎಂಬೆಲ್ಲಾ ಪ್ರಶ್ನೆಗಳನ್ನು ಅವರ ಅಭಿಮಾನಿಗಳು ಕೇಳುತ್ತಿದ್ದಾರೆ.
ಸತ್ರೂ ಇನ್ನೊಮ್ಮೆ ವಿಮಾನದಲ್ಲಿ ಹೋಗಂಗಿಲ್ಲ... ನರಕದ ಅನುಭವ ತೆರೆದಿಟ್ಟ ಬಿಗ್‌ಬಾಸ್ ಹನುಮಂತು!
