ಬಿಗ್‌ಬಾಸ್‌ನಲ್ಲಿ ಹನುಮಂತು ಮೊದಲ ಬಾರಿಗೆ ವಿಮಾನ ಹತ್ತಿದ್ದು ಭಯಾನಕ ಅನುಭವವನ್ನು ತೆರೆದಿಟ್ಟಿದ್ದಾರೆ.  ಹೊಟ್ಟೆಯಲ್ಲಿ ಇದ್ದುದು ಬಾಯಿಗೆ ಬಂದಂಗಾಗುತ್ತಿದೆ, ಸತ್ತಂತೆ ತಣ್ಣಗಾಗ್ತಿದೆ ಎಂದೆಲ್ಲಾ ವಿಡಿಯೋ ಮಾಡಿದ್ದು, ಅದು ವೈರಲ್‌ ಆಗಿದೆ. 

ಬಿಗ್‌ಬಾಸ್‌ನಲ್ಲಿ ಹನುಮಂತು ಸದ್ಯ ಬಹುತೇಕ ವೀಕ್ಷಕರ ಕ್ರಷ್ ಆಗಿದ್ದಾರೆ. ಅವರ ಮುಗ್ಧ ಮಾತು ಹಲವರಿಗೆ ಇಷ್ಟವಾಗುತ್ತಿವೆ. ಕುರಿ ಕಾಯುವ ಕಾರಣ, ತಾನೊಬ್ಬ ಅತಿ ಬಡವ ಎಂದು ಹೇಳುತ್ತಲೇ ಹನುಮಂತು ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರಿಗೆ ಭರ್ಜರಿ ಗಿಫ್ಟ್‌ ಸಿಕ್ಕಿತ್ತು. ಈ ಗಿಫ್ಟ್‌ ನೋಡಿ, ಬಿಗ್‌ಬಾಸ್‌ ಸ್ಪರ್ಧಿಗಳೂ ಕುಣಿದು ಕುಪ್ಪಳಿಸಿದ್ದರು. ಹನುಮಂತುಗೆ ಬಂದದ್ದು ದುಬಾರಿ ಬೆಲೆಬಾಳುವ ಬಟ್ಟೆಗಳು. ಇದನ್ನು ಕಳುಹಿಸಿರುವುದು ಖುದ್ದು ಸುದೀಪ್‌ ಅವರು. ಅಷ್ಟಕ್ಕೂ ಈ ಉಡುಗೊರೆ ಹಿಂದೆ ಕಾರಣವೂ ಇದೆ. ಅದೇನೆಂದ್ರೆ, ಹನುಮಂತು ಪ್ರತಿದಿನ ಸ್ನಾನ ಮಾಡುತ್ತಿರಲಿಲ್ಲ. ಅದು ಉಳಿದ ಸ್ಪರ್ಧಿಗಳ ಕಿರಿಕಿರಿಗೂ ಕಾರಣವಾಗಿತ್ತು. ಎಲ್ಲರೂ ನೀನು ಸ್ನಾನ ಮಾಡು ಅಂತನೇ ಹೇಳುತ್ತಿದ್ದರು. ಇದೇ ವಿಚಾರ ಕಿಚ್ಚ ಸುದೀಪ್ ಪಂಚಾಯ್ತಿಯಲ್ಲೂ ಬಂದಿತ್ತು. ಆಗ ಸುದೀಪ್ ಯಾಕೆ ಸ್ನಾನ ಮಾಡಲ್ಲ ಎಂದು ಪ್ರಶ್ನಿಸಿದ್ದರು. ಆಗ ಹನುಮಂತು ನೋವಿನಿಂದ ಬಟ್ಟೆ ಇಲ್ಲ ಸರ್. ತಂದಿರೋದೇ ಕಡಿಮೆ. ಅದಕ್ಕೆ ಜಳಕ ಮಾಡಲ್ಲ ಎಂದಿದ್ದರು. ಅಲ್ಲಿಗೆ ಸುದೀಪ್‌ ಸೈಲೆಂಟ್‌ ಆಗಿ ಬೇರೆ ಟಾಪಿಕ್ ಮಾತನಾಡಿದ್ದರು. ಇದರ ಬೆನ್ನಲ್ಲೇ ಈಗ ದುಬಾರಿ ಬ್ರಾಂಡೆಡ್‌ ಬಟ್ಟೆಗಳನ್ನು ಕಳುಹಿಸಿ ಕೊಟ್ಟಿದ್ದಾರೆ. ಬ್ರಾಂಡೆಂಡ್‌ ಬಟ್ಟೆಗಳು, ಹೊಸ ಚೆಡ್ಡಿ, ಲುಂಗಿಯನ್ನು ಕಳುಹಿಸಲಾಗಿತ್ತು.

ಇದೀಗ ಹನುಮಂತು ವಿಮಾನ ಹತ್ತುವ ಅವಕಾಶ ಸಿಕ್ಕಿದೆ. ವಿಮಾನದಲ್ಲಿಯೇ ಅವರು, ವಿಡಿಯೋ ಮಾಡಿದ್ದು, ವಿಮಾನದ ಮೊದಲ ಅನುಭವ ಭಯಾನಕವಾಗಿದೆ ಎಂದು ಹೇಳಿದ್ದಾರೆ. ಹೊಟ್ಟೆಯಲ್ಲಿ ಇರುವುದು ಬಾಯಲ್ಲಿ ಬಂದ ಹಾಗೆ ಆಗ್ತಿದೆ. ಡ್ರೈವರ್‍‌ ಸರಿ ಇಲ್ಲ. ಹೇಗೇಗೋ ಗಾಡಿ ಓಡಿಸ್ತಾ ಇದ್ದಾನೆ. ಇನ್ನೊಮ್ಮೆ ಸತ್ರೂ ವಿಮಾನದಲ್ಲಿ ಅಡ್ಡಾಡುವುದಿಲ್ಲ. ತಲೆ ಸಿಕ್ಕಾಪಟ್ಟೆ ನೋಯುತ್ತಿದೆ. ಥಂಡಿ ವಿಪರೀತ ಇದೆ. ಭಯಾನಕ ಕಷ್ಟ ಆಗ್ತಿದೆ ಎಂದೆಲ್ಲಾ ಹೇಳಿದ್ದಾರೆ. ಇದನ್ನು ಕೇಳಿ ಅಕ್ಕ ಪಕ್ಕದ ಪ್ರಯಾಣಿಕರು ಕನ್ನಡ ಅರ್ಥವಾಗದಿದ್ದರೂ ನಗುವುದನ್ನು ನೋಡಬಹುದು. 

ಒಂದೇ ಮನೆಯಲ್ಲಿ ತಾಂಡವ್‌ ಹೆಂಡ್ತೀರು! ಶ್ರೇಷ್ಠಾಳನ್ನು ಚಿಕ್ಕಮ್ಮ ಎಂದು ಒಪ್ಪಿಕೊಂಡ ಮಕ್ಕಳು- ಮುಗಿದೇ ಬಿಡ್ತಾ ಭಾಗ್ಯಲಕ್ಷ್ಮಿ?

ಮೊನ್ನೆಯಷ್ಟೇ ಬಿಗ್‌ಬಾಸ್‌ನಲ್ಲಿ ಹೆಲಿಕಾಪ್ಟರ್ ಸೌಂಡ್ ಮಾಡುವ ಮೂಲಕ ಎಲ್ಲರನ್ನೂ ರಂಜಿಸಿದ್ರು ಹನುಮಂತು. ಪರದೆಯ ಮೇಲೆ ತೋರಿಸುವ ಚಿತ್ರದ ಸೌಂಡ್‌ ಮಾಡಿ ಹೇಳಬೇಕು, ಎದುರಿಗೆ ಇದ್ದವರು ಅದನ್ನು ಕಂಡುಹಿಡಿಬೇಕಿತ್ತು. ಅಲ್ಲಿ ಹೆಲಿಕಾಪ್ಟರ್‍‌ ಬಂದಿತ್ತು. ಆಗ ಅದರ ಸೌಂಡ್ ಮಾಡುವ ಮೂಲಕ ಹನುಮಂತು ಮೋಕ್ಷಿತಾ ಅವರಿಗೆ ಹೇಳಿದ್ದರು. ಅವರು ಮಾಡಿದ ಆ್ಯಕ್ಷನ್‌ಗಳಿಗೆ ಸ್ಪರ್ಧಿಗಳೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಸುದೀಪ್ ಕೂಡ ಸಿಕ್ಕಾಪಟ್ಟೆ ನಕ್ಕಿದ್ದರು.

ಅವರು ಪಡ್‌ಡ್‌ಡ್‌ ಪಟ್‌ಪಟ್‌ ಎಂದು ಹೇಳಿದಾಗ ಮೋಕ್ಷಿತಾ ಆರಂಭದಲ್ಲಿ ಗನ್ನಾ ಕೇಳಿದ್ದರು. ಆಮೇಲೆ ಡುಗುಡುಗು ಹೇಳಿದಾಗ ಟ್ರೇನಾ ಕೇಳಿದ್ದರು. ತಪ್ಪು ಉತ್ತರ ಎನ್ನುವ ಕಾರಣಕ್ಕೆ ಕುಚುಕುಚು.. ಉಶ್‌, ಓವ್ ಎಂದೆಲ್ಲಾ ಹೇಳಿದಾಗ ಮೋಕ್ಷಿತಾ ಬಸ್ಸಾ ಕೇಳಿದ್ರ. ಅಮೇಲೆ ಗುಟುಗುಟು ಎಂದೋ ಇನ್ನೇನೆನೋ ವಿಚಿತ್ರ ಸೌಂಡ್‌ ಮಾಡಿದಾಗ ಮೋಕ್ಷಿತಾ ಪ್ರಾಣಿ, ಪಕ್ಷಿ ಹೆಸರೆಲ್ಲಾ ಹೇಳಿದ್ರು. ಕೊನೆಗೂ ಅವರ ಸೌಂಡ್‌ ಹೆಲಿಕಾಪ್ಟರ್‍‌ದು ಎಂದು ಮೋಕ್ಷಿತಾಗೆ ಗೊತ್ತೇ ಆಗಿರಲಿಲ್ಲ. ಇದೀಗ ಹೆಲಿಕಾಪ್ಟರ್‍‌ ಅಲ್ಲದಿದ್ದರೂ ವಿಮಾನ ಹತ್ತುವ ಮೂಲಕ ಸುಸ್ತಾಗಿ ಹೋಗಿದ್ದಾರೆ ಹನುಮಂತು. 

ರಿಯಲ್‌ ಮದ್ವೆ ಮುಗಿಸಿದ ಚಿನ್ನುಮರಿ ಶೂಟಿಂಗ್‌ ಸೆಟ್‌ನಲ್ಲಿ ರೀಲ್‌ ಪತಿ ಜೊತೆ ಹೇಗಿದ್ಲು? ವಿಡಿಯೋ ವೈರಲ್‌

View post on Instagram