ಒಂದು ಕೈ ನೋಡ್ಕೋತೇನೆಂತ ತುಕಾಲಿ ಸಂತೋಷ್​ಗೆ ಸಂಗೀತಾ ಶೃಂಗೇರಿ ಓಪನ್​ ಚಾಲೆಂಜ್​! ಏನಿದು ವಿಷ್ಯ?

 ಬಿಗ್​ಬಾಸ್​ ಮನೆಯಲ್ಲಿ ಸದಾ ಕಿತ್ತಾಡುತ್ತಿದ್ದ ತುಕಾಲಿ ಸಂತೋಷ್ ಮತ್ತು ಸಂಗೀತಾ ಶೃಂಗೇರಿ ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್​ ಫಂಕ್ಷನ್​ನಲ್ಲಿ ಕಾಣಿಸಿಕೊಂಡಾಗ, ನಟಿ ಹೀಗೆ ಚಾಲೆಂಜ್​ ಹಾಕೋದಾ?
 

Bigg Boss Sangeeta Sringeri open challenged Tukali Santhosh in Anubandha Award function stage suc

ಬಿಗ್​ಬಾಸ್-10ರ ಮನೆಯಲ್ಲಿ ಸದಾ ಕಿತ್ತಾಡುತ್ತಾ ಇದ್ದ ಜೋಡಿಗಳು ಎಂದರೆ ಮೊದಲಿಗೆ ನೆನಪಾಗುವುದು ಸಂಗೀತಾ ಶೃಂಗೇರಿ ಮತ್ತು ತುಕಾಲಿ ಸಂತೋಷ್​. ಬಿಗ್ ಬಾಸ್ ಮನೆಯ ಮೊದಲ ದಿನದಿಂದಲೂ ಇವರಿಬ್ಬರೂ  ಅಷ್ಟೇನೂ ಮಾತನಾಡುತ್ತಾ ಇರಲಿಲ್ಲ. ಇದಕ್ಕೆ ಕಾರಣ, ಸಂಗೀತಾ ಮಾತನಾಡುವ  ಮಾತುಗಳು  ತುಕಾಲಿ ಸಂತೋಷ್‌ ಅವರಿಗೆ ಹಿಡಿಸುತ್ತಿರಲಿಲ್ಲ. ಆದ್ದರಿಂದ ಇಬ್ಬರ ನಡುವೆ ಸಾಕಷ್ಟು ವೈಮನಸ್ಸು ಇದ್ದವು. ಸದಾ ಇಬ್ಬರೂ ಕಾದಾಡುತ್ತಲೇ ಇದ್ದರು.  ಅದು ಎಷ್ಟರ ಮಟ್ಟಿಗೆ ಆಯಿತು ಎಂದರೆ,  ತುಕಾಲಿ ಸಂತೋಷ್ ಹೇಳುವ ಎಲ್ಲಾ ಮಾತುಗಳಿಗೂ ಸಂಗೀತಾ ರಿಯಾಕ್ಟ್ ಮಾಡಲು ಶುರು ಮಾಡಿದರು. ತಮಾಷೆಯಾಗಿ ಹೇಳಿದ್ದನ್ನು  ಸೀರಿಯಸ್ಸಾಗಿ ತೆಗೆದುಕೊಂಡರು. ಅಷ್ಟಕ್ಕೂ ಒಂದು ಆಟ ಎಂದ ಮೇಲೆ ಇಂಥದ್ದೆಲ್ಲಾ ಇದದ್ದೇ. ಅದರಲ್ಲಿಯೂ ಬಿಗ್​ಬಾಸ್​ ಎಂದ ಮೇಲೆ ಅಲ್ಲಿ ಒಂದಿಷ್ಟು ಸ್ಕ್ರಿಪ್ಟೆಡ್​ ಇರುತ್ತದೆ ಎನ್ನುವುದು ಬಹುತೇಕರಿಗೆ ತಿಳಿದ ವಿಷಯವೇ ಆಗಿದೆ.

ಆದರೆ ಇದೀಗ ಕಲರ್ಸ್​ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್​ ವೇದಿಕೆ ಮೇಲೆ ತುಕಾಲಿ ಸಂತೋಷ್​  ಮತ್ತು ಸಂಗೀತಾ ಶೃಂಗೇರಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಂಗೀತಾ ಅವರಿಗೆ ವಾಹಿನಿಯ ಕಡೆಯಿಂದ ಗಿಫ್ಟ್​ ಕೊಡಲಾಗಿದೆ. ಅದರಲ್ಲಿ ಹಸಿರು ಗಾಜಿನ ಬಳೆಗಳನ್ನು ಅವರಿಗೆ ನೀಡಲಾಗಿದೆ. ಅದನ್ನು ನೋಡಿ ಅವರು ಫುಲ್​ ಖುಷ್​ ಆಗಿದ್ದಾರೆ. ಇದೇ ವೇಳೆ ಬಿಗ್​ಬಾಸ್​ ಸೀಸನ್​ 10 ಎಲ್ಲಾ ಸ್ಪರ್ಧಿಗಳು ಈ ಅವಾರ್ಡ್​ ಫಂಕ್ಷನ್​ಗೆ ಆಗಮಿಸಿದ್ದಾರೆ. ಇಲ್ಲಿ ತುಕಾಲಿ ಸಂತೋಷ್​ ಕೂಡ ಬಂದಿದ್ದರು. ಇವರನ್ನು ನೋಡಿದ ಆ್ಯಂಕರ್​ ಅನುಪಮಾ ಗೌಡ ಅವರು, ಇಬ್ಬರ ಕಾಲೆಳೆದಿದ್ದಾರೆ. ಬಿಗ್​ಬಾಸ್​​ ಮುಗಿದ ಮೇಲೆ ಸಂಗೀತಾರನ್ನು ಎಷ್ಟು ಮಿಸ್​ ಮಾಡಿಕೊಂಡ್ರಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ತುಕಾಲಿ ಜೋರಾಗಿ ನಗುತ್ತಾ ಚೆನ್ನಾಗಿ ಹಾಕಿಕೊಟ್ರಿ ಎಂದಿದ್ದಾರೆ.

ಅರಮನೆ ಕರೆಂಟ್​ ಬಿಲ್​ ಎಷ್ಟು? ದಂಪತಿ ಜಗಳವಾದ್ರೆ ಸಾರಿ ಕೇಳೋದ್ಯಾರು? ತರ್ಲೆ ಪ್ರಶ್ನೆಗಳಿಗೆ ಯದುವೀರ್​ ಉತ್ತರ ಹೀಗಿದೆ...

ಆಗ ಸಂಗೀತಾ, ತುಕಾಲಿ ಅವ್ರೇ, ಮನೆಗೆ ಹೋದ ಮೇಲೆ ಎಲ್ಲಾ ಎಪಿಸೋಡ್​ ನೋಡಿದೆ ಎಂದರು. ಅದಕ್ಕೆ ತುಕಾಲಿ ತುಂಬಾ ಚೆನ್ನಾಗಿತ್ತು ಎಂದರು, ಅದಕ್ಕೆ ಸಂಗೀತಾ ಹೌದು. ತುಂಬಾನೇ ಚೆನ್ನಾಗಿತ್ತು, ನೋಡ್ಕೋತೀನಿ ಎಂದು ತಮಾಷೆ ಮಾಡಿದರು. ಆಗ ಆ್ಯಂಕರ್​ ಅನುಪಮಾ ಅವ್ರು ಸೀಸನ್​ 10 ಇಲ್ಲೇ ಶುರುವಾಗುವ ಹಾಗೆ ಕಾಣಿಸ್ತಿದೆ ಎಂದರು. ಎಲ್ಲರೂ ಈ ಹಾಸ್ಯಕ್ಕೆ ಬಿದ್ದೂ ಬಿದ್ದೂ ನಕ್ಕಿದ್ದಾರೆ.

ಇನ್ನು ಸಂಗೀತಾ ಅವರ ಕುರಿತು ಹೇಳುವುದಾದರೆ,  ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿವರಾದ ನಟಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 2016ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ 'ಹರ ಹರ ಮಹಾದೇವ' ಕನ್ನಡ ಧಾರವಾಹಿ ಮೂಲಕ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟ ಇವರು, ಪಾವರ್ತಿ ಪಾತ್ರದ ಮೂಲಕ ಖ್ಯಾತಿ ಗಳಿಸಿದರು. ಎ+  ಸಿನಿಮಾ ಮೂಲಕ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟರು. ಬಳಿಕ  ಸಾಲಗಾರರ ಸಹಕಾರ ಸಂಘ, 777 ಚಾರ್ಲಿ, ಲಕ್ಕಿಮ್ಯಾನ್, ಶಿವಾಜಿ ಸುರತ್ಕಲ್ 2 ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಾರ್ಲಿ ಚಿತ್ರದಿಂದ ಇವರಿಗೆ ದೊಡ್ಡ ಬ್ರೇಕ್​ ಸಿಕ್ಕಿತು. ಎರಡು ಸಾವಿರಕ್ಕೂ ಹೆಚ್ಚು ಜನರು '777 ಚಾರ್ಲಿ' ಚಿತ್ರದ ನಾಯಕಿ ಪಾತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಆದರೆ ಎಲ್ಲರನ್ನು ಮೀರಿ ಸಂಗೀತಾ ಗೆದ್ದಿದ್ದರು. ಒಳ್ಳೆ ಅವಕಾಶ ಪಡೆದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿದೆ ಚಿತ್ರ ಜೊತೆಗೆ ಹಲವು ಅವಾರ್ಡ್​ಗಳನ್ನು ಬಾಚಿಕೊಂಡಿದೆ.
 

ಇದು ಧರ್ಮ ರಕ್ಷಣೆ ವಿಷ್ಯ... ತನಿಖೆ ನಡೀತಿದೆ... ಮಧ್ಯೆ ನೀವು... ಪ್ರಕಾಶ್​ ರಾಜ್​ಗೆ ನಟ ವಿಷ್ಣು ಮಂಚು ಕ್ಲಾಸ್​!

Latest Videos
Follow Us:
Download App:
  • android
  • ios