Asianet Suvarna News Asianet Suvarna News

ಮಗಳ ಹಾರ್ಟ್‌ ಬೀಟ್‌ ಝೀರೋ ಆಗಿತ್ತು; ಆಸ್ಪತ್ರೆಯಲ್ಲಿ ನಡೆದ ಘಟನೆ ನೆನೆದು ಕಣ್ಣೀರಿಟ್ಟ ಸಮೀರ್ ಆಚಾರ್ಯ

ಕರುನಾಡ ಆಶೀರ್ವಾದದಿಂದ ಹೆಣ್ಣು ಮಗುವನ್ನು ಬರ ಮಾಡಿಕೊಂಡ ಸಮೀರ್ ಆಚಾರ್ಯ. ನನ್ನಮ್ಮ ಸೂಪರ್ ಸ್ಟಾರ್ ವೇದಿಕೆ ಮೇಲೆ ನಾಮಕರ ಮಾಡಿದ ಜೋಡಿ... 

Bigg boss Sameer Acharya recalls his daughter birth moment with wife shravani vcs
Author
First Published Jan 8, 2023, 10:02 AM IST

ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಸಮೀರ್ ಚಾರ್ಯ ರಾಜಾ ರಾಣಿ ರಿಯಾಲಿಟಿ ಶೋ ಮೂಲಕ ಸೆಲೆಬ್ರಿಟಿ ಕಪಲ್ ಆದರು. ನಮಗೂ ಜೀವನ ಇರುವ ಮಗು ಬೇಕು ಎಂದು ವೇದಿಕೆ ಮೇಲೆ ಭಾವುಕರಾಗಿ ಭಾವನೆ ಹಂಚಿಕೊಂಡಿದ್ದರು. ಕೋಟ್ಯಾಂತರ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ಶ್ರಾವಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗು ಹುಟ್ಟುವ ದಿನ ಎಷ್ಟು ಭಯ ಇತ್ತು ಏನಾಯ್ತು ಎಂಬುದರ ಬಗ್ಗೆ ಹಂಚಿಕೊಂಡಿದ್ದಾರೆ. 

'ಜನರು ಹರಸಿ ಹಾರೈಸಿದ್ದಾರೆ ಅದರ ಪ್ರತಿಬಿಂಬವೇ ನನ್ನ ಮಗಳು. ಇಡೀ ಕರ್ನಾಟಕ ಜನರ ಆಶೀರ್ವಾದದಿಂದ ಹುಟ್ಟಿರುವುದು ಈ ಕೂಸು. ಡಾಕ್ಟರ್ ಡೇಟ್‌ ಕೊಟ್ಟಿದ ದಿನ ಈಕೆಯನ್ನು ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಆಸ್ಪತ್ರೆಯಲ್ಲಿ ಶ್ರಾವಣಿ ಜೊತೆ ಆಕೆ ತಾಯಿ ಇದ್ದರು, ಶ್ರಾವಣಿ ಹೊಟ್ಟೆಗೆ ಒಂದು ಬೆಲ್ಟ್‌ ಕಟ್ಟಿದ್ದರು ಅದರಿಂದ ಮಗುವಿನ ಹಾರ್ಟ್‌ ಬೀಟ್‌ ಮಾನಿಟರ್‌ ಮಾಡುವುದಕ್ಕೆಂದು. ಇವ್ರುನ ಅಲ್ಲಿ ಬಿಟ್ಟ ನನ್ನ ತಂದೆ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಾನು ಮನೆಗೆ ಬಂದಿದ್ದೆ ಆಗ ನನಗೆ ಕರೆ ಬರುತ್ತದೆ ಮೊದಲು ಹಾರ್ಟ್‌ ರೇಟ್‌ 140 ಇತ್ತು ಆನಂತರ 130 120 110 ಎಷ್ಟು ಕಡಿಮೆ ಆಗುತ್ತಿತ್ತು ಅಂದ್ರೆ 30, 20ಕ್ಕೆ ಬಂತು ನಿಂತುಕೊಂಡಿತ್ತು. ಡಾಕ್ಟರ್ ಗಾಬರಿ ಆದರು ಏಕೆಂದರೆ ಒಂದು ಸಮಯದಲ್ಲಿ ಝೀರೋ ಆಯ್ತು. ಅಂದ್ರೆ ಮಗು ಉಸಿರು ನಿಂತಿದೆ ಅಂತ. ಆ ಕ್ಷಣ ನಾನು ಮನೆಯಲ್ಲಿದ್ದೆ ಶ್ರಾವಣಿ ಆಸ್ಪತ್ರೆಯಲ್ಲಿ ಒದ್ದಾಡುತ್ತಿದ್ದಾರೆ. ಒಂದು ನಿಮಿಷವೂ ತಡ ಮಾಡುವುದಕ್ಕೆ ಆಗೋಲ್ಲ ಅಪರೇಶನ್ ಮಾಡಬೇಕು ಎಂದು ಡಾಕ್ಟರ್ ಹೇಳುತ್ತಿದ್ದಾರೆ.' ಎಂದು ನಡೆದ ಘಟನೆ ಬಗ್ಗೆ ಸಮೀರ್ ಆಚಾರ್ಯ ಮಾತನಾಡುತ್ತಾರೆ.

Bigg boss Sameer Acharya recalls his daughter birth moment with wife shravani vcs

'ನಾನು ಮನೆಯಲ್ಲಿದ್ದೀನಿ ಏನು ದಾರಿ ತೋರುತ್ತಿಲ್ಲ ದೇವರ ಮುಂದೆ ನಿಂತು ಪ್ರಾರ್ಥನ ಮಾಡುತ್ತಿದ್ದೆ. ಮನುಷ್ಯ ಹೊರಗಡೆ ಬಂದ ಮೇಲೆ ಏನಾದರೂ ಮಾಡಬಹುದು ಆದರೆ ಹೊಟ್ಟೆಯಲ್ಲಿದ್ದಾಗ ಏನೂ ಮಾಡಲಾಗದು. ಆಕೆ ಯಾವಾಗ ಭಯ ಆಯ್ತು ಅಂದ್ರೆ ಮಗುವಿನ ಹಾರ್ಟ್‌ ಬೀಟ್‌ ಸ್ಟ್ರೇಟ್‌ ಲೈನ್ ಆಯ್ತು. ಅವತ್ತು  ಕಾರನ್ನು ಎಷ್ಟು ವೇಗ ಓಡಿಸಿದ್ದೀನಿ ಎಂದು ನನಗೆ ಮಾತ್ರ ಗೊತ್ತು. ನಾನು ಬರುವಷ್ಟರಲ್ಲಿ ಆಕೆನ ಆಪರೇಶನ್ ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದರು ಅವ್ರು ನನಗೆ ಮಾಸ್ಕ್‌ ಮತ್ತು ಡ್ರೆಸ್‌ ಕೊಟ್ಟು ನೀವು ಇದೆಲ್ಲಾ ನೋಡಿ ಮೂರ್ಛೆ ಹೋಗುತ್ತೀರಾ ಅಂದ್ರೆ ಬರಬೇಡಿ ಅಂತ ಹೇಳಿದ್ದರು ಅಗ ನಾನು ಇಲ್ಲ ಇಲ್ಲ ನನ್ನ ಮಗುವನ್ನು ನಾನು ನೋಡಬೇಕು ಎಂದು ಒಳಗೆ ನಡೆದೆ. ಶ್ರಾವಣಿಗೆ ಆಪರೇಷನ್ ಮಾಡುತ್ತಿದ್ದಾರೆ ಆದರೆ ನನಗೆ ಅಲ್ಲಿ ಭಯ ಆಗುತ್ತಿತ್ತು ಪಾಪು ಹೊರಗಡೆ ಹೇಗೆ ಬರುತ್ತದೆ ಏನಾಗುತ್ತದೆ ಎಂದು.  ದೇವರನ್ನು ನೆನಪಿಸಿಕೊಂಡು ನಾನು ನಿಂತಿದ್ದೆ ಆಗ ಅಲ್ಲಿದ್ದ ಡಾಕ್ಟರ್‌ಗಳು ಪುಶ್‌ ಎಂದು ಹೇಳಿದ್ದರು ಆಗ ಮಗು ಕಾಲು ಹಿಡಿದುಕೊಂಡು ಹೊರ ತೆಗೆದರು ಪಾಪು ಧ್ವನಿ ಕೇಳುವವರೆಗೂ ಮನಸ್ಸು ಗಟ್ಟಿ ಹಿಡಿದುಕೊಂಡಿದ್ದೆ. ಆಕೆ ಅತ್ತ ಕ್ಷಣ ನಾನು ಎಲ್ಲಾ ದೇವರಿಗೂ ನಮಸ್ಕಾರ ಮಾಡಿದೆ.' ಎಂದು ಸಮೀರ್ ಆಚಾರ್ಯ ಹೇಳಿದ್ದಾರೆ.

ಗರ್ಭಿಣಿ ಪತ್ನಿಯನ್ನು ತಾಯಿ ಮನೆಗೆ ಕಳುಹಿಸಿಲ್ಲ; ಮಗಳಿಗೆ ನಾಮಕರಣ ಮಾಡಿದ ಸಮೀರ್ ಆಚಾರ್ಯ ಭಾವುಕ

'ಅವತ್ತೇ ನಾನು ಹೇಳಿದೆ ಯಾರಿಗಾದರೂ ಯಾವತ್ತಾದರೂ ಮನಸ್ಸು ನೋವಿಸಿದ್ದರೆ ದಯವಿಟ್ಟು ಕ್ಷಮಿಸಿ ಈ ಕ್ಷಣ ನಮ್ಮ ಮಗಳಿಗೆ ಆಶೀರ್ವಾದ ಮಾಡಿ' ಎಂದಿದ್ದಾರೆ.

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸೀಸನ್ 2 ಅದ್ಧೂರಿಯಾಗಿ ಮೂಡಿ ಬರುತ್ತಿದೆ. ಈ ಕಾರ್ಯಕ್ರಮದಲ್ಲಿ ಸಮೀರ್ ಆಚಾರ್ಯ ಮತ್ತು ಶ್ರಾವಣಿ ತಮ್ಮ ಮಗುವಿನ್ನು ಜನರಿಗೆ ಪರಿಚಯಿಸಿ ಕೊಡುತ್ತಾರೆ ಹಾಗೂ ನಾಮಕರಣ ಮಾಡುತ್ತಾರೆ. ನಟ ಸೃಜನ್ ಲೋಕೇಶ್, ತಾರಾ ಅನುರಾಧ ಹಾಗೂ ಅನುಪ್ರಭಾಕರ್ ಮಗುವಿಗೆ ನಾಮಕರಣ ಮಾಡುತ್ತಾರೆ. 'ನನಗೆ ಜೀವ ಇರುವ ಮಗು ಬೇಕು' ಅಂತ ಶ್ರಾವಣಿ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಮಗುವನ್ನು ಸಂಭಾಳಿಸುವ ಟಾಸ್ಕ್‌ ವೇಳೆ ಹೇಳಿದ್ದರು. ಆಗ ಕಾರ್ಯಕ್ರಮ ನೋಡುತ್ತಿದ್ದ ಪ್ರತಿಯೊಬ್ಬರು ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದರು. 

ಸಮೀರ್ ಆಚಾರ್ಯ-ಶ್ರಾವಣಿ ದಂಪತಿಗೆ ಹೆಣ್ಣು ಮಗು; ತುಳಜಾ ಭವಾನಿ ಬಂದಳು ಎಂದ ರಿಯಾಲಿಟಿ ಶೋ ಕಪಲ್

ಸರ್ವಾರ್ಥ ಹೆಸರಿನ ಅರ್ಥ:

ಕೆಲವು ಪದಗಳಲ್ಲಿ ಸರ್ವಾರ್ಥ ಹೆಸರಿನ ಅರ್ಥವನ್ನು ವಿವರಿಸಲು ಆಗುವುದಿಲ್ಲ. ಸರ್ವಾರ್ಥ ಎನ್ನುವುದು ವಸ್ತು ಯಶಸ್ಸಿನ ವಿಷಯದಲ್ಲಿ ವಿಪರೀತತೆಯನ್ನು ಪ್ರದರ್ಶಿಸುವ ಪ್ರವೃತ್ತಿಯನ್ನು ಪ್ರತಿನಿಧಿಸುವ ಹೆಸರು. ಸಮತೋಲನ ಮತ್ತು ಶಕ್ತಿಯು ಇವರನ್ನು ವಿವರಿಸುವ ಎರಡು ಪದಗಳು.

 

Follow Us:
Download App:
  • android
  • ios