Asianet Suvarna News Asianet Suvarna News

ಗರ್ಭಿಣಿ ಪತ್ನಿಯನ್ನು ತಾಯಿ ಮನೆಗೆ ಕಳುಹಿಸಿಲ್ಲ; ಮಗಳಿಗೆ ನಾಮಕರಣ ಮಾಡಿದ ಸಮೀರ್ ಆಚಾರ್ಯ ಭಾವುಕ

ಮಗಳಿಗೆ ವಿಭಿನ್ನ ಹೆಸರಿಟ್ಟ ಸಮೀರ್ ಆಚಾರ್ಯ. ರಾಜಾ ರಾಣಿ ವೇದಿಕೆಯಲ್ಲಿ ಕಂಡ ಕನಸು ನನಸು..... 
 

Sameer Acharya Shravani daughter naming ceremony in reality show vcs
Author
First Published Jan 6, 2023, 2:37 PM IST

ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಪತ್ನಿ ಜೊತೆ ರಾಜಾ ರಾಣಿ ಸೀಸನ್ 1 ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಫಿನಾಲೆ ಹಂತದವರೆಗೂ ನಾನ್ ಸ್ಟಾಪ್ ಮನೋರಂಜನೆ ನೀಡಿದ ಈ ಜೋಡಿ ಅಪಾರ ಸಂಖ್ಯೆಯಲ್ಲಿ ಕಿರುತೆರೆ ಅಭಿಮಾನಿಗಳನ್ನು ಗಳಿಸಿದ್ದರು. ಇದೇ ವೇದಿಕೆ ಮೇಲೆ  ಪುಟ್ಟ ಕಂದಮ್ಮನ ಆಗಮನವಾಗಬೇಕು ಅನ್ನೋ ಆಸೆಯನ್ನು ಶ್ರಾವಣಿ ತೋಡಿಕೊಂಡಿದ್ದರು. ಅದರಂತೆ ಮಗಳ ಜೊತೆ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. 

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸೀಸನ್ 2 ಅದ್ಧೂರಿಯಾಗಿ ಮೂಡಿ ಬರುತ್ತಿದೆ. ಈ ಕಾರ್ಯಕ್ರಮದಲ್ಲಿ ಸಮೀರ್ ಆಚಾರ್ಯ ಮತ್ತು ಶ್ರಾವಣಿ ತಮ್ಮ ಮಗುವಿನ್ನು ಜನರಿಗೆ ಪರಿಚಯಿಸಿ ಕೊಡುತ್ತಾರೆ ಹಾಗೂ ನಾಮಕರಣ ಮಾಡುತ್ತಾರೆ. ನಟ ಸೃಜನ್ ಲೋಕೇಶ್, ತಾರಾ ಅನುರಾಧ ಹಾಗೂ ಅನುಪ್ರಭಾಕರ್ ಮಗುವಿಗೆ ನಾಮಕರಣ ಮಾಡುತ್ತಾರೆ. 'ನನಗೆ ಜೀವ ಇರುವ ಮಗು ಬೇಕು' ಅಂತ ಶ್ರಾವಣಿ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಮಗುವನ್ನು ಸಂಭಾಳಿಸುವ ಟಾಸ್ಕ್‌ ವೇಳೆ ಹೇಳಿದ್ದರು. ಆಗ ಕಾರ್ಯಕ್ರಮ ನೋಡುತ್ತಿದ್ದ ಪ್ರತಿಯೊಬ್ಬರು ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದರು. 

ಸಮೀರ್ ಆಚಾರ್ಯ ಪತ್ನಿ ಹಾರೈಕೆ ಮಾಡಿರುವುದರ ಬಗ್ಗೆ ಮಾತನಾಡಿದ್ದಾರೆ. '9 ತಿಂಗಳು ನಾನು ಶ್ರಾವಣಿಯನ್ನು ಅಮ್ಮನ ಮನೆಗೆ ಕಳುಹಿಸಿರಲಿಲ್ಲ ನಮ್ಮ ಮನೆಯಲ್ಲಿ ಇಟ್ಟುಕೊಂಡು ನೋಡಿಕೊಂಡಿದ್ದೀವಿ. ನಮ್ಮ ಭಾವನೆಗಳನ್ನು ಇಲ್ಲಿ ಹಂಚಿಕೊಂಡಿದ್ದೀವಿ. ತೀರ್ಪುಗಾರರು ಹಾಗೂ ಜನರು ಆಶೀರ್ವಾದ ಮಾಡಿದಕ್ಕೆ ಈಕೆ ಬಂದಳು' ಎಂದು ಸಮೀರ್ ಆಚಾರ್ಯ ವೇದಿಕೆ ಮೇಲೆ ಮಾತನಾಡುವಾಗ ಭಾವುಕರಾಗುತ್ತಾರೆ. ಬಿಡುಗಡೆ ಮಾಡಿರುವ ವಿಡಿಯೋದ ಕೊನೆಯಲ್ಲಿ ಮಗುವಿಗೆ ನಾಮಕರಣ ಮಾಡಿರುವುದನ್ನು ನೋಡಬಹುದು. ಸೃಜನ್ ಲೋಕೇಶ್ ಮಗುವಿನ ಕಿವಿಯಲ್ಲಿ ಸರ್ವಾರ್ಥ ಸರ್ವಾರ್ಥ ಸರ್ವಾರ್ಥ ಎಂದು ಮೂರು ಸಲ ಕರೆಯುತ್ತಾರೆ. 'ಮಗು ತುಂಬಾ ಮುದ್ದಾಗಿದೆ' ಎಂದು ನಿರಂಜನ್ ದೇಶಪಾಂಡೆ ಹೇಳುತ್ತಾರೆ.  

Sameer Acharya Shravani daughter naming ceremony in reality show vcs

ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಅಬಾರ್ಷನ್ ಆದ ವಿಚಾರವನ್ನು ಹಂಚಿಕೊಂಡಿದ್ದರು. ಆರೋಗ್ಯ ಸಮಸ್ಯೆಯಿಂದ ಅಬಾರ್ಷನ್ ಅಗತ್ತು ಆಗ ಮನೆಯಲ್ಲಿ ಮೂರು ತಿಂಗಳು ನಾನು ವಿಶ್ರಾಂತಿಯಲ್ಲಿದ್ದೆ. ಈಗ ನನಗೆ ಜೀವ ಇರುವ ಮಗು ಬೇಕು ಅನಿಸುತ್ತಿದೆ. ದೇವರ ಆಶೀರ್ವಾದ' ಎಂದಿದ್ದರು. 

ಕಳೆದ ವರ್ಷ ಸಮೀರ್ ಆಚಾರ್ಯ ಮತ್ತು ಶ್ರಾವಣಿ ದಂಪತಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಬಹಿರಂಗ ಪಡಿಸಿದ್ದರು.  'ಜೀವನದ ಹೊಸ ಅಧ್ಯಾಯ ಆರಂಭವಾಗಿದೆ' ಎಂದು ಶ್ರಾವಣಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕುವ ಮೂಲಕ ಗರ್ಭಿಣಿ ಆಗಿರುವ ಖುಷಿ ಹಂಚಿಕೊಂಡಿದ್ದರು. ಇದೀಗ ಮನೆಗೆ ಮಹಾಲಕ್ಷ್ಮಿ ಬಂದ ಸಂತಸವನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಶ್ರಾವಣಿ ಅವರ ಸೀಮಂತ ಸಂಭ್ರಮ ಜೋರಾಗಿ ನಡೆದಿತ್ತು. ಸಂಪ್ರದಾಯದ ಪ್ರಕಾರ ಶ್ರಾವಣಿ ಅವರಿಗೆ ಸೀಮಂತ ಮಾಡಲಾಗಿತ್ತು. ಜೋಕಾಲಿಯಲ್ಲಿ ದಂಪತಿಗಳಿಬ್ಬರೂ ಕುಳಿತುಕೊಂಡು ಹಿರಿಯರು ಹಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. 

ಸರ್ವಾರ್ಥ ಹೆಸರಿನ ಅರ್ಥ:

ಕೆಲವು ಪದಗಳಲ್ಲಿ ಸರ್ವಾರ್ಥ ಹೆಸರಿನ ಅರ್ಥವನ್ನು ವಿವರಿಸಲು ಆಗುವುದಿಲ್ಲ. ಸರ್ವಾರ್ಥ ಎನ್ನುವುದು ವಸ್ತು ಯಶಸ್ಸಿನ ವಿಷಯದಲ್ಲಿ ವಿಪರೀತತೆಯನ್ನು ಪ್ರದರ್ಶಿಸುವ ಪ್ರವೃತ್ತಿಯನ್ನು ಪ್ರತಿನಿಧಿಸುವ ಹೆಸರು. ಸಮತೋಲನ ಮತ್ತು ಶಕ್ತಿಯು ಇವರನ್ನು ವಿವರಿಸುವ ಎರಡು ಪದಗಳು.
 
ನನ್ನಮ್ಮ ಸೂಪರ್ ಸ್ಟಾರ್ ಹಾಗೂ ರಾಜಾ ರಾಣಿ ರಿಯಾಲಿಟಿ ಶೋ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಶೋಗಳು. ರಾಜಾ ರಾಣಿ ಶೋನಲ್ಲಿ ನವ ಜೋಡಿ ಕಂಡರೆ ಮುಂದಿನ ವರ್ಷ ನೀವು ನನ್ನಮ್ಮ ಸೂಪರ್ ಸ್ಟಾರ್‌ಗೆ ಬನ್ನಿ ಎಂದು ಕಾಲೆಳೆಯುತ್ತಾರೆ. 

 

Follow Us:
Download App:
  • android
  • ios