Asianet Suvarna News Asianet Suvarna News

ಕಾಲೇಜು ಹುಡ್ಗೀರೊಂದಿಗೆ ಡ್ಯಾನ್ಸ್ ಮಾಡಿದ ಡ್ರೋನ್ ಪ್ರತಾಪ್ ; ತೀರಾ ಕೆಟ್ಟದಾಗಿ ಕಾಮೆಂಟ್ ಮಾಡಿದ ನೆಟ್ಟಿಗರು!

ಬಿಗ್‌ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್‌ ಕಾಲೇಜು ಹುಡುಗಿಯರೊಂದಿಗೆ ಸಖತ್ ಹೆಜ್ಜೆ ಹಾಕಿದ್ದನ್ನು ನೋಡಿದ ನೆಟ್ಟಿಗರು ಸೈಂಟಿಸ್ಟ್ ಆಗಿದ್ದ ಅಣ್ಣ ಈಗ ಡ್ಯಾನ್ಸರ್ ಆಗ್ಬಿಟ್ಟ ಎಂದು ಕಾಮೆಂಟ್ ಮಾಡಿದ್ದಾರೆ.

Bigg Boss runner up Drone prathap dance steps with College girls but netizens troll his works sat
Author
First Published Aug 5, 2024, 8:29 PM IST | Last Updated Aug 7, 2024, 5:19 PM IST

ಬೆಂಗಳೂರು (ಆ.05): ಬಿಗ್‌ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ( Drone Prathap ) ತಾನು ಡ್ರೋನ್ ಸಂಶೋಧಕ ಎಂದು ಹೇಳಿ ರಾಜ್ಯದ ಜನರನ್ನು ನಂಬಿಸಿ ಮೋಸ ಮಾಡಿದ್ದಾನೆ ಎಂಬ ಆರೋಪ ಎದುರಿಸಿದ್ದನು. ಆದರೆ, ಬಿಗ್‌ಬಾಸ್ (Bigg Bos Kannada ) ಮನೆಗೆ ಬಂದ ನಂತರ ತನ್ನ ಪ್ರಾಮಾಣಿಕತೆಯನ್ನು ತೋರಿಸಿ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದನು. ಇನ್ನು ಬಿಗ್‌ಬಾಸ್ ರನ್ನರ್ ಆಗಿಯೂ ಜಯಗಳಿಸಿದ್ದಾನೆ.

ಡ್ರೋನ್ ಪ್ರತಾಪ್ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ನಂತರ ಒಬ್ಬ ಸೆಲೆಬ್ರಿಟಿ ಆಗಿದ್ದಾನೆ. ಈ ಹಿಂದೆ ತಾನು ಮಾಡಿದ ಎಲ್ಲದಕ್ಕೂ ರಾಜ್ಯದ ಜನರ ಮುಂದೆ ಕ್ಷಮೆಯನ್ನೂ ಕೇಳಿದ್ದಾನೆ. ಇನ್ನು ಬಿಗ್‌ಬಾಸ್ ಸಹ ಸ್ಪರ್ಧಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಎಲ್ಲರೂ ಆಗಿಂದಾಗ್ಗೆ ಭೇಟಿ ಮಾಡುತ್ತಲೇ ಇರುತ್ತಾರೆ. ಜೊತೆಗೆ, ವಿವಿಧ ಕಾರ್ಯಕ್ರಮಗಳಲ್ಲಿ ವೈಯಕ್ತಿಕವಾಗಿ ಭಾಗವಹಿಸುತ್ತಾ ತಮ್ಮ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈಗ ಡ್ರೋನ್ ಪ್ರತಾಪ್ ಕೂಡ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ನಂತರ ಕಾಲೇಜುಗಳು, ಅಂಗಡಿ ಮುಂಗಟ್ಟುಗಳ ಉದ್ಘಾಟನೆ, ಸಭೆ ಸಮಾರಂಭಗಳಿಗೆ ಡ್ರೋನ್ ಪ್ರತಾಪ್‌ನನ್ನು ಅತಿಥಿಯಾಗಿ ಆಹ್ವಾನಿಸಲಾಗುತ್ತದೆ. ಹೀಗೆ ಅತಿಥಿಯಾಗಿ ಹೋದ ಡ್ರೋನ್ ಪ್ರತಾಪ್ ತನ್ನ ಟ್ಯಾಲೆಂಟ್ ತೋರಿಸುತ್ತಾನೆ.

ಕೀರ್ತಿಯ ಗನ್ ಪಾಯಿಂಟ್‌ಗೆ ಬೆದರಿ ಸತ್ಯ ಕಕ್ಕಿದ ಕಾವೇರಿ; ವೈಷ್ಣವ್ ಜಾತಕ ದೋಷದ ಕಥೆಯೂ ರಿವೀಲ್!

ಇತ್ತೀಚೆಗೆ ಖಾಸಗಿ ಕಾಲೇಜೊಂದರ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ಡ್ರೋನ್ ಪ್ರತಾಪ್ ಅಲ್ಲಿ ಕಾಲೇಜು ಹುಡುಗಿಯರ ಗುಂಪೊಂದರ ಜೊತೆಗ ಡ್ರೋನ್ ಪ್ರತಾಪ್ ಸಖತ್ ಹೆಜ್ಜೆ ಹಾಕಿದ್ದಾನೆ. ಸುಮಾರು 10-12 ಕಾಲೇಜು ಯುವತಿಯರೊಂದಿಗೆ (College Girls) ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾನೆ. ಈ ವೇಳೆ ಆತನ ಡ್ಯಾನ್ಸ್ ನೋಡಿದ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹಾಕಿದ್ದಾರೆ. ಇನ್ನು ಕೆಲವರು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಅದರಲ್ಲಿ ಅಣ್ಣಾ ಬರೀ ಡ್ಯಾನ್ಸ್ ಮಾಡ್ತೀಯಲ್ಲಾ... ಕಬಡ್ಡಿ ಆಡು ಎಂದು ಕೂಗಿದ್ದಾರೆ. ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಕಾಲೇಜು ಹುಡುಗಿಯರೊಂದಿಗೆ ಹೆಜ್ಜೆ ಹಾಕಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಡ್ರೋನ್ ಪ್ರತಾಪ್ ಕಾಲೇಜು ಯುವತಿಯರೊಂದಿಗೆ ಮಸ್ತ್ ಹೆಜ್ಜೆ ಹಾಕಿ ಮಜಾ ಮಾಡಿದ್ದನ್ನು ನೋಡಿದ ನೆಟ್ಟಿಗರು ಇವನು ಸೈಂಟಿಸ್ಟ್ ಅಲ್ವಾ..? ಅದ್ಯಾವಾಗ ಡ್ಯಾನ್ಸರ್ ಆಗಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಅಣ್ಣನ ಡ್ಯಾನ್ಸ್ ಸೂಪರ್ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇಂಥವರಿಗೂ ಸಪೋರ್ಟ್ ಮಾಡಿ ಮಾತಾಡೋ ಜನ ಇರೋವರಿಗೂ, ಇಂಥವರು ಇನ್ನ ಜಾಸ್ತಿ ಆಗ್ತಾರೆ. ಕಡಿಮೆ ಅಂತೂ ಆಗಲ್ಲ ಎಲ್ಲರನ್ನ ಫೂಲ್ ಮಾಡಿ ಇವ್ನ ಇಷ್ಟು ಮೇರಿತಾನೆ ಅಂದ್ರೆ ಇವನಿಂದ ಜನ ಇನ್ಸ್ಪೈರ್ ಆಗ್ತಾರೆ. ಫ್ರಾಡ್‌ಗಳು ಜಾಸ್ತಿ ಆಗ್ತಾರೆ ವಿನಃ ಕಡಿಮೆ ಆಗಲ್ಲ ಎಂದು ಕಾವ್ಯಾ ಪ್ರಸನ್ನ ಎನ್ನುವ ಮಹಿಳೆ ಕಾಮೆಂಟ್ ಮಾಡಿದ್ದಾರೆ. 

ಡ್ರೋನ್​ ಪ್ರತಾಪ್​ನಿಂದ ನಾನು ಕೋಟ್ಯಧೀಶ್ವರೆ ಆದೆ: ಭಾವುಕರಾಗಿ ಕಣ್ಣೀರಾದ ಅಜ್ಜಿಯ ವಿಡಿಯೋ ವೈರಲ್​

ಅದರಲ್ಲೊಬ್ಬ ವ್ಯಕ್ತಿ ಡ್ರೋನ್ ಪ್ರತಾಪ್ ಬದಲಾಗಿದ್ದಾನೆ. ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ನಂತರ ಇತ್ತೀಚೆಗೆ ಕೆಲವು ಒಳ್ಳೆಯ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾನೆ. ಆದರೆ, ಡ್ರೋನ್ ಪ್ರತಾಪ್‌ಗೆ ಒಳ್ಳೆಯ ಕಾಮೆಂಟ್‌ಗಳಿಗಿಂತ ಕೆಟ್ಟದಾಗಿ ಬರೆದಿರುವ ಕಾಮೆಂಟ್‌ಗಳೇ ಹೆಚ್ಚಾಗಿವೆ. ಇನ್ನು ಕೆಲವರು ಡ್ರೋನ್ ಪ್ರತಾಪ್ ಈಗಲಾದರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಅವನನ್ನು ಎಷ್ಟು ಅಂತಾ ಬೈತೀರ, ಹೋಗ್ಲಿ ಬಿಡ್ರೋ ಪಾಪ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios