ಕೀರ್ತಿಯ ಗನ್ ಪಾಯಿಂಟ್‌ಗೆ ಬೆದರಿ ಸತ್ಯ ಕಕ್ಕಿದ ಕಾವೇರಿ; ವೈಷ್ಣವ್ ಜಾತಕ ದೋಷದ ಕಥೆಯೂ ರಿವೀಲ್!
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್‌ನ ತಾಯಿ ಕಾವೇರಿ ತಲೆಗೆ ಗನ್‌ಪಾಯಿಂಟ್ ಇಟ್ಟ ಕೀರ್ತಿಯ ಮುಂದೆ ಕಾವೇರಿ ಎಲ್ಲ ಸತ್ಯವನ್ನು ಕಕ್ಕಿದ್ದಾಳೆ.
ಬೆಂಗಳೂರು (ಆ.05): ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಪ್ರೀತಿ ಮಾಡುತ್ತಿದ್ದ ಕೀರ್ತಿಯನ್ನು ಸೊಸೆ ಮಾಡಿಕೊಳ್ಳಲು ಇಷ್ಟವಿಲ್ಲದ ಕಾವೇರಿ ತನ್ನ ಮಗನಿಗೆ ಜಾತಕ ದೋಷದ ನೆಪವೊಡ್ಡಿ ಲಕ್ಷ್ಮಿಯನ್ನು ಮದುವೆ ಮಾಡಿದ್ದಾಳೆ. ಆದರೆ, ಹಲವು ವರ್ಷಗಳಿಂದ ಅಮಾಯಕಳಾಗಿ ಪ್ರೀತಿ ಮಾಡಿದ ಕೀರ್ತಿ ಈಗ ಕಾವೇರಿ ಹಣೆಗೆ ಗನ್ ಪಾಯಿಂಟ್ ಇಟ್ಟು ಶೂಟ್ ಮಾಡುವುದಾಗಿ ಹೇಳಿದ ಬೆನ್ನಲ್ಲಿಯೇ ತಾನು ಮುಚ್ಚಿಟ್ಟಿದ್ದ ಸತ್ಯ ಕಥೆಯನ್ನೆಲ್ಲಾ ಬಾಯಿ ಬಿಟ್ಟಿದ್ದಾಳೆ.
ಹೌದು,ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುಬ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿನ ಕೀರ್ತಿ ಪಾತ್ರ ಎಲ್ಲರ ಮನ ಗೆಲ್ಲುತ್ತಿದ್ದು, ಜನರು ಕೀರ್ತಿಯೇ ಧಾರಾವಾಹಿಯ ನಿಜವಾದ ಹೀರೋಯಿನ್ ಎಂದು ಹೇಳುತ್ತಿದ್ದಾರೆ. ಧಾರಾವಾಹಿಯಲ್ಲಿ ಲವರ್ ಗರ್ಲ್ ಆಗಿ ಕಾಣಿಸಿಕೊಂಡ ಕೀರ್ತಿ ನಂತರ ವೈಷ್ಣವ್ ಲಕ್ಷ್ಮಿಯನ್ನು ಮದುವೆಯಾದ ಬೆನ್ನಲ್ಲಿಯೇ ಕೀರ್ತಿಗೆ ನೆಗಟಿವ್ ರೋಲ್ ಸಿಗುತ್ತದೆ. ನೆಗೆಟಿವ್ ರೋಲ್‌ನಲ್ಲಿ ಉತ್ತಮವಾಗಿ ನಟಿಸಿದ ಸುಂದರಿ ಕೀರ್ತೊಯೇ ನೈಜ ಹೀರೋಯಿನ್ ಎನ್ನೋ ಮಟ್ಟಕ್ಕೆ ವೀಕ್ಷಕರು ತೀರ್ಮಾನಿಸಿದ್ದಾರೆ. ಆದರೆ, ತಾನು ಪ್ರೀತಿ ಮಾಡಿದ ವೈಷ್ಣವ್‌ನನ್ನು ಮದುವೆ ಮಾಡಿಕೊಳ್ಳುತ್ತಿದ್ದ ಕೀರ್ತಿಯನ್ನು ದೂರ ಮಾಡಲು ವೈಷ್ಣವ್‌ನ ತಾಯಿ ಕಾವೇರಿ ಮೂವರಿಗೆ ಮಾಡಿದ ಮೋಸವನ್ನು ಈಗ ಕೀರ್ತಿ ಎಳೆ ಎಳೆಯಾಗಿ ಬಿಚ್ಚಿಸಿದ್ದಾಳೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯು ಭಾಗ್ಯಲಕ್ಷ್ಮಿ ಧಾರಾವಾಹಿಯ ಒಂದು ಭಾಗವಾಗಿದೆ. ಅದರಲ್ಲಿ ವೈಷ್ಣವ್, ಕೀರ್ತಿ ಹಾಗೂ ಬಡ ಹುಡುಗಿ ಲಕ್ಷ್ಮೀ ಮೂವರ ನಡುವಿನ ತ್ರಿಕೋನ ಪ್ರೇಮಕಥೆಗೆ ವೈಷ್ಣವ್‌ನ ತಾಯಿ ಕಾವೇರಿ ಸೂತ್ರಧಾರಿ ಹಾಗೂ ವಿಲನ್ ಆಗಿದ್ದಾಳೆ. ವೈಷ್ಣವ್ ಹಾಗೂ ಕೀರ್ತಿ ಪರಸ್ಪರ ಪ್ರೀತಿ ಮಾಡುತ್ತಿರುವ ವಿಚಾರ ತಿಳಿದಿದ್ದರೂ ಆಕೆಯನ್ನು ಸೊಸೆ ಮಾಡಿಕೊಳ್ಳಲು ಒಪ್ಪದ ಕಾವೇರಿ ಇಬ್ಬರ ಮದುವೆಗೂ ಮುನ್ನ ತನ್ನ ಮಗ ವೈಷ್ಣವ್‌ಗೆ ಜಾತಕ ದೋಷವಿದೆ. ಮೊದಲನೇ ಹೆಂಡತಿ ಡಿವೋರ್ಸ್ ಆಗಿ 2ನೇ ಮದುವೆಯಾದ ಹೆಂಡತಿಯೊಂದಿಗೆ ಸುಖವಾಗು ಬಾಳುತ್ತಾನೆ ಎಂದು ಸುಳ್ಳು ಜಾತಕ ಹೇಳಿಸುತ್ತಾಳೆ. ಇದನ್ನು ನಂಬಿದ ಕೀರ್ತಿ ವೈಷ್ಣವ್‌ನನ್ನು ಮದುವೆ ಮಾಡಿಕೊಳ್ಳಲೊಪ್ಪದೇ ದೂರ ಉಳಿಯುತ್ತಾಳೆ. ಆಗ ಬಡ ಕುಟುಂಬದ ಹುಡುಗಿ ಲಕ್ಷ್ಮಿಯನ್ನು ವೈಷ್ಣವ್ ಮದುವೆ ಮಾಡಿಕೊಳ್ಳುತ್ತಾನೆ. ಈಗ ಸಂಪೂರ್ಣವಾಗಿ ಕೀರ್ತಿಯ ಮೇಲಿನ ಪ್ರೀತಿಯಿಂದ ಹೊರಬಂದು ಲಕ್ಷ್ಮಿಯನ್ನು ಪ್ರೀತಿಸಲು ಆರಂಭಿಸಿದ್ದಾನೆ.
ನನ್ನ ಬ್ಯಾಚ್‌ನಲ್ಲಿ ಮೊದಲು ನಾನೇ ಮದುವೆಯಾಗಿದ್ದು, ನನ್ನ ಬಿಟ್ಟು ಬೇರೆ ಎಲ್ಲರಿಗೂ ಮಕ್ಕಳಿದ್ದಾರೆ; ಚೈತ್ರಾ ವಾಸುದೇವನ್
ವೈಷ್ಣವ್ ಹಾಗೂ ಲಕ್ಷ್ಮಿಯ ಪ್ರೀತಿ ನೋಡಿಕೊಂಡು ಸಹಿಸಲಾದ ಕೀರ್ತಿ ಅವರಿಬ್ಬರನ್ನು ದೂರ ಮಾಡಲು ಎಲ್ಲ ಪ್ರಯತ್ನ ಮಾಡುತ್ತಾಳೆ. ಆದರೆ, ಈಗ ವೈಷ್ಣವ್ ಮದುವೆಯಾದ ಲಕ್ಷ್ಮಿಗೆ ಮೋಸ ಮಾಡದೇ ಆಕೆಯನ್ನು ಪ್ರೀತಿಸಲು ಆರಂಭಿಸಿದಾಗಿನಿಂದ ಕೀರ್ತಿ ಅವರಿಬ್ಬರನ್ನು ದೂರ ಮಾಡಲು ಪ್ರಯತ್ನಿಸಿದ ಎಲ್ಲ ಪ್ರಯತ್ನಗಳೂ ವಿಫಲವಾಗುತ್ತವೆ. ಇನ್ನು ವೈಷ್ಣವ್‌ನ ತಾಯಿ ಕಾವೇರಿ ಕೂಡ ಕೀರ್ತಿಯನ್ನು ಸೊಸೆ, ಸೊಸೆ ಎಂದು ಹೇಳಿಕೊಂಡೇ ಬೆನ್ನಿಗೆ ಚೂರಿ ಹಾಕಿರುತ್ತಾಳೆ. ಈಗ ಕೀರ್ತಿಗೆ ಕಾವೇರಿ ಮಾಡಿದ ಎಲ್ಲ ಮೋಸದ ಬಗ್ಗೆಯೂ ತಿಳಿದುಹೋಗಿದೆ.
ಈ ಹಿನ್ನೆಲೆಯಲ್ಲಿ ಕಾವೇರಿಯನ್ನು ರೌಡಿಗಳಿಂದ ಕಿಡ್ನಾಪ್ ಮಾಡಿಸಿದ ಕೀರ್ತಿ ತಾನು ನಿನ್ನ ಮಗನೊಂದಿಗೆ ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ, ಕಾವೇರಿ ಕೈಯಿಂದಲೇ ಮದುವೆ ಶಾಸ್ತ್ರವನ್ನು ಮಾಡಿಸುತ್ತಾಳೆ. ಬೆಟ್ಟದ ಕೆಳಗಿನಿಂದ ಡೊಳ್ಳು ಬಾರಿಸುತ್ತಾ ಬೆಟ್ಟ ಹತ್ತಿಸುತ್ತಾಳೆ. ಆದರೆ, ಕಾವೇರಿ ಮದುವೆ ಮಂಟಪ ನೋಡಿ ಒಂದು ಕ್ಷಣ ಬೆಚ್ಚಿ ಬೀಳುತ್ತಾಳೆ. ಇದಾದ ನಂತರ, ಸ್ಥಳಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡು ಬಂದ ಕೀರ್ತಿ ಕಾವೇರಿ ಮಾಡಿದ ಮೋಸವನ್ನು ಪ್ರಶ್ನೆ ಮಾಡುತ್ತಾಳೆ. ಆಗ ಕಾವೇರಿ ತಾನು ಮಾಡಿದ ಎಲ್ಲ ಮೋಸವನ್ನು ಕೀರ್ತಿಯ ಮುಂದೆ ಬಾಯಿ ಬಿಡುತ್ತಾಳೆ.
ನೀನು ವೈಷ್ಣವ್‌ನನ್ನು ಮದುವೆಯಾಗಿ ನನ್ನ ಮನೆ ಸೊಸೆಯಾಗಿ ಬರುವುದು ಇಷ್ಟವಿರಲಿಲ್ಲ. ನನಗೆ ನೀನೇ ಇಷ್ಟವಿರದೇ, ನನ್ನ ಮಗನೊಂದಿಗಿನ ಮದುವೆಯನ್ನು ಮುರಿದು ಹಾಕಿದೆ. ನೀನು ನನ್ನ ಸೊಸೆ ಆಗಬಾರದು ಎಂತಲೇ ನಾನು ಸುಳ್ಳು ಹೇಳಿದ್ದೇನೆ. ನಾನು ನಿನ್ನನ್ನು ಸೊಸೆ ಎಂದು ಕರೆದಿದ್ದರೂ ಅದೆಲ್ಲವೂ ಸುಳ್ಳು.. ನಾಟಕ. ನನ್ನ ಮಗನ ಮುಂದೆ ನಾನು ಅವನ ಪ್ರೀತಿಯನ್ನು ಬೇಡವೆಂದು ಹೇಳಿ ಕೆಟ್ಟವಳಾಗುವುದು ಬೇಡವೆಂದು ನಿನ್ನ ಮುಂದೆ ಒಪ್ಪಿಕೊಂಡೆ. ಆದರೆ, ನೀನು ನನ್ನ ಸೊಸೆ ಆಗುವುದು ಬೇಡವಾಗಿತ್ತು. ಆದರೆ, ಈ ವಿಚಾರ ಬೇರೆ ಯಾರಿಗೂ ಗೊತ್ತಾಗಬಾರದು ಎಂದು ಆಗಿಂದಾಗ ನಾಟಕ ಮಾಡುತ್ತಲೇ ಬಂದೆ ಎಂದು ಕಾವೇರಿ ಒಪ್ಪಿಕೊಂಡಿದ್ದಾಳೆ.
ವೈಷ್ಣವ್‌ಗೆ ಅವನ ಪ್ರೀತಿ ಅರ್ಥ ಮಾಡಿಸಿದ ಕುಸುಮಾ, ಕಾವೇರಿ Moye Moye ಅಂದ್ರು ಜನ
ನನ್ನ ಮಗನ ಜಾತಕದಲ್ಲಿ ದೋಷ ಇದೆ ಎಂದು ಹೇಳಿದ್ದು ಸುಳ್ಳು. ಲಕ್ಷ್ಮೀ ಜೊತೆಗೆ ವೈಷ್ಣವ್ ಮದುವೆ ಮಾಡಿಸಿದರೆ ದೋಷ ಪರಿಹಾರ ಆಗುತ್ತದೆ ಎಂದು ಹೇಳಿದ್ದೂ ಸುಳ್ಳು. ನಿನ್ನ ನನ್ನ ಮಗನಿಂದ ದೂರ ಮಾಡಲು ಮಾಡಿದ ಪ್ರಯತ್ನಗಳು ಇವೆಲ್ಲಾ ಎಂದು ಕೀರ್ತಿಯ ಮುಂದೆ ನಿಜವನ್ನು ಬಾಯಿ ಬಿಡುತ್ತಾಳೆ. ಆದರೆ, ಕೀರ್ತಿಯ ಮುಂದಿನ ನಿರ್ಧಾರ ಏನಾಗುತ್ತದೆ ಎಂಬುದನ್ನು ವೀಕ್ಷಕರು ಕಾದು ನೋಡಬೇಕಿದೆ.