ಡ್ರೋನ್ ಪ್ರತಾಪ್ನಿಂದ ನಾನು ಕೋಟ್ಯಧೀಶ್ವರೆ ಆದೆ: ಭಾವುಕರಾಗಿ ಕಣ್ಣೀರಾದ ಅಜ್ಜಿಯ ವಿಡಿಯೋ ವೈರಲ್
ಬಿಗ್ಬಾಸ್ನಲ್ಲಿ ರನ್ನರ್ ಅಪ್ ಆಗಿ ಹೊರಬಂದ ಡ್ರೋನ್ ಪ್ರತಾಪ್ ತಾವು ಹೇಳಿದ ಕಾರ್ಯವೊಂದನ್ನು ನೆರವೇರಿಸಿದ್ದಾರೆ. ಈ ಮೂಲಕ ಅಭಿಮಾನಿಗಳ ಪಾಲಿಗೆ ದೇವರು ಎನಿಸಿದ್ದಾರೆ. ಅಜ್ಜಿಯೊಬ್ಬರು ಭಾವುಕರಾಗಿದ್ದಾರೆ. ಏನಿದು ವಿಷಯ?
ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರನ್ನು ಮಾತಿನ ಮೋಡಿಯಲ್ಲಿ ಸಿಲುಕಿಸಿ ಮೋಸ, ವಂಚನೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದ ಡ್ರೋನ್ ಪ್ರತಾಪ್ ಬಿಗ್ಬಾಸ್ನಲ್ಲಿ ರನ್ನರ್ ಅಪ್ ಆಗುವ ಮೂಲಕ ಅಸಂಖ್ಯೆ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇವರ ಫ್ಯಾನ್ಸ್ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಬಿಗ್ಬಾಸ್ನಲ್ಲಿ ರನ್ನರ್ ಅಪ್ ಆದ ಬಳಿಕ ಡ್ರೋನ್ ಹೀರೋ ಆಗಿಬಿಟ್ಟಿದ್ದಾರೆ. ಯಾವುದೇ ಸ್ಟಾರ್ ನಟರಿಗೂ ಕಡಿಮೆ ಇಲ್ಲದಂತೆ ಅದ್ಧೂರಿ ಸ್ವಾಗತ ಇವರಿಗೆ ಸಿಗುತ್ತಿದೆ. ಕೊನೆಯವರೆಗೂ ಬಿಗ್ಬಾಸ್ನಲ್ಲಿ ಇರುತ್ತೇನೆ. ಫಿನಾಲೆಯಲ್ಲಿ ಸುದೀಪ್ ಅವರು ಎತ್ತಲು ಹಿಡಿಯುವ ಕೈಯಲ್ಲಿ ನನ್ನದೂ ಒಂದಾಗಿರುತ್ತದೆ ಎಂದು ಅಂದುಕೊಂಡಿರಲೇ ಇಲ್ಲ. ಮೊದಲ ವಾರದಲ್ಲಿಯೇ ಅಲ್ಲಿ ನಡೆದ ಕೆಲವು ಘಟನೆಗಳನ್ನು ನೋಡಿ ಶೀಘ್ರವೇ ಬಿಗ್ಬಾಸ್ನಿಂದ ಹೊರಕ್ಕೆ ಹೋಗುತ್ತೇನೆ ಅಂದುಕೊಂಡಿದ್ದೆ. ಆದರೆ ಎಲ್ಲರ ಆಶೀರ್ವಾದದಿಂದ ರನ್ನರ್ ಅಪ್ ಆದೆ ಎಂದು ಹೇಳಿಕೊಂಡಿರುವ ಡ್ರೋನ್ ಪ್ರತಾಪ್ ಅವರಿಗೆ ಬಿಗ್ಬಾಸ್ ಹೊಸದೊಂದೇ ಜೀವನ ಕೊಟ್ಟಿದೆ.
ಬಿಗ್ಬಾಸ್ನಿಂದ ಹೊರಬಂದ ಮೇಲೆ ಈ ದುಡ್ಡನ್ನು ಬಡವರಿಗೆ ಹಂಚುತ್ತೇನೆ ಎಂದು ಪ್ರತಾಪ್ ಹೇಳಿದ್ರು. ಇದೇ ವೇಳೆ ನೂರಾರು ಮಂದಿಗೆ ಕಣ್ಣಿನ ಆಪರೇಷನ್ ಮಾಡಿಸುವುದಾಗಿ ಹೇಳಿದ್ದ ಪ್ರತಾಪ್, ಸೋಷಿಯಲ್ ಮೀಡಿಯಾದಲ್ಲಿ ಕಣ್ಣಿನ ಆಪರೇಷನ್ ಅಗತ್ಯ ಇರುವವರು ಮೆಸೇಜ್ ಮಾಡಿ ಎಂದಿದ್ದರು. ಇದಕ್ಕೆ ನೂರಾರು ಮಂದಿ ಆಸೆಯಿಂದ ಮೆಸೇಜ್ ಮಾಡಿದ್ದರು. ಇದೀಗ ವೃದ್ಧೆಯೊಬ್ಬರ ಕಣ್ಣಿನ ಆಪರೇಷನ್ ಮಾಡಿಸಿದ್ದಾರೆ. ನೂರಾರು ಮಂದಿಗೆ ಅಲ್ಲದಿದ್ದರೂ ಒಬ್ಬರಿಗೆ ಮಾಡಿಸುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ. ಈ ಸಲದ ಹುಟ್ಟುಹಬ್ಬವನ್ನು ಡಾ. ರಾಜ್ ಅವರ ಆಶಯದಂತೆ ಆಚರಿಸಿಕೊಳ್ಳುತ್ತೇನೆ. ಬಡವರ ಕಣ್ಣಿನ ಆಪರೇಷನ್ ಮಾಡಿಸುವುದಾಗಿ ಡ್ರೋನ್ ಹೇಳಿದ್ದರು. ಅದರಂತೆಯೇ ಒಬ್ಬರಿಗೆ ಆಪರೇಷನ್ ಮಾಡಿಸಿದ್ದಾರೆ. ಜೂನ್ 11ರಂದು ನಡೆದ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಆಪರೇಷನ್ ನಡೆದಿದೆ.
ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ನಿಗೂಢ ಸಾವಿಗೆ ಮರುಜೀವ! ರಾಜಕೀಯದಲ್ಲಿ ಅಲ್ಲೋಲ- ಕಲ್ಲೋಲ
ಈ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಕಣ್ಣಿನ ಆರಪರೇಷನ್ ಆಗಿರುವ ಅಜ್ಜಿ ಜೊತೆ ಕಾಣಿಸಿಕೊಂಡಿರುವ ಪ್ರತಾಪ್, ಹುಟ್ಟು ಹಬ್ಬದ ದಿನ ದುಡ್ಡನ್ನು ಎಲ್ಲೆಲ್ಲೋ ಖರ್ಚು ಮಾಡೋದಕ್ಕಿಂತ, ಕಣ್ಣು ಆಪರೇಷನ್ ಮಾಡಿಸ್ತೀನಿ ಅಂತ ಹೇಳಿದ್ದೆ. ಅದೇ ರೀತಿ ಈಗ ಮೊದಲ ಹೆಜ್ಜೆ ಇಟ್ಟಿದ್ದೇನೆ. ಅಜ್ಜಿಯ ಆಪರೇಷನ್ ಆಗಿದೆ. ಅವರ ಆಸೆಯಂತೆ ಅವರ ಮನೆಗೆ ಬಂದಿದ್ದೇನೆ ಎಂದಿದ್ದಾರೆ. ಈ ವೇಳೆ ಅಜ್ಜಿ ಕೂಡ ಮಾತನಾಡಿದ್ದಾರೆ. ಮೊದಲಿಗೆ ಪ್ರತಾಪ್ಗೆ ಜ್ಯೂಸ್ ಕೊಟ್ಟ ಅಜ್ಜಿ, ತುಂಬಾ ಖುಷಿಯಿಂದ ನಲಿದಾಡಿದ್ದಾರೆ. "ಅಜ್ಜಿ ಈಗ ಕಣ್ಣು ಕಾಣಿಸ್ತಿದೆಯಾ ಎಂದು ಪ್ರತಾಪ್ ಕೇಳಿದಾಗ ಓಹೋ ತುಂಬ ಚೆನ್ನಾಗಿ ಕಾಣಿಸ್ತಿದೆ. ಕ್ಲೀನಾಗಿ ಕಾಣಿಸ್ತಿದೆ. ಇದೇ ನನಗೆ ಸಿಕ್ಕ ದೊಡ್ಡ ಐಶ್ವರ್ಯ. ಇವತ್ತು ನಾನು ಕೋಟ್ಯಾಧಿಪತಿಯಾಗಿದ್ದೇನೆ. ನಾನು ಹೇಳಿದ್ನಲ್ಲ, ನನಗೆ ಒಬ್ಬ ಮೊಮ್ಮಗ ಇದ್ದಾನೆ. ಇದೀಗ ದೇವರು ಇನ್ನೊಬ್ಬ ಮೊಮ್ಮಗನನ್ನು ಕರುಣಿಸಿದ್ದಾನೆ ಎಂದು ಅಜ್ಜಿ ನಲಿದಾಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಡ್ರೋನ್, ನನಗೆ ಸಾಧ್ಯ ಆದ್ರೆ ಒಂದು ಮನೆ ಮಾಡಿಕೊಡಿಸುತ್ತೇನೆ. ಈ ಪರಿಸ್ಥಿತಿಯಲ್ಲಿ, ಇಷ್ಟು ಚಿಕ್ಕ ಮನೆಯಲ್ಲಿ ನೀವಿರುವುದನ್ನು ನೋಡಲು ಆಗುತ್ತಿಲ್ಲ ಎನ್ನುತ್ತಿದ್ದಂತೆಯೇ ವೃದ್ಧೆ, ದೇವರ ಮೇಲಿನ ಹೂವಿನ ಹಾರ ತೆಗೆದು ಪ್ರತಾಪ್ ಕೊರಳಿಗೆ ಹಾಕಿ, ದೇವರು ನಿನ್ನನ್ನು ಚೆನ್ನಾಗಿ ಇಟ್ಟಿರಲಿ ಎಂದು ಆಶೀರ್ವಾದ ಮಾಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್ ಬಂದಿವೆ. ಹಲವರು ನಿಮ್ಮ ಅಭಿಮಾನಿಯಾದ್ವಿ ಎಂದಿದ್ದರೆ, ಮತ್ತೆ ಕೆಲವರು, ನಾವು ನಿಮಗೆ ವೋಟ್ ಹಾಕಿದ್ಕು ಸಾರ್ಥಕ ಅಯ್ತು ಪ್ರತಾಪ್ ಎಂದಿದ್ದಾರೆ. ಈಗಾದ್ರೂ ಕಾಗೆ ಹಾರಿಸದೇ ಹೇಳಿದ ಮಾತನ್ನು ಪಾಲಿಸಿರುವೆ ಎಂದು ಕೆಲವರು ಹೇಳಿದ್ದರೆ, ನೂರಾರು ಮಂದಿಗೆ ಆಸೆ ತೋರಿಸಿದ್ದನ್ನು ನೆನಪಿಟ್ಟುಕೊಂಡು ಅವರ ಕಣ್ಣಿಗೂ ಶಸ್ತ್ರಚಿಕಿತ್ಸೆ ಮಾಡಿರುವ ಜವಾಬ್ದಾರಿ ಮರೀಬೇಡ ಎಂದೂ ಕೆಲವರು ಡ್ರೋನ್ ಪ್ರತಾಪ್ ಕಾಲೆಳೆಯುವುದನ್ನು ಮರೆತಿಲ್ಲ. ಕಾರ್ತಿಕ್ ಮಹೇಶ್ ಟ್ರೋಫಿ ಗೆದ್ದಿರಬಹುದು ಆದರೆ ಡ್ರೋನ್ ಪ್ರತಾಪ್ ಕೋಟಿ ಜನರ ಮನಸನ್ನು ಗೆದ್ದಿದ್ದಾರೆ ಎಂದು ಇನ್ನೊಬ್ಬ ಅಭಿಮಾನಿ ಬರೆದಿದ್ದಾರೆ.
ಫೋಟೋ ತೆಗೆದು ಸಿಕ್ಕಿಬಿದ್ದ ಬಿಗ್ಬಾಸ್ ವಿನ್ನರ್! ಹಾವಿನ ವಿಷ, ರೌಡಿಸಂ ಬಳಿಕ ಇದೇನಿದು ಮತ್ತೆ ಗಲಾಟೆ?