ಬಿಗ್ ಬಾಸ್ ಖ್ಯಾತಿಯ ನಟ ರಾಬಿನ್ ರಾಧಾಕೃಷ್ಣನ್ ಮದುವೆ ಕಾರ್ಯಕ್ರಮದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿರುವ ಅವರ ಫೋಟೋಗಳು ಅಭಿಮಾನಿಗಳಲ್ಲಿ ಆತಂಕ ಮೂಡಿಸಿವೆ.

ಬಿಗ್ ಬಾಸ್ ಖ್ಯಾತಿಯ ನಟ ಇತ್ತೀಚೆಗೆ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿರುವ ಫೋಟೋ ನೊಡುತ್ತಿದ್ದಂತೆ ಅವರ ಅಭಿಮಾನಿಗಳು ಭಾರೀ ಆತಂಕಕ್ಕೆ ಒಳಗಾಗಿದ್ದಾರೆ.

ಬಿಗ್‌ಬಾಸ್ ಮಲೆಯಾಳಂ ಸೀಸನ್-5ರ ಖ್ಯಾತಿಯ ನಟ ರಾಬಿನ್ ರಾಧಾಕೃಷ್ಣನ್ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಆರತಿ ಪೊಡಿ ಮದುವೆ ರಿಸೆಪ್ಷನ್ ಕೆಲ ದಿನಗಳ ಹಿಂದೆ ಮುಗಿದಿತ್ತು. ಮದುವೆಗೆ ಸಂಬಂಧಪಟ್ಟಂತೆ 9 ದಿನಗಳ ಕಾಲ ಸೆಲೆಬ್ರೇಷನ್ಸ್ ಇತ್ತು. ಮದುವೆಯ ವಿಡಿಯೋಗಳು ಹಾಗು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾವೆ. ಆದರೆ, ಸೆಲೆಬ್ರೇಷನ್ ಆದ್ಮೇಲೆ, ಇನ್ನೊಂದು ವಿಡಿಯೋ ನೋಡಿ ರಾಬಿನ್ ಫ್ಯಾನ್ಸ್ ಶಾಕ್ ಆಗಿದ್ದಾರೆ. ರಾಬಿನ್ ಆಸ್ಪತ್ರೆಯಲ್ಲಿ ಮಲಗಿರೋ ದೃಶ್ಯಗಳು ವಿಡಿಯೋದಲ್ಲಿವೆ. ರಾಬಿನ್ ಫ್ರೆಂಡ್ಸ್‌ಗೆ ಪೆಟ್ಟಾಗಿರೋದು ವಿಡಿಯೋದಲ್ಲಿ ಕಾಣ್ಸುತ್ತೆ. ಎಲ್ಲರಿಗೂ ಏನಾಯ್ತು ಅಂತ ವಿಡಿಯೋದಲ್ಲಿ ಹೇಳಿಲ್ಲ.

ಇದನ್ನೂ ಓದಿ: ಜರತಾರಿ ಸೀರೆಯುಟ್ಟು ಮಹಾ ಶಿವರಾತ್ರಿ ಶುಭ ಕೋರಿದ ದೀಪಿಕಾ ದಾಸ್…. ನಮ್ಮನೆ ಮಹಾಲಕ್ಷ್ಮಿ ಎಂದ ಫ್ಯಾನ್ಸ್

ಮದುವೆಗೆ ಮಾಡ್ಕೊಂಡಿದ್ದ ಪ್ರಿಪರೇಷನ್ ಹಾಗು ಸೆಲೆಬ್ರೇಷನ್‌ನ ಪ್ರಮುಖ ಕ್ಷಣಗಳನ್ನೆಲ್ಲಾ ಸೇರಿಸಿ ವಿಡಿಯೋ ಶುರುವಾಗುತ್ತೆ. ಆದ್ರೆ ವಿಡಿಯೋ ಎಂಡ್‌ನಲ್ಲಿ ಪೆಟ್ಟಾಗಿರೋ ರಾಬಿನ್ ಫ್ರೆಂಡ್ಸ್‌ನ ತೋರಿಸ್ತಾರೆ. ರಾಬಿನ್ ಹಾಗು ಆರತಿ ಅವ್ರನ್ನ ನೋಡೋಕೆ ಹೋಗ್ತಾರೆ ಅಂತ ವಿಡಿಯೋದಲ್ಲಿ ಇದೆ. ಕೊನೆಗೆ ರಾಬಿನ್ ಡ್ರಿಪ್ ಹಾಕಿಸ್ಕೊಂಡು ಮಲಗಿರೋದು ಕಾಣ್ಸುತ್ತೆ. ಫಾಹಿಸ್ ಬಿನ್ ಅನ್ನೋರು ರಾಬಿನ್‌ಗೆ ಟ್ಯಾಗ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ರಾಬಿನ್‌ಗೆ ಏನಾಯ್ತು ಅಂತ ಕಾಮೆಂಟ್ ಬಾಕ್ಸ್‌ನಲ್ಲಿ ಪ್ರಶ್ನೆಗಳು ತುಂಬಿವೆ ಆದ್ರೆ ಇದರ ಬಗ್ಗೆ ಯಾರು ಇನ್ನೂ ರಿಯಾಕ್ಟ್ ಮಾಡಿಲ್ಲ.

View post on Instagram

ಬಿಗ್ ಬಾಸ್‌ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದ ಸ್ಪರ್ಧಿಗಳಲ್ಲಿ ಡಾ. ರಾಬಿನ್ ರಾಧಾಕೃಷ್ಣನ್ ಒಬ್ಬರು. ಶೋನಲ್ಲಿ ಇದ್ದ ಮೇಲೆ ರಾಬಿನ್ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದರು. ಆ ಟೈಮಲ್ಲಿ ನಿರೂಪಕಿ ಹಾಗು ಉದ್ಯಮಿ ಆರತಿ ಪೊಡಿನ ಮೀಟ್ ಮಾಡ್ತಾರೆ, ಇಬ್ಬರೂ ಲವ್ ಅಲ್ಲಿ ಬೀಳ್ತಾರೆ. ಫೆಬ್ರವರಿ 16ಕ್ಕೆ ಗುರುವಾಯೂರು ಅಂಬಲದಲ್ಲಿ ಇವರ ಮದುವೆ ಆಗಿತ್ತು. ಮದುವೆಗೆ 9 ದಿನಗಳ ಸೆಲೆಬ್ರೇಷನ್ ಇತ್ತು. ಸೆಲೆಬ್ರೇಷನ್ ಎಲ್ಲ ಆರತಿನೇ ಪ್ಲಾನ್ ಮಾಡಿದ್ದು ಅಂತ ರಾಬಿನ್ ಹೇಳಿದ್ದರು.

ಇದನ್ನೂ ಓದಿ: ಪಾಕಿಸ್ತಾನ ವಿರುದ್ಧ ಗೆದ್ದ ಬೆನ್ನಲ್ಲೇ ತಮನ್ನಾ ಜೊತೆಗೆ ಕುಂಭಮೇಳಕ್ಕೆ ಹೋದ ವಿರಾಟ್ ಕೊಹ್ಲಿ! ಫೋಟೋ ವೈರಲ್