ಪಾಕಿಸ್ತಾನವನ್ನು ಸೋಲಿಸಿದ ಬೆನ್ನಲ್ಲಿಯೇ ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ನಟಿ ತಮನ್ನಾ ಭಾಟಿಯಾ ಕುಂಭಮೇಳದಲ್ಲಿ ಒಟ್ಟಿಗೆ ಭಾಗವಹಿಸಿದ ಫೋಟೋ ವೈರಲ್ ಆಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ..
ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಪ್ರಮುಖ ನಟಿ ತಮನ್ನಾ ಭಾಟಿಯಾ ಒಟ್ಟಿಗೆ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ ಎಂಬ ಫೋಟೋವೊಂದು ಭಾರೀ ವರಲ್ ಆಗುತ್ತಿದೆ. ಇದರ ಬೆನ್ನಲ್ಲಿಯೇ ಇಬ್ಬರ ನಡುವೆ ಸಂಬಂಧದ ಬಗ್ಗೆ ನೆಟ್ಟಿಗರು ಫುಲ್ ಟ್ರೋಲ್ ಮಾಡುತ್ತಿದ್ದಾರೆ.
ನಟಿ ತಮನ್ನಾ ಜೊತೆಗೆ ಕ್ರಿಕೆಟರ್ ವಿರಾಟ್ ಕೊಹ್ಲಿ ಕುಂಭಮೇಳದಲ್ಲಿ ಭಾಗವಹಿಸಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ಪ್ರಚಾರ'ತಮನ್ನಾ ಭಾಟಿಯಾ ಮತ್ತು ವಿರಾಟ್ ಕೊಹ್ಲಿ ಮಹಾ ಕುಂಭಮೇಳದಲ್ಲಿ' ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಫೇಸ್‌ಬುಕ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. #TamannaahBhatia #viratkohli #bestphotochallenge #stylechallenge ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಈ ಫೋಟೋದೊಂದಿಗೆ ಕಾಣಬಹುದು. ಈ ಫೇಸ್‌ಬುಕ್ ಪೋಸ್ಟ್‌ಗೆ ಐವತ್ತು ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಈ ಹಿನ್ನೆಲೆಯಲ್ಲಿ ವೈರಲ್ ಚಿತ್ರದ ಸತ್ಯಾಸತ್ಯತೆ ಏನು ಎಂದು ನೋಡೋಣ.
ಸತ್ಯಾಸತ್ಯತೆ ಪರಿಶೀಲನೆ: ವಿರಾಟ್ ಮತ್ತು ತಮನ್ನಾ ಅವರ ಫೋಟೋದಲ್ಲಿ ಮೊದಲ ನೋಟದಲ್ಲೇ ಅಸ್ವಾಭಾವಿಕತೆ ಕಾಣಬಹುದು. ಇಬ್ಬರ ಮುಖವೂ ಅಸಾಧಾರಣವಾಗಿದೆ. ಇದು ಎಐ ಟೂಲ್‌ಗಳನ್ನು ಬಳಸಿ ತಯಾರಿಸಿದ ಫೋಟೋಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ನ್ಯೂನತೆಯಾಗಿದೆ. ಈ ಸುಳಿವಿನಿಂದ ಫೋಟೋ ಎಐ ಹೌದೋ ಅಲ್ಲವೋ ಎಂದು ಪರಿಶೀಲನೆ ನಡೆಸಲಾಯಿತು. ಕೊಹ್ಲಿಯ ಕುತ್ತಿಗೆಯ ರುದ್ರಾಕ್ಷಿ ಮಾಲೆ ಮುರಿದಂತೆ ಕಾಣುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮೊದಲ ಸಲ ತಮ್ಮ ವೀಕ್‌ನೆಸ್ ಏನೆಂದು ಬಾಯ್ಬಿಟ್ಟ ವಿರಾಟ್ ಕೊಹ್ಲಿ!
ಫೋಟೋವನ್ನು ಕೃತಕ ಬುದ್ಧಿಮತ್ತೆ ಸಾಧನಗಳನ್ನು ಬಳಸಿ ತಯಾರಿಸಲಾಗಿದೆಯೇ ಎಂದು ಎಐ ಡಿಟೆಕ್ಷನ್ ಟೂಲ್‌ಗಳ ಸಹಾಯದಿಂದ ಪರಿಶೀಲಿಸಲಾಯಿತು. ಈ ಫ್ಯಾಕ್ಟ್ ಚೆಕ್‌ನಲ್ಲಿ ದೊರೆತ ಫಲಿತಾಂಶಗಳು ಈ ಫೋಟೋ ಎಐ ನಿರ್ಮಿತ ಎಂದು ಸ್ಪಷ್ಟವಾಗಿ ತೋರಿಸುತ್ತವೆ. ಎಐ ಚಿತ್ರಗಳು ಮತ್ತು ವೀಡಿಯೊಗಳನ್ನು ಗುರುತಿಸಲು ಹೈವ್ ಮಾಡರೇಶನ್ ಟೂಲ್ ಈ ಚಿತ್ರವು ಎಐ ನಿರ್ಮಿತವಾಗಲು 99.5 ಪ್ರತಿಶತದಷ್ಟು ಸಾಧ್ಯತೆ ಇದೆ ಎಂದು ಹೇಳಿದೆ.
ಇನ್ನು ನಟಿ ತಮನ್ನಾ ಭಾಟಿಯಾ ಮತ್ತು ವಿರಾಟ್ ಕೊಹ್ಲಿ ಮಹಾ ಕುಂಭಮೇಳದಲ್ಲಿ ಒಟ್ಟಿಗೆ ಭಾಗವಹಿಸಿರುವ ಚಿತ್ರವು ತಪ್ಪುದಾರಿಗೆಳೆಯುವ ಮತ್ತು ಎಐ ನಿರ್ಮಿತವಾಗಿದೆ. ಇದೇ ರೀತಿಯ ಹಲವು ಎಐ ಚಿತ್ರಗಳು ಮಹಾ ಕುಂಭಮೇಳದ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಇತ್ತೀಚೆಗೆ ರುದ್ರಾಕ್ಷಿ ಮಾಲೆ ಮಾರುವ ಹುಡುಗಿ ಮೊನಾಲಿಸಾ ಬೋಸ್ಲೆ ಫೋಟೋಗಳನ್ನು ಭಾರೀ ದೊಡ್ಡ ಮಟ್ಟದಲ್ಲಿ ಎಐ ಚಿತ್ರ ಮತ್ತು ವಿಡಿಯೋಗಳಾಗಿ ಮಾಡಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಅನುಷ್ಕಾ ಮೇಲೆ ಕೊಹ್ಲಿಗೆ ಅದೆಷ್ಟು ಪ್ರೀತಿ! ಪಾಕ್ ಎದುರು ಶತಕ ಸಿಡಿಸಿ ರಿಂಗ್‌ಗೆ ಕಿಸ್ ಕೊಟ್ಟಿದ್ದೇಕೆ ವಿರಾಟ್?
