- Home
- Entertainment
- TV Talk
- ಜರತಾರಿ ಸೀರೆಯುಟ್ಟು ಮಹಾ ಶಿವರಾತ್ರಿ ಶುಭ ಕೋರಿದ ದೀಪಿಕಾ ದಾಸ್…. ನಮ್ಮನೆ ಮಹಾಲಕ್ಷ್ಮಿ ಎಂದ ಫ್ಯಾನ್ಸ್
ಜರತಾರಿ ಸೀರೆಯುಟ್ಟು ಮಹಾ ಶಿವರಾತ್ರಿ ಶುಭ ಕೋರಿದ ದೀಪಿಕಾ ದಾಸ್…. ನಮ್ಮನೆ ಮಹಾಲಕ್ಷ್ಮಿ ಎಂದ ಫ್ಯಾನ್ಸ್
ನಟಿ ದೀಪಿಕಾ ದಾಸ್ ಜರತಾರಿ ಸೀರೆಯುಟ್ಟು, ತಮ್ಮ ಅಭಿಮಾನಿಗಳಿಗೆ ಮಹಾಶಿವರಾತ್ರಿಯ ಶುಭಾಶಯ ತಿಳಿಸಿದ್ರೆ, ಜನ ನಟಿಯ ಅಂದವನ್ನು ಹೊಗಳೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚುತ್ತಿರುವ ನಟಿ ದೀಪಿಕಾ ದಾಸ್ ಶಿವರಾತ್ರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಉಡುಗೆ ಧರಿಸಿ, ತಮ್ಮ ಅಭಿಮಾನಿಗಳಿಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ದೀಪಿಕಾ ದಾಸ್ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ, ಬೇಬಿ ಪಿಂಕ್ ಬಣ್ಣದ ಜರತಾರಿ ಸೀರೆಯುಟ್ಟು, ಅದಕ್ಕೆ ಮ್ಯಾಚ್ ಆಗುವಂತೆ ವೈಟ್ ಸ್ಟೋನ್ ಹಾರಗಳನ್ನು ಧರಿಸಿದ್ದು, ಅದಕ್ಕೆ ಮ್ಯಾಚ್ ಆಗುವ ಇಯರಿಂಗ್ಸ್, ಬಳೆ, ಉಂಗುರ ಧರಿಸಿದ್ದಾರೆ. ಇವರ ಈ ಲುಕ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ.
ಹೆಚ್ಚಾಗಿ ಮಾಡರ್ನ್ ಡ್ರೆಸ್ ಗಳಲ್ಲೇ ಕಾಣಿಸಿಕೊಳ್ಳುವ ದೀಪಿಕಾ ದಾಸ್, ಈ ಬಾರಿ ಸಂಪ್ರದಾಯ ಬದ್ಧವಾಗಿ ಸೀರೆಯುಟ್ಟು, ಬೊಟ್ಟು ತೊಟ್ಟು, ಜ್ಯುವೆಲ್ಲರಿಗಳನ್ನು ಧರಿಸಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಹಾಗಾಗಿ ದೀಪಿಕಾ ಈ ರೂಪವನ್ನು ನೋಡಿದ ಜನ ನಮ್ಮನೆ ಮಹಾಲಕ್ಷ್ಮೀ ಎನ್ನುತ್ತಿದ್ದಾರೆ.
ಅಷ್ಟೇ ಅಲ್ಲ ಅಭಿಮಾನಿಗಳು ನೀವು ಮಾರ್ಡನ್ ಕಿಂತ ಸಾಂಪ್ರದಾಯಿಕ ಡ್ರೆಸ್ ಗಳಲ್ಲಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದೀರಿ ಎಂದಿದ್ದಾರೆ. ಮತ್ತೊಬ್ಬರು ನಿಮ್ಮ ಮುಖದ ಹೊಳಪಿನಿಂದಲೇ ಚಂದ್ರ ಬೆಳಗುತ್ತಿದ್ದಾನೆ ಎಂದಿದ್ದಾರೆ. ಫೋಟೊಗಳು ಚೆನ್ನಾಗಿವೆ. ನೀವು ತುಂಬಾನೆ ಸುಂದರವಾಗಿ ಕಾಣಿಸ್ತಿದ್ದೀರಿ ಅಂತಾನು ಹೇಳಿದ್ದಾರೆ.
ಹೆಚ್ಚಾಗಿ ವಿದೇಶ ಸುತ್ತೋದ್ರಲ್ಲಿ ಬ್ಯುಸಿಯಾಗಿರುವ ನಟಿ ದೀಪಿಕಾ ದಾಸ್ ಕೆಲ ದಿನಗಳ ಹಿಂದೆಯಷ್ಟೇ ದುಬೈ ನಲ್ಲಿ ತಮ್ಮ 29ನೇ ಹುಟ್ಟುಹಬ್ಬವನ್ನು ಆಚರಿಸಿದ್ದರು. ಜೊತೆಗೆ ದುಬೈನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೊಗಳನ್ನು ಶೇರ್ ಮಾಡಿದ್ದರು. ಇದೀಗ ಬೆಂಗಳೂರಲ್ಲಿದ್ದಾರೆ ನಟಿ.
ಅಂದ ಹಾಗೆ ಈ ಬಾರಿ ದೀಪಿಕಾ ದಾಸ್ ಮದುವೆಯಾದ ಬಳಿಕ ಮೊದಲ ಹುಟ್ಟುಹಬ್ಬ ಆಚರಿಸಿಕೊಂಡಿದ್ದರಿಂದ, ಪತಿ ದೀಪಕ್ ಗೌಡ, ದೊಡ್ಡದಾಗಿ ಸರ್ಪ್ರೈಸ್ ನೀಡಿದ್ದರು. ದುಬೈ ಡೆಸರ್ಟ್ ನಲ್ಲಿ ಬರ್ತ್ ಡೇ ಪಾರ್ಟಿ ನೀಡಿ, ದೀಪಿಕಾಗೆ ಚಿನ್ನದ ಕಿವಿಯೋಲೆ, ಬಳೆ ಉಡುಗೊರೆಯಾಗಿ ನೀಡಿದ್ದರು.