ಲವರ್ಸ್‌ ಲವರ್ಸ್‌ ಎಂದು ಸುದ್ದಿ ಹಬ್ಬಿಸುತ್ತಿರುವವರಿಗೆ ಸ್ಪಷ್ಟನೆ ಕೊಟ್ಟ ನಟಿ ಅಮೃತಾ. ವೈರಲ್ ಆಯ್ತು ಇವರಿಬ್ಬರ ಫೋಟೋ.... 

ಕನ್ನಡ ಚಿತ್ರರಂಗದವನ್ನು ಉತ್ತುಂಗಕ್ಕೆ ಹೊತ್ತೊಯ್ಯುತ್ತಿರುವ ಡಾಲಿ ಧನಂಜಯ್‌ಗೆ ಲವ್ ಅಗಿದೆ ಸೈಲೆಂಟ್ ಆಗಿ ಪ್ರೀತಿಸುತ್ತಿದ್ದಾರೆ ಹಾಗೆ ಹೀಗೆ ಎಂದು ಸಾಕಷ್ಟು ಸುದ್ದಿಗಳು ಕೇಳಿ ಬರುತ್ತಿದೆ. ಅದರಲ್ಲೂ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಧನುನೇ ನೆಟ್ಟಿಗರ ಫುಲ್ ಟಾರ್ಗೆಟ್‌. ಒಂದು ವೇಳೆ ಮೋಸ್ಟ್‌ ಎಲಿಜಿಬಲ್ ಬ್ಯಾಚುಲರ್ ಸೈಲೆಂಟ್ ಆಗಿ ಮದುವೆ ಅಗಿಬಿಟ್ಟರೆ ಅದೆಷ್ಟೋ ಹುಡುಗಿಯರ ಹಾರ್ಟ್ ಬ್ರೇಕ್ ಆಗುತ್ತದೆ. ಹಾರ್ಟ್ ಬ್ರೇಕ್ ಆಗಬಾರದು ಎಂದು ಸ್ವತಃ ಅಮೃತಾನೇ ಕ್ಲಾರಿಟಿ ಕೊಟ್ಟಿದ್ದಾರೆ. 

ಹೌದು! ಕನ್ನಡ ಚಿತ್ರಂಗದಲ್ಲಿ ಟಾಪ್‌ ನಟಿಯರ ಪಟ್ಟಿಯಲ್ಲಿ ಮಿಂಚುತ್ತಿರುವ ಅಮೃತಾ ಅಯ್ಯಂಗಾರ್ ಮತ್ತು ಧನಂಜಯ್ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆಯಲ್ಲಿ ಮೂಡಿ ಬರುತ್ತಿದ್ದ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಆಗಮಿಸಿದ್ದು ಆಗ ಅವರಿಬ್ಬರು ನಟಿಸಿರುವ ಬಡವ ರಾಸ್ಕಲ್ ಸಿನಿಮಾ ಸಿನಿಮಾ ಪ್ರಚಾರ ಕೂಡ ನಡೆಯುತ್ತಿತ್ತು ಹೀಗಾಗಿ ವೇದಿಕೆ ಮೇಲೆ ಸಿನಿಮಾದಲ್ಲಿ ಡೈಲಾಗ್ ಹೇಳಿ ಪ್ರಪೋಸ್ ಮಾಡುತ್ತಾರೆ. ಅಲ್ಲಿಂದ ಶುರುವಾಯ್ತು ನೋಡಿ ಲವ್ ಬರ್ಡ್ಸ್ ಲವ್ ಬರ್ಡ್ಸ್‌ ಅಂತ.. ಸುಮಾರು ಮೂರು ಸಿನಿಮಾ ಒಟ್ಟಿಗೆ ನಟಿಸಿದ್ದಾರೆ ಅಂದ್ರೆ ಖಂಡಿತಾ ಏನೋ ಇದೆ ಅನ್ನೋ ಮಾತು ಶುರುವಾಗಿತ್ತು. 

ಲವ್ ಬ್ರೇಕಪ್ ಮಾಡ್ಕೊಂಡ್ರೆ ಸ್ಟೇಟ್ಸ್‌ ಹಾಕೋದು; ಜನರೇಷನ್‌ ಗ್ಯಾಪ್‌ ಬಗ್ಗೆ ಮಾತನಾಡಿದ ಧನಂಜಯ್

ಇತ್ತೀಚಿಗೆ ಅಮೃತಾ ಹುಟ್ಟುಹಬ್ಬವಿತ್ತು. ಸಖತ್ ಸರಳವಾಗಿ ಆಚರಿಸಿಕೊಂಡ ನಟಿ ಕೆಲವೊಂದು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಆಗ ನಾವಿಬ್ಬರೂ ಒಟ್ಟಿಗೆ ಮೂವರು ಸಿನಿಮಾವನ್ನು ಮಾಡಿದ್ದೇವೆ. ಹಾಗಾಗಿ ಕೆಲವರು ನಮ್ಮಿಬ್ಬರ ಮಧ್ಯೆ ಏನೋ ಇದೆ ಎಂದು ಅಂದುಕೊಳ್ಳುತ್ತಾರೆ. ಧನಂಜಯ, ನನ್ನ ಮಧ್ಯೆ ಒಳ್ಳೆಯ ಸ್ನೇಹವಿದೆ. ಅದನ್ನು ಬಿಟ್ಟರೆ ನಾನು ಇನ್ನೂ ಸಿಂಗಲ್ ಎಂದು ಅಮೃತಾ ಹೇಳಿದ್ದಾರೆ.

ಇಬ್ರು ಸ್ಟಾರ್ ನಟಿಯರ ನಡುವೆ ಜಗಳನೇ ಜಾಸ್ತಿ?; ರಮ್ಯಾ ಬಗ್ಗೆ ಮೌನ ಮುರಿದ ಅಮೃತಾ ಅಯ್ಯಂಗಾರ್

ಗ್ರೀನ್ ಸಿಗ್ನಲ್ ಕೊಟ್ಟ ಕಿಚ್ಚ:

ಹೊಯ್ಸಳ ಸಿನಿಮಾ ಪ್ರೆಸ್‌ ಮೀಟ್‌ನಲ್ಲಿ ನಾಯಕಿ ಅಮೃತಾ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಆಗ ವೇದಿಕೆ ಮೇಲೆ ಆಗಮಿಸಿದ ಕಿಚ್ಚ ಸುದೀಪ್ ಅಮೃತಾ ಮತ್ತು ಧನಂಜಯ್‌ರನ್ನು ಚೆನ್ನಾಗಿ ರೇಗಿಸಿದ್ದಾರೆ. ಸಿನಿಮಾ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡಿ ಅಂದ್ರೆ ಧನು ಧನು ಎಂದು ಹತ್ತು ಸಲ ಅವರ ಹೆಸರು ಹೇಳಿದ್ದಾರೆ. 'ಸಿನಿಮಾ ವಿಚಾರಕ್ಕಿಂತ ಧನಂಜಯ್ ಬಗ್ಗೆ ಹೆಚ್ಚಿಗೆ ಮಾತನಾಡಿದ್ದು ಅಮೃತಾ. ಪಾತ್ರವನ್ನು ಹೊಗಳುತ್ತಿದ್ರಾ ಅಥವಾ ಪರ್ಸನಲ್ ಆಗಿ ಹೇಳುತ್ತಿದ್ರಾ ಗೊತ್ತಿಲ್ಲ. ಏನೇ ಇರಲಿ ನಿಮ್ಮ ಮಾತುಗಳನ್ನು ಕೇಳಿ ಧನಂಜಯ್ ಖುಷಿ ಪಟ್ಟಿದ್ದಾರೆ. ಆದರೆ ಬೇಸರ ಆಗಿದ್ದು ಏನೆಂದರೆ ಧನು ನಿಮ್ಮ ಬಗ್ಗೆ ಒಂದು ಸಾಲು ಕೂಡ ಹೇಳಲಿಲ್ಲ. ಈಗ ಧನುಗೆ ಅವಕಾಶ ಕೊಡೋಣ ಅಮೃತಾ ಎಷ್ಟು ಚೆನ್ನಾಗಿ ಕಾಣಿಸುತ್ತಿದ್ದಾರೆಂದು ಹೇಳಬೇಕು..ಅಮೃತಾ ಗುರು ಗುರು ಅಂತ ಶುರು ಮಾಡಿ ಧನಂಜಯ್ ಎನ್ನುತ್ತಿದ್ದರು ಆದರೆ ಅಮೃತಾ ಜೊತೆ ನಟಿಸಿ ಖುಷಿ ಆಯ್ತು ಅಂತ ಧನು ಹೇಳಲೇ ಇಲ್ಲ. ಹೊಯ್ಸಳ ಚಿತ್ರಕ್ಕೆ ಅಮೃತಾ ನಾಯಕಿ ಹೀಗಾಗಿ ನಾಯಕಿ ಬಗ್ಗೆ ಒಂದೆರಡು ಸಾಲು ಹೇಳಿ' ಎಂದು ಸುದೀಪ್ ವೇದಿಕೆ ಮೇಲೆ ಕಾಲೆಳೆಯುತ್ತಾರೆ. 'ಅಮೃತಾ ಅವರ ಜೊತೆ ಮೂರನೇ ಸಿನಿಮಾ ಮಾಡುತ್ತಿರುವುದು ತುಂಬಾ ಚೆನ್ನಾಗಿ ನಟಿಸಿದ್ದಾರೆ' ಎಂದು ಧನಂಜಯ್ ವೇದಿಕೆ ಮೇಲೆ ಹೇಳಿದ್ದಾರೆ. ತಕ್ಷಣವೇ ಸುದೀಪ್ 'ಯಾಕೆ ಅಮೃತಾ ನೀವು ಧನಂಜಯ್‌ ಜೊತೆನೇ ಸಿನಿಮಾ ಮಾಡುತ್ತಿರುವುದು? ಬೇರೆ ಕಲಾವಿದರಿಗೆ ಡೇಟ್‌ ಕೊಡಿ ಬೇರೆ ಕಲಾವಿದರಿಗೆ ಅವಕಾಶ ಕೊಡಿ. ನೀವು ಇಷ್ಟೆಲ್ಲಾ ಮಾಡಿದ್ದರೂ ನಿಮ್ಮ ಬಗ್ಗೆ ಒಂದು ಸಾಲು ಹೇಳುತ್ತಿಲ್ಲ. ನನ್ನ ಜೊತೆ ಸಿನಿಮಾ ಮಾಡಿದರೆ ನೀವು ಅರ್ಧ ಗಂಟೆ ನಿಮ್ಮ ಪಾತ್ರ ನಿಮ್ಮ ನಟನೆ ಬಗ್ಗೆ ಹೇಳುತ್ತಿದ್ದೆ. ಅಮೃತಾ ಮತ್ತು ಧನು ಕಾಂಬಿನೇಷನ್‌ ತುಂಬಾ ಚೆನ್ನಾಗಿದೆ' ಎಂದು ಸುದೀಪ್ ಹೇಳುತ್ತಾರೆ.