ಆರು ತಿಂಗಳ ಮುನ್ನವೆ ಚಂದನ್ ಶೆಟ್ಟಿಗೆ ಬುದ್ಧಿ ಮಾತು ಹೇಳಿದ್ರಾ ಪ್ರಶಾಂತ್ ಸಂಬರಗಿ? ನಿಜಕ್ಕೂ ಎನ್ ಮತ್ತು ಸಿ ಅಕ್ಷರದವರು ಹೊಂದಿಕೊಳ್ಳುವುದಿಲ್ಲ.....
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್ ಬೆನ್ನಲೇ ಪ್ರಶಾಂತ್ ಸಂಬರಗಿ ರಿಯಾಕ್ಟರ್ ಮಾಡಿದ್ದಾರೆ. ಸುಮಾರು 1 ವರ್ಷದ ಹಿಂದೆಯೇ ಈ ವಿಚಾರ ಕಿವಿಗೆ ಬಿದ್ದಿತ್ತು ಆದರೆ 6 ತಿಂಗಳ ಹಿಂದೆ ಕಿವಿ ಮಾತು ಹೇಳಿದ್ದೆ ಅಂದಿದ್ದಾರೆ. ಚಂದನ್ ಪರ ಧ್ವನಿ ಎತ್ತಿದ ಸಂಬರಗಿ...
'ಚಂದನ್ ಶೆಟ್ಟಿ ನನ್ನ ಆತ್ಮೀಯ ಸ್ನೇಹಿತ ಹಾಗೂ ಬಿಗ್ ಬಾಸ್ ಸ್ಪರ್ಧಿ. ವಿದ್ಯಾರ್ಥಿ ವಿದ್ಯಾರ್ಥಿನಿ ಚಿತ್ರದಲ್ಲಿ ನಾನು ಪೊಲೀಸ್ ಪಾತ್ರದಲ್ಲಿ ನಟಿಸುತ್ತಿರುವ...ಇಬ್ಬರು ಸುಮಾರು 15 ದಿನಗಳ ಕಾಲ ಒಟ್ಟಿಗೆ ಚಿತ್ರೀಕರಣ ಮಾಡಿದ್ದೀವಿ. ಕನ್ನಡ ಇಂಡಸ್ಟ್ರಿಯಲ್ಲಿ ಪವರ್ ಕಪರ್ ಮತ್ತು ಚಂದದ ಕಪಲ್ ಆಗಿದ್ದವರು ಚಂದನ್ ಶೆಟ್ಟಿ ಮತ್ತಿ ನಿವೇದಿತಾ ಗೌಡ ಆದರೆ ಇವರ ಡಿವೋರ್ಸ್ ವಿಚಾರ ದೊಡ್ಡ ಶಾಕ್ ತಂದಿದೆ ಆದರೆ ಇದರ ಸುಳಿವು ಒಂದು ವರ್ಷದ ಹಿಂದೆಯೇ ನನಗಿತ್ತು. ರಾಜ್ಯ ಸರ್ಕಾರದ ಹಣದಿಂದ ನಡೆದ ಯುವ ದಸರ ಕಾರ್ಯಕ್ರಮದಲ್ಲಿ ಚಂದನ್ ಪ್ರಪೋಸ್ ಮಾಡಿದಾಗಲೇ ನಾನು ವಿರೋಧ ವ್ಯಕ್ತ ಪಡಿಸಿದ್ದೆ. ಜನರ ದುಡ್ಡು ಮತ್ತು ಸರ್ಕಾರದ ದುಡ್ಡು ಬಳಸಿಕೊಂಡು ಪ್ರಪೋಸ್ ಮಾಡಿದರು ಅಂತ ಚೆನ್ನಮ್ಮಕರೆ ಪೊಲೀಸ್ ಠಾಣೆಯಲ್ಲಿ ಮೊದಲು ದೂರು ಕೊಟ್ಟಿದ್ದು ನಾನು. ಧ್ರುವ ಸರ್ಜಾ ಅವರ ಬ್ಯಾಂಡ್ ಮೂಲಕ ಚಂದನ್ ನನಗೆ ಪರಿಚಯವಾಗಿದ್ದು. ಅವರಿಗೆ ಪ್ರೀತಿಗೆ ಬೆಲೆ ಕೊಟ್ಟು ಕ್ಷಮೆ ಒಪ್ಪಿಕೊಂಡು ಸುಮ್ಮನಾದೆವು' ಎಂದು ಖಾಸಗಿ ಸಂದರ್ಶನದ್ಲಿ ಪ್ರಶಾಂತ್ ಸಂಬರಗಿ ಮಾತನಾಡಿದ್ದಾರೆ.
ದೊಡ್ಮನೆಯಲ್ಲಿ ದಾಂಪತ್ಯ ಕಲಹ, ನಟ ಯುವರಾಜ್ - ಶ್ರೀದೇವಿ ಬದುಕಲ್ಲಿ ಬಿರುಕು, ವಿಚ್ಚೇದನಕ್ಕೆ ಅರ್ಜಿ!
ವಿದ್ಯಾರ್ಥಿ ವಿದ್ಯಾರ್ಥಿನಿ ಸಿನಿಮಾ ಪ್ರೆಸ್ ಕಾರ್ಯಕ್ರಮಕ್ಕೆ ಎರಡು ಸಲ ಚಂದನ್ ಮಿಸ್ ಮಾಡಿಕೊಂಡಿದ್ದಾರೆ. ಅನೇಕ ಸಲ ಕರೆ ಮಾಡಿದರೂ ಪ್ರತಿಕ್ರಿಯೆ ನೀಡಿಲ್ಲ ನಮಗೆ ಇದ್ದ ಭಯವೇ ನಿಜವಾಗಿದೆ. ಸುಮಾರು 6 ತಿಂಗಳ ಹಿಂದೆ ಮಾನಸಿಕವಾಗಿ ತಾವು ತುಂಬಾ ವೀಕ್ ಆಗಿದ್ದೀನಿ ಎಂದು ಹೇಳುವ ಪ್ರಸಂಗ ಬಂದಿತ್ತು. ಸಿನಿಮಾದ ಪೋಸ್ಟ್ ಲಾಂಚ್ ಕಾರ್ಯಕ್ರಮಕ್ಕೆ ಮನೆಯಲ್ಲಿ ಇರುವ ಬಟ್ಟೆಯನ್ನು ಚಂದನ್ ಧರಿಸಿ ಬಂದಿದ್ದರು ಆಗ ಚಿತ್ರತಂಡದವರು ಬೇಸರ ವ್ಯಕ್ತ ಪಡಿಸಿದ್ದರು ಇಡೀ ಚಿತ್ರರಂಗ ನೋಡುತ್ತದೆ ಮಾಧ್ಯಮದವರು ಇದ್ದಾರೆ ಯಾಕೆ ನೀವು ಗೋವಾಗೆ ಹೋಗುವ ಸ್ಟೈಲ್‌ನಲ್ಲಿ ಬಂದಿದ್ದೀರಾ ಎಂದು ಪ್ರಶ್ನೆ ಮಾಡಿದಾಗ ಮನದಾಳದ ಮಾತುಗಳನ್ನು ಹಂಚಿಕೊಂಡರು ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
ನಂದು ನಿವೇದಿತಾ ಗೌಡ ವಿಷನ್ ಮ್ಯಾಚ್ ಆಗುತ್ತಿಲ್ಲ ಪಟ್ಟಿಗೆ ಬದುಕಲು ಆಗುತ್ತಿಲ್ಲ ಮನೆಯಲ್ಲಿ ಟೆನ್ಶನ್ ಇದೆ ನಿಮಗೆ ಎಲ್ಲವೂ ಗೊತ್ತಾಗುತ್ತದೆ ಎನ್ನುವ ಮೂಲ ಚಂದನ್ ಸುಳಿವು ಕೊಟ್ಟರು. ಹೇಗೆ ನಗು ನಗುತ್ತಾ ಸಂಬಂಧ ಶುರು ಮಾಡಿದ್ದರು ಹಾಗೆ ನಗು ನಗುತ್ತಾ ಹೊರ ಬಂದಿದ್ದಾರೆ. ಯಾರ ಕಡೆಯಿಂದ ಸಮಸ್ಯೆ ಆಗಿದೆ ಎಂದು ಇಂಡಸ್ಟ್ರಿಯಲ್ಲಿ ಗೊತ್ತಾಗಿದೆ ಇದಕ್ಕೆ ನ್ಯಾಯ ಸಿಗಬೇಕಿದೆ ಎಂದಿದ್ದಾರೆ ಪ್ರಶಾಂತ್.
ಉಸಿರಲ್ಲಿ ಉಸಿರಾಗಿದ್ದವರಿಗೆ ಅವಕಾಶವೇ ಸಿಗ್ಲಿಲ್ಲ... ಅವಕಾಶವಿದ್ರೂ ಒಟ್ಟಿಗೇ ಬಾಳಲ್ಲ .. ಏನಿದು ವಿಚಿತ್ರ ದೇವ್ರೇ?
Astrology ಜಾತಕದ ರೂಪದಲ್ಲಿ ಈ ವಿಚಾರದ ಬಗ್ಗೆ ಚಂದನ್ ಜೊತೆ ಚರ್ಚೆ ಮಾಡಿರುವೆ. ಸಿ ಮತ್ತು ಎನ್ ಅಕ್ಷರದವರು ಹೆಸರಿನ ಹೀಗಿದ್ರೆ ಹಿಂಗಾಗುತ್ತೆ ನೀನು ಮೊದಲು ಮಗು ಮಾಡಿಕೋ ಈ ರೀತಿ ಸಲಹೆ ಕೊಟ್ಟಿದ್ದೀವಿ. ಏಕೆಂದರೆ ನಾವು ಏರ್‌ಪೋರ್ಟ್‌ಗೆ ಹೋಗ್ತೀವಿ ಏನೋ ನೋಡ್ತೀವಿ ಏನೋ ನೋಡಬಾರದು ನೋಡುತ್ತೀವಿ ಆಗ ಚಂದನ್‌ನ ಕರೆದು ಮನೆಯಲ್ಲಿ ಹೇಗಿದೆ ಎಂದು ಕೇಳಿದೆ. ಹೈದರಾಬಾದ್‌ನಲ್ಲಿ ಯಾರೋ ಹೇಳಿದ ಮಾತನ್ನು ಚಂದನ್‌ಗೆ ಹೇಳಲೇ ಬೇಕು. ಹುಬ್ಬಳಿಯ ನೇಮಾಲಜಿಸ್ಟ್ ಒಬ್ಬರು ಎನ್ ಮತ್ತು ಸಿ ಅಕ್ಷರದ ವ್ಯಕ್ತಿಗಳು ಹೊಂದಿಕೊಳ್ಳುವುದಿಲ್ಲ ಎಂದಿದ್ದರು ಎಂದು ಪ್ರಶಾಂತ್ ಹೇಳಿದ್ದಾರೆ.
