ಓಟಿಟಿ ಲವ್ ಬರ್ಡ್ಸ್‌ ನಡುವೆ ಮನಸ್ತಾಪ. ಸಾನ್ಯಾ ಕಾರಣ ಮಾಡ್ಕೊಂಡು ಆಡುತ್ತಿರುವುದು ಯಾವ ರೀತಿ ಗೇಮ್? 

ಮೊದಲ ಬಾರಿಗೆ ಕನ್ನಡ ಬಿಗ್ ಬಾಸ್ ಓಟಿಟಿ (Bigg Boss Ott) ಪ್ರಸಾರವಾಗುತ್ತಿದೆ. ಸೀಸನ್ 1 ಆಗಿರುವ ಕಾರಣ ಯಾವ ರೀತಿ ಎಪಿಸೋಡ್ ಪ್ರಸಾರವಾಗತ್ತಿದೆ ಯಾವ ರೀತಿ ಜನರು ಪ್ರತಿಕ್ರಿಯೆ ನೀಡಲಿದ್ದಾರೆ ಯಾವ ರೀತಿ ತಮ್ಮ ಆನ್‌ಲೈನ್‌ ವೋಟಿಂಗ್ ಮಾಡುತ್ತಿದ್ದಾರೆ ಅನ್ನೋದು ಯಾವ ಸ್ಪರ್ಧಿಗೂ ಐಡಿಯಾ ಇಲ್ಲ. ಹೀಗಾಗಿ ವಾರಕ್ಕೊಮ್ಮೆ ಬರುವ ಅಭಿಮಾನಿಗಳ ಕಾಲ್‌ ಸ್ಪರ್ಧಿಗಳನ್ನು ಅಲರ್ಟ್‌ ಮಾಡುತ್ತದೆ. ಕಳೆದ ವಾರ ಸಾನ್ಯಾರನ್ನು ಅಲರ್ಟ್‌ ಮಾಡಲಾಗಿತ್ತು....

ಓಟಿಟಿ ಮತ್ತೊಂದು ವಿಶೇಷೆ ಏನೆಂದರೆ ಕಲಪ್‌ ಸ್ಪರ್ಧಿಸುತ್ತಿರುವುದು. ನಂದು (Nandu) ಮತ್ತು ಜಶ್ವಂತ್ (Jaswanth) ಪ್ರೀತಿಯಲ್ಲಿದ್ದು ಶೀಘ್ರದಲ್ಲಿ ಮದುವಯಾಗಲಿದ್ದಾರೆ. ಇಬ್ಬರೂ ಒಂದು ಸ್ಪರ್ಧಿ ಲೆಕ್ಕದಲ್ಲಿ ಬಿಬಿ ಮನೆ ಎಂಟರ್ ಆಗಿದ್ದಾರೆ. ಜಶ್ವಂತ್ ಮತ್ತು ನಂದು ತುಂಬಾನೇ ಟಫ್‌ ಕಾಂಪಿಟೇಷನ್‌ ನೀಡುತ್ತಿದ್ದಾರೆ. ಅಲ್ಲದೆ ರೂಪೇಶ್‌ ಮತ್ತು ಸಾನ್ಯಾ ಜೊತೆ ಸೇರಿಕೊಂಡು ಸಣ್ಣ ಗುಂಪು ಮಾಡಿಕೊಂಡಿದ್ದಾರೆ. ಕಳೆದ ವಾರ ಸುದೀಪ್ ಕೇಳಿದ ಪ್ರಶ್ನೆ - ಯಾರು ಯಾರಿಗೆ ಹೆಚ್ಚಿಗೆ Influence ಮಾಡ್ತಿದ್ದಾರೆ? ಇದಕ್ಕೆ ಪ್ರತಿಯೊಬ್ಬರೂ ನಂದು ಕಡೆ ಬೆರಳು ಮಾಡಿ ತೋರಿಸಿದ್ದಾರೆ. 

ಜಶ್ವಂತ್ ಮತ್ತು ಸಾನ್ಯಾ (Sanya Iyer) ಕ್ಲೋಸ್ ಆಗುತ್ತಿರುವುದು ನಂದುಗೆ ಹಿಂಸೆಯಾಗುತ್ತಿದೆ. ಪದೇ ಪದೇ ಜಶ್ವಂತ್ ನಡುವಳಿಕೆ ಮತ್ತು ಮಾತುಗಳಲ್ಲಿ ತಪ್ಪುಗಳನ್ನು ಹುಡುಕಿ ಜಗಳ ಮಾಡುತ್ತಿದ್ದಾಳೆ. ಜಶ್ವಂತ್ ಸರಿಯಾಗಿ ಸ್ಮೈಲ್ ಮಾಡಿಲ್ಲ ಅಂದ್ರೂ ನಂದು ಜಗಳ ಮಾಡುತ್ತಿರುವುದು ನೆಟ್ಟಿಗರಿಗೆ ಕಿರಿಕಿರಿ ಅನಿಸುತ್ತಿದೆ. ವೀಕೆಂಡ್ ಮಾತುಕತೆಗೆ ಯಾವ ರೀತಿ ಡ್ರೆಸ್ ಧರಿಸಬೇಕು ಎಂದು ನಂದು ಯೋಚನೆ ಮಾಡುವಾಗ ಜಶ್ವಂತ್ ಸೀರೆ ಧರಿಸುವ ಎಂದು ಸಲಹೆ ನೀಡುತ್ತಾನೆ. ನಾನು ಸೀರೆ ಧರಿಸಿದ್ದರೆ ನಿನಗೆ ಮತ್ತೆ ಲವ್ ಆಗುತ್ತದೆ ಎಂದು ನಂದು ಹೇಳಿದಾಗ ಇಲ್ಲ ಇಲ್ಲ ಲವ್ ಆಗಲೇ ಆಗಿದೆ ನನಗೆ ಮತ್ತೆ ಆಗುವುದಿಲ್ಲ ಆದರೆ ಈಗ ನೀನು ನನಗೆ ಕಾಣಿಸುತ್ತಿಲ್ಲ ಅಂತ ಹೇಳಬೇಡ ಜಗಳ ಮಾಡುವುದಕ್ಕೆ ಮನಸ್ಸಿಲ್ಲ ಎಂದು ಜಶ್ವಂತ್ ಹೇಳುತ್ತಾನೆ. ಕೋಪ ಮಾಡಿಕೊಂಡ ನಂದು ನನಗೆ ಎಲ್ಲಾ ಗೊತ್ತಾಗುತ್ತದೆ ನೀನು ಆಗಾಗ ಪ್ರೀತಿ ತೋರಿಸುತ್ತಿರುವೆ. 

Bigg Boss Ott ನಾವೇನು ಕೆಲಸ ಮಾಡೋಕೆ ಬಂದಿದೀವಾ? ಕತ್ತು ಕತ್ತರಿಸಿ ಹಾಕ್ತೀನಿ: ಜೈಲು ಸೇರಿದ ಸೋನು ಟಾಂಗ್

ನಂದು: ನೀನು ಹೇಗೆ ಮಾತನಾಡುತ್ತೀಯಾ ಅಂದ್ರೆ ಮುಂದಕ್ಕೆ ನಾವು ಮಾತನಾಡಬಾರದು ಅನಿಸುತ್ತದೆ. ಈ ರೀತಿ ನೀನು ಹೆಚ್ಚಿಗೆ ಮಾಡುತ್ತಿರುವೆ.
ಜಶು: ನಿಮಗೆ ಮಾತನಾಡುವುದಕ್ಕೆ ಇಷ್ಟನೇ ಇಲ್ಲ ಸುಮ್ಮೆ ನಾನು ಕಾರಣ ಅಂತ ಹೇಳಬೇಡ. 
ನಂದು: ನಿನಗೆ ಇಷ್ಟೊಂದು attitude ಇದ್ರೆ ಬೇರೆ ಅವರ ಜೊತೆ ಇಟ್ಕೊ. ನನ್ನ ಜೊತೆ ಮಾತ್ರ ಇಟ್ಕೊಳ್ಳುವಂತಿದ್ದರೆ ನನ್ನ ಜೊತೆ ಮಾತನಾಡಬೇಡ. ನಾನು ಖುಷಿಯಾಗಿರುವೆ. ಇವತ್ತು ಬೆಳಿಗ್ಗೆನೂ ನಾನು ಏನೇ ಮಾತನಾಡುವುದಕ್ಕೆ ಬಂದಿದಕ್ಕೆ ನೀನು ಕೆಟ್ಟದಾಗಿ ಮುಖ ಮಾಡಿದೆ. 
ಜಶು: ನಾನು ಸರಿಯಾಗಿ ಸ್ಮೈಲ್ ಮಾಡಿರುವೆ ನಿನ್ನ ಜೊತೆ ನಾನು ಸರಿಯಾಗಿ ವರ್ತಿಸುತ್ತಿರುವೆ. ನೀನು ಈ ಶೋ ಆರಂಭಕ್ಕೂ ಮುನ್ನವೂ ಈ ರೀತಿ ವರ್ತಿಸುತ್ತಿದ್ದೆ.
ನಂದು: ಶೋ ಮುನ್ನ ನಾನು ಈ ರೀತಿ ಇರಲಿಲ್ಲ ಈ ಮನೆ ಹಾಗೆ ಮಾಡುತ್ತಿದೆ. ನಿನಗೆ ಇಷ್ಟ ಇಲ್ಲ ಅಂದ್ರೆ ನಿನ್ನ ಗರ್ಲ್‌ ಫ್ರೆಂಡ್‌ನ ಬದಲಾಯಿಸು.

Bigg boss Ott ಹುಡುಗರಿಗೆ ಪ್ರೋಟಿನ್‌ ಪೌಡರ್ ಕಳಿಸ್ತಾರೆ ಅಮ್ಮ ನನಗೆ ಹಾರ್ಲಿಕ್ಸ್‌ ಕಳುಹಿಸಿ: ಸೋನು ಗೌಡ

ಇಬ್ಬರ ನಡುವೆ ಮಾತುಕತೆ ಹೆಚ್ಚಾಗುತ್ತಿದ್ದ ಕಾರಣ ಬೆಡ್‌ರೂಮಿನಲ್ಲಿ ಕುಳಿತುಕೊಂಡು ಚರ್ಚೆ ಮಾಡಿದ್ದಾರೆ. ನಾವು ಹೊರಗಿರುವ ರೀತಿಯಲ್ಲಿ ಇಲ್ಲಿ ಜೀವನ ಮಾಡಲು ಆಗುವುದಿಲ್ಲ ಏಕೆಂದರೆ ಆ ಫಿಸಿಕಲ್ ಕನೆಕ್ಷನ್ ಇರುವುದಿಲ್ಲ ಅದೇ ನಮ್ಮ ನಡುವೆ ಕನೆಕ್ಷನ್ ಶುರುವಾಗಿದೆ ಎಂದು ಜಶ್ವಂತ್ ಹೇಳಿದ್ದಾರೆ. ಕೋಪ ಕಡಿಮೆ ಆದ ಮೇಲೆ ಇಬ್ಬರೂ ತಬ್ಬಿಕೊಂಡು ಮನಸ್ತಾಪಕ್ಕೆ ಬ್ರೇಕ್ ಹಾಕಿದ್ದಾರೆ.