- Home
- Entertainment
- TV Talk
- Bigg boss Ott ಹುಡುಗರಿಗೆ ಪ್ರೋಟಿನ್ ಪೌಡರ್ ಕಳಿಸ್ತಾರೆ ಅಮ್ಮ ನನಗೆ ಹಾರ್ಲಿಕ್ಸ್ ಕಳುಹಿಸಿ: ಸೋನು ಗೌಡ
Bigg boss Ott ಹುಡುಗರಿಗೆ ಪ್ರೋಟಿನ್ ಪೌಡರ್ ಕಳಿಸ್ತಾರೆ ಅಮ್ಮ ನನಗೆ ಹಾರ್ಲಿಕ್ಸ್ ಕಳುಹಿಸಿ: ಸೋನು ಗೌಡ
ಮನೆಯಿಂದ ಯಾವ ವಸ್ತುನೂ ಕೊಡುವಂತಿಲ್ಲ ಅಂದ್ರೂ ಹುಡುಗರಿಗೆ ಇದನ್ಯಾಕೆ ಕೊಡುತ್ತಿದ್ದಾರಾ?

ಬಿಗ್ ಬಾಸ್ ಓಟಿಟಿ ಸೀಸನ್ 1 ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಅರ್ಜುನ್ ರಮೇಶ್, ಲೋಕೇಶ್, ಸ್ಫೂರ್ತಿ, ಕಿರಣ್ ಮತ್ತು ಉದಯ್ ಮನೆಯಿಂದ ಹೊರ ನಡೆದಿದ್ದಾರೆ.
ನಾಲ್ಕನೇ ವಾರದಲ್ಲಿ ಟ್ರೋಲ್ ಕ್ವೀನ್ ಸೋನು ಶ್ರೀನಿವಾಸ್ ಗೌಡ ಅಚ್ಚರಿ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ಇದೇ ಮೊದಲು ಬಿಗ್ ಬಾಸ್ ಮನೆಯಲ್ಲಿ ಈ ರೀತಿ ನಡೆಯುತ್ತಿರುವುದು ಎನ್ನಬಹುದು.
'ಅಮ್ಮ ನನಗೆ ಮನೆಯಿಂದ ಹಾರ್ಲಿಕ್ಸ್ ಪೌಡರ್ ಕಳುಹಿಸಿ' ಎಂದು ಸೋನು ಡಿಮ್ಯಾಂಡ್ ಮಾಡುತ್ತಾರೆ. ಈ ರೀತಿ ಬೇಡಿಕೆಗಳಿಗೆ ಅವಕಾಶವಿಲ್ಲ ಎನ್ನುವ ಮಾತು ಶುರುವಾಗುತ್ತದೆ.
'ಮನೆಯಿಂದ ಯಾವ ವಸ್ತುಗಳನ್ನು ಪಡೆದುಕೊಳ್ಳುವಂತಿಲ್ಲ. ಎಲ್ಲರಿಗೂ ಇದು ಅಪ್ಲೈ ಆಗುತ್ತದೆ' ಎಂದಿದ್ದಾರೆ ಚೈತ್ರಾ (Chaitra)
'ಹುಡುಗರಿಗೆ ಮನೆಯಿಂದ ಪ್ರೋಟಿನ್ ಪೌಡರ್ ಕಳುಹಿಸುತ್ತಾರೆ ಆದರೆ ನಮಗೆ ಯಾಕೆ ಹಾರ್ಲಿಕ್ಸ್ ತರೋಕೆ ಯಾಕೆ ಅವಕಾಶವಿಲ್ಲ. ಇದು ಮೋಸ' ಎಂದು ಸೋನು ಬೇಸರ ವ್ಯಕ್ತ ಪಡಿಸಿದ್ದಾರೆ.
ಬಿಬಿ ಮನೆಯಲ್ಲಿ ಅತಿ ಹೆಚ್ಚು ಟ್ರೋಲ್ ಆಗುವುದು ಸೋನು ಗೌಡ. ಬಾಯಿಗೆ ಬ್ರೇಕ್ ಹಾಕದೆ ಬೀಗ ಹಾಕದೆ ಮಾತನಾಡುವುದರ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.