Bigg Boss OTT; ಸೋನು ಗೌಡ ವರ್ತನೆಯಿಂದ ನೆತ್ತಿಗೇರಿದ ಸುದೀಪ್ ಕೋಪ, ಸರಿಯಾಗೇ ಕ್ಲಾಸ್ ತೆಗೆದುಕೊಂಡ ಕಿಚ್ಚ

ಬಿಗ್ ಬಾಸ್ ಕನ್ನಡ ಒಟಿಟಿ ಶೋ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೊದಲ ಬಾರಿಗೆ ಬಿಗ್ ಬಾಸ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಬಿಗ್ ಬಾಸ್ ಒಟಿಟಿ ಪ್ರಾರಂಭವಾಗಿ ಒಂದು ವಾರ ಕಳೆದೆ ಹೋಗಿದೆ. ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಪಂಚಾಯತಿ ಇದ್ದು ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಮಾತುಕತೆ ನಡೆಸಿದರು. 

Bigg Boss Ott Kannada Sudeep warns to Sonu Srinivas Gowda sgk

ಬಿಗ್ ಬಾಸ್ ಕನ್ನಡ ಒಟಿಟಿ ಶೋ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೊದಲ ಬಾರಿಗೆ ಬಿಗ್ ಬಾಸ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಬಿಗ್ ಬಾಸ್ ಒಟಿಟಿ ಪ್ರಾರಂಭವಾಗಿ ಒಂದು ವಾರ ಕಳೆದೆ ಹೋಗಿದೆ. ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಪಂಚಾಯತಿ ಇದ್ದು ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಮಾತುಕತೆ ನಡೆಸಿದರು. ಶನಿವಾರ ಮತ್ತು ಭಾನುವಾರ ಎರಡು ದಿನ ಕಿಚ್ಚ ಪಂಚಾಯತಿಯಲ್ಲಿ ಹಾಜರಾಗಿದ್ದರು. ಭಾನುವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಅನೇಕ ಗಮನ ಸೆಳೆಯುವ ಘಟನೆ ನಡೆದಿದೆ. ಅದರಲ್ಲಿ ಸೋನು ಗೌಡ ವರ್ತನೆ ಮನೆಯವರ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟೆಯಲ್ಲದೆ ಸೋನು ವರ್ತನೆ ಕಿಚ್ಚ ಸುದೀಪ್‌ಗೆ ಕೋಪಕ್ಕೆ ಕಾರಣವಾಗಿತ್ತು. ಶೋ ಅನ್ನು ಇಲ್ಲಿಗೆ ನಿಲ್ಲಿಸಬೇಕಾಗುತ್ತೆ ಎಂದು ಕಿಚ್ಚ ಖಡಕ್ ವಾರ್ನಿಂಗ್ ಸಹ ಮಾಡಿದರು. 

ವಿಕೇಂಡ್ ಎಪಿಸೋಡ್ ನಲ್ಲಿ ಕಿಚ್ಚ ಸ್ಪರ್ಧಿಗಳಿಗೆ ಯೆಸ್ ಆರ್ ನೋ ಪ್ರಶ್ನೆಗಳನ್ನು ಕೇಳಿದರು. ಪ್ರತಿ ಬಿಗ್ ಬಾಸ್ ಹಾಗೆ ಈ ಬಾರಿಯೂ ಯೆಸ್ ಆರ್ ನೋ ಪ್ರಶ್ನೆಯ ರೌಂಡ್ ಇತ್ತು.  ಸುದೀಪ್ ಸ್ಪರ್ಧಿಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಸ್ಪರ್ಧಿಗಳು ಹೌದು ಅಥವಾ ಇಲ್ಲ ಎಂದು ಉತ್ತರ ನೀಡಬೇಕು. ಒಂದು ವೇಳೆ ಸ್ಪರ್ಧಿಗಳ ಉತ್ತರಕ್ಕೆ ವಿವರಣೆ ಬೇಕಿದ್ದರೆ ಸುದೀಪ್​ ಕೇಳುತ್ತಾರೆ. ಈ ರೌಂಡ್ ನಲ್ಲಿ ಸೋನು ಗೌಡ ಸಿಡಿ ಸಿಡಿ ಮಾಡಿದ್ದಾರೆ. ಸೋನು ವರ್ತನೆ ಕಿಚ್ಚನ ಕೋಪ ನತ್ತಿಗೇರಿಸಿತ್ತು. ಬೇರೆಯವರ ವಿಷಯದಲ್ಲಿ ಸೋನು ಗೌಡ ತಮಾಷೆ ಮಾಡುತ್ತಾರೆ ಆದರೆ ಅವರ ವಿಚಾರಕ್ಕೆ ಬಂದಾಗ ಸಿಡಿಮಿಡಿ ಮಾಡಿದರು. 

Bigg Boss OTT; ಮೊದಲ ವಾರವೇ ಬಿಗ್ ಮನೆಯಿಂದ ಔಟ್ ಆದ ಕಿರಣ್ ಯೋಗೇಶ್ವರ್, ಹಾಟ್ ಫೋಟೋ ವೈರಲ್

ಇದನ್ನು ಗಮನಿಸಿದ ಸುದೀಪ್, 'ನೀವು ತಮಾಷೆ ಮಾಡಿದಾಗ ಬೇರೆಯವರು ನಗುತ್ತಾರೆ. ಆದರೆ ಬೇರೆಯವರು ನಿಮಗೆ ತಮಾಷೆ ಮಾಡಬಾರದು ಎನ್ನುವುದು ಸರಿನಾ. ನೀವು ಬೇರೆಯವರಿಗೆ ತಮಾಷೆ ಮಾಡಿದಾಗ ಅವರು ಕೂಡ ಹೀಗೆಯೇ ರೇಗಾಡಬಹುದಿತ್ತಲ್ಲ. ಎಲ್ಲರೂ ತಮಾಷೆಯಾಗಿ ತೆಗೆದುಕೊಂಡರು. ಆರ್ಯವರ್ಧನ್ ಬಗ್ಗೆ ತೀರ ತಮಾಷೆ ಮಾಡಿದ್ರಿ, ಅವರು ಸೈಲೆಂಟ್ ಆಗಿಯೇ ಇದ್ರಲ್ವಾ. ಇನ್ಮುಂದೆ ನೀವು ಬೇರೆಯವರಿಗೆ ಲೇವಡಿ ಮಾಡುವಂತಿಲ್ಲ. ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ. ಯೆಸ್​ ಅಥವಾ ನೋ ರೌಂಡ್​ ಇಲ್ಲಿಗೆ ಮುಗಿಯಿತು' ಎಂದು ಸುದೀಪ್​ ಹೇಳಿದರು. 

ಟಿವಿಯಲ್ಲಿ ಅಮ್ಮ ನೋಡಿದ್ರೆ ಬೈತಾರೆ: ರೂಪೇಶ್-ಸಾನ್ಯ ನಡುವೆ ಏನಿದು ಗುಸು ಗುಸು

ಬಳಿಕ ಉಳಿದ ಸ್ಪರ್ಧಿಗಳು ಸರ್ ಶೋ ಮುಂದೆ ವರೆಸಿ, ಪ್ರಶ್ನೆ ಕೇಳಿ ಎಂದು ಒತ್ತಾಯ ಮಾಡಿದರು. ಆದರೆ ಯೆಸ್ ಆರ್ ನೋ  ಪ್ರಶ್ನೆಯ ರೌಂಡ್ ಅನ್ನು ಕೊನೆ ಮಾಡಿದರು. ಬಳಿಕ ಡೌಲ್ ಆಗಿದ್ದ ಆರ್ಯವರ್ಧನ್ ಅವರಿಗೆ ಒಂದು ಹಾಡು ರೆಡಿಮಾಡಿ ಎಂದು ರೂಪೇಶ್ ಬಳಿ ಹೇಳಿದರು. ರೂಪೇಶ್ ಆರ್ಯವರ್ಧನ್ ಗಾಗಿ ಹಾಡನ್ನು ಹಾಡಿದರು. ಬಳಿಕ ಸೋನು ಗೌಡಗೂ ಹಾಡು ಹೇಳುವಂತೆ ಹೇಳಿದರು. ಸೋನು ಗೌಡ ಅವರ ಮೇಲು ಒಂದು ಹಾಡನ್ನು ಹಾಡಿ ಬೇಸರದಲ್ಲಿದ್ದ ಸೋನು ಅವರನ್ನು ಖುಷಿ ಪಡಿಸಿದರು.  

Latest Videos
Follow Us:
Download App:
  • android
  • ios