Bigg Boss OTT; ಮೊದಲ ವಾರವೇ ಬಿಗ್ ಮನೆಯಿಂದ ಔಟ್ ಆದ ಕಿರಣ್ ಯೋಗೇಶ್ವರ್, ಹಾಟ್ ಫೋಟೋ ವೈರಲ್
ಬಿಗ್ ಬಾಸ್ ಒಟಿಟಿ ಕನ್ನಡ ರಿಯಾಲಿಟಿ ಶೋ ಭಾರಿ ಕುತೂಹಲ ಮೂಡಿಸಿದೆ. ಮೊದಲ ವಾರ ಮನೆಯಿಂದ ಯಾರು ಹೊರಬರುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದರು. ಇದೀಗ ಮೊದಲ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯವಾಗಿದೆ. ಅಂದಹಾಗೆ ಬಿಗ್ ಬಾಸ್ ಒಟಿಟಿ ಮೊದಲವಾರ ಮನೆಯಿಂದ ಕಿರಣ್ ಯೋಗೇಶ್ವರ್ ಹೊರಬಂದಿದ್ದಾರೆ.
ಬಿಗ್ ಬಾಸ್ ಒಟಿಟಿ ಕನ್ನಡ ರಿಯಾಲಿಟಿ ಶೋ ಭಾರಿ ಕುತೂಹಲ ಮೂಡಿಸಿದೆ. ಮೊದಲ ವಾರ ಮನೆಯಿಂದ ಯಾರು ಹೊರಬರುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದರು. ಇದೀಗ ಮೊದಲ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯವಾಗಿದೆ. ಅಂದಹಾಗೆ ಬಿಗ್ ಬಾಸ್ ಒಟಿಟಿ ಮೊದಲವಾರ ಮನೆಯಿಂದ ಕಿರಣ್ ಯೋಗೇಶ್ವರ್ ಹೊರಬಂದಿದ್ದಾರೆ.
ಮಾಡೆಲ್ ಮತ್ತು ನಟಿ ಕಿರಣ್ ಯೋಗೇಶ್ವರ್ ಕನ್ನಡ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿರುವುದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಕಿರಣ್ ಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲಿ. ಆಧರೂ ಕಷ್ಟಪಟ್ಟು ಸಹ ಸ್ಪರ್ಧಿಗಳ ಜೊತೆ ಕನ್ನಡ ಮಾತನಾಡುತ್ತಿತ್ತರು. ಒಂದೇ ವಾರದಲ್ಲಿ ಮನೆಯಲ್ಲಿ ಎಲ್ಲರ ಜೊತೆ ತುಂಬಾ ಆಪ್ತರಾಗಿದ್ದರು. ಕೊನೆಗೆ ಒಂದೇ ವಾರದಲ್ಲಿ ಮನೆಯಿಂದ ಹೊರನಡೆದರು.
ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಮೊದಲ ಎಲಿಮಿನೇಷನ್ ಘೋಷಿಸಲಯಿತು. ಕಿರಣ್ ತುಂಬಾ ಬೇಸರದಲ್ಲಿಯೇ ಮನೆಯಿಂದ ಹೊರಬಂದರು. ರಾಸ್ಥಾನದ ಮೂಲದ ಈ ಸುಂದರಿ ಮಾಡೆಲ್ ಆಗಿ ಖ್ಯಾತಿಗಳಿಸಿದ್ದಾರೆ. ಕಿರಣ್ ಸಿಕ್ಕಾಪಟ್ಟೆ ಹಾಟ್ ಬೆಡಗಿ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಕಿರಣ್ ಫೋಟೋಗಳು ಈಗ ವೈರಲ್ ಆಗುತ್ತಿವೆ. ಉತ್ತರ ಭಾರತದ ಕಿರಣ್ ಯೋಗೇಶ್ವರ್ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಕಿರಣ್ ಮುಂದಿನ ನಡೆ ಕುತೂಹಲ ಮೂಡಿಸಿದೆ. ಸಿನಿಮಾಗಳಲ್ಲಿ ಸಕ್ರೀಯರಾಗುತ್ತಾರಾ ಅಥವಾ ಮಾಡಲೆಂಗ್ ಕ್ಷೇತ್ರದಲ್ಲೇ ಮುಂದುವರೆಯುತ್ತಾರಾ ಕಾದುನೋಡಬೇಕು.
ಬಿಗ್ ಮನೆಯಿಂದ ಹೊರಬರಂದ ಕಿರಣ್, ‘ಒಂದೇ ವಾರದಲ್ಲಿ ನಾನು ಎಲ್ಲ ಜೊತೆ ಕ್ಲೋಸ್ ಆದೆ. ನಿಮ್ಮೆಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ. ಈ ಮನೆಯನ್ನೂ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಹೇಳುವ ಬಿಗ್ ಬಾಸ್ ಒಟಿಟಿ ಮನೆಗೆ ವಿದಾಯ ಹೇಳಿದರು.ಬೇಸರದಿಂದ ದೊಡ್ಮನೆಯಿಂದ ಹೊರಬಂದರು.
ಅಂದಹಾಗೆ ಬಿಗ್ ಬಾಸ್ ಒಟಿಟಿಯ ಮೊದಲ ವಾರ ಮನೆಯಿಂದ ಎಲಿಮಿನೇಷನ್ಗೆ ನಾಮಿನೇಷನ್ ಅದ ಸ್ಪರ್ಧಿಗಳೆಂದರೆ ಸೋನು ಗೌಡ, ಸ್ಫೂರ್ತಿ ಗೌಡ, ಆರ್ಯವರ್ಧನ್, ಜಶ್ವಂತ್, ಕಿರಣ್ ಮತ್ತು ಅಕ್ಷತಾ ಇವರಲ್ಲಿ ಯಾರು ಹೊರಬರುತ್ತಾರೆ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಸದ್ಯ ಕಿರಣ್ ಯೋಗೇಶ್ವರ್ ಮನೆಯಿಂದ ಔಟ್ ಆಗಿದ್ದಾರೆ.
kiran
ಬಿಗ್ ಬಾಸ್ ಒಟಿಟಿ ಮನೆಗೆ ಒಟ್ಟು 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಆರ್ಯವರ್ಧನ್ ಗುರೂಜಿ, ಸೋನು ಗೌಡ, ಅರ್ಜುನ್, ಉದಯ್, ರಾಕೇಶ್ ಅಡಿಗ, ಸ್ಪೂರ್ತಿ ಗೌಡ, ಸಾನಿಯಾ ಐಯ್ಯರ್, ಜಯಶ್ರೀ ಆರಾಧ್ಯ, ಚೈತ್ರ ಹಳ್ಳಿಕೇರಿ, ರೂಪೇಶ್ ಶೆಟ್ಟಿ, ಲೋಕೇಶ್, ಸೋಮಣ್ಣ ಮಾಚಿಮಾಡ, ಕಿರಣ್, ಅಕ್ಷತಾ ಕುಕಿ, ನಂದಿನಿ ಮತ್ತು ಜಶ್ವಂತ್. ಇದೀಗ ಮೊದಲ ಸ್ಪರ್ಧಿ ಹೊರಬಂದಿದ್ದು ಸದ್ಯ 15 ಸ್ಪರ್ಧಿಗಳಿದ್ದಾರೆ.