Asianet Suvarna News Asianet Suvarna News

ನನ್ನ ತಾಯಿ ಡಬಲ್‌ ಡಿವೋರ್ಸಿ, ತಂದೆನೇ ನನ್ನ ಬೆಡ್‌ರೂಮ್‌ ವಿಡಿಯೋ ಲೀಕ್‌ ಮಾಡಿದ್ರು: ಸಾನಿಯ ಅಯ್ಯರ್

ಬಿಗ್ ಬಾಸ್ ಓಟಿಟಿಯಲ್ಲಿ ಪುಟ್ಟಗೌರಿ ಮದುವೆ ಖ್ಯಾತಿಯ ಸಾನ್ಯ ಅಯ್ಯರ್. 'ನಾನು ಯಾರು' ಎನ್ನುವ ಪ್ರಶ್ನೆಗೆ ಜೀವನದ ಕಹಿ ಘಟನೆ ನೆನಪಿಸಿಕೊಂಡ ನಟಿ...
 

Bigg boss ott kannada Saanya Iyer reveals about her relationship with abusive step father vcs
Author
Bangalore, First Published Aug 8, 2022, 11:32 AM IST

'ಪುಟ್ಟಗೌರಿ ಮದುವೆ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಬಾಲನಟಿಯಾಗಿ ಪರಿಚಯವಾದ ಸಾನ್ಯ ಅಯ್ಯರ್‌ ಇದೀಗ ಬಿಗ್ ಬಾಸ್‌ ಓಟಿಟಿ ಸೀಸನ್‌ 1ರಲ್ಲಿ ಸ್ಪರ್ಧಿಸುತ್ತಿದ್ದಾರೆ. ವರ್ಕೌಟ್, ಯೋಗ ಮತ್ತು ಡ್ಯಾನ್ಸ್‌ ಮಾಡಿಕೊಂಡು ಪ್ರತಿಯೊಬ್ಬ ಸ್ಪರ್ಧಿ ಜೊಗೆ ಸಂತೋಷವಾಗಿರುವ ಸಾನಿಯಾ 'ನಾನು ಯಾರು' ಎಂದು ಪರಿಚಯ ಮಾಡಿಕೊಳ್ಳಬೇಕು ಎಂದು ಬಿಗ್ ಬಾಸ್ ಆದೇಶಿಸುತ್ತಾರೆ. ಈ ಸಮಯದಲ್ಲಿ ತಂದೆಯಿಂದ ಪಡೆದ ಹಿಂಸೆಯನ್ನು ಬಹಿರಂಗ ಪಡಿಸಿದ್ದಾರೆ....

'ನನ್ನ ತಾಯಿಗಾಗಿ ನನ್ನ ಮಲತಂದೆ ನನ್ನ ಹೆಸರು ಕೆಡಿಸಿದ್ದರು' ಎನ್ನುವ ಸಾಲುಗಳನ್ನು ಬಿಗ್ ಬಾಸ್‌ ಪೇಪರ್‌ವೊಂದರ ಮೇಲೆ ಬರೆದು ಕೊಡುತ್ತಾರೆ. ಈ ವಿಚಾರದ ಬಗ್ಗೆ ಸಾನ್ಯ ಮಾತನಾಡಿ ಭಾವುಕರಾಗುತ್ತಾರೆ.

ಸಾನ್ಯ ಮಾತು: 

'ನನ್ನ ತಾಯಿ ಡಬಲ್ ಡಿವೋರ್ಸಿ. ಒಂದು ನನ್ನ ಬಯೋಲಾಜಿಕಲ್ ಫಾದರ್ ಮತ್ತೊಬ್ಬರು ಫಾದರ್ ಫಿಗರ್. ಬಯೋಲಾಜಿಕಲ್ ಫಾದರ್ ಜೊತೆ ನನ್ನ ಸಂಬಂಧ ಅಷ್ಟಕ್ಕೆ ಅಷ್ಟೆ ಏಕೆಂದರೆ ಚಿಕ್ಕ ವಯಸ್ಸಿಗೆ ಅವರಿಂದ ದೂರ ಉಳಿದುಬಿಟ್ಟೆ. ಫಾದರ್‌ ಫಿಗರ್‌ನ ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದಿರುವೆ ನನ್ನ ತಾಯಿಗೆ ಸ್ನೇಹಿತೆ ಅಗಿರುವಾಗಲೂ ನಾನು ಅವರನ್ನು ನೋಡಿರುವೆ. ಅವರಿಬ್ಬರೂ ಮದುವೆ ಆಗುತ್ತಾರೆ. ಮದ್ವೆ ಆದ್ಮೇಲೆ ತಾಯಿಗೆ ಅನಿಸುತ್ತದೆ ಇದು ಆಕೆ ತೆಗೆದುಕೊಂಡ ತಪ್ಪು ನಿರ್ಧಾರ ಅಂತ. ಸ್ನೇಹಿತನಾಗಿದ್ದಾಗ ಸಂಬಂಧ ಚೆನ್ನಾಗಿತ್ತು ಆದರೆ ಪಾರ್ಟನರ್‌ ಆದಾಗ ಚೆನ್ನಾಗಿರಲಿಲ್ಲ. ಇದುವರೆಗೂ ನಾನು ನನ್ನ ಫಾದರ್‌ ಫಿಗರ್‌ ಜೊತೆ ಒಂದು ವಿಚಾರ ಹೇಳಿಕೊಂಡಿಲ್ಲ, ಏನೆಂದರೆ ಅವರು ನನ್ನ ಅಮ್ಮನ ಜೀವನದಲ್ಲಿ ಉಳಿಯಬೇಕು ಅಂತ ನನಗೆ ಕೆಟ್ಟ ಹೆಸರು ತರುತ್ತಾರೆ' ಎಂದು ಸಾನ್ಯ ಘಟನೆ ಬಗ್ಗೆ ವಿವರಿಸಿದ್ದಾರೆ.

Bigg boss ott kannada Saanya Iyer reveals about her relationship with abusive step father vcs

'ನನ್ನ ಬಾಯ್‌ಫ್ರೆಂಡ್‌ ಜೊತೆ ನಾನು ರೂಮಿನಲ್ಲಿ ಇರುತ್ತೀನಿ. ಮೈ ತುಂಬಾ ಬಟ್ಟೆ ಧರಿಸಿರುವೆ ಏನೂ ಆಗಿರುವುದಿಲ್ಲ ನಾವಿಬ್ಬರೂ ಸುಮ್ಮನೆ ಮಂಚದ ಮೇಲೆ ಕುಳಿತುಕೊಂಡಿರುತ್ತೀವಿ. ನನ್ನ ಫಾದರ್ ಫಿಗರ್ ತುಂಬಾ ಚೀಪ್ ಆಗಿ ವರ್ತಿಸುತ್ತಾರೆ. ನಮ್ಮ ಪಕ್ಕದ ಮನೆಗೆ ಹೋಗಿ ಅಲ್ಲಿಂದ ಕಿಟಕಿಯಿಂದ ವಿಡಿಯೋ ಮಾಡಿಕೊಳ್ಳುತ್ತಾರೆ, ಏನೋ ಮಾಡುತ್ತಿರುವ ರೀತಿ ಬಿಲ್ಡಪ್ ಕೊಟ್ರು. ನಮ್ಮ ಮನೆಯಲ್ಲಿದ್ದರೂ ಅವರು ಸಪರೇಟ್ ಆಗಿರುತ್ತಿದ್ದರು ಆ ಎಲ್ಲಾ ಇರಿಟೇಷನ್‌ ಇರಬೇಕು ಈ ವಿಡಿಯೋನ ಮೊದಲ ನನ್ನ ಅಜ್ಜಿಗೆ ತೋರಿಸಿದ್ದಾರೆ. ನನ್ನ ಜಾಗದಲ್ಲಿ ಅವರು ಬರಬೇಕು ಅಂತ ಈ ರೀತಿ ಮಾಡುತ್ತಾರೆ. ನನ್ನ ಅಜ್ಜಿ ಚಿಕ್ಕಮ ಮಾತ್ರವಲ್ಲ ಇಡೀ ಇಂಡಸ್ಟ್ರಿಗೆ ತೋರಿಸುತ್ತಾರೆ. ಈಗಲ್ಲೂ ನನ್ನ ತಾಯಿ ಆ ವಿಡಿಯೋ ನೋಡಿಲ್ಲ ಈಗಲ್ಲೂ ಪ್ರಶ್ನೆ ಮಾಡುತ್ತಾರೆ ಆ ವಿಡಿಯೋದಲ್ಲಿ ಏನಿತ್ತು. ಆ ವಿಡಿಯೋದಲ್ಲಿ ಏನೂ ಇರಲಿಲ್ಲ ನಿನಗೆ ಅವಮಾನ ಮಾಡುವಂತೆ ನಾನು ಏನೂ ಮಾಡಿಲ್ಲ ಅಂತ ಪದೇ ಪದೇ ಹೇಳುವೆ. ಫಾದರ್ ಫಿಗರ್ ಚಿತ್ರರಂಗದವರೇ ಆಗಿರುವ ಕಾರಣ ವಿಡಿಯೋನ ಎಲ್ಲರಿಗೂ ತೋರಿಸಿ ಒಂಟಿ ತಾಯಿಯಾಗಿ ಅಕೆಗೆ ಮಗಳನ್ನು ನೋಡಿಕೊಳ್ಳುವುದಕ್ಕೆ ಅಗುತ್ತಿಲ್ಲ ಎನ್ನುತ್ತಾರೆ' ಎಂದು ತಂದೆ ಮಾಡಿದ ಕೆಲಸದ ಬಗ್ಗೆ ಸಾನ್ಯ ಮಾತನಾಡುತ್ತಾರೆ.

ನನ್ನ ಜೀವನ ಓಪನ್‌ಬುಕ್‌, ರೀಸೆಂಟ್ ಆಗಿ ಬ್ರೇಕಪ್ ಮಾಡ್ಕೊಂಡೆ: ರಾಕೇಶ್ ಅಡಿಗ ಶಾಕಿಂಗ್ ಹೇಳಿಕೆಗಳು!

'ಒಂದು ದಿನ ಒಬ್ರು ನನ್ನ ತಾಯಿ ಬಳಿ ನಿಮ್ಮ ಮಗಳ ವಿಡಿಯೋ ನೋಡುದ್ವಿ ಅಂತ ಹೇಳಿದ್ದಾರೆ. ದೇವರ ಮೇಲೆ ನಾನು ಆಣೆ ಮಾಡಿ ಹೇಳುತ್ತೀನಿ ನಾನು ಸುಮ್ಮನೆ ಕುಳಿತುಕೊಂಡಿದ್ದ ವಿಡಿಯೋ ಅದು ಆದರೂ ನನ್ನ ತಾಯಿಗೆ ನನ್ನ ಮೇಲೆ ನಂಬಿಕೆ ಇಲ್ಲ. ಒಂದು ವಿಚಾರ ನನಗೆ ಅರ್ಥ ಆಗುತ್ತಿಲ್ಲ ಚಿಕ್ಕ ವಯಸ್ಸಿನಿಂದ ನನ್ನನ್ನು ಬೆಳಸಿಕೊಂಡು ಬಂದಿರುವೆ, ಅಪ್ಪ ಅಂತ ಬಾಯಿ ಬಿಟ್ಟು ಕರೆದಿರುವೆ ನಿನ್ನ ಜೊತೆ ಆಟವಾಡಿದ್ದೀನಿ ಕೈ ತುತ್ತು ತಿಂದಿರುವೆ ಟ್ರಿಪ್ ಕರ್ಕೊಂಡ ಹೋಗಿದ್ಯಾ..ಎಲ್ಲಾ ಮಾಡಿದ್ಯಾ ನಿನಗೆ ಗೊತ್ತು ನನಗೆ ಅಪ್ಪ ಅಂದ್ರೆ ಎಷ್ಟು ಇಷ್ಟ ಇತ್ತು ಅಂತ ಅಮ್ಮನಿಗೂ ಜೀವನದಲ್ಲಿ ಸರಿಯಾಗಿ ಪ್ರೀತಿ ಸಿಕ್ಕಿಲ್ಲ ನನ್ನಿಂದ ನೀನು ಸಮಾಜದಲ್ಲಿ ನನ್ನ ತಾಯಿ ತಲೆ ತಗ್ಗಿಸುವಂತೆ ಮಾಡಿರುವೆ. ಜೀವನದಲ್ಲಿ ಸರಿಯಾಗಿ ಗಂಡಸರನ್ನು ನೋಡಿಲ್ಲ . ಅತಿ ಹೆಚ್ಚು ಒತ್ತಡ ಕೊಟ್ಟಿರುವ ಘಟನೆಗಳಿದು. ನನ್ನ ಫ್ಯಾಮಿಲಿ ಪೂರ್ತಿ ನನಗೆ ಸಪೋರ್ಟ್ ಆಗಿ ನಿಂತಿದ್ದಾರೆ. ನಾವೆಲ್ಲಾ ಇಂಡಿಪೆಂಡೆಂಟ್ ಮಹಿಳೆಯರು. ನನ್ನ ಬಾಳ ಸಂಗಾತಿ ಕೂಡ ಇಂಡಿಪೆಂಡೆಂಟ್ ಆಗಿರಬೇಕು. ಈ ಘಟನೆ ನಿಮಗೆ ಅರ್ಥ ಮಾಡಿಸಿ ತಾಯಿಗೆ ಕ್ಷಮೆ ಕೇಳುತ್ತೀನಿ' ಎಂದು ಸಾನ್ಯ ಹೇಳಿದ್ದಾರೆ.

Follow Us:
Download App:
  • android
  • ios