Asianet Suvarna News Asianet Suvarna News

ನನ್ನ ಜೀವನ ಓಪನ್‌ಬುಕ್‌, ರೀಸೆಂಟ್ ಆಗಿ ಬ್ರೇಕಪ್ ಮಾಡ್ಕೊಂಡೆ: ರಾಕೇಶ್ ಅಡಿಗ ಶಾಕಿಂಗ್ ಹೇಳಿಕೆಗಳು!

ಬಿಗ್ ಬಾಸ್‌ ಓಟಿಟಿಗೆ 8ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ರಾಕೇಶ್‌ ಅಡಿಗೆ ತಮ್ಮ ಪರ್ಸನಲ್‌ ಲೈಫ್‌ನ ಅನೇಕ ಘಟನೆಗಳನ್ನು ಇನ್ನಿತ್ತರ ಸ್ಪರ್ಧಿಗಳ ಜೊತೆ ಹಂಚಿಕೊಂಡಿದ್ದಾರೆ.

Actor Rakesh Adiga talks about relationship in bigg boss ott vcs
Author
Bangalore, First Published Aug 8, 2022, 10:22 AM IST

ಜೋಶ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಫೇಮಸ್‌ rapper ಆಗಿ ಗುರುತಿಸಿಕೊಂಡಿರುವ ರಾಕೇಶ್ ಅಡಿಗ ಬಿಗ್ ಬಾಸ್‌ ಓಟಿಟಿಗೆ 8ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಜನರ ಜೊತೆ ಹೊಂದಿಕೊಳ್ಳುವುದಕ್ಕೆ ಸಮಯ ತೆಗೆದುಕೊಳ್ಳುತ್ತಿರುವ ರಾಕೇಶ್ ಲೀವಿಂಗ್ ಏರಿಯಾದಲ್ಲಿ ಜಯಶ್ರೀ ಆರಧ್ಯಾ ಜೊತೆ ರಿಲೇಷನ್‌ಶಿಪ್‌- ಕಂಪ್ಯಾನಿಯನ್‌ ಬಗ್ಗೆ ಮಾತನಾಡಿದ್ದಾರೆ. 

'ಒಂದು ತಟ್ಟೆಯಲ್ಲಿ ಇಬ್ಬರು ತಿಂದ್ದರೂ 16 ಜನರು ತಿನ್ನಬಹುದು. ಅದೆಲ್ಲಾ ಇಲ್ಲಿ ಯಾರೂ ಯೋಚನೆ ಮಾಡುವುದಿಲ್ಲ. ಏನೂ ಅಡುಗೆ ಮಾಡೋಕೆ ಬರೆದವರು ಬಂದು ಮಾತನಾಡಿದ್ದರೆ ಬೇಸರ ಆಗುತ್ತೆ. ನಾವೂ ಏನೂ ಹೇಳುವಂತಿಲ್ಲ' ಎಂದು ಅಡುಗೆ ಬಗ್ಗೆ ಜಯಶ್ರೀ ಆರಧ್ಯಾ ಚರ್ಚೆ ಮಾಡುವಾಗ ಇದ್ದಕ್ಕಿದ್ದಂತೆ ರಾಕೇಶ್‌ ಬಾಯ್‌ಫ್ರೆಂಡ್ ಪ್ರಶ್ನೆ ಮಾಡುತ್ತಾರೆ.

Bigg Boss OTT; ಬಿಗ್ ಮನೆಗೆ ಎಂಟ್ರಿ ಕೊಡುವ ಸ್ಪರ್ಧಿಗಳ ಸಂಭಾವ್ಯ ಪಟ್ಟಿ

'ಜಯಶ್ರೀ ನಿಮಗೆ ಬಾಯ್‌ಫ್ರೆಂಡ್ ಇದ್ದಾರೆ' ಎಂದು ರಾಕೇಶ್ ಕೇಳುತ್ತಾರೆ. 'ನನಗೆ ಬಾಯ್‌ಫ್ರೆಂಡ್‌ ಇದ್ದಾರೆ ಗರ್ಲ್‌ಫ್ರೆಂಡ್ ಇದ್ದಾರೆ ಅಂತಲ್ಲ ನಾನು ಬಿಗ್ ಬಾಸ್‌ ಮನೆಯೊಳ್ಳಗೆ ಬರಬೇಕಿದ್ದರೆ ಒಬ್ಬರಾದ್ದರೂ ಕಂಪ್ಯಾನಿಯನ್‌ ಇರಬೇಕು ಅಂತ ಆಸೆ ಇತ್ತು. ಏನು ಬೇಕಿದ್ದರೂ ಮಾತನಾಡಿಕೊಳ್ಳಬಹುದು ಅನ್ನೋಹಾಗೆ' ಎಂದು ಜಯಶ್ರೀ ಉತ್ತರಿಸುತ್ತಾರೆ. ಅಲ್ಲಿಗೆ ನಿಲ್ಲಿಸದ ರಾಕೇಶ್ ' ಆ ಅರ್ಥದಲ್ಲಿ ನಾನು ಕೇಳುತ್ತಿಲ್ಲ ರಿಯಲ್‌ ಲೈಫ್‌ನಲ್ಲಿ ಬಾಯ್‌ಫ್ರೆಂಡ್‌ ಇಲ್ವಾ?' ಎಂದು ಮರು ಪ್ರಶ್ನೆ ಮಾಡುತ್ತಾರೆ. 'ಬಾಯ್‌ಫ್ರೆಂಡ್‌ ಗರ್ಲ್‌ಫ್ರೆಂಡ್‌ ಎಲ್ಲಾ ಏನೂ ಇಲ್ಲ ಜೊತೆಗೆ ಮಾತನಾಡಿಕೊಂಡು ಇರಲು ನನಗೆ ಕಂಪ್ಯಾನಿಯ ಬೇಕು ಅಷ್ಟೆ. ಬಾಯ್‌ಫ್ರೆಂಡ್ ಇರಬಾರದು ಏನೇ ಇದ್ದರೂ ಡೈರೆಕ್ಟ್‌ ಆಗಿ ಮದ್ವೆ ಆಗಬೇಕು' ಎಂದು ಜಯಶ್ರೀ ಹೇಳುತ್ತಾರೆ.

ಜಯಶ್ರೀ ಮಾತುಗಳನ್ನು ಕೇಳಿ ರಾಕೇಶ್‌ ತಮ್ಮ ಪ್ರೀತಿ ವಿಚಾರವನ್ನು ರಿವೀಲ್ ಮಾಡುತ್ತಾರೆ. 'ನಾನು ಕೂಡ ಒಂದು ರಿಲೇಷನ್‌ಶಿಪ್‌ನಲ್ಲಿ ಇದ್ದೆ. ಆದರೀಗ ನಾನು ಸಿಂಗಲ್ ಆಗಿರುವೆ' ಎಂದು ರಾಕೇಶ್ ಹೇಳಿದಾಗ 'ನಿಮ್ಮ ಬಗ್ಗೆ ನಾನು ಸಾಕಷ್ಟು ಗಾಸಿಪ್‌ಗಳನ್ನು ಓದಿರುವೆ. ಹೆಸರು ಎಲ್ಲಾ ಹೇಳುವುದಿಲ್ಲ ಆದರೆ ನಿಮ್ಮ ಬಗ್ಗೆ ಇತ್ತೀಚಿಗೆ ಹರಿದಾಡುತ್ತಿರುವ ವಿಚಾರಗಳ ಬಗ್ಗೆ ಓದಿರುವೆ' ಎನ್ನುತ್ತಾರೆ ಜಯಶ್ರೀ. 

ಯೋಗ್ಯತೆ ಇಲ್ದೆರೋರೆಲ್ಲಾ ಬಿಗ್ ಬಾಸ್‌ನಲ್ಲಿ; ಸೋನು ಶ್ರೀನಿವಾಸ್ ವಿರುದ್ಧ ಮುಗಿಬಿದ್ದ ನೆಟ್ಟಿಗರು

'ನನ್ನ ಜೀವನ ಒಂದು ಓಪನ್ ಬುಕ್‌ ರೀತಿ ಎಲ್ಲಾನೂ ಓಪನ್‌ ಆಗಿಟ್ಟಿರುವೆ. ಹೌದು ಈ ಹಿಂದೆ ನಾನೊಂದು ರಿಲೇಷನ್‌ಶಿಪ್‌ನಲ್ಲಿ ಇದ್ದೆ. ಮ್ಯೂಚುಯಲ್‌ ಆಗಿ ನಾವು ಬ್ರೇಕಪ್ ಮಾಡಿಕೊಂಡೆವು. ಕೊನೆಯಲ್ಲಿ ನಾನು ಒಂದು ವಿಚಾರ ಅರ್ಥ ಮಾಡಿಕೊಂಡೆ. ನಾನೇ ಸರಿ ಇಲ್ಲ ಒಂದು ಸಂಬಂಧವನ್ನು ಸರಿಯಾಗಿ ನಡೆಸಲು ನನಗೆ ಸಾಮರ್ಥ್ಯವಿಲ್ಲ ಸರಿಯಾಗಿ ಹ್ಯಾಂಡಲ್ ಮಾಡುವುದಕ್ಕೆ ಬರೋಲ್ಲ. ನನ್ನ ಲೈಫ್‌ಸ್ಟೈಲ್‌ ಬೇರೆ ನನ್ನ ಪ್ರಯಾರಿಟಿಗಳು ತುಂಬಾನೇ ಬೇರೆ ಹೀಗಿರುವಾಗ ಬೇರೆ ಅವರ ವಿರುದ್ಧ ದೂರು ಮಾಡುವುದಕ್ಕೆ ಇಷ್ಟವಿಲ್ಲ. ಒಂದು ಸಲ ಜೀವನ ಹಿಂತಿರುಗಿ ನೋಡಿದರೆ ನಾನೇ ಇದಕ್ಕೆಲ್ಲಾ ರೆಡಿ ಇಲ್ಲ ಅನಿಸುತ್ತದೆ' ಎಂದು ರಿಲೇಷನ್‌ಶಿಪ್‌ ಬಗ್ಗೆ ರಾಕೇಶ್ ಕ್ಲಾರಿಟಿ ಕೊಟ್ಟಿದ್ದಾರೆ.

ಅಲೆಮಾರಿ, ಕೋಟಿಗೊಂದ್ ಲವ್ ಸ್ಟೋರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ರಾಕೇಶ್ ಅಭಿನಯಿಸಿದ್ದಾರೆ.

ಗಾಂಜಾ ಲೀಗಲೈಸ್ :

ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಮಾಡಿದ ಡ್ರಗ್ಸ್‌ ಮಾಫಿಯಾ ಸಮಯದಲ್ಲಿ ನಟ ರಾಕೇಶ್‌ ಗಾಂಜಾದಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗವಿದೆ ಎಂದು ಮಾತನಾಡಿದ್ದರು. ರಾಕೇಶ್ , ಜೋಶ್ , ಅಲೆಮಾರಿ, ಡವ್ ಚಿತ್ರಗಳ ನಟ ರಾಕೇಶ್ ಅಡಿಗ ಡ್ರಗ್ಸ್ ಲೀಗಲ್ ಮಾಡಿ ಎಂದಿದ್ದಾರೆ. ಬೇಕಾದ್ರೆ ಮದ್ಯ ಬ್ಯಾನ್ ಮಾಡಿ. ಆದ್ರೆ ಗಾಂಜಾ ಮೆಡಿಸಿನ್ ತರ. ಇದನ್ನು ಲೀಗಲ್ ಮಾಡಿ ಎಂದವರು ಹೇಳಿದ್ದಾರೆ.ವಾಟ್ಸಾಪ್ ಸ್ಟೇಟಸ್ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ ನಟ ರಾಕೇಶ್ ಅಡಿಗ ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದರು.

Follow Us:
Download App:
  • android
  • ios