Bigg Boss OTT; ಕಳಪೆ ಎಂದಿದ್ದಕ್ಕೆ ಬಿಕ್ಕಿ ಬಿಕ್ಕಿ ಅಳುತ್ತ ಜೈಲು ಸೇರಿದ ಅಕ್ಷತಾ; ಗೆದ್ದು ಬೀಗಿದ ರಾಕೇಶ್

ಮೊದಲ ವಾರ ಬಿಗ್ ಬಾಸ್ ಮನೆಯಲ್ಲಿ ಅರ್ಜುನ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಮೊದಲ ವಾರದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ  ಅರ್ಜುನ್ ರಮೇಶ್, ಸೋಮಣ್ಣ ಮಾಚಿಮಾಡ, ಚೈತ್ರಾ ಹಳ್ಳಿಕೇರಿ ಹಾಗೂ ನಂದು ಇದ್ದರೂ. ಕೊನೆಗೆ ಅತಿ ಹೆಚ್ಚು ಅಂಕ ಪಡೆದು ಅರ್ಜುನ್  ಕ್ಯಾಪ್ಟನ್ ಆಗಿ ಆಯ್ಕೆಯಾದರು. ಅರ್ಜುನ್ ಅವರಿಗೆ ಕ್ಯಾಪ್ಟನ್ ರೂಮ್ ಸಿಕ್ಕಿದೆ. 

Bigg Boss OTT Kannada; rakesh Adiga best performer and Akshata worst performer in first week sgk

ಬಿಗ್​ ಬಾಸ್​ ಕನ್ನಡ ಒಟಿಟಿ ಮನೆ ಮೊದಲ ವಾರವೇ ಕಾವೇರಿತ್ತು. ಇನ್ನೇನು ಮೊದಲ ವಾರ ಕಳೆಯುತ್ತಾ ಬಂತು. ವೀಕೆಂಡ್ ಸಮೀಪಿಸುತ್ತಿದೆ. ಈ ವಾರ ಸ್ಪರ್ಧಿಗಳ ನಡುವೆ ಕಿತ್ತಾಟ, ಜಗಳ ರೋಜಾಗಿತ್ತು. ಆಗಸ್ಟ್​ 6ರಂದು ಗ್ರ್ಯಾಂಡ್ ಒಪನಿಂಗ್ ಪಡೆದುಕೊಂಡಿರುವ ಬಿಗ್ ಬಾಸ್ ಒಟಿಟಿ ರೋಚಕವಾಗಿದೆ.  ನಾನಾಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿಗಳು ಈ ಬಾರಿಯ ಬಿಗ್ ಬಾಸ್ ಒಟಿಟಿಯಲ್ಲಿದ್ದಾರೆ. ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​  ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ.  ಬಿಗ್ ಬಾಸ್ ಒಟಿಟಿಯಲ್ಲಿ ಒಟ್ಟು 16 ಸ್ಪರ್ಧಿಗಳಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಸ್ಪರ್ಧಿಗಳು ತಮ್ಮ ಅಸಲಿ ಆಟ ಪ್ರಾರಂಭಿಸಿದ್ದಾರೆ. ಸ್ಪರ್ಧಿಗಳು ತಮ್ಮ ತಮ್ಮ ಸ್ಥಾನ ಗಟ್ಟಿಮಾಡಿಕೊಳ್ಳಲು ತನ್ನದೆ ಶೈಲಿಯಲ್ಲಿ ಆಟ ಆಡುತ್ತಿದ್ದಾರೆ. ಬಿಗ್ ಬಾಸ್ ನೀಡಿದ್ದ ಟಾಸ್ಕ್ ಗಳಲ್ಲಿ ಸ್ಪರ್ಧಿಗಳು ನಾಮೇಲು ತಾಮೇಲು ಎಂದು ಭಾಗಿಯಾಗುತ್ತಿದ್ದರು.

ಮೊದಲ ವಾರ ಬಿಗ್ ಬಾಸ್ ಮನೆಯಲ್ಲಿ ಅರ್ಜುನ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಮೊದಲ ವಾರದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ  ಅರ್ಜುನ್ ರಮೇಶ್, ಸೋಮಣ್ಣ ಮಾಚಿಮಾಡ, ಚೈತ್ರಾ ಹಳ್ಳಿಕೇರಿ ಹಾಗೂ ನಂದು ಇದ್ದರೂ. ಕೊನೆಗೆ ಅತಿ ಹೆಚ್ಚು ಅಂಕ ಪಡೆದು ಅರ್ಜುನ್  ಕ್ಯಾಪ್ಟನ್ ಆಗಿ ಆಯ್ಕೆಯಾದರು. ಅರ್ಜುನ್ ಅವರಿಗೆ ಕ್ಯಾಪ್ಟನ್ ರೂಮ್ ಸಿಕ್ಕಿದೆ. 

ಇನ್ನು ಮೊದಲ ವಾರ ಉತ್ತಮ ಪ್ರದರ್ಶನ ನೀಡಿದ ಸ್ಪರ್ಧಿಯನ್ನು ಆಯ್ಕೆ ಮಾಡಲಾಗಿದೆ. ರಾಕೇಶ್ ಅಡಿಕಾ ಅತ್ಯುತ್ತಮ ಪ್ರದರ್ಶನ ನೀಡಿದ ಸ್ಪರ್ದಿ ಎನ್ನುವ ಪಟ್ಟ ಗೆದ್ದರು. ಸ್ಪರ್ಧಿಗಳು ರಾಕೇಶ್ ಅವರಿಗೆ ಒಟ್ ಹಾಕುವ ಮೂಲಕ ಅವರಿಗೆ ಉತ್ತಮ ಪ್ರದರ್ಶನ ನೀಡಿದ ಸ್ಪರ್ಧಿಯ ಆ್ಕೆ ಮಾಡಿದರು. 

ಇನ್ನು ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಯನ್ನು ಆಯ್ಕೆ ಮಾಡಲಾಗಿದೆ. ಮೊದಲ ವಾರ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿ ಎಂದು ಅಕ್ಷತಾ ಅವರನ್ನು ಆಯ್ಕೆ ಮಾಡಲಾಗಿದೆ.  ಎಲ್ಲರೂ ಅಕ್ಷತಾ ಹಸೆರು ಹೇಳುತ್ತಿದ್ದಂತೆ ಜೋರಾಗಿ ಅಳಲು ಪ್ರಾರಂಭಿಸಿದರು. ಬಳಿಕ ಕ್ಯಾಪ್ಟನ್ ಅರ್ಜುನ್ ಗೆಲುವು ಹೇಗೆ ಸ್ವೀಕರಿಸುತ್ತೀರೋ ಹಾಗೆ ಸೋಲನ್ನು ಸ್ವೀಕರಿಸಬೇಕು ಎಂದು ಹೇಳಿದರು. ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಯನ್ನು ಜೈಲಿಗೆ ಕಳುಹಿಸಲಾಗಿದೆ. ಬಿಗ್ ಬಾಸ್ ಒಟಿಟಿಯ ಮೊದಲ ವಾರ ಜೈಲು ಸೇರಿದ ಮೊದಲ ಸ್ಪರ್ಧಿ ಅಕ್ಷತಾ ಆಗಿದ್ದಾರೆ


Bigg Boss OTT; ನಾನ್ ಯಾವನಿಗೇನ್ ಕಮ್ಮಿ ಇಲ್ಲ, ತಾರಕಕ್ಕೇರಿದ ಆರ್ಯವರ್ಧನ್ - ಉದಯ್ ಜಗಳ


ಎಲಿಮಿನೇಷನ್‌ಗೆ ನಾಮಿನೇಟ್ ಆದ ಸ್ಪರ್ಧಿಗಳು

ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್‌ಗೆ ನಾಮಿನೇಷನ್ ಮಾಡಲಾಗಿದೆ. ಮೊದಲ ದಿನ ಬಿಗ್ ಮನೆಯಲ್ಲಿ ಎಲಿಮಿನೇಷನ್‌ಗೆ ನಾಮಿನೇಷನ್ ಅದ ಸ್ಪರ್ಧಿಗಳಲ್ಲಿ ಸೋನು ಗೌಡ, ಸ್ಫೂರ್ತಿ ಗೌಡ, ಆರ್ಯವರ್ಧನ್, ಜಶ್ವಂತ್,  ಕಿರಣ್ ಮತ್ತು ಅಕ್ಷತಾ ಮೊದಲ ದಿನ ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಈ ಬಾರಿ ಇವರಲ್ಲಿ ಯಾರು ಬಿಗ್ ಬಾಸ್ ಒಟಿಟಿಯಿಂದ ಹೊರಹೋಗ್ತಾರೆ ಎನ್ನುವುದು ವಾರಂತ್ಯದಲ್ಲಿ ಗೊತ್ತಾಗಲಿದೆ. 

ಬಿಗ್ ಮನೆಯಲ್ಲಿರುವ ಸ್ಪರ್ಧಿಗಳು 

 ಬಿಗ್ ಬಾಸ್ ಒಟಿಟಿ ಮನೆಯಲ್ಲಿ ಒಟ್ಟು 16 ಸ್ಪರ್ಧಿಗಳಿದ್ದಾರೆ. ಆರ್ಯವರ್ಧನ್ ಗುರೂಜಿ, ಸೋನು ಗೌಡ, ಅರ್ಜುನ್, ಉದಯ್, ರಾಕೇಶ್ ಅಡಿಗ, ಸ್ಪೂರ್ತಿ ಗೌಡ, ಸಾನಿಯಾ ಐಯ್ಯರ್, ಜಯಶ್ರೀ ಆರಾಧ್ಯ, ಚೈತ್ರ ಹಳ್ಳಿಕೇರಿ, ರೂಪೇಶ್ ಶೆಟ್ಟಿ, ಲೋಕೇಶ್, ಸೋಮಣ್ಣ ಮಾಚಿಮಾಡ, ಕಿರಣ್, ಅಕ್ಷತಾ ಕುಕಿ, ನಂದಿನಿ ಮತ್ತು ಜಶ್ವಂತ್ ಇದ್ದಾರೆ.

Latest Videos
Follow Us:
Download App:
  • android
  • ios