ಟಿಕ್‌ಟಾಕ್‌ ಮಾಡುತ್ತಾ ಬಿಗ್‌ ಬಾಸ್‌ ಸೀಸನ್‌-5 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಜನಪ್ರಿಯತೆ ಪಡೆದುಕೊಂಡ ನಟಿ ನಿವೇದಿತಾ ಗೌಡ ಹಾಗೂ ಚಂದನವನದಲ್ಲಿ Rap ಸಾಂಗ್‌ ಮೂಲಕ '3 Peg' ಹಾಕುವ ಗಾಯಕ ಚಂದನ್‌ ಶೆಟ್ಟಿ ಮನೆಯಲ್ಲಿ ಏನು ಮಾಡುತ್ತಿದ್ದಾರೆಂದು ಬಹಿರಂಗವಾಗಿದೆ.

ಫೆಬ್ರವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿ ಈಗ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ವಿಡಿಯೋ ಮಾಡುತ್ತಾ ಅಭಿಮಾನಿಗಳನ್ನು ಮನೋರಂಜಿಸುತ್ತಿರುತ್ತಾರೆ.

ನೀಳ ಕೇಶಕ್ಕೆ ಬಿತ್ತಾ ಕತ್ತರಿ: ನಿವೇದಿತಾ ಗೌಡ ಮೇಲೆ ಫ್ಯಾನ್ಸ್ ಗರಂ

ಮಾಹಾಮಾರಿ ಕೊರೋನಾ ವೈರಸ್‌ ಬೀರುತ್ತಿರುವ ಪರಿಣಾಮವನ್ನು ಪರಿಗಣಿಸಿ ಚಂದನ್‌ ಶೆಟ್ಟಿ ಹಾಗೂ ಪತ್ನಿ ನಿವೇದಿತಾ ಗೌಡ ಕೊರೋನಾ ಬಗ್ಗೆ ಹಾಡೊಂದನ್ನು ಸಂಯೋಜಿಸಿ ಹೆಚ್ಚೆ ಹಾಕಿದ್ದರು. ರಾಜ್ಯಾದ್ಯಾಂತ ವೈರಲ್‌ ಆದ ವಿಡಿಯೋ ಲಕ್ಷಾಂತರ ಮಂದಿಯಿಂದ ವೀಕ್ಷಿಸಲ್ಪಟ್ಟಿತ್ತು.

ಟಿಕ್‌ಟಾಕಲ್ಲಿ ಬ್ಯುಸಿಯಾದ ನಿವೇದಿತಾ!
ಟಿಕ್‌ಟಾಕ್‌ನಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುವ ಗೊಂಬೆ ನಿವೇದಿತಾ ಮದುವೆ ನಂತರ ಮತ್ತೆ ವಿಡಿಯೋ ಮಾಡಲು ಆರಂಭಿಸಿದ್ದಾರೆ. ನಿವೇದಿತಾ ಮಾಡ್ರನ್‌ ಆಗಿ ರೆಡಿಯಾಗಿ ಟಿಕ್‌ಟಾಕ್‌ ಮಾಡುತ್ತಿದ್ದರೆ, ಚಂದನ್‌ ಹಿಂದೆಯೇ ಬಾಗಿಲಿನಿಂದ ನುಸುಳಿಕೊಂಡು ವಿಡಿಯೋದಲ್ಲಿ ನಿವಿಯನ್ನು ನೂಕಿ ಫೋಸ್‌ ನೀಡುತ್ತಾರೆ. ಈ ವೇಳೆ ಚಂದನ್‌ ಕೈಯಲ್ಲಿ ನೆಲ ಒರಿಸುವ ಮಾಪ್‌ ಹಿಡಿದು ಕೊಂಡಿರುತ್ತಾರೆ. ಈ ವೀಡಿಯೋ ವೀಕ್ಷಿಸಿದ ನೆಟ್ಟಿಗರು ನಿವೇದಿತಾ ಟಿಕ್‌ಟಾಕ್‌ ಮಾಡಲು ಬಿಟ್ಟು, ಚಂದನ್‌ ಮನೆ ನೋಡಿ ಕೊಳ್ಳುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. 

 

 
 
 
 
 
 
 
 
 
 
 
 
 

🤪❤️ @chandanshettyofficial 🥰❤️

A post shared by Niveditha Gowda 👑 (@niveditha__gowda) on Apr 25, 2020 at 3:59am PDT

ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನ್‌ ಹಾಗೂ ನಿವೇದಿತಾ ಹನಿಮೂನ್‌ಗೆಂದು ನೆದರ್‌ಲ್ಯಾಂಡ್‌‌ಗೆ ಹೋಗಿದ್ದರು. ಅನೇಕ ಸ್ಥಳಗಳನ್ನು ಭೇಟಿ ನೀಡಬೇಕೆಂದು ಕೊಂಡಿದ್ದ ನವ ಜೋಡಿಗೆ ಕೊರೋನಾ ವೈರಸ್ ಅಡ್ಡಿಯಾಯಿತು.  ಯುರೋಪಿಯನ್ ದೇಶಗಳಲ್ಲಿ ಕೊರೋನಾ ಹೆಚ್ಚಾದ ಕಾರಣ ಹನಿಮೂನನ್ನು ಅರ್ಧಕ್ಕೇ ಬಿಟ್ಟು ಭಾರತಕ್ಕೆ ಹಿಂದಿರುಗಿದರು.

ಮಾರ್ಚ್‌ ಮೊದಲ ವಾರದಲ್ಲಿ ಬೆಂಗಳೂರಿಗೆ ಮರಳಿದರು. ಕೆಲ ದಿನಗಳ ಕಾಲ ಕ್ವಾರಂಟೈನ್ ಆಗಿ, ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿತ್ತು ಈ ಜೋಡಿ. ಮಾರ್ಚ್‌ ಮೊದಲ ವಾರದಲ್ಲಿ ಮೈಸೂರಿನ ಯಾವ ನಿವಾಸಿಗಳಿಗೂ ಕೊರೋನಾ ಇರಲಿಲ್ಲ. ವಿದೇಶದಿಂದ ಈ ಜೋಡಿ ಬಂದ ಕೂಡಲೇ ಸಾಂಸ್ಕೃತಿಕ ನಗರಿ ಜನರು ಆತಂಕಗೊಂಡು, ನಿವೇದಿತಾ ಹಾಗೂ ಚಂದನ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು, ಅವರು ಲಾಕ್‌ಡೌನ್‌ ಮುನ್ನವೇ ಭಾರತಕ್ಕೆ ಬಂದಿದ್ದಾರೆ ಮತ್ತು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ, ಎಂದ ಕೂಡಲೇ ಸುಮ್ಮನಾದರು. ಹರಿದಾಡುತ್ತಿದ್ದ ವದಂತಿಗಳಿಗೆ ನವ ಜೋಡಿಗಳು ಮಾಧ್ಯಮಗಳಲ್ಲಿ ಲೈವ್‌ ಬರುವ ಮೂಲಕ ಸ್ಪಷ್ಟನೆಯನ್ನೂ ನೀಡಿತ್ತು. 

ಕೊರೋನಾ ನಿನಗೆ ಮಾಡ್ತೀವಿ ತಿಥಿನಾ ಅಂದ್ರು ಚಂದನ್‌-ನಿವೇದಿತಾ!

ಅಷ್ಟೇ ಅಲ್ಲ, ಕೊರೋನಾ ವಿರುದ್ಧ ಹಾಡು ಹಾಡುವಾಗ ನಿವೇದಿತಾ ಕೂದಲು ಕಟ್ ಆದಂತೆ ಕಂಡಿದ್ದು, ಅದಕ್ಕೂ ನೆಟ್ಟಿಗರು ಫುಲ್ ಬೇಜಾರು ಆಗಿದ್ದರು. ಮುದ್ದು ಮುದ್ದಾದ ಮಾತಿನೊಂದಿಗೆ, ನಿವೇದಿತಾ ಕೂದಲೂ ಸಹ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಂಥ ನೀಳ ಕೇಶಕ್ಕೆ ಕತ್ತರಿ ಹಾಕಿದ್ದಾರೆಂದೂ ಅಭಿಮಾನಗಳು ಮುನಿಸಿಕೊಂಡಿದ್ದರು. 

"