ಪಕ್ಕಾ ಮೇಡ್‌ ಇನ್‌ ಚೈನಾ ವೈರಸ್‌ ಬಗ್ಗೆ ಬಿಗ್‌ ಬಾಸ್‌ ಸೀಸನ್‌-5 ಸ್ಪರ್ಧಿ ಕಮ್‌ ನವ ದಂಪತಿಗಳಾದ ಚಂದನ್‌ ಶೆಟ್ಟಿ - ನಿವೇದಿತಾ ಗೌಡ ಕಟ್ಟಿರುವ ಈ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ... 

ಕನ್ನಡ ಹಾಡುಗಳನ್ನು Rap ಮಾಡುವ ಮೂಲಕ ಜನ ಪ್ರಿಯವಾದ ಗಾಯಕ ಚಂದನ್‌ ಶೆಟ್ಟಿ ಹಾಗೂ ಟಿಕ್‌ಟಾಕ್ ಕ್ವೀನ್‌ ನಿವೇದಿತಾ ಗೌಡ ಮಾಹಾಮಾರಿ ಕೊರೋನಾ ಹೋಗಲಾಡಿಸಲು ಹಾಡೊಂದನ್ನು ಸಂಯೋಜಿಸಿದ್ದಾರೆ.

'ಎಣ್ಣೆ ಸಪ್ಲೈ ಮಾಡ್ಬೋದೇನೋ ಕುಡುಕ್ರು ಸ್ವಲ್ಪ ತಡ್ಕೊಳ್ಳಿ, ಪೊಲೀಸ್‌ ಲಾಠಿ ಏಟು ತಿಂದೋವ್ರು ನೋವಿಗೆ ಮುಲಾಮು ಹಚ್ಕೊಳ್ಳಿ, ನಾವೆಲ್ಲಾ ಮನೆಲೇ ಇರೋಣಾ' ಎಂದು ಹೇಳುವ ಮೂಲಕ ಶುರುವಾಗುವ ಸಾಂಗ್‌ ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಹನಿಮೂನ್‌ ಮುಗಿಸಿ ನಿವೇದಿತಾ -ಚಂದನ್ ರಿಟರ್ನ್‌; ನೇರ ಮಾತಲ್ಲಿ ಅಭಿಮಾನಿಗಳಿಗೆ ಮನವಿ!

ಕೆಂಪು ಹಾಗೂ ನೀಲಿ ವಸ್ತ್ರದಲ್ಲಿ ಕಂಗೊಳ್ಳಿಸುತ್ತಿರುವ ಈ ಜೋಡಿ ಎಲ್ಲರ ಗಮನ ಸೆಳೆದಿದೆ. ಫೆಬ್ರವರಿ 25-26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಹನಿಮೂನ್‌ಗೆಂದು ನೆದರ್‌ಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದರು. ಆದರೆ ಅಲ್ಲಿಯೂ ಕೊರೋನಾ ವೈರಸ್‌ ಹೆಚ್ಚಾಗುತ್ತಿರುವುದು ತಿಳಿಯುತ್ತಿದ್ದಂತೆ, ಭಾರತಕ್ಕೆ ಹಿಂದಿರುಗಿ, ಸ್ಕ್ರೀನಿಂಗ್ ಮಾಡಿಸಿಕೊಂಡು ಭಾರತ ಸರ್ಕಾರ ಜಾರಿಗೊಳಿಸಿದ ನಿಯಮಗಳನ್ನು ಪಾಲಿಸಿದೆ.

View post on Instagram

ಮಾರ್ಚ್‌ 25ರಂದು ಹೊಸ ವರ್ಷ ಅಂದ್ರೆ ಯುಗಾದಿ ಹಬ್ಬವನ್ನು ಮನೆಯಲ್ಲೇ ಸರಳವಾಗಿ ಆಚರಿಸಿದ್ದಾರೆ.

"