ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಡಿಗೆ ಬಿಗ್​ಬಾಸ್​ ನಿವೇದಿತಾ ರೀಲ್ಸ್​ ಮಾಡಿದ್ದಾರೆ. ನೆಟ್ಟಿಗರು ಏನಂದ್ರು ನೋಡಿ... 

ಕಿರಿಕ್​ ಪಾರ್ಟಿ ಚಿತ್ರದ ಬೆಳಗೆದ್ದು ಯಾರ ಮುಖವ ನಾನು ನೋಡಿದೆ.. ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ ಹಾಡು ಸಕತ್​ ಫೇಮಸ್​ ಆಗಿದೆ. ಈಗ ಅದೇ ಹಾಡಿಗೆ ಬಿಗ್​ಬಾಸ್​ ಗೊಂಬೆ ನಿವೇದಿತಾ ರೀಲ್ಸ್​ ಮಾಡಿದ್ದಾರೆ. ಮೊದಲಿಗೆ ಷಾರ್ಟ್ಸ್​ ಹಾಕಿ, ಅದಾದ ಬಳಿಕ ಸೀರೆ ತೊಟ್ಟು ಥೇಟ್​ ಗೊಂಬೆಯಂತೆಯೇ ಕಾಣಿಸುತ್ತಿದ್ದಾರೆ ನಿವೇದಿತಾ. ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ನಿವೇದಿತಾ ಅವರಿಗೆ ಪ್ರೀತಿಯ ಜೊತೆ ಕಾಲೆಳೆಯುವವರೂ ಅಷ್ಟೇ ಜನ. ಟ್ರೋಲ್​ಗಳಿಗೂ ಲೆಕ್ಕವೇ ಇಲ್ಲ. ಟ್ರೋಲ್​ಗೆ ಜಗ್ಗದೇ ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ. ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಈಚೆಗಷ್ಟೇ ರಶ್ಮಿಕಾ ಮಂದಣ್ಣನವರ ಹಾಡಿಗೆ ಸ್ಟೆಪ್​ಹಾಕಿದ್ದರು. ಆದರೆ ಸದಾ ನಿವೇದಿತಾ ಬೇರೆ ಭಾಷೆಯ ಹಾಡುಗಳಿಗೆ ರೀಲ್ಸ್​ ಮಾಡುವುದಕ್ಕೆ ಈಕೆಯ ಅಭಿಮಾನಿಗಳ ತಕರಾರು ಇದ್ದೇ ಇದೆ. ಇಂಗ್ಲಿಷ್​ ಹಾಡುಗಳನ್ನೇ ಹೆಚ್ಚು ಆಯ್ದುಕೊಳ್ಳುವ ನಿವೇದಿತಾ ತಮಿಳಿನ ಹಾಡಿಗೆ ರೀಲ್ಸ್​ ಕೂಡ ಮಾಡುತ್ತಾರೆ. ಆದರೆ ಕನ್ನಡ ಹಾಡಿಗೆ ಸ್ಟೆಪ್​ ಮಾಡುವುದು ಕಡಿಮೆ.

ಆದರೆ ಇದೀಗ ನಿವೇದಿತಾ ಫ್ಯಾನ್ಸ್ ಸಕತ್​ ಖುಷಿಯಾಗಿದ್ದಾರೆ. ಇದಕ್ಕೆ ಕಾರಣ, ಕಿರಿಕ್​ ಪಾರ್ಟಿ ಚಿತ್ರದ ಬೆಳಗೆದ್ದು ಯಾರ ಮುಖವ ನಾನು ನೋಡಿದೆ.. ಅಂದಾನೋ ಅದೃಷ್ಟಾನೋ ಮುಂದೆ ಕುಂತಿದೆ ಹಾಡಿಗೆ ನಿವೇದಿತಾ ರೀಲ್ಸ್​ ಮಾಡಿದ್ದಾರೆ. ಅದಕ್ಕೆ ಹಲವರು ಕಾಲೆಳೆಯುತ್ತಲೇ ಪ್ರೀತಿಯನ್ನೂ ತೋರಿದ್ದಾರೆ. ನೀನು ಯಾರ ಮುಖ ಬೇಕಾದ್ರೂ ನೋಡಿಕೊ... ಕೊನೆಗೂ ಕನ್ನಡ ಹಾಡಿಗೆ ರೀಲ್ಸ್​ ಮಾಡಿದ್ಯಲ್ಲಾ, ಅದೇ ಸಂತೋಷ ಎನ್ನುತ್ತಿದ್ದಾರೆ ಫ್ಯಾನ್ಸ್​. ಇನ್ನು ಕೆಲವರು ಪಕ್ಕದಲ್ಲಿ ಗಂಡ ಚಂದನ್​ ಶೆಟ್ಟಿ ಇರುವಾಗಿ ಇನ್ಯಾರ ಮುಖ ನೋಡ್ತಿಯಮ್ಮಾ ಎಂದೂ ತಮಾಷೆ ಮಾಡಿದ್ದಾರೆ.

ಏನ್ಮಾಡಿದ್ರೂ ನೀನು ರಶ್ಮಿಕಾ ಆಗಲ್ಲ, ಈಗ್ಲಾದ್ರೂ ರಾಮ ನಾಮ ಜಪಿಸ್ಬಾರ್ದಾ? ನಿವೇದಿತಾಗೆ ನೆಟ್ಟಿಗರ ಕ್ಲಾಸ್

ನಿವೇದಿತಾ ಅವರ ಈ ರೀಲ್ಸ್​ಗೂ ಸಕತ್​ ಕಮೆಂಟ್​ಗಳ ಸುರಿಮಳೆಯಾಗಿದೆ. ಕೆಲ ದಿನಗಳ ಹಿಂದೆ ನಿವೇದಿತಾ ಅವರು ಹಾಡೊಂದನ್ನು ಹಾಡಿ ಎಲ್ಲರ ಮನ ಗೆದ್ದಿದ್ದರು. ಸೊಂಟ ಬಳುಕಿಸುತ್ತಾ ಡ್ಯಾನ್ಸ್ ಮಾಡುತ್ತಿದ್ದ ನಿವೇದಿತಾ ಸಹೋದರನ ಜೊತೆ ಸೇರಿ ಹಾಡಿದ ಹಾಡು ಕೇಳಿ ಫ್ಯಾನ್ಸ್​ ಖುಷಿಯಾಗಿದ್ದರು. ಯಾವುದೇ ಡ್ರೆಸ್​ ಹಾಕಿದರೂ ಸಕತ್​ ಕ್ಯೂಟ್​ ಆಗಿ ಕಾಣಿಸೋ ನಿವೇದಿತಾ ಅವರು ಹಾಡು ಹೇಳುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹಾರ್ಟ್​ ಇಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿ ಹೋಗಿತ್ತು. ತಮಿಳಿನ ಹಾಡಿಗೆ ಸಕತ್​ ಧ್ವನಿ ನೀಡಿದ್ದಾರೆ ನಿವೇದಿತಾ. ಸಹೋದರ ಮತ್ತು ನಾನು ಸಿಂಗರ್​ ಅಲ್ಲ, ಸುಮ್ಮನೇ ಈ ವಿಡಿಯೋ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೂ ಇವರ ಮಧುರ ಕಂಠಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. 

ಇದಕ್ಕೂ ಮುನ್ನ ನಿವೇದಿತಾ, 1981ರಲ್ಲಿ ತೆರೆ ಕಂಡ ಶಂಕರ್​ನಾಗ್​ ಅಭಿನಯದ ಗೀತಾ ಚಿತ್ರದ ಜೊತೆಯಲಿ ಜೊತೆಜೊತೆಯಲಿ ಹಾಡಿಗೆ ರೀಲ್ಸ್​ ಮಾಡಿದ್ದರು. ಈ ಹಾಡಿನಲ್ಲಿ ಬರುವ ಪ್ರೀತಿ ಎಂದರೇನು ಎಂದು ಈಗ ಅರಿತೆ ನಾ... ಎನ್ನುತ್ತಿದ್ದಂತೆಯೇ ನಿವೇದಿತಾ ಫ್ಯಾನ್ಸ್​ ಓಹೊ ಈಗ ಪ್ರೀತಿಯ ಅರ್ಥ ಆಯ್ತಾ? ಮದ್ವೆಯಾಗಿ ಮೂರು ವರ್ಷ ಆದ್ಮೇಲೆ ಈಗ ಗೊತ್ತಾಯ್ತಾ ಎಂದು ಕಾಲೆಳೆದಿದ್ದರು. ಈ ರೀಲ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದರು. ಈಗಲೂ ಹಾರ್ಟ್​ ಇಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿದೆ. ಇದರಲ್ಲಿ ಮಾಮೂಲಿನಮತೆ ನಿವೇದಿತಾ ಮುದ್ದಾಗಿ ಕಾಣಿಸುವ ಕಾರಣ, ಅನೇಕ ಮಂದಿ ಇದೇ ರೀತಿ ಸದಾ ಕಾಣಿಸುತ್ತಿರಿ ಎಂದಿದ್ದರೆ, ಮಿನಿ, ಮಿಡಿ, ಷಾರ್ಟ್ಸ್​ ಎಲ್ಲಾ ಬಿಟ್ಟು ಹೀಗೆ ಕಾಣಿಸಿಕೊಳ್ಳಿ ಎಂದು ಮತ್ತೆ ಕೆಲವರು ಹೇಳಿದ್ದಾರೆ. 

'ಕೆ' ಅಕ್ಷರದ ಜ್ಯೋತಿಷಿ ಮಾತು ನೆನಪಿಸಿದ ಕೋಮಲ್​: ಕಾರ್ತಿಕ್​ಗೆ ಮಗಳ ಸಂದೇಶ ತಲುಪಿಸಿದ ಶ್ರುತಿ

View post on Instagram