ಬಿಬಿ ಮನೆಯಿಂದ ಹೊರ ಬಂದ ಮೇಲೆ ಕಿರಿಕ್ ಮಾಡಿಕೊಂಡ ರಕ್ಷಕ್. ವೇದಿಕೆ ಮೇಲೆ ಬುದ್ಧಿ ಮಾತುಗಳನ್ನು ಹೇಳಿದ್ದ ಕಿಚ್ಚ. ನೀತು ಅಭಿಪ್ರಾಯವಿದು...

ಕನ್ನಡ ಚಿತ್ರರಂಗದ ಅದ್ಭುತ ಹಾಸ್ಯ ನಟ ಬುಲೆಟ್‌ ಪ್ರಕಾಶ್ ಪುತ್ರ ರಕ್ಷಕ್ 'ಗುರು ಶಿಷ್ಯರು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ರಕ್ಷಕ್‌ ಬುಲೆಟ್‌ ಮಾತುಗಳು ಸಖತ್ ಸದ್ದು ಮಾಡುತ್ತದೆ. ಹೀಗಾಗಿ ಬಿಗ್ ಬಾಸ್ ಸೀಸನ್ 10ಕ್ಕೆ ಕಾಲಿಟ್ಟ ರಕ್ಷಕ್ ಖಡಕ್‌ ಮಾತುಗಳು ಜನರಿಗೆ ಇಷ್ಟ ಆಗಬಹುದು ಅನ್ನೋ ನಿರೀಕ್ಷೆ ಹೆಚ್ಚಿತ್ತು. ಎಲ್ಲಿ ಎಡವಟ್ಟು ಆಯ್ತು ಗೊತ್ತಿಲ್ಲ ಒಂದು ತಿಂಗಳ ನಂತರ ಎಲಿಮಿನೇಟ್ ಆಗಿ ಹೊರ ಬಂದರು. ಹೊರ ಬಂದ ಮೇಲೆ ರಕ್ಷಕ್‌ ಸಂದರ್ಶನಗಳಲ್ಲಿ ನೀಡುತ್ತಿದ್ದ ಹೇಳಿಕೆಗಳು ವೈರಲ್ ಆಯ್ತು. ಎಲ್ಲೋ ಬಿಗ್ ಬಾಸ್‌ ಬಗ್ಗೆನೇ ನೆಗೆಟಿವ್ ಆಗುತ್ತಿದೆ ಅನಿಸಿದ್ದು ಹೌದು. ಈ ವಿಚಾರವಾಗಿ ಪ್ರತಿ ಸ್ಪರ್ಧಿಯಾಗಿದ್ದ ನೀತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತಂದೆ ಆಸ್ಪತ್ರೆಯಲ್ಲಿ ಜೀವ ಬಿಟ್ಟರು, ತಾಯಿ ಮತ್ತೊಂದು ಮದ್ವೆಯಾಗಿ ಖುಷಿಯಾಗಿದ್ದಾರೆ; ನೋವು ಬಿಚ್ಚಿಟ್ಟ ವಿನಯ್!

'ನಮ್ಮ ಮೂಲ ಮರೆಯಬಾರದು. ಬಿಗ್ ಬಾಸ್ ಅನ್ನೋದು ವ್ಯಕ್ತಿತ್ವದ ಆಟ. ಹೇಗೆ ಸ್ಟ್ಯಾಂಡ್ ತೆಗೆದುಕೊಳ್ಳುತ್ತೀವಿ ಹೇಗೆ ಆಟ ಆಡುತ್ತೀವಿ ಅನ್ನೋ ಮುಖ್ಯವಾಗುತ್ತದೆ. ಜನರಿಗೆ ಎಷ್ಟು ಮನೋರಂಜನೆ ನೀಡುತ್ತೀನಿ ಅನ್ನೋದು ಮುಖ್ಯ. ಬಿಗ್ ಬಾಸ್‌ಗೆ ಕಾಲಿಡುವುದೇ ಒಂದು ಯಶಸ್ಸು, ಟ್ರೋಫಿ ಪಡೆದಷ್ಟು ಖುಷಿಯಾಗುತ್ತದೆ. ಸುದೀಪ್ ಸರ್ ಹೇಳುವಂತ ಮಾತುಗಳನ್ನು ನಾವು ಪ್ಲಸ್‌ ಆಗಿ ಸ್ವೀಕರಿಸಬೇಕು. ಹೊರ ಬಂದ ಮೇಲೆ ಸರಿ ತಪ್ಪುಗಳ ಹೇಳಿಕೆ ಕೊಡುವುದು ತಪ್ಪು' ಎಂದು ನೀತು ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸೋನು ಪಾಟೀಲ್; ಫೋಟೋ ವೈಲರ್!

'ರಕ್ಷಕ್‌ ಬುಲೆಟ್‌ ಹೊರ ಬಂದ ಮೇಲೆ ಸ್ವಲ್ಪ ಆತುರ ಪಟ್ಟು ಮಾತನಾಡುತ್ತಿದ್ದಾರೆ ಆದರೆ ನಿಜ ಹೇಳಬೇಕು ಅಂದ್ರೆ ವೈಯಕ್ತಿಕವಾಗಿ ಭೇಟಿ ಮಾಡಿದರೆ ರಕ್ಷಕ್ ಎಷ್ಟು ಸ್ವೀಟ್ ವ್ಯಕ್ತಿ ಅನ್ನೋದು ತಿಳಿಯುತ್ತದೆ. ಸುದಿಪ್ ಸರ್ ರಕ್ಷಕ್‌ಕೆ ಬುದ್ಧಿ ಮಾತು ಹೇಳಿದ್ದಾರೆ. ಆಫ್‌ ದಿ ಕ್ಯಾಮೆರಾ ಒಂದು ಕಿವಿ ಮಾತು ಹೇಳಿದ್ದಾರೆ. ಒಂದೊಳ್ಳೆ ಸಹೋದರನಾಗಿ ಸುದೀಪ್‌ ಹೇಳಿರುವ ಮಾತುಗಳನ್ನು ರಕ್ಷಕ್ ಸ್ವೀಕರಿಸಿ ಸರಿ ಅಣ್ಣ ನಾನು ತಿದ್ದುಕೊಳ್ಳುತ್ತೀನಿ ಎಂದಿದ್ದಾರೆ. ರಕ್ಷಕ್‌ಗೆ ಒಳ್ಳೆ ಭವಿಷ್ಯ ಇದೆ. ಮುಂದಿನ ದಿನಗಳಲ್ಲಿ ಒಳ್ಳೆ ನಟನಾಗುವ ಲಕ್ಷಣಗಳು ತುಂಬಾ ಇದೆ. ಒಳ್ಳೆ ದಾರಿಯಲ್ಲಿ ನಡೆಯಲು ಒಂದು ಸಲಹೆ ಬೇಕು..ಆ ಸಲಹೆಯನ್ನು ಸುದೀಪ್ ಸರ್‌ ಕೊಟ್ಟಿದ್ದಾರೆ. ಇಂಡಸ್ಟ್ರಿಗೆ ಒಳ್ಳೆ ಹೀರೋ ಆಗಲಿದ್ದಾರೆ' ಎಂದು ನೀತು ಹೇಳಿದ್ದಾರೆ.