ವೀಲ್‌ಚೇರ್‌ನಲ್ಲಿ ಕುಳಿತು ಬಂದ ತಮ್ಮ ನನ್ನನ್ನು ಗುರುತಿಸುತ್ತಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಮೋಕ್ಷಿತಾ
ಫ್ಯಾಮಿಲಿ ರೌಂಡ್‌ನಲ್ಲಿ ಎಂಟ್ರಿ ಕೊಟ್ಟ ಮೋಕ್ಷಿತಾ ಪೋಷಕರು. ವೀಲ್ ಚೇರ್‌ನಲ್ಲಿ ಬಂದ ತಮ್ಮನ್ನು ತಬ್ಬಿ ಕಣ್ಣೀರಿಟ್ಟ ನಟಿ....
ಬಿಗ್ ಬಾಸ್ ಸೀಸನ್ 11ರಲ್ಲಿ ಹೊಸ ವರ್ಷದ ಮೊದಲ ಎಪಿಸೋಡ್ ಪ್ರಸಾರವಾಗುತ್ತಿದೆ. 2025ಕ್ಕೆ ಕಾಲಿಟ್ಟ ಸಂಭ್ರಮದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆ ಭರಾಟೆ ಚಿತ್ರದ ಬರಬರ ಭರಾಟೆ ಹಾಡಿಗೆ ಸ್ಪರ್ಧಿಗಳು ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಇದೇ ಸಮಯದಲ್ಲಿ ಮೋಕ್ಷಿತಾ ಫ್ಯಾಮಿಲಿ ಎಂಟ್ರಿ ಕೊಡುತ್ತಾರೆ. ಇದ್ದಕ್ಕಿದ್ದಂತೆ ಹಾಡು ನಿಲ್ಲುತ್ತದೆ ಏನಾಯ್ತು ಎಂದು ಎಲ್ಲರೂ ತಿರುಗಿ ನೋಡುವಾಗ ಗಾರ್ಡನ್ ಏರಿಯಾದಲ್ಲಿ ಮೋಕ್ಷಿತಾ ಫ್ಯಾಮಿಲಿ ಇರುತ್ತದೆ. ಈ ಕ್ಷಣ ಮೋಕ್ಷಿತಾ ಕುಟುಂಬಕ್ಕೆ ಮಾತ್ರವಲ್ಲ ಇಡೀ ಕರ್ನಾಟಕವೇ ಕಣ್ಣೀರಿಟ್ಟಿದೆ.
ಹೌದು! ಬಿಗ್ ಬಾಸ್ ಗಾರ್ಡನ್ ಏರಿಯಾದಲ್ಲಿ ಮೋಕ್ಷಿತಾ ಪೈ ತಂದೆ, ತಾಯಿ ಹಾಗೂ ಸಹೋದರ ಆಗಮಿಸಿದ್ದಾರೆ. ವೀಲ್‌ಚೇರ್ ಮೇಲೆ ವಿಶೇಷ ಚೇತನ ಸಹೋದರ ಕುಳಿತುಕೊಂಡು ಬರುವುದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಬಾಗಿ ತೆರೆದಾಗ ಮೊದಲು ಸಹೋದರನ ಬಳಿ ಮೋಕ್ಷಿತಾ ಓಡೋಡಿ ಬರುತ್ತಾರೆ. ಪುಟ್ಟ ಪಾಪು ಎಂದು ಎಷ್ಟೇ ಮಾತನಾಡಿಸುತ್ತಿದ್ದರೂ ಅತ್ತ ಇತ್ತ ನೋಡುತ್ತಿದ್ದ ಕಾರಣ ಅಯ್ಯೋ ಅವನು ನನ್ನನ್ನು ಮರೆತು ಬಿಟ್ಟಿದ್ದಾನೆ ಎಂದು ಮೋಕ್ಷಿತಾ ಬಿಕ್ಕಿ ಬಿಕ್ಕಿ ಅಳುತ್ತಾರೆ. ಮೋಕ್ಷಿತಾ ಕಣ್ಣೀರು ನೋಡಿ ಸ್ನೇಹಿತೆ ಗೌತಮಿ ಕೂಡ ಕಣ್ಣೀರಿಟ್ಟಿದ್ದಾರೆ. ಒದೊಂದು ಎಮೋಷನಲ್ ಕ್ಷಣ ಆಗಿತ್ತು. ಕಷ್ಟ ಪಟ್ಟು ದುಡಿದು ಮನೆಯನ್ನು ನೋಡಿಕೊಳ್ಳುತ್ತಿರುವುದು ಮೋಕ್ಷಿತಾ, ಈ ಹೆಣ್ಣು ಜೀವನದಲ್ಲಿ ಎಷ್ಟು ಕಷ್ಟ ಪಟ್ಟಿದ್ದಾಳೆ ನೋಡಿ, ಅಯ್ಯೋ ಪಾಪ ಆ ಪುಟ್ಟ ಹುಡುಗನಿಗೆ ಆಕೆ ನಿಜಕ್ಕೂ ಎರಡನೇ ತಾಯಿನೇ ಎಂದು ಕಾಮೆಂಟ್ ಮಾಡಿದ್ದಾರೆ.
ಭವ್ಯಾಗಿಂತ ಅಕ್ಕ ದಿವ್ಯಾನೇ ಸೂಪರ್; ಬೇಕೆಂದು ಹೆಚ್ಚೊತ್ತು ಉಳಿಸಿಕೊಂಡ್ರಾ ಬಿಗ್ ಬಾಸ್?
ಮಂಗಳೂರಿನ ಸುಂದರಿ ಮೋಕ್ಷಿತಾ ಸಹೋದರನಿಗೆ ಅಪರೂಪದ ಕಾಯಿಲೆ ಇದೆ ಎಂದು ಈ ಹಿಂದೆಯೇ ಸುದ್ದಿ ಆಗಿತ್ತು. ಸಹೋದರಿನಿಗೆ ನರದ ತೊಂದರೆ ಇದೆ ಹೀಗಾಗಿ ಬೆಳವಣಿಗೆ ಸಮಸ್ಯೆ ಇದೆ ಎನ್ನಲಾಗಿದೆ. ಅಲ್ಲದೆ ಕೆಲವು ತಿಂಗಳ ಹಿಂದೆ ತಮ್ಮನಿಗೆ ಅದ್ಧೂರಿಯಾಗಿ ಉಪನಯನ ಮಾಡಿದ್ದಾರೆ. 'ನನ್ನ ತಮ್ಮನಿಗೆ ಈಗ 20 ವರ್ಷ ಅದರೆ ಅವನಿಗೆ 8 ತಿಂಗಳ ಮಗುವಿನ ಬುದ್ಧಿ ಇದೆ. ಇಷ್ಟು ವರ್ಷಗಳಿಂದ ಅವನಿಗೆ ಉಪನಯನ ಮಾಡುವುದೋ ಬೇಡ್ವೋ ಎಂಬ ಗೊಂದಲ ಇತ್ತು ಆದರೆ ಅರ್ಚಕರು ಉಪನಯನ ಮಾಡಬೇಕು ಅಂತ ಹೇಳಿದ್ದರು. ನನ್ನ ತಮ್ಮನಿಗೆ ಜೀವನದಲ್ಲಿ ಬೇರೆ ಯಾವುದೇ ಶುಭ ಕಾರ್ಯಕ್ರಮಗಳನ್ನು ಮಾಡಲು ಆಗಲ್ಲ ಹೀಗಾಗಿ ಇದನ್ನಾದರೂ ನೋಡಲಿ ಎಂದು ಮಾಡಿದ್ದೀವಿ. ಅವನ ಬಳಿ ಆಗಲ್ಲ ಅಂತ ತಂದೆ ಪೂಜೆಗಳನ್ನು ಮುಂದುವರೆಸುತ್ತಿದ್ದಾರೆ' ಎಂದು ಹಳೆ ಸಂದರ್ಶನದಲ್ಲಿ ಮೋಕ್ಷಿತಾ ಮಾತನಾಡಿದ್ದರು.
ಸರಳ ಸುಂದರಿ ಚೈತ್ರಾ ಕುಂದಾಪುರ; ಇದ್ಯಾವುದು ದುಬಾರಿ ಸೀರೆ ಅಲ್ವೇ ಅಲ್ಲ