Asianet Suvarna News Asianet Suvarna News

ವಿಚಿತ್ರ ಅನಿಸುತ್ತಿದೆ, ಒಂಟಿಯಾಗಿರಲು ಆಗುತ್ತಿಲ್ಲ ಮಾನಸಿಕ ನೆಮ್ಮದಿ ಇಲ್ಲ: ನಟಿ ಕೃಷಿ ತಾಪಂಡ ಭಾವುಕ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿ ಕೃಷಿ. ಒಂಟಿಯಾಗಿರಲು ಕಷ್ಟವಾಗುತ್ತಿದೆ ಎಂದ ನಟಿ. ಅಭಿಮಾನಿಗಳು ಆತಂಕ.... 
 

Bigg Boss Krishi thapanda talks about hard days and not being ok vcs
Author
First Published Nov 4, 2023, 3:08 PM IST

2016ರಲ್ಲಿ ಅಕಿರಾ ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ಕೃಷಿ ತಾಪಂಡ ಎರಡು ಕನಸು, ಇರಾ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಭರಾತೆ ಮತ್ತು ಲಂಕೆ ಸಿನಿಮಾದಲ್ಲಿ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿಯ ಫೋಟೋ ಮತ್ತು ವಿಡಿಯೋಗಳು ಸಖತ್ ವೈರಲ್ ಆಗುತ್ತದೆ. ಅಲ್ಲದೆ ಕೃಷಿ ಫ್ಯಾಷನ್‌ಗೆ ಹುಡುಗರು ಮಾತ್ರವಲ್ಲದೆ ಹುಡುಗಿಯರೂ ಫಿದಾ. ಹೀಗಿರುವಾಗ ಬೇಸರದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

'ಒಂಟಿಯಾಗಿರುವುದಕ್ಕೆ ತುಂಬಾ ಇಷ್ಟ ಪಡುವ ವ್ಯಕ್ತಿ ನಾನು.ಕೆಲವೊಂದು ದಿನಗಳು ಡಿಫರೆಂಟ್ ಆಗಿರುತ್ತದೆ. ಇಂದು ತುಂಬಾ ವಿಚಿತ್ರವಾದ ಭಾವನೆಯಲ್ಲಿ ದಿನ ಆರಂಭಿಸಿರುವೆ ಹೇಗೂ ಕೆಲಸ ಇದೆ ದಿನ ಸಾಗುತ್ತದೆ ಅನ್ನೋ ಭಾವನೆಯಲ್ಲಿ ಸುಮ್ಮನಿದ್ದೆ. ನಾನು ಹಾಕುವ ಫೋಟೋ ಮತ್ತು ವಿಡಿಯೋ ನೋಡಿ ಖುಷಿಯಾಗಿರುವೆ ಅಂದುಕೊಂಡಿದ್ದಾರೆ. ಕೆಲಸ ಮುಗಿಸಿಕೊಂಡು ಮನೆಗೆ ಬಂದ ಮೇಲೆ ಯಾರಾದರೂ ಜೊತೆಗೆ ಇರಬೇಕು ಅನಿಸುತ್ತದೆ 'ಬಾ ಇಲ್ಲಿ ಎಂದು ಹೇಳಿ ತಬ್ಬಿಕೊಳ್ಳುವಂತ ವ್ಯಕ್ತ ಇರಬೇಕು ಅನಿಸುತ್ತಿತ್ತು' ಎಂದು ಕೃತಿ ವಿಡಿಯೋದಲ್ಲಿ ಮಾತನಾಡಿದ್ದಾರೆ.

ಕನ್ನಡದ ನಟಿಯರ ದಂಡು ಆಫ್ರಿಕಾದಲ್ಲೇನು ಮಾಡ್ತಿದ್ದಾರೆ?

'ಜನರು ನಾನು ಸದಾ ಖುಷಿಯಾಗಿರುವುದನ್ನು ನೋಡುತ್ತಾರೆ. ಮಾನಸಿಕವಾಗಿ ನಾನು ಖುಷಿಯಾಗಿಲ್ಲ ಇದು ನಿಜವಾದ ರಿಯಾಲಿಟಿ. ಇರಲಿ ಪರ್ವಾಗಿಲಿ ನನಗೆ ಅನಿಸುತ್ತಿರುವುದು ಅನೇಕರಿಗೆ ಅನಿಸುತ್ತದೆ. ನಮಗೆ ಏನಾಗುತ್ತದೆ ಎಂದು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಬೇಸರ ಆಗಲು ಕಾರಣ ಬೇಕು ಅಂತೇನು ಇಲ್ಲ ಜೀವನ ಪ್ರತಿ ದಿನ ಒಂದೇ ಇರ ಇರುವುದಿಲ್ಲ. ಒಂದ ಫ್ಲಾಸ್ಕ್ ಆರ್ಡರ್ ಮಾಡಿರುವೆ ..ಅದು ಬರುತ್ತಿದ್ದಂತೆ ಟೀ ಮಾಡಿಕೊಂಡು ಕುಡಿದು ಖುಷಿಯಾಗಿರುತ್ತೀನಿ' ಎಂದು ಕೃಷಿ ಹೇಳಿದ್ದಾರೆ.

ಹೊಸ ಮನೆ ಗೃಹ ಪ್ರವೇಶ ಮಾಡಿದ ನಟಿ ಕೃಷಿ ತಾಪಂಡ!

ನೀವು ಬೇಸರ ಮಾಡಿಕೊಳ್ಳಬೇಡಿ ನಿಮ್ಮ ಸಪೋರ್ಟ್‌ಗೆ ನಾವಿದ್ದೀವಿ, ಏನೇ ಇದ್ದರೂ ನನಗೆ ಕರೆ ಮಾಡಿ, ನಿಮ್ಮ ಮನೆ ವಿಳಾಸ ಕೊಡಿ ನಾವು ಬರುತ್ತೀವಿ ಎಂದು ಸಿನಿಮಾ ಸ್ನೇಹಿತರು ಮತ್ತು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

 

Follow Us:
Download App:
  • android
  • ios