ಜೊಳ್ಳು ಹೋಗಿ, ಹೊಸ ಎಪಿಸೋಡ್ ಬಂದಿದೆ... ಹಳೆಯದ್ದನ್ನು ಮರೆತಿರುವೆ: ಡಿವೋರ್ಸ್ ಬಗ್ಗೆ ಕಿರಿಕ್ ಕೀರ್ತಿ ಓಪನ್ ಮಾತೇನು?
ತಮ್ಮ 14 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಿಗ್ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಡಿವೋರ್ಸ್ ಹಾಗೂ ಆ ನಂತರದ ಬದುಕಿನ ಕುರಿತು ಹೇಳಿದ್ದೇನು?
ಪತ್ರಕರ್ತ, ಆ್ಯಂಕರ್, ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಕಳೆದ ಆಗಸ್ಟ್ನಲ್ಲಿ ಪತ್ನಿ ಅರ್ಪಿತಾ ಗೌಡ ಅವರ ಜೊತೆ ಡಿವೋರ್ಸ್ ಪಡೆದುಕೊಂಡಿದ್ದಾರೆ. ಇನ್ಮೇಲೆ ಕರಿಮಣಿ ಮಾಲೀಕ ನಾನಲ್ಲ ಎಂದು ಕಿರಿಕ್ ಕೀರ್ತಿ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡುವ ಮೂಲಕ ಡಿವೋರ್ಸ್ ಬಗ್ಗೆ ಎಲ್ಲರಿಗೂ ತಿಳಿಸಿದ್ದರು. ಮೊಗವ ಕೊಟ್ಟ ಭಗವಂತ ನಗುವ ಕೊಡದಿರುವನೇ ಎಂದು ಪ್ರಶ್ನಿಸುವ ಮೂಲಕ, "ಅವಳು ಉತ್ತಮ ಜೀವನವನ್ನು ಪಡೆಯಲಿ ಎಂದು ಆಶಿಸುತ್ತೇನೆ ಎಂದು ಹೇಳಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಅಂದಹಾಗೆ ಈ ಜೋಡಿ 2012ರಲ್ಲಿ ಮದುವೆ ಆಗಿತ್ತು. ಈ ದಂಪತಿಗೆ ಓರ್ವ ಪುತ್ರ ಇದ್ದಾನೆ.
ಇದೀಗ ಅವರು, ನ್ಯೂಸ್ ಹಂಟ್ ಕರ್ನಾಟಕ ಯೂಟ್ಯೂಬ್ ಚಾನೆಲ್ನಲ್ಲಿ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ಡಿವೋರ್ಸ್ ಆದ ಮೇಲೆ ತುಂಬಾ ನೋವಾಗಿದ್ದು ನಿಜ. ಆದರೆ ಈಗ ಎಲ್ಲವನ್ನೂ ಮರೆತಿದ್ದೇನೆ. ಈಗ ನನ್ನ ನಗು ನಿಜವಾದ ನಗು. ಆದರೆ ಆರೇಳು ತಿಂಗಳ ಹಿಂದೆ ನನ್ನದು ನೋವಿನ ನಗುವಾಗಿತ್ತು. ಈಗ ಎಲ್ಲವನ್ನೂ ಮರೆತಿದ್ದೇನೆ. ಜೀವನದ ಜೊಳ್ಳು ಹೋಗಿ ಗಟ್ಟಿತನ ಉಳಿದುಕೊಂಡಿದೆ. ಎಲ್ಲಿ ಹೋಗುತ್ತಿದೆ, ಏನು ಮಾಡ್ತಿಯಾ ಎಂದೆಲ್ಲಾ ಕೇಳುವವರು ಯಾರೂ ಇಲ್ಲ. ಸಿಂಗಲ್ ಆಗಿ, ಆರಾಮಾಗಿದ್ದೇನೆ ಎಂದಿದ್ದಾರೆ ಕೀರ್ತಿ. ಇದೇ ವೇಳೆ ಡಿವೋರ್ಸ್ ಆಗುವವರ ಬಗ್ಗೆ ಮಾತನಾಡಿರುವ ಕೀರ್ತಿ, ಡಿವೋರ್ಸ್ ಆಗುವುದೇ ಕೆಟ್ಟದ್ದು ಅನ್ನೋದೇ ಮೊದಲ ತಪ್ಪು. ಡಿವೋರ್ಸ್ ಕೆಟ್ಟದಲ್ಲ. ದಂಪತಿ ನಡುವೆ ಏನು ಆಗುತ್ತಿದೆ ಎನ್ನುವುದು ಹೊರಗಿನ ಪ್ರಪಂಚಕ್ಕೆ ಗೊತ್ತಿರುವುದಿಲ್ಲ. ಎರಡು ಜೀವಗಳ ಮಧ್ಯೆ ಮಾತ್ರ ಗೊತ್ತಿರುತ್ತದೆ. ಆದ್ದರಿಂದ ಡಿವೋರ್ಸ್ ಆಗುವುದು ತಪ್ಪಲ್ಲ ಎಂದು ಹೇಳಿದ್ದಾರೆ.
ಮುದ್ದೆ-ಸೊಪ್ಪಿನ ಸಾರಿನ ಬಾಂಧವ್ಯ ಎಂದ ಕೀರ್ತಿ: ಪ್ರೀತಿಯ ವಿಷ್ಗೆ ಚಂದನ್ ಶೆಟ್ಟಿ ಪ್ರತಿಕ್ರಿಯೆ ನೋಡಿ...
ದಾಂಪತ್ಯ ಜೀವನವು ವಿಷಕಾರಿ ಎಂದು ಗೊತ್ತಾದ ಮೇಲೆ ಅಲ್ಲಿಯೇ ಇರುವುದುದ ಉಚಿತವಲ್ಲ. ಅದು ಅನ್ನದ ತಟ್ಟೆಗೆ ವಿಷ ಬಿದ್ದ ಹಾಗೆ. ಎಷ್ಟೇ ತೊಳೆದರೂ ವಿಷದ ಅಂಶ ಹೋಗುವುದಿಲ್ಲ. ದಂಪತಿ ನಡುವೆ ಆಗಲೀ, ಯಾವುದೇ ಸಂಬಂಧಗಳ ನಡುವೆ ಆಗಲಿ, ಆಡಿದ ಮಾತುಗಳು ಮತ್ತೆ ವಾಪಸ್ ಬರುವುದಿಲ್ಲ. ಮಾತಿಗೆ ಮಾತು ಬೆಳೆದು ಯಾವುದೇ ಸಂಬಂಧ ಇರುವುದಿಲ್ಲ ಎಂದು ತಿಳಿದಾಗ ಅದನ್ನು ಮುಗಿಸುವುದೇ ಒಳ್ಳೆಯದು ಎಂದಿದ್ದಾರೆ. ಚಂದನ್ ಶೆಟ್ಟಿ ಅವರಿಗೂ ತಾವು ಇದೇ ಮಾತನ್ನು ಹೇಳಿರುವುದಾಗಿ ಕೀರ್ತಿ ತಿಳಿಸಿದ್ದಾರೆ. ಇದೇ ವೇಳೆ, ಡಿವೋರ್ಸ್ ಆದ ತಕ್ಷಣ ತುಂಬಾ ನೋವು ಅನುಭವಿಸಿರುವುದಾಗಿ ಹೇಳಿದ ಅವರು, ಸಂಬಂಧದಿಂದ ಹೊರಗಡೆ ಬಂದಾಗ ಭಾವನೆಗಳನ್ನು ಅದುಮಿಡುವುದು, ಮರೆಯುವುದು ಕಷ್ಟ. ನಮ್ಮ ಶರೀರ ಹಾರ್ಡ್ ಡಿಸ್ಕ್ ಅಲ್ವಲ್ಲಾ ಡಿಲೀಟ್ ಮಾಡಲು ಎಂದಿದ್ದಾರೆ.
ಆದರೆ ಇದೀಗ ತಾವು ತುಂಬಾ ಚೆನ್ನಾಗಿರುವ ಜೀವನ ನಡೆಸುತ್ತಿರುವುದಾಗಿ ಹೇಳಿದ ಕಿರಿಕ್ ಕೀರ್ತಿ ಅವರು ಅದಕ್ಕೆ ಎಪಿಸೋಡ್ ಉದಾಹರಣೆ ಕೊಟ್ಟಿದ್ದಾರೆ. ನೋಡಿ ಒಂದು ಎಪಿಸೋಡ್ ಬಂದಾಗ ಅದು ಚೆನ್ನಾಗಿ ಬಂದಿದೆ ಎಂದರೆ, ಅದನ್ನೇ ಹಾಡಿ ಹೊಗಳುತ್ತಾರೆ. ಅದು ಎಲ್ಲಿಯವರೆಗೆ ಎಂದರೆ ಮತ್ತೊಂದು ಎಪಿಸೋಡ್ ಬರುವವರೆಗೆ. ಇನ್ನೊಂದು ಬಂದಾಗ ಹಿಂದಿನದ್ದನ್ನು ಮರೆಯುತ್ತಾರೆ. ನನ್ನ ಜೀವನದಲ್ಲಿಯೂ ಹಾಗೆಯೇ. ಹಳೆಯ ಎಪಿಸೋಡ್ ಹೋಗಿದೆ. ಈಗ ಹೊಸ ಎಪಿಸೋಡ್ ಬಂದಿದೆ. ದಿನ ಬೆಳಗಾದರೆ, ಕೆಲಸದ ಬಿಜಿ, ಜಿಮ್ಗೆ ಹೋಗಬೇಕು, ಮಗನನ್ನು ಶಾಲೆಗೆ ಕಳುಹಿಸಬೇಕು, ಫ್ರೆಂಡ್ಸ್ಗೆ ಕಾಲ್ ಮಾಡಬೇಕು, ಪಾರ್ಟಿಗೆ ಹೋಗಬೇಕು... ಇಷ್ಟೆಲ್ಲಾ ಹೊಸತನವಿದೆ ಎಂದಿದ್ದಾರೆ. ಸಂಬಂಧ ಎಂದರೆ ಬೆಳಕು ಇದ್ದಂತೆಯೇ. ಬೆಳಕು ಚೆನ್ನಾಗಿದೆ ಎಂದು ಹೋಗಿ ಐ ಲವ್ ಯೂ ಎಂದು ಅಪ್ಪಿಕೊಳ್ಳಲು ಆಗುವುದಿಲ್ಲವಲ್ಲ, ಲೈಟ್ಗೆ ಹೋಗಿ ಅಪ್ಪಿಕೊಂಡ್ರೆ ಸಿಡಿದು ಹೋಗ್ತೇವೆ ಎಂದಿರುವ ಕೀರ್ತಿ ಡಿವೋರ್ಸ್ ಪಡೆದ ಬಳಿಕ ಲೈಫ್ ಚೆನ್ನಾಗಿದೆ ಎಂದಿದ್ದಾರೆ.
ಚಂದನ್ ಶೆಟ್ಟಿ ಕಾರಿನ ಮೇಲೂ ಮಾಜಿ ಪತ್ನಿ ನಿವೇದಿತಾ ಗೌಡ! ನಂಬರ್ ಪ್ಲೇಟ್ ಮೇಲೆ ಫ್ಯಾನ್ಸ್ ಕಣ್ಣು