ಬಿಗ್ ಬಾಸ್ ಮನೆಯಿಂದ ಸ್ವಾಮೀಜಿ ಮೊದಲ ವಾರದ ನಾಮಿನೇಶನ್ ನಲ್ಲಿ ಹೊರಬಂದಿದ್ದಾರೆ. ಗೆದ್ದರೆ ಎಲ್ಲ ಹಣವನ್ನು ಉತ್ತರ ಕರ್ನಾಟಕದ ಜನರಿಗೆ ನೀಡುತ್ತೇನೆ ಎಂದಿದ್ದ ಹಾವೇರಿಯ ಗುರುಲಿಂಗ ಸ್ವಾಮೀಜಿ ಹೊರ ಬರುತ್ತ ನೇರವಾಗಿ ಕಿರಿಕ್ ಪಾರ್ಟಿಯ ಚಂದನ್ ಆಚಾರ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿ ಹೊರಬಂದಿದ್ದಾರೆ.

ಕ್ಯಾಪ್ಟನ್ ಆಯ್ಕೆಗೆ ವಿಚಾರಕ್ಕೆ ಪಡೆದುಕೊಂಡಿದ್ದ ಕೆಂಪು ಬ್ಯಾಂಡ್ ಅನ್ನು ಗಾಯಕ ವಾಸಕಿ ವೈಭವ್ ಅವರಿಗೆ ನೀಡಿದ್ದಾರೆ.  ಸ್ವಾಮೀಜಿ ನೆಟ್ಟ ಸಸಿಯನ್ನು  ಪಾಲನೆ ಪೋಷಣೆ ಮಾಡುವುದಾಗಿ ಮನೆ ಸದಸ್ಯರು ಭರವಸೆ ನೀಡಿದ್ದಾರೆ.

ದೊಡ್ಮನೆಯಲ್ಲಿ ‘ಆ ದಿನಗಳ’ ಬಗ್ಗೆ ಮಾತನಾಡಿದ ಬೆಳಗೆರೆ ಹೇಳಿದ್ದಿಷ್ಟು!

ಮೊದಲ ವಾರದಲ್ಲಿ ಮನೆಯಿಂದ ಹೊರ ಹೋಗಲು 6 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಬರಹಗಾರ್ತಿ ಚೈತ್ರಾ ಕೊಟ್ಟೂರ್, ನಿರೂಪಕಿ ಚೈತ್ರಾ ವಾಸುದೇವನ್, ಗುರುಲಿಂಗ ಸ್ವಾಮೀಜಿ, ಹಾಸ್ಯ ನಟ ಕುರಿ ಪ್ರತಾಪ್‌, ನಟ ರಾಜು ತಾಳಿ ಕೋಟೆ ಮತ್ತು ಪತ್ರಕರ್ತ ರವಿ ಬೆಳಗೆರೆ ಫಸ್ಟ್‌ ವೀಕ್‌ನಲ್ಲಿ ನಾಮಿನೇಟ್ ಆಗಿದ್ದರು.

ಅಂದ್ಹಾಗೆ ಸ್ಪರ್ಧಿಯಾಗಿ ಬಂದಿದ್ದ ರವಿ ಬೆಳಗೆರೆ ಮೊದಲ ದಿನವೇ ಅನಾರೋಗ್ಯದ ಕಾರಣ ಬಿಗ್​ಬಾಸ್​ ಮನೆಯಿಂದ ಹೊರಹೋಗಿದ್ರು. ಆ ನಂತರ ಒಂದು ವಾರದ ಮಟ್ಟಿಗೆ ಅತಿಥಿಯಾಗಿ ಮತ್ತೆ ಬಿಗ್​ಬಾಸ್​​ ಮನೆಗೆ ಎಂಟ್ರಿ ಕೊಟ್ಟಿದ್ದರು.  ಮತ್ತೋರ್ವ ಸ್ಪರ್ಧಿ ಕಿಶನ್‌ ಅನಾರೋಗ್ಯದ ಹಿನ್ನೆಲೆಯಲ್ಲಿ ಈಗಾಗ್ಲೇ ಬಿಗ್‌ಬಾಸ್‌ ಮನೆಯಿಂದ ಹೊರಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.