ವರ್ತೂರ್ ಸಂತೋಷ್‌ನ ಉಳಿಸಿಕೊಳ್ಳಲು ಬಿಗ್ ಬಾಸ್ ಮನೆಗೆ ಕಾಲಿಟ್ಟ ಭಾಗ್ಯ; ನೆಟ್ಟಿಗರಿಂದ ಆಕ್ರೋಶ!
ಫೈನಲ್‌ನಲ್ಲಿ ಇರ್ಬೇಕಾದ ಸ್ಪರ್ಧಿ ಈಗ ಬಿಗ್ ಬಾಸ್ ಮನೆಯಿಂದ ಹೊರ ನಡೆಯುವ ಮಾತುಗಳು ಯಾಕೆ? ಏನಾಗುತ್ತಿದೆ ಬಿಬಿ ಮನೆಯಲ್ಲಿ?.....
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತಿ ದೊಡ್ಡ ರಿಯಾಲಿಟಿ ಶೊ ಬಿಗ್ ಬಾಸ್ ಸೀಸನ್ 10ರಲ್ಲಿ ಹಳ್ಳಿಕಾರ್ ವರ್ತೂರ್ ಸಂತೋಷ್ ಸ್ಪರ್ಧಿಸುತ್ತಿದ್ದಾರೆ. ಈ ವಾರ ಸುಮಾರು 34 ಲಕ್ಷಕ್ಕೂ ಹೆಚ್ಚು ವೋಟಿಂಗ್ ಪಡೆದು ಸೇಫ್ ಆಗಿರುವ ವರ್ತೂರ್ ಇದ್ದಕ್ಕಿದ್ದಂತೆ ಮನೆಯಿಂದ ಹೊರ ನಡೆಯಬೇಕು ಅನ್ನೋ ಮಾತುಗಳನ್ನು ಹೇಳುತ್ತಿದ್ದಾರೆ. ಇದರಿಂದ ಇನ್ನಿತ್ತರ ಸ್ಪರ್ಧಿಗಳು, ವೀಕ್ಷಕರು ಮತ್ತು ಸುದೀಪ್ ಶಾಕ್ ಆಗಿದ್ದಾರೆ. ಯಾರು ಎಷ್ಟೇ ಬುದ್ಧಿ ಹೇಳಿದರೂ ಕೇಳದೆ ಮನೆಯಿಂದ ಹೊರ ನಡೆಯಲು ವರ್ತೂರ್ ಹಠ ಮಾಡುತ್ತಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ಬಿಗ್ ಬಾಸ್ ಮನೆಯೊಳಗೆ ಭಾಗ್ಯಲಕ್ಷ್ಮಿ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಭಾಗ್ಯ ಎಂಟ್ರಿ ಕೊಟ್ಟಿದ್ದಾರೆ. 'ನಿನ್ನ ಸಹೋದರಿ ರೀತಿಯಲ್ಲಿ ನಿನ್ನ ಜೊತೆ ಮಾತನಾಡುತ್ತಿರುವೆ. ನಿನ್ನ ಕೈಯಲ್ಲಿ ಆಗುತ್ತಿಲ್ಲ ಆಗೋಲ್ಲ ಅನ್ನೋ ಮಾತುಗಳನ್ನು ನಿನ್ನ ತಲೆಯಿಂದ ಹೊರ ತೆಗೆಯಬೇಕು' ಎಂದು ಭಾಗ್ಯ ಕಿವಿ ಮಾತು ಹೇಳುತ್ತಾರೆ. 'ಒಂದೊಂದು ನಿಮಿಷನೂ ನರಳಾಟದ ತರ ಆಗಿಬಿಟ್ಟಿದೆ' ಎಂದು ವರ್ತೂರ್ ಹೇಳುತ್ತಾರೆ. 'ಒಬ್ಬ ಮನುಷ್ಯರನ್ನು ಉಳಿಸಿಕೊಳ್ಳುತ್ತಿದ್ದೀವಿ ಅಂದ್ರೆ ನಿನ್ನಲ್ಲಿರುವ ಒಳ್ಳೆ ತನಕ್ಕೆ ಎಂದು' ತುಕಾಲಿ ಸಂತೋಷ್ ಹೇಳುತ್ತಾರೆ. 'ನಿನಗೆ ನಾವು ಏನಾದರೂ ಮಾಡಿದ್ವಾ?' ಎಂದು ವಿನಯ್ ಕೂಡ ಪ್ರಶ್ನೆ ಮಾಡುತ್ತಾರೆ.
ಅಪಾರ್ಟ್ಮೆಂಟ್ ಇದೆ ಕೋಟಿ ದುಡ್ಡಿದೆ ಅಂತ ಗುರುತಿಸಿಕೊಂಡಿಲ್ಲ; ವರ್ತೂರು ಸಂತೋಷ್ ಆದಾಯ ಎಷ್ಟು?
ಡ್ರೋನ್ ಪ್ರತಾಪ್ ಎಷ್ಟೇ ಒತ್ತಾಯ ಮಾಡಿದರೂ ವರ್ತೂರ್ ಸಂತೋಷ್ ನೀರು ಕುಡಿಯುವುದಿಲ್ಲ ಹಾಗೂ ಊಟ ಮಾಡುವುದಿಲ್ಲ ಹೊರ ಹೋಗಲೇ ಬೇಕು ಎಂದು ಹಠ ಮಾಡಿ ಕುಳಿತುಕೊಳ್ಳುತ್ತಾರೆ. ದಮ್ಮಯ್ಯ ಅಣ್ಣ ನಿನ್ನ ಕಾಲಿಗೆ ಬೀಳುತ್ತೀನಿ ಎಂದು ತುಕಾಲಿ ಸಂತೋಷ್ ಮನವಿ ಮಾಡಿಕೊಳ್ಳುತ್ತಾರೆ. ಆದರೂ ನನ್ನ ಕೈಯಲ್ಲಿ ಆಗುತ್ತಿಲ್ಲ ಎಂದು ಭಾಗ್ಯಾಳ ಬಳಿ ವರ್ತೂರ್ ಕಣ್ಣೀರು ಇಡುತ್ತಾರೆ. ವಿನ್ನರ್ ಸ್ಥಾನದಲ್ಲಿ ನಿಲ್ಲುವ ವ್ಯಕ್ತಿ ವರ್ತೂರ್ ಈ ರೀತಿ ನಿರ್ಧಾರ ತೆಗೆದುಕೊಂಡಿರುವುದು ಸರಿ ಅಲ್ಲ ಅವರಿಗೆ ವೈದ್ಯರ ಅಗತ್ಯವಿದ್ದರೆ ಕಳುಹಿಸಿ ಆದರೆ ಎಲಿಮಿನೇಟ್ ಮಾತ್ರ ಮಾಡಬೇಡಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.