ಭಾರತದ ಸ್ಟಾರ್ ಕ್ರಿಕೆಟಿಗರು ಮತ್ತವರ ಮುದ್ದಾದ ಪತ್ನಿಯರ ವಯಸ್ಸಿನ ಅಂತರವೆಷ್ಟು ಗೊತ್ತಾ? ಇಲ್ಲಿದೆ ಜನ್ಮದಿನಾಂಕ ವಿವರ!
ಯಾವುದೇ ಒಬ್ಬ ಯಶಸ್ವಿ ಪುರುಷರ ಹಿಂದೆ ಮಹಿಳೆಯ ಪಾತ್ರವಿರುತ್ತದೆ ಎಂಬುದು ಸಾಮಾನ್ಯ ಹೇಳಿಕೆಯಾಗಿದೆ. ಭಾರತದ ಸ್ಟಾರ್ ಕ್ರಿಕೆಟಿಗರ ಮುದ್ದಾದ ಹೆಂಡತಿಯರನ್ನು ನೀವು ನೋಡಿಯೇ ಇರುತ್ತೀರಿ. ಹಾಗಾದರೆ, ಸ್ಟಾರ್ ಕ್ರಿಕೆಟರ್ಸ್‌ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್‌ಪ್ರೀತ್ ಬುಮ್ರಾ ಸೇರಿದಂತೆ ಹಲವು ಕ್ರಿಕೆಟಿಗರು ಹಾಗೂ ಅವರ ಪತ್ನಿಯರ ವಯಸ್ಸಿನ ಅಂತರ ಹಾಗೂ ಅವರ ಹುಟ್ಟಿದ ವರ್ಷದ ವಿವರ ಇಲ್ಲಿದೆ ನೋಡಿ..
ಭಾರತದ ನಂಬರ್ ಒನ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ವಯಸ್ಸಿನ ಅಂತರ ಹೆಚ್ಚೇನಿಲ್ಲ. ಇಬ್ಬರೂ ಒಂದೇ ವರ್ಷದಲ್ಲಿ ಜನಿಸಿದವರಾಗಿದ್ದಾರೆ.
ಭಾರತದ ಕ್ರಿಕೆಟ್ ತಂಡದ ಕ್ಯಾಪ್ಟನ್ ಹಾಗೂ ಅನುಭವಿ ರೋಹಿತ್ ಶರ್ಮಾ ಹಾಗೂ ಅವರ ಪತ್ನಿ ರಿತಿಕಾ ಸಜ್ದೇಹ್ ಅವರ ಪತ್ನಿಗೂ ವಯಸ್ಸಿನ ಅಂತರವೇ ಇಲ್ಲ. ಇಬ್ಬರೂ ಕೂಡ ಒಂದೇ ವಯಸ್ಸಿನವರಾಗಿದ್ದಾರೆ.
ಇನ್ನು ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ಅವರ ಪತ್ನಿ ಸಂಜನಾ ಗಣೇಶನ್ ಅವರ ನಡುವೆ ಕೇವಲ 2 ವರ್ಷಗಳ ಅಂತರವಿದೆ. ಈ ಜೋಡಿ ಮುದ್ದಾದ ಜೋಡಿಗಳಲ್ಲಿ ಪತ್ನಿ ಸಂಜನಾಳೇ 2 ವರ್ಷ ಹಿರಿಯಳಾಗಿದ್ದಾಳೆ.
ಭಾರತದ ಆಲ್‌ರೌಂಡರ್ ಹಾಗೂ ಮ್ಯಾಚ್ ವಿನ್ನರ್ ಆಗಿರುವ ಹಾರ್ದಿಕ್ ಪಾಂಡ್ಯ ಅವರು ಗಾಯದ ಸಮಸ್ಯೆಯಿಂದ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹಾರ್ದಿಕ್‌ಗಿಂತ ಹಾಗೂ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರೇ ಒಂದು ವರ್ಷ ದೊಡ್ಡವರಾಗಿದ್ದಾರೆ.
ಭಾರತದ ಆಲ್‌ರೌಂಡರ್ ಹಾಗೂ ಮ್ಯಾಚ್ ವಿನ್ನರ್ ಎಂದೇ ಖ್ಯಾತಿಯಾದ ರವೀಂದ್ರ ಜಡೇಜಾ ಹಾಗೂ ಮತ್ತವರ ಪತ್ನಿ ಶಾಸಕಿ ರಿವಾಬಾ ಜಡೇಜಾ ಜೋಡಿಯೂ ಮುದ್ದಾದ ಜೋಡಿಗಳಲ್ಲಿ ಒಂದಾಗಿದೆ. ಇವರ ವಯಸ್ಸಿನ ಅಂತರ ಕೇವಲ 3 ವರ್ಷಗಳಾಗಿದೆ.
ಭಾರತದ ಮತ್ತೊಬ್ಬ ಬ್ಯಾಟ್ಸ್‌ಮನ್ ಸೂರ್ಯ ಕುಮಾರ್ ಯಾದವ್ ಮತ್ತವರ ಪತ್ನಿ ದೇವಿಶಾ ಶೆಟ್ಟಿ ಅವರಿಗೆ ಮೂರು ವರ್ಷಗಳ ಅಂತರವಿದೆ.
ಭಾರತದ ಸ್ಪಿನ್ನರ್ ಯಜುವೇಂದರ ಚಾಹಲ್ ಹಾಗೂ ಪತ್ನಿ ಧನಶ್ರೀ ವರ್ಮಾ ಜೋಡಿ ಕೂಡ ಮುದ್ದಾದ ಜೋಡಿಯಾಗಿದೆ. ಇದರಲ್ಲಿ ಯಜುವೇಂದ್ರ ಚಾಹಲ್ ಹಾಗೂ ಪತ್ನಿ ಧನಶ್ರೀಗೆ 5 ವರ್ಷಗಳ ಅಂತರವಿದೆ.
ಭಾರತೀಯ ಕ್ರಿಕೆಟ್ ತಂಡವು ಕಂಡಂತಹ ಅತ್ಯಂತ ಸಹನೆಯ ನಾಯಕ (ಕ್ಯಾಪ್ಟನ್ ಕೂಲ್) ಎಂದೇ ಪ್ರಸಿದ್ಧಿಯಾದ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಸಿಂಗ್ ಅವರಿಗೆ 7 ವರ್ಷಗಳ ಅಂತರವಿದೆ. ಧೋನಿ ಏಳು ವರ್ಷ ದೊಡ್ಡವರಾಗಿದ್ದಾರೆ.
ಕ್ರಿಕೆಟ್ ದಂತಕಥೆ ಎಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಅವರು ಭಾರತೀಯ ಕ್ರಿಕೆಟ್‌ನ ಮಾಜಿ ಆಟಗಾರರಾಗಿದ್ದಾರೆ. ಇನ್ನು ಸಚಿನ್ ಹಾಗೂ ಅವರ ಪತ್ನಿಯ ನಡುವೆ 6 ವರ್ಷಗಳ ಅಂತರವಿದೆ. ಇದರಲ್ಲಿ ಸಚಿನ್‌ಗಿಂತ ಅವರ ಪತ್ನಿ ಅಂಜಲಿ ಅವರೇ ಆರು ವರ್ಷ ದೊಡ್ಡವರಾಗಿದ್ದಾರೆ.