ಆದರೆ ಎಲ್ಲದಕ್ಕಿಂತ ಮುಖ್ಯವಾಗಿ ಈ ಬಾರಿ ಸುದೀಪ್  ಹಿಂದೆಂದೂ ಇಲ್ಲದ ರೀತಿ ಬಿಗ್ ಬಾಸ್ ನಡೆಸಿಕೊಟ್ಟರು. ಇಲ್ಲಿಯವರೆಗೂ ಹೇಳದ ರಹಸ್ಯವೊಂದನ್ನು ಹೇಳಿದರು.

ಮೊದಲ ಸಾರಿ ನಾಮಿನೇಶನ್ ಆದ ಸ್ಪರ್ಧಿಗಳು ಸೇವ್ ಆಗಬೇಕಿದ್ದರೆ ಯಾರು ಹೆಚ್ಚಿನ ಮತ ಪಡೆದುಕೊಂಡಿದ್ದಾರೆ ಅಂತ ಆರ್ಡರ್ ವೈಸ್ ನಲ್ಲಿಯೇ ಹೇಳುತ್ತಾ ಹೋದರು.

ಕೊನೆಯ ಸುತ್ತಿನಲ್ಲಿ  ಜೈಜಗದೀಶ್  ಮತ್ತು ಸುಜಾತಾ ಇದ್ದರು. ಅಂತಿಮವಾಗಿ  ಸುದೀಪ್ ಅವರೇ ತಾವೇ ತಯಾರು ಮಾಡಿ ಕಳುಹಿಸಿಕೊಟ್ಟ ಸ್ವೀಟ್ ನ್ನು ಮನೆ ಮಂದಿಗೆ ನೀಡಿ ಜೈಜಗದೀಶ್ ಹೊರಗೆ ಬಂದರು. ಹೊರಗೆ ಬರುತ್ತಾ ತಮ್ಮ ಗೆಳತಿ ಸುಜಾತಾ ಅವರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಿ ಬಂದಿದ್ದಾರೆ.

‘ಬೇಕಾದರೆ ದೀಪಿಕಾ ಟೀ ಶರ್ಟ್ ಒಳಗೂ ಕೈ ಹಾಕಲು ಸಿದ್ಧ’

ಯೆಸ್ ಆರ್ ನೋ ಕ್ವಶ್ಚನ್ ಸಹ ಅಷ್ಟ ಮಜವಾಗಿತ್ತು. ಮನೆಯಲ್ಲಿ ಯಾರ ಬಳಿ ಹೆಚ್ಚಿನ ಬಟ್ಟೆ ಇದೆ ಎಂಬ ಪ್ರಶ್ನೆ ಕೇಳಿದಾಗ ನಾಗಿಣಿ ದೀಪಿಕಾ ದಾಸ್ ಮತ್ತು ಕಿಶನ್ ಆಯ್ಕೆ ಕೊಟ್ಟಾಗ ಕಿಶನ್ ತನ್ನ ಬಳಿ ಎಂದರೆ ನಾಗಿಣಿ ನನ್ನ ಬಳಿ ಎಂದರು

ಕಿಶನ್ 30 ಪ್ಯಾಂಟ್ 35 ಟೀ ಶರ್ಟ್ ಇದೆ ಎಂದರೆ   ನಾಗಿಣಿ  ನನ್ನ ಬಳಿಯೇ ಅದಕ್ಕಿಂತ ಜಾಸ್ತಿ ಬಟ್ಟೆಗಳಿವೆ. ಯಾಕಂದ್ರೆ ನಮ್ಮದು ಸಣ್ಣ ಸಣ್ಣ ಬಟ್ಟೆ ಎಂದಾಗ ನಗು ಹರಿಯಿತು.

ಹೊರಕ್ಕೆ ಬಂದ ಜೈಜಗದೀಶ್ ಚಂದನ್ ಆಚಾರ್ ಈ ಬಾರಿಯ ಬಿಗ್ ಬಾಸ್ ಗೆಲ್ಲಬಹುದು ಎಂಬ ಭವಿಷ್ಯವನ್ನು ನುಡಿದರು. ಬಿಗ್ ಬಾಸ್ ಹೊರಗೆ ಬಂದ ಜೈಜಗದೀಶ್ ಅವರನ್ನು ಬರಮಾಡಿಕೊಳ್ಳಲು ಇಬ್ಬರು ಮಡದಿಯರು ಬಂದಿದ್ದರು.

ಫಿನಾಲಗೆ ಜೈಜಗದೀಶ್ ಪ್ರಕಾರ ಚಂದನ್ ಆಚಾರ್, ನಾಗಿಣಿ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ತಲುಪಲಿದ್ದಾರೆ ಎಂದು ಜೈಜಗದೀಶ್ ಭವಿಷ್ಯ ನುಡಿದು ತೆರಳಿದರು.